ಅತಿ ನಿಕಟ ಸಂಬಂಧಗಳನ್ನು ಬಲು ಎಚ್ಚರಿಕೆಯಿಂದ ನಿಭಾಯಿಸುತ್ತಾ ನಡೆಯುವುದೇ ಜೀವನ. ಅದು ಕೌಟುಂಬಿಕ ಅಥವಾ ಸಾಮಾಜಿಕ ಅಥವಾ ಲವ್ ರಿಲೇಶನ್ಸ್ ಆಗಿರಬಹುದು. ಎಲ್ಲದಕ್ಕೂ ನಾವು ಏನಾದರೊಂದು ಕೊಡುಗೆ ನೀಡಲೇಬೇಕು. ಆಗ ಮಾತ್ರ ಈ ಸಂಬಂಧಗಳು ಸರಳವಾಗಿ ನಡೆಯಲು ಸಾಧ್ಯ.

ನಾವು ಯಾವುದೇ ಹೊಸ ಸಂಬಂಧ ಮಾಡಿಕೊಳ್ಳುವಾಗಲೂ, ಆರಂಭದಲ್ಲಿ ಅದಕ್ಕೆ ಅತಿ ಹೆಚ್ಚಿನ ಮಹತ್ವ ನೀಡುತ್ತೇವೆ, ಅದನ್ನು ತುಂಬಾ ಕೇರ್‌ ಮಾಡುತ್ತೇವೆ, ಆದರೆ ಕಾಲ ಸರಿದಂತೆ ನಾವು ಆ ಸಂಬಂಧವನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತೇವೆ. ನಿಧಾನವಾಗಿ ಯಾವಾಗ ಈ ಸಂಬಂಧ ಟಾಕ್ಸಿಕ್‌ ಆಗಿಹೋಗುತ್ತದೋ, ನಮಗೆ ಗೊತ್ತಾಗುವುದೇ ಇಲ್ಲ. ನಾವು ನಮ್ಮ ಹಲವು ಪ್ರಯತ್ನಗಳ ಮೂಲಕ ಈ ಸಂಬಂಧ ಹಾಳಾಗದಂತೆ ಹೀಗೆ ಕಾಪಾಡಿಕೊಳ್ಳಬಹುದು :

ಪರಸ್ಪರರತ್ತ ಗೌರವಾದರ : ಪ್ರೇಮಿ ಪ್ರೇಯಸಿ ಆದ ಮಾತ್ರಕ್ಕೆ ಎಲ್ಲವನ್ನೂ ಟೇಕನ್‌ ಟು ಬಿ ಗ್ರಾಂಟೆಡ್‌ ಅಂದುಕೊಳ್ಳಬಾರದು. ವ್ಯಾಲೆಂಟೈನ್ಸ್ ಡೇ ನಂದು ಮಜಾ ಮಾಡುವುದಷ್ಟೇ ಈ ಸಂಬಂಧದ ಗುರಿಯಲ್ಲ. ಮುಂದೆ ಮದುವೆ ಆಗುವವರಾದ್ದರಿಂದ ಅತಿ ಸೂಕ್ಷ್ಮವಾಗಿಯೇ ಇದನ್ನು ನಿಭಾಯಿಸಬೇಕು. ಮನದಾಳದಿಂದ ಇಂಥ ಸಂಬಂಧವನ್ನು ಆದರಿಸದಿದ್ದರೆ, ಸಂಗಾತಿಯ ಭಾವನೆಗಳನ್ನು ಗೌರವಿಸದಿದ್ದರೆ, ಕೇವಲ ನಿಮ್ಮ ಮಾತಿನ ದರ್ಪವೇ ನಡೆಯಬೇಕು ಎಂದು ಬೀಗಿದರೆ, ನಿಮ್ಮಿಬ್ಬರ ಈ ಒಲವಿನ ಬಾಂಧವ್ಯ ಬೇಗ ನಲುಗಿ ಹೋದೀತು.

ಒಲವಿನ ಬಾಂಧವ್ಯವಾದ್ದರಿಂದ ಇಬ್ಬರೂ ಪ್ರೇಮ ಬಂಧನದಲ್ಲಿದ್ದರೂ, ತಂತಮ್ಮ ಸ್ವಾತಂತ್ರ್ಯದ ಇತಿಮಿತಿ ಅರಿತಿದ್ದಾಗ ಮಾತ್ರ, ಇದೊಂದು ಪರ್ಫೆಕ್ಟ್ ಸಂಬಂಧ ಎನಿಸಿಕೊಳ್ಳುತ್ತದೆ. ಹೀಗಾಗಿ ಪರಸ್ಪರ ಸಾಕಷ್ಟು ಸ್ಪೇಸ್‌ ಕೊಡಿ. ಆಗ ನಿಮ್ಮ ಸಂಗಾತಿಗೂ ಉಸಿರುಗಟ್ಟಿಸುವ ಬಂಧನ ಎನಿಸುವ ಬದಲು, ನಿಮ್ಮ ಬಾಂಧವ್ಯ ಸಿಕ್ಕಿದ್ದೇ ತನ್ನ ಪುಣ್ಯ ಎಂದು ಬೀಗುವಂತಾಗಲಿ.

ಭರವಸೆಯ ಅಭಾವ : ನಾವು ನಮ್ಮ ಸಂಗಾತಿಯ ಕುರಿತು ಭರವಸೆಯ ಭಾವನೆ ಇಟ್ಟುಕೊಳ್ಳದಿದ್ದರೆ, ಆ ಸಂಬಂಧ ಅಲ್ಲಿಯೇ ಚಿವುಟಿ ಹೋಗುತ್ತದೆ. ಹೀಗಾಗಿ ಇಬ್ಬರೂ ಪರಸ್ಪರರಲ್ಲಿ ಅಭಿಮಾನ ಬೆಳೆಸಿಕೊಂಡು, ಭರವಸೆ ಇಟ್ಟುಕೊಳ್ಳಲೇಬೇಕಾಗುತ್ತದೆ. ಸಂಬಂಧ ಬೆಳೆಸುವ ಉದ್ದೇಶವೇ ಪರಸ್ಪರರ ಸುಖ ದುಃಖ ಹಂಚಿಕೊಳ್ಳುತ್ತಾ, ತಂತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕಾಗಿ. ಯಾವ ಸಂಬಂಧದಲ್ಲಿ ಇದನ್ನು ನಾವು ಸಾಧಿಸದೆ, ಸದಾ ಸಂದೇಹ ಪಡುತ್ತೇವೋ, ಆಗ ರಿಲೇಶನ್‌ ಸರಿಯಾಗಿರಲು ಹೇಗೆ ಸಾಧ್ಯ? ಹೀಗಾಗಿ ಅನಗತ್ಯವಾಗಿ ಸಂಗಾತಿಯತ್ತ ಸಂದೇಹ ಪಡುವುದನ್ನು ಬಿಟ್ಟುಬಿಡಿ.

ಪರಸ್ಪರರಿಗೆ ಟೈಂ ನೀಡಿ : ಎಲ್ಲರೂ ಅವರವರದೇ ಆದ ಬಿಝಿ ದಿನಚರಿಯಲ್ಲಿ ಮುಳುಗಿ ಹೋಗಿರುತ್ತಾರೆ. ಆದರೆ ಜೀವನ ಸಾಗಿಸಲು ಆರ್ಥಿಕ ಅನುಕೂಲ ಎಷ್ಟು ಮುಖ್ಯವೋ, ಮಾನಸಿಕ ನೆಮ್ಮದಿಯೂ ಅಷ್ಟೇ ಮುಖ್ಯ. ನಮ್ಮ ಬಳಿ ರಾಶಿ ರಾಶಿ ಹಣ ಬಂದು ಸೇರುವ ಹೊತ್ತಿಗೆ, ನಮ್ಮನ್ನು ಪ್ರೀತಿಸುವ, ಆದರಿಸುವ ಸಂಗಾತಿಯೇ ಇಲ್ಲ ಎಂದ ಬಳಿಕ ಇಷ್ಟೆಲ್ಲ ಆಸ್ತಿ, ಹಣವಿದ್ದು ಏನು ಪ್ರಯೋಜನ? ಆಗ ನಾವು ಹೇಗೆ ಸುಖೀ ಆಗಲು ಸಾಧ್ಯ? ಏಕೆಂದರೆ ಜೀವನ ಸಾಗಿಸಲು ಭೌತಿಕ ಸೌಲಭ್ಯಗಳನ್ನು ಒದಗಿಸಬಲ್ಲ ಹಣ, ಆಸ್ತಿ, ಅಂತಸ್ತು ಇದ್ದ ಮಾತ್ರಕ್ಕೆ ಸಾಲದು. ಮಾನಸಿಕ ನೆಮ್ಮದಿ, ಮನಶ್ಶಾಂತಿ ನೀಡುವಂಥ ಸಂಗಾತಿ ಜೊತೆಗೆ ಇದ್ದಾಗ ಮಾತ್ರ ಸುಖ ಕಾಣಲು ಸಾಧ್ಯ. ಹೀಗಾಗಿ ಎರಡೂ ನಮಗೆ ಬೇಕೇಬೇಕು, ಎರಡರ ಮಹತ್ವ ಅತಿ ಪ್ರಬಲ. ನಾವು ಕೇವಲ ಹಣ ಗಳಿಕೆಗಾಗಿ ಇಡೀ ದಿನದ ಸಮಯವನ್ನು ಸಂಪಾದನೆಗಷ್ಟೇ ಮೀಸಲಿರಿಸಿ, ಸಂಗಾತಿಗೆ ಲೇಶ ಮಾತ್ರವೂ ಸಮಯ ನೀಡದಿದ್ದರೆ, ಬದುಕಿದ್ದೂ ನಾವು ಹಣ ಗಳಿಸುವ ಯಂತ್ರವಷ್ಟೇ ಆಗುತ್ತೇವೆ. ಒಲವಿನ ಬಾಂಧವ್ಯ ಉಳಿಸಿಕೊಳ್ಳದಿದ್ದರೆ ಅದಕ್ಕಿಂತಲೂ ಬಡತನ ಬೇರೊಂದಿಲ್ಲ. ಇದರಿಂದ ನಮ್ಮ ಇಡೀ ಜೀವನ ಬರಡು ಬೆಂಗಾಡಾಗುತ್ತದೆ. ಇದರ ಬದಲು ಇಬ್ಬರೂ ಸಂಗಾತಿಗಾಗಿ ಪರಸ್ಪರ ಹೆಚ್ಚಿನ ಕ್ವಾಲಿಟಿ ಟೈಂ ನೀಡಿ, ಸಂಸಾರವನ್ನು ನಂದನವನ ಆಗಿಸಿಕೊಳ್ಳುವುದೊಂದೇ ಉತ್ತಮ ಆಯ್ಕೆ. `ನಿನಗಾಗಿ ನಾನು' ಎಂಬ ಭಾವನೆ ಮನದಾಳದಿಂದ ಬರಬೇಕೆ ಹೊರತು, ಬೇರಾವ ತೋರ್ಪಡಿಕೆಯಿಂದಲೂ ಅಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ