ಇತ್ತೀಚೆಗೆ ಮ್ಯಾಸ್ಕ್ಯುಲಿನ್‌ ಡ್ರೆಸ್‌, ವರ್ಕಿಂಗ್‌ ವಿಮೆನ್‌ ಗೆ ಹೆಚ್ಚು ಸುರಕ್ಷಿತ ಹಾಗೂ ಬೆಟರ್‌ ಆಯ್ಕೆಯಾಗಿದೆ.......

ಮಾಡರ್ನ್‌ ಟೈಮ್ ನಲ್ಲಿ ಯುವತಿಯರಿಗೆ ತಮ್ಮ ಕೆಲಸ ಹಾಗೂ ಪರ್ಸನಲ್ ಲೈಫ್‌ ನಲ್ಲಿ ಸೇಫ್‌ ಕಾನ್ಛಿಡೆಂಟ್‌ ಫೀಲ್ ‌ಆಗಲು ಹಲವು ಚಾಲೆಂಜಸ್‌ ಎದುರಿಸಬೇಕಾಗುತ್ತದೆ. ಒಂದು ಮಹತ್ವಪೂರ್ಣ ವಿಷಯ, ಆದರೂ ಸಾಮಾನ್ಯವಾಗಿ ಅದನ್ನು ನಿರ್ಲಕ್ಷಿಸಲಾಗುತ್ತಿದೆ ಅಂದ್ರೆ,  ಅದು ಹೆಣ್ಣುಮಕ್ಕಳ ಡ್ರೆಸ್‌ ಧರಿಸುವಿಕೆ. ಇತ್ತೀಚೆಗೆ ಮ್ಯಾಸ್ಕ್ಯುಲಿನ್‌ ಡ್ರೆಸ್‌ ಅಂದ್ರೆ ಕೋಟ್‌ ಪ್ಯಾಂಟ್ ಉದ್ಯೋಗಸ್ಥ ವನಿತೆಯರಿಗೆ, ಒಂದು ಅತಿ ಸುರಕ್ಷಿತ ಹಾಗೂ ಉತ್ಪಾದಕ ಆಯ್ಕೆಯಾಗಿ, ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿದೆ. ಇದು ಅವರ ಕೆಲಸ ಪರ್ಸನಲ್ ಲೈಫ್‌ ನಲ್ಲಿ ಅಧಿಕ ಆತ್ಮವಿಶ್ವಾಸ  ಸುರಕ್ಷಿತಗೊಳಿಸುವಲ್ಲಿ ನೆರವಾಗುತ್ತದೆ.

ನಮ್ಮ ದೇಶದಲ್ಲಿ ಸುರಕ್ಷತೆಯ ದೃಷ್ಟಿಯಲ್ಲಿ ಮ್ಯಾಸ್ಕ್ಯುಲಿನ್‌ ಡ್ರೆಸ್‌ ಬೆಟರ್‌ ಆಯ್ಕೆಯಾಗಿ ನಮ್ಮ ಮುಂದೆ ನಿಂತಿದೆ. ನಗರದ ಖ್ಯಾತ ಶಿಕ್ಷಕಿಯೊಬ್ಬರು ಹೇಳುತ್ತಾರೆ, ಇಂದಿನ ತರುಣಿಯರು ಕೋಟ್‌ ಪ್ಯಾಂಟ್‌ ಧರಿಸಿ ಹೊರಡುವುದರಿಂದ, ಅವರು ತಂತಮ್ಮ ದೇಹವನ್ನು ಪರಿಪೂರ್ಣವಾಗಿ ಕವರ್‌ ಮಾಡಿಕೊಳ್ಳುವುದರಿಂದ, ತಮ್ಮನ್ನು ತಾವು ಹೆಚ್ಚು ಸುರಕ್ಷಿತರು ಹಾಗೂ ಸಂರಕ್ಷಿತರು ಎಂದೇ ಭಾವಿಸುತ್ತಾರೆ. ಇದು ಎಂಥ ಸ್ಥಿತಿಗಳಲ್ಲಿ ಮಹತ್ವಪೂರ್ಣ ಆಗಬಹುದೆಂದರೆ, ಯಾವ ಹೆಣ್ಣುಮಕ್ಕಳಿಗೆ ತಮ್ಮ ಕೆಲಸದ ವಲಯ ಹಾಗೂ ವೈಯಕ್ತಿಕ ಜೀವನದಲ್ಲಿ ಅಸುರಕ್ಷತೆಯ ಭೀತಿ ಕಾಡುತ್ತದೋ ಅಂಥವರಿಗೆ!

ಪ್ರೊಡಕ್ಟಿವಿಟಿ ಹೆಚ್ಚಿಸುತ್ತದೆ : ಅಸಲಿಗೆ ಮ್ಯಾಸ್ಕ್ಯುಲಿನ್‌ ಡ್ರೆಸ್‌ ವರ್ಕ್‌ ಪ್ಲೇಸ್‌ ಗಳಲ್ಲಿ ಯುವತಿಯರ ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಯಾವ ಹೆಣ್ಣು ಕೋಟ್‌ ಪ್ಯಾಂಟ್‌ ನಂಥ ಮ್ಯಾಸ್ಕ್ಯುಲಿನ್‌ ಡ್ರೆಸ್‌ ಧರಿಸಿ ಬರುತ್ತಾಳೋ, ಆಕೆ ತನ್ನ ಕೆಲಸದಲ್ಲಿ ಅತ್ಯಧಿಕ ಕಾನ್ಛಿಡೆಂಟ್‌ ಆಗುತ್ತಾಳೆ, ಲಾಯಲ್ ಡಿವೋಟೆಡ್‌ ಫೀಲ್ ‌ಆಗುತ್ತಾಳೆ. ಇದು ಯಾವ ಸ್ಥಿತಿಗಳಲ್ಲಿ ಮಹತ್ವಪೂರ್ಣ ಎನಿಸಬಹುದು ಅಂದ್ರೆ, ತರುಣಿಯರು ತಮ್ಮ ಕೆಲಸದ ಕಡೆ ಸಂಪೂರ್ಣ ಫೋಕಸ್‌ ಮಾಡುತ್ತಾ, ಪ್ರೊಡಕ್ಟಿವಿಟಿ ಹೆಚ್ಚಿಸಬೇಕಾದ ಅವಶ್ಯಕತೆ ಇರುವ ಕಡೆ.

ಮತ್ತೊಂದು ಅತ್ಯಗತ್ಯದ ವಿಷಯ ಅಂದ್ರೆ, ತರುಣಿಯರಿಗೆ ತಮ್ಮ ಡ್ರೆಸ್‌ ಸೆಲೆಕ್ಷನ್‌ ನಲ್ಲಿ ಸಂಪೂರ್ಣ ಸ್ವಾತಂತ್ರ್ಯ ಇರಬೇಕು. ಇವರುಗಳು ತಮ್ಮ ಡ್ರೆಸ್‌ ಆಯ್ಕೆಯಲ್ಲಿ ತಮ್ಮ ಇಷ್ಟಾನಿಷ್ಟ ಹಾಗೂ ಆರಾಮದ ಅನುಸಾರ ನಿರ್ಣಯ ಮಾಡುವಂತಿರಬೇಕು. ಇದನ್ನು ಬಿಟ್ಟು ಯಾರದೋ ಮಾತಿನ ಒತ್ತಡಕ್ಕೆ ಮಣಿದು, ಏನನ್ನೋ ಧರಿಸಿ ಬರುವಂತಾಗಬಾರದು. ಇಂಥ ಡ್ರೆಸ್‌ ನ ಆಯ್ಕೆಯಿಂದಾಗುವ ಲಾಭನಷ್ಟದ ಕುರಿತು ಒಂದು ಪಕ್ಷಿನೋಟ :

ಲಾಭಗಳು : ಮ್ಯಾಸ್ಕ್ಯುಲಿನ್‌ ಡ್ರೆಸ್‌ ದೇಹಕ್ಕೆ ಅಧಿಕ ಸುರಕ್ಷತೆ ಸಂರಕ್ಷಣೆ ನೀಡುತ್ತದೆ, ಖಂಡಿತಾ ಅಂಥ ಗುಡ್‌ ಫಿಲ್ ‌ಒದಗಿಸುತ್ತದೆ. ತಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚು ಕಾನ್ಛಿಡೆಂಟ್‌ ಹಾಗೂ ಫೋಕಸ್ಡ್ ಆಗಿರಲು, ಇದು ಬಲು ಸಹಕಾರಿ. ಪರ್ಸನಲ್ ಲೈಫ್‌ ನಲ್ಲಿ ಸೇಫ್‌ ಎನಿಸುವಲ್ಲಿಯೂ ಇದು ಉಪಕಾರಿ.

ನಷ್ಟಗಳು : ಮ್ಯಾಸ್ಕ್ಯುಲಿನ್‌ ಡ್ರೆಸ್‌ ನಲ್ಲಿ ಒಮ್ಮೊಮ್ಮೆ ಆರಾಮದ ಕೊರತೆ ಕಾಡಬಹುದು. ಅಂಥವನ್ನು ಧರಿಸುವ ಹೆಣ್ಣುಮಕ್ಕಳ ಮೇಲೆ ಅನಗತ್ಯ ಒತ್ತಡ ಬೀಳಬಹುದು, ಅವರು ತಮ್ಮ ಡ್ರೆಸ್‌ ಆಯ್ಕೆಯಲ್ಲಿ ಗಂಡಸರ ಹಾಗೆ ಕಾಣಿಸಿಕೊಳ್ಳಲೆಂದೇ ಹೀಗೆ ಮಾಡುತ್ತಿರಬೇಕೆಂದು ಆರೋಪ ಕೇಳಿಬರಬಹುದು. ತಮ್ಮ ಇಷ್ಟದ ಡ್ರೆಸೆಸ್‌ ಧರಿಸುವುದರಲ್ಲಿ ಕೊರತೆ ಕಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ