SAP Labs India ಬೆಂಗಳೂರಿನಲ್ಲಿ ತನ್ನ ಹೊಸ ಆಧುನಿಕ ತಂತ್ರಜ್ಞಾನಯುಕ್ತ ಕ್ಯಾಪಸ್ ಉದ್ಘಾಟಿಸಿದೆ. ಈ ಮೂಲಕ ಭಾರತದಲ್ಲಿ ನಾವೀನ್ಯತೆಗೆ ಪ್ರಾಮುಖ್ಯತೆ ನೀಡುವ ತನ್ನ ಬದ್ಧತೆಯಲ್ಲಿ ಮತ್ತೊಂದು ಮಹತ್ತರ ಹೆಜ್ಜೆ ಹಾಕಿದೆ. ಎಲ್ಲ ಹಂತಗಳಲ್ಲಿ ಒಟ್ಟು €194 ಮಿಲಿಯನ್ ಹೂಡಿಕೆಯೊಂದಿಗೆ, 15,000 ವೃತ್ತಿಪರರಿಗೆ ಅವಕಾಶ ನೀಡುವಂತೆ ರೂಪುಗೊಂಡ ಈ ಕ್ಯಾಪಸ್, ಜಾಗತಿಕವಾಗಿ SAP ನ ಅತಿದೊಡ್ಡದರಲ್ಲಿ ಒಂದಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಈ SAP Labs India Innovation Park, SAP ನ ಜಾಗತಿಕ ಆರ್ ಅಂಡ್ ಡಿ ಮತ್ತು ನಾವಿನ್ಯತೆಯಲ್ಲಿ ಭಾರತದ ಪ್ರಮುಖ ಪಾತ್ರವನ್ನು ಇನ್ನಷ್ಟು ಬಲಪಡಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಡಾ. ಫಿಲಿಪ್ ಅಕರ್ಮನ್ (ಭಾರತದ ಜರ್ಮನ್ ರಾಯಭಾರಿ) ಪಾಲ್ಗೊಂಡರು.
ಈ ಸಂದರ್ಭ ಸ್ಯಾಪ್ ಲ್ಯಾಬ್ಸ್ ಇಂಡಿಯಾ ಮತ್ತು ಕಸ್ಟಮರ್ ಇನೋವೇಷನ್ ಸರ್ವಿಸ್ನ ಮುಖ್ಯಸ್ಥರಾದ ಸಿಂಧು ಗಂಗಾಧರನ್ ಮಾತನಾಡಿ, “ಭಾರತ ಜಾಗತಿಕ ತಂತ್ರಜ್ಞಾನ ಶಕ್ತಿಯಾಗಿ ಉದಯಿಸುತ್ತಿರುವುದು ಕೇವಲ ಗಾತ್ರದಲ್ಲಿ ಮಾತ್ರವಲ್ಲ, ಇದು ಸಂಶೋಧನೆ, ಸಹನೆ ಮತ್ತು ನಿರಂತರ ನಾವೀನ್ಯತೆಯ ಪ್ರತೀಕ. ಕಳೆದ 27 ವರ್ಷಗಳಿಂದ SAP ಈ ಅಪರೂಪದ ಪ್ರಯಾಣದ ಭಾಗವಾಗಿರುವ ಅವಕಾಶ ಪಡೆದಿದೆ. ಈ ಕ್ಯಾಪಸ್ ಉದ್ಘಾಟನೆ ಹೊಸ ಅಧ್ಯಾಯ. ನಾವೀನ್ಯತೆಯಲ್ಲಿ ಭಾರತದ ನಾಯಕತ್ವದ ಮೇಲೆ ನಿರಂತರ ನಂಬಿಕೆಯ ಸಾಕ್ಷಿಯಾಗಿದೆ. ಭವಿಷ್ಯದಲ್ಲಿ 15,000 ವೃತ್ತಿಪರರಿಗೆ ತಾಣವಾಗಲಿರುವ ಈ ಕ್ಯಾಪಸ್‌ನಲ್ಲಿ ಗ್ರಾಹಕರ ಆಧಾರಿತ ನಾವೀನ್ಯತೆ, ಉದ್ಯೋಗಿಗಳ ಸ್ಥಿರತೆ ಮತ್ತು ವ್ಯಾಪಕತೆಯ ಸಂಯೋಜನೆಯಾಗಿದೆ – ಭಾರತದ ಅಭಿವೃದ್ಧಿಗೆ SAP ನ ಬದ್ಧತೆ ಮತ್ತಷ್ಟು ಗಾಢವಾಗುತ್ತಿದೆ” ಎಂದರು.
ಸ್ಯಾಪ್ನ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯ ಥೋಮಸ್ ಸೌರೆಸಿಕ್ ಮಾತನಾಡಿ, “ಈ ಕ್ಯಾಪಸ್, SAP ನ ಜಾಗತಿಕ ಪೋರ್ಟ್‌ಫೋಲಿಯೋದಲ್ಲಿ ತಂತ್ರಜ್ಞಾನದ ಮೂಲಕ ಮುನ್ನಡೆಸಲು ಸಹಾಯ ಮಾಡುವ ಪ್ರಮುಖ ಸಂಪತ್ತಾಗಿದೆ. ಇದು ಜಾಗತಿಕ ನಾವೀನ್ಯತೆಯ ಕೇಂದ್ರ.” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಭಾರತವು ತ್ವರಿತವಾಗಿ ಜಾಗತಿಕ ತಂತ್ರಜ್ಞಾನ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಮತ್ತು ಕೇವಲ ನಾವೀನ್ಯತೆಯನ್ನು ಅಳವಡಿಸಿಕೊಳ್ಳುತ್ತಿಲ್ಲ – ಅದನ್ನು ಸಕ್ರಿಯವಾಗಿ ರೂಪಿಸುತ್ತಿದೆ. ಸ್ಯಾಪ್ ಲ್ಯಾಬ್ಸ್ ಇಂಡಿಯಾದ ಈ ಹೊಸ ಕ್ಯಾಪಸ್ ಇದಕ್ಕೆ ಸಾಕ್ಷಿಯಾಗಿದೆ. ಇದು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯ ಪಾತ್ರವನ್ನು ಪ್ರತಿಬಿಂಬಿಸುತ್ತದೆ.” ಎಂದರು.
ರೈಲ್ವೆ, ಮಾಹಿತಿ ಮತ್ತು ಪ್ರಸರಣ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, “ಸ್ಯಾಪ್ ಲ್ಯಾಬ್ ಬೆಂಗಳೂರು ಕ್ಯಾಪಸ್ ಭಾರತದ ಅಭಿವೃದ್ಧಿಯಲ್ಲಿ ಸೂಕ್ತ ಹೂಡಿಕೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ 2047' ದೃಷ್ಟಿಕೋನಕ್ಕೆ ಸ್ಫೂರ್ತಿ ನೀಡಿದೆ. ಈ ಕ್ಯಾಪಸ್ ಭಾರತದ ಪ್ರತಿಭೆ ಮತ್ತು ನಾವೀನ್ಯತೆಯ ಪರಿಸರ ವ್ಯವಸ್ಥೆಯ ಮೇಲೆ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಇದು ಭಾರತವನ್ನು ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಿ ಇನ್ನಷ್ಟು ಬಲಪಡಿಸುತ್ತದೆ.” ಎಂದರು.





