ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ, ಸ್ಥಾನಮಾನ, ಸ್ವಾತಂತ್ರ್ಯ, ಸಾಧನೆ, ನ್ಯಾಯ, ಮಾನವೀಯತೆ, ಧೈರ್ಯ, ಹಕ್ಕು, ಸ್ತ್ರೀಯ ತನ್ನತನಕ್ಕಾಗಿ ಮಾತ್ರವಲ್ಲ, ಎಲ್ಲ ಮಹಿಳಾಪರ ಧ್ವನಿಗಾಗಿ ಇಟ್ಟ ದಿಟ್ಟ ಹೆಜ್ಜೆಯೇ..... `ಅವಳ ಹೆಜ್ಜೆ!'

ಹೆಣ್ಣುಮಕ್ಕಳು ತಮ್ಮ ಬದುಕಿನ ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಡಳಿತವನ್ನು ಪ್ರಭಾವಿಸಬೇಕು. ಸಮಾನತೆ ಬೇಕೆಂದರೆ ಸಮಾನವಾದ ಜವಾಬ್ದಾರಿ ವಹಿಸಿಕೊಳ್ಳಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ತಾನು ಮುಂದಡಿ ಇಡಬೇಕು. ಮನೆಯಿಂದಾಚೆಗೂ ಬಂದು ವಿಶಾಲ ಜಗತ್ತನ್ನು ನೋಡಬೇಕು ಎಂಬುದೇ `ಅವಳ ಹೆಜ್ಜೆ' ಸಂಸ್ಥೆಯ ಮುಖ್ಯ ಧ್ಯೇಯ!

ಅವಳ ಹೆಜ್ಜೆ ಮಹಿಳೆಯು ತನ್ನ ಬದುಕಿನಲ್ಲಿ ಇಡುವ ಮಹತ್ವದ ಹೆಜ್ಜೆಯ ಗುರುತು. ಆಟದ ಮೈದಾನದಿಂದ ಹಿಡಿದು ಕೋರ್ಟ್ ರೂಮ್, ಪಾರ್ಲಿಮೆಂಟ್‌ ತನಕ, ಬಾಹ್ಯಾಕಾಶದಲ್ಲಿ ಚಂದ್ರನೂ ಸೇರಿದಂತೆ ಎಲ್ಲಾ ಕಡೆ ಅವಳ ಹೆಜ್ಜೆ ಇರಲಿ. ಪ್ರತಿ ಕ್ಷೇತ್ರದಲ್ಲೂ ಆಕೆ ಕಾಣಿಸಬೇಕು ಎಂಬುದರ ಆಶಯವೇ ಅವಳ ಹೆಜ್ಜೆ! ಹೀಗೆ ಸ್ತ್ರೀ ಸಬಲೀಕರಣಕ್ಕಾಗಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಅವಳ ಹೆಜ್ಜೆಯ ಹಿಂದಿರುವ ಶಕ್ತಿಯೇ ಅದರ ನಿರ್ದೇಶಕಿ ಶಾಂತಲಾ ದಾಮ್ಲೆ.

ಲಿಂಗ ಸಂವೇದನೆ, ವೈಯಕ್ತಿತ್ವ ವಿಕಸನ, ಮುಟ್ಟಿನ ನೈರ್ಮಲ್ಯ, ಕನ್ನಡತಿ ಕಿರುಚಿತ್ರೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು, ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು, ಸಮಾಜಕ್ಕೆ ತನ್ನ ಜವಾಬ್ದಾರಿ ಏನು ಅನ್ನುವುದರ ಬಗ್ಗೆ ಅರಿವು ಮೂಡಿಸುತ್ತಾ, ಪ್ರತಿಯೊಬ್ಬ ಹೆಣ್ಣೂ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮನೆಯಿಂದ ಹೊರಗೆ ಬನ್ನಿ ಎಂದು ಅವಳ ಹೆಜ್ಜೆ ಮೂಲಕ ಸ್ತ್ರೀಯರಿಗೆ ಪ್ರೇರೇಪಣೆ ನೀಡುತ್ತಾ ಬಂದಿರುವವರೇ ನಮ್ಮ ಸ್ತ್ರೀಕುಲದ ಮೆಚ್ಚಿನ ಶಾಂತಲಾ ದಾಮ್ಲೆ.

ಮೈಸೂರಿನ ಗುಬ್ಬಿವಾಣಿ ಟ್ರಸ್ಟ್ ನಡೆಸುತ್ತಿರುವ ಅವಳ ಹೆಜ್ಜೆಯ ನಿರ್ದೇಶಕಿ ಶಾಂತಲಾ ದಾಮ್ಲೆ, ಅಮೆರಿಕಾದ ವರ್ಜೀನಿಯಾ ಟೆಕ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಮತ್ತು ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದರು. ಐಟಿ ಕ್ಷೇತ್ರದಲ್ಲಿ 4 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಮತ್ತು 12 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕಾದಲ್ಲಿ ಕೆಲಸ ನಿರ್ವಹಿಸಿದರು.

2010ರಲ್ಲಿ ಭಾರತಕ್ಕೆ ಮರಳಿದ ನಂತರ, ಅವರು ಭ್ರಷ್ಟಾಚಾರ ವಿರೋಧಿ ಚಳುವಳಿ ಮತ್ತು ಮಹಿಳಾ ಸಶಕ್ತೀಕರಣದತ್ತ ಗಮನಹರಿಸಿ ಸಾಮಾಜಿಕ ಕೆಲಸ ಹಾಗೂ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ವಿಶೇಷ ಅಂದ್ರೆ, ವೃತ್ತಿ ಅರಸಿ ಅಮರಿಕಾಕ್ಕೆ ತೆರಳಿ ಅಲ್ಲಿ ನೆಲೆಸಿದರು ಮತ್ತೆ ಭಾರತಕ್ಕೆ ಹಿಂದಿರುಗಿ ಬರುವವರ ಸಂಖ್ಯೆ ಬಹಳ ವಿರಳ. ಅಂತಹುದರಲ್ಲಿ, ಶಾಂತಲಾ ದಾಮ್ಲೆಯರಿಗೆ ಅಲ್ಲಿನ ವ್ಯವಸ್ಥೆ ಇಷ್ಟವಾದರೂ ತಾನು ತನ್ನ ದೇಶದಲ್ಲಿ ಏನಾದರೂ ಮಾಡಬೇಕು ಅಂದುಕೊಂಡು ಭಾರತಕ್ಕೆ ವಾಪಸ್ಸಾದರು.

Individual-photo-1-copy

ಆರಂಭಿಕ ದಿನಗಳು

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಾಂತಲಾ ದಾಮ್ಲೆಯವರ ತಂದೆ ಎಚ್‌.ಎಂ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರಿಗೆ ಹೆಣ್ಣುಮಕ್ಕಳು ಎದುರಿಸುವ ತಾರತಮ್ಯದ ಜೀವನಗಳ ಬಗ್ಗೆ ಚಿಕ್ಕಂದಿನಲ್ಲೇ ಅರಿವಿತ್ತು. ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯರಾಗಿದ್ದ ಶಾಂತಲಾ, ಆಗಾಗ ಕೇಳುತ್ತಿದ್ದ ಪ್ರಶ್ನೆಯೆಂದರೆ, `ನಮ್ಮ ಮನೆಗಳಲ್ಲಿ ಮಗನಿಗೆ ನೀಡುವ ಆದ್ಯತೆ ಮಗಳಿಗೆ ಏಕೆ ನೀಡುವುದಿಲ್ಲ....?' ಎಂಬುದಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ