ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ! :  ಮ್ಯಾಂ‌ವ್… ಮ್ಯಾಂವ್‌… ತ್ಚು ತ್ಚು… ಟಾಮ್ ಕ್ಯಾಟ್‌ ತನ್ನ ಪ್ರೇಯಸಿ ಪುಸ್ಸಿ ಕ್ಯಾಟ್‌ಗೆ ಪ್ರೇಮ ತೋರುತ್ತಿರುವ ಪರಿ ಇದು. ಮಾನವರಿಗೂ ಇಂಥ ನಿರ್ಮಲ ಪ್ರೀತಿ ಗೊತ್ತಿದ್ದರೆ…. ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕ್ಯಾಟ್‌ ಫ್ಯಾಷನ್‌ ಶೋನ ಒಂದು ದೃಶ್ಯ.

ಇದರಲ್ಲಿದೆ ಅಸಲಿ ಮಜಾ! : ಜಾಂಬಿ ಕಾಸ್ಟ್ಯೂಮ್ಸ್ ಧರಿಸಿ ಮೆರೆಯುವುದು ಹಾಗೂ ಎಲ್ಲೆಡೆ ಪ್ರದರ್ಶನಗಳಲ್ಲಿ ಭಾಗಹಿಸುವುದು ಯೂರೋಪ್‌, ಅಮೆರಿಕಾದ ಯುವಜನತೆಯಲ್ಲಿ ಈಗ ಮಾಮೂಲಿ ಅನಿಸಿದೆ. ಕಾರ್ಟೂನ್‌  ಫಿಲ್ಮಿ ಕ್ಯಾರೆಕ್ಟರ್ಸ್‌ನ್ನು ಒಮ್ಮೆ ಫೇವರಿಟೀಸ್‌ ಅಥವಾ ಒಮ್ಮೊಮ್ಮೆ ಭೀಭತ್ಸಕರಾಗಿ ಪ್ರದರ್ಶಿಸುವುದರಲ್ಲಿ ಎಂಥದೋ ಒಂದು ಮಜಾ…..!

ಫ್ಯಾಷನ್ನಿನ ಈ ಹೊಸ ಪರಿ :  ಫ್ಯಾಷನ್ನಿನ ಈ ಅಭಿನವ ಪ್ರಯೋಗಕ್ಕೆ ಮನಸೋಲದವರುಂಟೆ? ಆದರೆ ಈ ಪರಿಯಲ್ಲಿ ಈಕೆ ನ್ಯೂ ಇಯರ್‌ ಪಾರ್ಟಿಗೆ ಬಂದರೆ, ಯಾರಾದರೂ ಕಿಸ್‌ ಮಾಡಿ ವಿಷ್‌ ಮಾಡಬಯಸಿದರೆ, ಅವರಿಗೆ ಈ ಸುರುಳಿ (ಸ್ಪೈರ್ಸ್‌)ಗಳು ಅಡ್ಡಿಪಡಿಸುದಿಲ್ಲವೇ?

sos

ಅದ್ಭುತ ಪ್ರೇಮ ಪ್ರದರ್ಶನ : ಪ್ರೇಮದ ಪ್ರದರ್ಶನ ವೇದಿಕೆ, ಸಿನಿಮಾದ ಹಿರಿತೆರೆ, ಧಾರಾವಾಹಿಯ ಕಿರುತೆರೆ ಎಲ್ಲೇ ಇರಲಿ ಪ್ರೇಕ್ಷಕರಲ್ಲಿ ಅದ್ಭುತ ಪ್ರಫುಲ್ಲಿತ ಭಾವ ತುಂಬುತ್ತದೆ. ಹೀಗಾಗಿಯೇ ಜನ ತಮಗರಿಯದೆ ಪಕ್ಕದಲ್ಲಿನ ಸಂಗಾತಿಯನ್ನು ತಡಕಾಡುತ್ತಾರೆ. ಇಂಥದೇ ದೃಶ್ಯ ಪ್ಯಾರಿಸ್‌ನ ಒಪೇರಾ ಹೌಸ್‌ನಲ್ಲಿ ಸಾರ್ವಜನಿಕವಾಗಿ ಹೀಗೆ ಗೋಚರಿಸಿತು.

ಚಿತ್ರವಿಚಿತ್ರ ಪರಂಪರೆ : ಹ್ಯಾಲೋವೀನ್‌ ಎಂಬುದು ಯೂರೋಪಿನಲ್ಲಿ ಹಿಂದಿನಿಂದಲೂ ನಡೆದುಬಂದ ಒಂದು ಪರಂಪರೆಯ ಹಬ್ಬ. ಇದರಲ್ಲಿ ಕುಂಬಳವನ್ನು ಕೊರೆದು ಕಣ್ಣು ಬಾಯಿ ರಚಿಸಿ, ಅದರೊಳಗೆ ಒಂದು ಕ್ಯಾಂಡಲ್ ಇರಿಸಿ, ಮನೆ ಮನೆಗೂ ಹೋಗಿ ಚಂದಾ ವಸೂಲಿ ಮಾಡುತ್ತಾರೆ. ಯಾರಿಗೆಷ್ಟು ಸಿಗುತ್ತೋ ಬಿಡುತ್ತೋ, ಈ ಜಿರಾಫೆಗಳಿಗಂತೂ ರುಚಿಯಾದ ಆಹಾರ ಸಿಕ್ಕಿತು.

sos

ಇದು ಹೊಸ ನೋಟಿಗಾಗಿ ನಿಂತ ಕ್ಯೂ ಅಲ್ಲ! :  ಅಸಲಿಗೆ ಇದು ಮಹಿಳಾ ಹಕ್ಕುಗಳ ಬೇಡಿಕೆಗಾಗಿ ಸಾಲುಗಟ್ಟಿ ನುಗ್ಗುತ್ತಿರುವ ನಾರೀಮಣಿಯರ ಹೋರಾಟ. ಪ್ಯಾಲೆಸ್ಟೈನ್‌ನ ಲೇಟೆಸ್ಟ್ ಬ್ಯಾಂಕ್‌ನ ಒಂದು ನಗರವಾದ ಜ್ಯಾರಿಕೋದಲ್ಲಿ ಶಾಂತಿಯ ಅಪೀಲ್‌ಗಾಗಿ ನಡೆಸಿದ ಹೋರಾಟ. ಕೇವಲ ಬಂದೂಕಿನ ಭಾಷೆ ಅರಿತ ಅಲ್ಲಿನ ಆಡಳಿತದವರಿಗೆ ಈ ಅಳಲು ಮುಟ್ಟೀತೇ?

ಮಾನವೀತೆಯ ಉಳಿವಿಗಾಗಿ :  ಒಂದು ಕಡೆ ಬಹಳಷ್ಟು ದೇಶಗಳಲ್ಲಿ ತಂತಮ್ಮ ದೇಶಗಳ ಬೆಂದು ಬಸವಳಿದ ಶರಣಾರ್ಥಿಗಳ ಒಳಪ್ರವೇಶಕ್ಕೆ ತೀವ್ರ ವಿರೋಧವಿದ್ದರೆ, ಇನ್ನೊಂದು ಕಡೆ ಅಂಥ ಮಂದಿಯನ್ನು ತೆರೆದ ಹೃದಯದಿಂದ ಸ್ವಾಗತ ಕೋರುವವರೂ ಇದ್ದಾರೆ. ಬ್ರಿಟನ್ನಿನ ಎಮಿಗ್ರೆಂಟ್‌ ನೀತಿಯ ವಿರುದ್ಧ ನಡೆಯುತ್ತಿರುವ ಒಂದು ಪ್ರದರ್ಶನದಲ್ಲಿ ಇಂಥ ಬ್ಯಾನರ್‌ ಹಿಡಿದ ಕೋಟ್ಯಂತರ ಮಾನವತಾವಾದಿಗಳು ಪಾಲ್ಗೊಂಡರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ