ಹೊಸ ವರ್ಷಾಚರಣೆಯ ಸಡಗರಸಂಭ್ರಮ ಎಲ್ಲರ ಉತ್ಸಾಹ ಹೆಚ್ಚಿಸುತ್ತದೆ. ನೀವು ಹೆಚ್ಚಿನ ಗ್ಲಾಮರಸ್ ಲುಕ್ಸ್ ಹೊಂದಲು ಈ ಕೆಳಗಿನ ಫ್ಯಾಷನ್ ಟಿಪ್ಸ್ ನ್ನು ಮರೆಯದೆ ಅನುಸರಿಸಿ........
ಹೊಸ ವರ್ಷದ ಪಾರ್ಟಿಯಲ್ಲಿ ಫ್ಯಾಷನ್ ಕುರಿತಾಗಿ ನಿಮಗೆ ನೂರಾರು ಸಲಹೆಗಳು ದೊರಕಿರಬಹುದು. ನೀವು ಬೇಕಾದರೆ ಗ್ಲಾಮರಸ್, ಕ್ಯಾಶ್ಯುಯೆಲ್ ಯಾ ಫಾರ್ಮಲ್ ಲುಕ್ಸ್ ಆರಿಸಿ, ಎಲ್ಲಕ್ಕಿಂತಲೂ ಅತ್ಯಗತ್ಯ ಮಾಹಿತಿ ಎಂದರೆ, ನೀವು ಏನನ್ನೇ ಧರಿಸಿದರೂ, ಅದರಲ್ಲಿ ನೀವು ಕಂಫರ್ಟೆಬಲ್ ಫೀಲ್ ಆಗಬೇಕು. ಹೊಸ ವರ್ಷದ ಸಂಭ್ರಮಾಚರಣೆಯ ಪಾರ್ಟಿಗಾಗಿ, ಫ್ಯಾಷನ್‌ಕುರಿತಾದ ಈ ಟಿಪ್ಸ್ ನಿಮ್ಮನ್ನು ಸ್ಪೆಷಲ್ ಸ್ಟೈಲಿಶ್ ಆಗಿ ತೋರಿಸಲು ನೆರವಾಗುತ್ತದೆ.
ಡ್ರೆಸ್ ಕೋಡ್ ನ್ನು ಅಗತ್ಯ ಫಾಲೋ ಮಾಡಿ : ಎಲ್ಲಕ್ಕೂ ಮೊದಲು ಪಾರ್ಟಿಗೆ ಬೇಕಾದ ಡ್ರೆಸ್ ಕೋಡ್ (ಏನಾದರೂ ಇದ್ದ ಪಕ್ಷದಲ್ಲಿ) ಕಡೆ ಗಮನಹರಿಸಿ. ಪಾರ್ಟಿಯ ಯಾವುದೇ ಥೀಂ ಯಾ ಡ್ರೆಸ್ ಕೋಡ್ ಇರಲಿ, ಉದಾ : ಗ್ಲಿಟರೀ, ಬ್ಲ್ಯಾಕ್ ವೈಟ್, ಕ್ಯಾಶ್ಯುಯೆಲ್ ಇತ್ಯಾದಿ ಏನು ಹೇಳಿರುತ್ತಾರೋ ಆ ಪ್ರಕಾರ ನಿಮ್ಮ ಡ್ರೆಸ್ ಇರಲಿ.
ಕ್ಲಾಸಿಕ್ ಬ್ಲ್ಯಾಕ್ ಡ್ರೆಸ್ : ಇದು `ಲಿಟಲ್ ಬ್ಲ್ಯಾಕ್ ಡ್ರೆಸ್' ಎಂದೂ ಖ್ಯಾತಿ ಪಡೆದಿದೆ. ಪ್ರತಿ ಸಲದ ನ್ಯೂ ಇಯರ್ ಪಾರ್ಟಿಗೂ ಬೆಸ್ಟ್ ಕ್ಲಾಸಿಕ್ ಆಯ್ಕೆ ಎಂದರೆ ಇದೇ! ಇದು ಸ್ಟೈಲಿಶ್‌ಎಲಿಗೆಂಟ್ ಆಗಿದ್ದು, ಇದನ್ನು ನೀವು ಉತ್ತಮ ಆ್ಯಕ್ಸೆಸರೀಸ್‌ಹೀಲ್ಸ್ ಜೊತೆ ಧರಿಸಬಹುದು.
ಗ್ಲಿಟರ್ ಶಿಮರ್ : ಹೊಸ ವರ್ಷದ ಪಾರ್ಟಿಯಲ್ಲಿ ತುಸು ಚಮಕ್ ಚಮಕ್ ಆಗಿ ಮಿಂಚಬೇಕಾದ್ದು ಸಹಜವೇ! ಶಿಮರ್, ಗ್ಲಿಟರ್ ಯಾ ಸೀಕ್ವೆನ್ಸ್ ಡ್ರೆಸ್ ಯಾ ಟಾಪ್ ಧರಿಸಿ, ನೀವು ಪಾರ್ಟಿಗಳಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ. ಸಿಲ್ವರ್, ಗೋಲ್ಡ್, ಮೆಟಾಲಿಕ್ ಬಣ್ಣಗಳಲ್ಲಿ ಹೊಳೆ ಹೊಳೆಯುವಂಥ ಡ್ರೆಸೆಸ್ ಧರಿಸಿರಿ.
ಪ್ಲೇರ್ ಯಾ ಸ್ಟೈಲಿಶ್ ಕಾಕ್ ಟೇಲ್ ಡ್ರೆಸ್ : ನೀವು ತುಸು ವಿಭಿನ್ನ ಸ್ಟೈಲಿಶ್ ಆಗಿ ಮಿಂಚಬಯಸಿದರೆ, ಪ್ಲೇರ್ ಯಾ ಕಾಕ್ ಟೇಲ್ ಡ್ರೆಸ್ ಕುರಿತಾಗಿ ವಿಚಾರಿಸಿ. ಇದು ಪಾರ್ಟಿಗಳಲ್ಲಿ ತುಸು ಗ್ಲಾಮರಸ್‌ಜಾದೂ ಮಾಡಬಲ್ಲ ಡ್ರೆಸ್ ಗಳಾಗಿವೆ. ಇದನ್ನು ಒಂದು ಉತ್ತಮ ಬೆಲ್ಟ್ ಸ್ಟೈಲಿಶ್ ಫುಟ್ ವೇರ್ ಜೊತೆ ಧರಿಸಿ ನೋಡಿ.
ಮಾನೋಕ್ರೊಮ್ಯಾಟಿಕ್ ಲುಕ್ಸ್ : ನೀವು ಒಂದು ಸರಳ ಚಿಕ್ ಲುಕ್ ಬಯಸಿದರೆ, ಮಾನೋಕ್ರೋಮ್ಯಾಟಿಕ್ ಔಟ್ ಫಿಟ್ ಆರಿಸಿ. ಒಂದೇ ಬಣ್ಣದಲ್ಲಿ ಇಡೀ ಡ್ರೆಸ್ (ಉದಾ. ಬ್ಲ್ಯಾಕ್ ಯಾ ವೈಟ್ ಬಣ್ಣದಲ್ಲಿ) ಧರಿಸಿ, ನೀವು ಬಹಳಷ್ಟು ಸ್ಟೈಲಿಶ್ ಆಗಿ ಮಿಂಚಬಹುದು. ಇದನ್ನು ಕಂಫರ್ಟೆಬಲ್ ಫ್ಯಾಷನೆಬಲ್ ಲುಕ್ಸ್ ಗಾಗಿ ಬದಲಾಯಿಸಲು, ಸ್ನೀಕರ್ಸ್ ಯಾ ಹೀಲ್ಸ್ ಜೊತೆ ಧರಿಸಿ ನೋಡಿ.
ಲೌಂಜ್ ಪಾರ್ಟಿ ಲುಕ್ಸ್ : ಯಾವುದೇ ಪಾರ್ಟಿಗೆ ಕ್ಯಾಶ್ಯುಯೆಲ್ ಲುಕ್ಸ್ ಇದ್ದರೆ, ನೀವು ಸ್ಮಾರ್ಟ್ ಜೀನ್ಸ್, ಟಾಪ್‌ಒಂದು ಸ್ಟೈಲಿಶ್‌ಜ್ಯಾಕೆಟ್ ಧರಿಸಬಹುದು. ಇದರ ಜೊತೆ ಸ್ಲಿಂಗ್ ಬ್ಲಾಗ್‌ಡೇಝಿ ಶೂಸ್ ಯಾ ಸ್ನೀಕರ್ಸ್ ಧರಿಸಿರಿ. ಇದರಿಂದ ನೀವು ಆರಾಮದಾಯಕ ಸ್ಟೈಲಿಶ್ ಎರಡೂ ವಿಧದಲ್ಲಿ ಮಿಂಚಬಹುದು.





