- ಪ್ರಭಾ ಮಾಧವ್

ಮನೆಯಲ್ಲಿ ಅಲಂಕಾರಕ್ಕಾಗಿ ಇರಿಸಿದ ವಸ್ತುಗಳೂ ಸಹ ನಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಇತ್ತೀಚೆಗೆ ಹೆಚ್ಚು ಜನ ತಮ್ಮ ಮನೆ ಹಸಿರು ಗಿಡಗಳಿಂದ ತುಂಬಿರಲಿ ಎಂದು ಬಯಸುತ್ತಾರೆ. ಹೀಗಾಗಿಯೇ ಇಂದು ಎಲ್ಲೆಲ್ಲೂ ಇಂಡೋರ್‌ ಪ್ಲಾಂಟ್ಸ್ ಇಂಟೀರಿಯರ್‌ಗೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಇತ್ತೀಚೆಗೆ ಇಂಡೋರ್‌ ಪ್ಲಾಂಟ್ಸ್ ಇರಿಸಿಕೊಳ್ಳುವ ಟ್ರೆಂಡ್‌ ಹೆಚ್ಚಾಗಿದೆ. ಇದರಿಂದ ಮನೆ ಎಲ್ಲೆಲ್ಲೂ ಹಸಿರುಮಯ ಎನಿಸುತ್ತದೆ, ತಂಪಾಗಿ ಇರುವುದರ ಜೊತೆಗೆ ಸಮೃದ್ಧಿಯ ಸಂಕೇತ ಹೌದು.

ಇಂಡೋರ್‌ ಪ್ಲಾಂಟ್ಸ್ ಆಯ್ಕೆ

ಇಂಡೋರ್‌ ಪ್ಲಾಂಟ್ಸ್ ಆರಿಸುವಾಗ ವರ್ಷವಿಡೀ ಹಸಿರಾಗಿರುವಂಥ ಗಿಡಗಳಿಗೇ ಮಹತ್ವ ಕೊಡಿ. ಅಂದರೆ ಮನಿಪ್ಲಾಂಟ್‌, ಬ್ಯಾಂಬೂಶೂಟ್‌, ಪಾಮ್ ಪ್ಲಾಂಟ್‌ ಇತ್ಯಾದಿ. ಇವು ಸದಾ ಹಸಿರಾಗಿರುವ ಸಸ್ಯಗಳಾದ್ದರಿಂದ, ಇವಕ್ಕೆ ಹೆಚ್ಚಿನ ಆರೈಕೆಯ ಅಗತ್ಯವೇನೂ ಇಲ್ಲ. ಎಲ್ಲಕ್ಕೂ ಮೊದಲು ಮನೆಯನ್ನು ಏರಿಯಾ ಅಳತೆ ಪ್ರಕಾರ ಗಿಡಗಳಿಂದ ಅಲಂಕರಿಸುವ ಪ್ಲಾನಿಂಗ್‌ ಮಾಡಿ. ನೀವು ಬಾಲ್ಕನಿಯ ಶೋಭೆ ಹೆಚ್ಚಿಸುವ ವಿಚಾರದಲ್ಲಿದ್ದರೆ ಹ್ಯಾಂಗಿಂಗ್‌  ಡಿಸೈನರ್‌ ಪಾಟ್ಸ್ ಆರಿಸಿಕೊಳ್ಳಿ. ಜಪಾನೀ ಹಾಗೂ ಚೀನೀ ಮಾದರಿಯಲ್ಲಿ ಬಾಲ್ಕನಿಯಲ್ಲಿ ಟಪೋರಿ ಪ್ಲಾಂಟ್ಸ್ ಬೆಳೆಸಬಹುದು. ಗ್ರೀನ್‌ ಬ್ಯಾಂಬೂ, ಡ್ಯಾನ್ಸಿಂಗ್‌  ಗೋಲ್ಡನ್‌ ಬ್ಯಾಂಬೂ,  ಪೈಕ್ಸ್ ನ್ನು ಟೆರೇಸ್‌ ಗಾರ್ಡನ್‌ನಲ್ಲಿ ಬೆಳೆಸಬಹುದು. ತೂಗಾಡಿಸುವ ಬಾಸ್ಕೆಟ್‌ ಪಾಟ್‌ಗಳಲ್ಲಿ ಜೇಡ್‌, ಬಟನ್‌ ಕ್ಯಾಕ್ಟಸ್‌ ಜೊತೆಗೆ ಇನ್ನಿತರ ತೂಗಾಡುವ ಗಿಡಗಳನ್ನು ಬೆಳೆಸಬಹುದು. ಬಾಲ್ಕನಿ ತರಹವೇ ಮೆಟ್ಟಿಲುಗಳ ಮೇಲೂ ಸಹ ಇಂಡೋರ್‌ ಪ್ಲಾಂಟ್ಸ್ ಪಾಟ್‌ ಇರಿಸಿ. ಇತ್ತೀಚೆಗೆ ಮಣ್ಣಿನ ಕುಂಡಗಳು ಮಾತ್ರಲ್ಲದೆ, ಸೆರಾಮಿಕ್‌,  ಪ್ಲಾಸ್ಟಿಕ್‌ ಪಾಟ್ಸ್ ಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಇದರಲ್ಲಿ ನೀಟಾಗಿ ಲೇಔಟ್ಸ್ ತರಹ ಮಾಡಿಕೊಂಡರೆ ನಿಮ್ಮ ಇಂಡೋರ್‌ ಪ್ಲಾಂಟ್ಸ್ ನ ಸೊಗಸು ಮತ್ತಷ್ಟು ಹೆಚ್ಚುತ್ತದೆ. ಇತ್ತೀಚೆಗೆ ಬಹಳಷ್ಟು ಬಗೆಯ ಡಿಸೈನರ್‌ ಟ್ರೆಂಡಿ ಲುಕ್ಸ್ ಸಹ ಬರುತ್ತಿವೆ, ಇದು ಹೋಂ ಗಾರ್ಡನ್‌ಗೆ ಡಿಸೈನರ್‌ ಲುಕ್ಸ್ ಕೊಡುತ್ತದೆ.

ಕೃತಕ ಕಾರಂಜಿ

ಇಂದು ಮಾರುಕಟ್ಟೆಯಲ್ಲಿ ಹಲವು ಬಗೆಯ ಇಂಡೋರ್‌ ಪ್ಲಾಂಟ್ಸ್ ಲಭ್ಯ. ಆದರೆ ಹಸಿರು ಮತ್ತು ಬಿಳಿಯ ಪಟ್ಟಿಗಳಿರುವ ಎಲೆಗಳ ಶೋ ಗಿಡಗಳು, ಮನಿಪ್ಲಾಂಟ್‌ ಹೆಚ್ಚು ಬೇಡಿಕೆಯಲ್ಲಿವೆ.  ಇದನ್ನು ಹ್ಯಾಂಗಿಂಗ್‌ ಬ್ಯಾಸ್ಕೆಟ್‌ ಅಥವಾ ಪಾಟ್‌ನಲ್ಲಿ ಅಳವಡಿಸಿ ಬಣ್ಣ ಬಣ್ಣದ ಕಲ್ಲುಗಳಿಂದ ಅಲಂಕರಿಸಬಹುದು. ಇದು ಲಿವಿಂಗ್‌ ರೂಮಿನಲ್ಲಿ ಎದ್ದು ಕಾಣಿಸುತ್ತದೆ. ಇದರ ಜೊತೆಗೆ ಕೃತಕ ಕಾರಂಜಿಯ ಕಾನ್‌ಸೆಪ್ಟ್ ಕೂಡ ಜನಪ್ರಿಯವಾಗುತ್ತಿದೆ. ಇದರ ಅವಳಡಿಕೆಯಿಂದ ನೀವು ಹೋಂ ಗಾರ್ಡನ್‌ಗೆ ನೈಸರ್ಗಿಕ ಟಚ್‌ ನೀಡಬಹುದು. ಮಾರುಕಟ್ಟೆಯಲ್ಲಿ ಕೃತಕ ಹಲ್ಲುಹಾಸು ಸಹ ಲಭ್ಯ. ಇದನ್ನು ನಿಮ್ಮ ಬಾಲ್ಕನಿಯಲ್ಲಿ ಹರಡಿ ಮಿನಿ ಗಾರ್ಡನ್‌ ಲುಕ್ಸ್ ಒದಗಿಸಬಹುದು.

ಇಂಡೋರ್‌ ಪ್ಲಾಂಟ್ಸ್ ಎವರ್‌ ರೆಡಿ

ಇಂಡೋರ್‌ ಪ್ಲಾಂಟ್ಸ್ ಕೇವಲ ಮನೆಯ ಪರಿಸರಕ್ಕೆ ಅಂದ ನೀಡುವುದಲ್ಲದೆ, ಆರೋಗ್ಯಕರ ಜೀವನಕ್ಕೆ ಒತ್ತಾಸೆಯೂ ಆಗಿದೆ. ಇಂಡೋರ್‌ ಪ್ಲಾಂಟ್ಸ್ ಮನೆಯೊಳಗಿನ ಇಂಗಾಲದ ಡೈ ಆಕ್ಸೈಡ್‌ನ್ನು ಹೀರಿಕೊಳ್ಳುತ್ತವೆ, ಹಾಗಾಗಿ ಮನೆಯೊಳಗೆ ಸೆಖೆ ಅನಿಸುವುದಿಲ್ಲ. ಹೆಚ್ಚು ತಾಜಾ ಆಮ್ಲಜನಕ ದೊರಕುತ್ತದೆ. ಮನಿ ಪ್ಲಾಂಟ್ಸ್, ಫರ್ನ್‌, ಪಾಮ್, ಯಾವುದೇ ಬೋನ್ಸಾಯ್‌ ಪ್ಲಾಂಟ್ಸ್ ಈ ನಿಟ್ಟಿನಲ್ಲಿ ಪೂರಕ. ಪಾಮ್ ಮತ್ತು ಚೈನೀಸ್‌ ಬ್ಯಾಂಬೂ ಗಿಡಗಳಿಂದ ಗೃಹಾಲಂಕಾರಕ್ಕೆ ಹೆಚ್ಚಿನ ಕಳೆ ಬರುತ್ತದೆ. ಇವನ್ನು ಸ್ಟಡಿ ಡೆಸ್ಕ್ ಬಳಿ ಅಥವಾ ಲಿವಿಂಗ್‌ ರೂಮಿನಲ್ಲಿ ಇರಿಸಬಹುದು. ಅದೇ ತರಹ ಕಿಚನ್‌ನಲ್ಲಿ ಪ್ಲಾಂಟ್ಸ್ ಇರಿಸುವುದರಿಂದ ಅಲ್ಲಿನ ವಾತಾರಣ ಹಿಂಸಕಾರಕ ಎನಿಸುವುದಿಲ್ಲ. ಮಾಯಿಶ್ಚರ್‌ಫ್ರೆಂಡ್ಲಿ ಫರ್ನ್‌ ಮತ್ತು ಬೇಬಿ ಟಿಯರ್‌ ಗಿಡಗಳನ್ನು ಬಾಥ್‌ರೂಮಿಗೂ ಬಳಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ