ಈ ಹೊಸ ವರ್ಷದಲ್ಲಿ ನಿಮ್ಮ ಲುಕ್ಸ್ ನ್ನು ಟ್ರೆಂಡಿ ಆಗಿಸ ಬಯಸುವಿರಾ? ಹಾಗಾದರೆ ಇಲ್ಲಿನ ಫ್ಯಾಷನ್ ಟ್ರೆಂಡ್ಸ್ ಸ್ಟೈಲಿಂಗ್ ಟಿಪ್ಸ್ ಅನುಸರಿಸಿ.....
ಇಂದಿನ ಆಧುನಿಕ ಜನರೇಶನ್ ಅಂದ್ರೆ ಫ್ಯಾಷನ್ ಸೆನ್ಸ್, ಕಂಫರ್ಟ್, ಕ್ಲಾಸಿ ಟ್ರೆಂಡಿಗಳ ಪರ್ಫೆಕ್ಟ್ ಸಂಮಿಶ್ರಣ. ಈ ಪೀಳಿಗೆ ಆಧುನಿಕ ಫ್ಯಾಷನ್ ನ್ನು ಹೊಸ ದೃಷ್ಟಿಯಿಂದ ನೋಡುತ್ತದೆ. ದೈನಂದಿನ ಔಟ್ ಫಿಟ್ಸ್ ನಲ್ಲಿ ಒಂದೊಂದು ಸ್ಟೇಟ್ ಮೆಂಟ್ ಕೂಡಿಸಿಕೊಳ್ಳುತ್ತಾ ಹೋಗುತ್ತದೆ. ನೀವು ಸಹ ಇವರಂತೆಯೇ ನಿಮ್ಮ ಲುಕ್ಸ್ ನ್ನು ಟ್ರೆಂಡಿ ಆಗಿಸಿಕೊಳ್ಳಲು ಬಯಸಿದರೆ, ಇವರುಗಳ ಅಚ್ಚುಮೆಚ್ಚಿನ ಫ್ಯಾಷನ್ ಟ್ರೆಂಡ್ಸ್ ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ :
ಲಾಂಗ್ ಸಾಕ್ಸ್ ಜೊತೆ ಕೂಲ್ ಲುಕ್ಸ್ : ಮಿಲೇನಿಯಲ್ ಜನರೇಶನ್ನಿನ ಜನ, ಈಗಲೂ ಸಹ ಜಿಮ್ ನ ಸ್ಪೋರ್ಟ್ಸ್ ಶೂಸ್ ಇರಲಿ ಯಾ ಆಫೀಸ್ ಲಾಫರ್ಸ್, ಅವನ್ನು ಮಂಡಿಯವರೆಗಿನ ಸಾಕ್ಸ್ ಜೊತೆ ಮಾತ್ರವೇ ಧರಿಸ ಬಯಸುತ್ತಾರೆ. ಆದರೆ ಜೆನ್‌ಈ ಟ್ರೆಂಡ್ ನ್ನು ಬಹಳ ವಿರೋಧಿಸುತ್ತಾರೆ. ಮಂಡಿಯವರೆಗಿನ ಈ ಲಾಂಗ್ ಸಾಕ್ಸ್ ಜೆನ್ ನವರ ಫೇವರಿಟ್ ಆ್ಯಕ್ಸೆಸರೀಸ್ ಗಳಲ್ಲಿ ಒಂದು. ಇದು ಸ್ಟೈಲಿಶ್ ಕಂಫರ್ಟೆಬಲ್ ಎರಡೂ ಹೌದು. ಜಿಮ್ ನ ಲೆಗ್ಗಿಂಗ್ಸ್ ಇರಲಿ ಯಾ ಆಫೀಸಿನ ಫಾರ್ಮ್ ಔಟ್ ಫಿಟ್ಸ್, ಈ ಪೀಳಿಗೆ ಲಾಂಗ್ ಸಾಕ್ಸ್ ನ್ನೇ ಆರಿಸುತ್ತದೆ. ನೀವು ಈ ಸಾಕ್ಸ್ ನ್ನು ಓವರ್ ಸೈಡ್ ಹುಡೀ ಯಾ ಟೀಶರ್ಟ್ ಡ್ರೆಸ್ ನ ಜೊತೆ ಯಾ ಕಲರ್ ಫುಲ್ ಪ್ರಿಂಟೆಡ್ ಸಾಕ್ಸ್ ನ್ನು ಮಿನಿ ಸ್ಕರ್ಟ್ಸ್ ಶಾರ್ಟ್ಸ್ ಜೊತೆ ಸ್ಟೈಲಿಶ್ ಗ್ಲಾಮರಸ್ ಆಗಿ ಧರಿಸಬಹುದು.
ಮಾಮ್ ಜೀನ್ಸ್ ನ ರೆಟ್ರೋ ವೈಬ್ : ಜೆನ್‌ಗೆ ಮಾಮ್ ಜೀನ್ಸ್ ನ ಕ್ರೇಜ್ ತುಸು ಹೆಚ್ಚೆಂದೇ ಹೇಳಬಹುದು. ಇದು ಕೇವಲ ಕಂಫರ್ಟೆಬಲ್ ಮಾತ್ರವಲ್ಲ, ಬದಲಿಗೆ ರೆಟ್ರೋ ವೈಬ್ಸ್ ನ್ನೂ ನೀಡುತ್ತದೆ. ನೀವು ಇದನ್ನು ಕ್ರಾಪ್ ಟಾಪ್ ಯಾ ಬ್ರಿಲಾಟ್ ಜೊತೆ ಸ್ಟೈಲ್ ಮಾಡಬಹುದು. ಈ ಹೈ ವೆಯ್ಸ್ಟ್ ಜೀನ್ಸ್ ನ್ನು ಟಕ್ ಇನ್ ಶರ್ಟ್ ಜೊತೆ ಧರಿಸಿ ಸ್ಟೈಲಿಶ್ ಲುಕ್ ಪಡೆಯಬಹುದು. ಇದಕ್ಕೆ ನೀವು ಮತ್ತಷ್ಟು ಎಲಿಗೆನ್ಸ್ ಆ್ಯಡ್ ಮಾಡಲು ವೈಟ್ ಸ್ನೀಕರ್ಸ್ ಮಿನಿಮಮ್ ಜ್ಯೂವೆಲರಿ ಜೊತೆ ಧರಿಸಬಹುದು.
ಬಾಯ್ ಫ್ರೆಂಡ್ ಜೀನ್ಸ್ ನ ರಿಲ್ಯಾಸ್ಕ್ಡ್ ಸ್ಟೈಲ್ : ಬಾಯ್ ಫ್ರೆಂಡ್ ಜೀನ್ಸ್ ನ ಬ್ಯಾಗಿ ಗಿಫ್ಟ್ ಕಂಫರ್ಟ್, ಇದನ್ನು ಜೆನ್‌ನವರ ಅಚ್ಚುಮೆಚ್ಚಿನ ಕ್ಯಾಶ್ಯುಯೆಲ್ ಚಾಯ್ಸ್ ಆಗಿಸಿದೆ. ಇದರ ಜೊತೆ ಫಿಟೆಡ್ ಟೀ ಶರ್ಟ್ ಯಾ ಬಾಡಿಸೂಟ್ ನ ಕಾಂಟ್ರಾಸ್ಟ್ ಲುಕ್ ಟ್ರೈ ಮಾಡಬಹುದು. ಇದರಲ್ಲಿ ನೀವು ಲೇಯರಿಂಗ್ ಗಾಗಿ ಡೆನಿಮ್ ಜ್ಯಾಕೆಟ್ ಯಾ ಪ್ಲಾನೆಲ್ ಶರ್ಟ್ ಸಹ ಬಳಸಬಹುದು. ಇದರ ಜೊತೆಗೆ ಹೀಲ್ಸ್ ಯಾ ಸ್ಲೈಡರ್ಸ್ ಸೇರಿಸಿ ಗ್ಲಾಮರಸ್ ಟಚ್ ಕೊಡಿ.





