ತಮ್ಮ ಆಸೆಗಳಿಗೊಂದು ಸರಿಯಾದ ಮಾರ್ಗ ತೋರಿ ಶುಭಾಂಗಿ ಇಂದು ಯಶಸ್ಸಿನ ಶಿಖರವೇರಿದ್ದಾರೆ. ಇದನ್ನು ಇವರ ಮಾತುಗಳಲ್ಲಿಯೇ ವಿವರವಾಗಿ ತಿಳಿಯೋಣವೇ…….?

`ಕಸೌಟಿ ಝಿಂದಗೀ ಕೀ, ಕಸ್ತೂರಿ, ದೋ ಹಂಸೋಂಕಾ ಜೋಡಾ, ಚಿಡಿಯಾಘರ್‌' ಇತ್ಯಾದಿ ಧಾರಾವಾಹಿಗಳಲ್ಲಿ ಯಶಸ್ವಿಯಾಗಿ ನಟಿಸಿ, ಇದೀಗ ನಟಿ ಶುಭಾಂಗಿ ಅತ್ರೆ ಪೂರೆ  ಟಿ.ವಿ.ಯ `ಭಾಭೀಜಿ ಘರ್‌ ಪರ್‌ ಹೈ' ಜನಪ್ರಿಯ ಧಾರಾವಾಹಿಯಲ್ಲಿ ಅಂಗೂರಿ ಭಾಭಿಯ ಪಾತ್ರ ವಹಿಸುತ್ತಿದ್ದಾರೆ. ಶುಭಾಂಗಿ ಶಾಂತ, ಹಸನ್ಮುಖಿ ಸ್ವಭಾವದವರು. ಮರಾಠಿಗರ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದ ಈ ಹೆಣ್ಣುಮಗಳು ಮೂಲತಃ ಇಂದೋರಿನವರು. ಶುಭಾಂಗಿ ಪೀಯೂಷ್‌ ಪೂರೆ ಅವರನ್ನು ವಿವಾಹವಾದರು. ಈತ ಒಂದು ಖ್ಯಾತ ಆ್ಯಡ್‌ ಕಂಪನಿಯ ಮ್ಯಾನೇಜರ್‌. ಅವರಿಗೀಗ 11 ವರ್ಷದ ಒಬ್ಬ ಮಗಳಿದ್ದಾಳೆ, ಆಶಾ.

ಬಾಲ್ಯದಿಂದಲೂ ಶುಭಾಂಗಿಗೆ ಏನಾದರೊಂದು ವಿಭಿನ್ನವಾಗಿ ಸಾಧಿಸಬೇಕೆನ್ನುವ ಛಲವಿತ್ತು. ಆಕೆ ಕಥಕ್‌ ಶಾಸ್ತ್ರೀಯ ನೃತ್ಯಪಟು ಕೂಡ. ಆಕೆ ಕಿರುತೆರೆಯಲ್ಲಿ ಇಂದು ಈ ಮಟ್ಟಕ್ಕೇರಲು ತಾಯಿ ತಂದೆ ಹಾಗೂ ಪತಿಯ ಹೆಚ್ಚಿನ ಪ್ರೋತ್ಸಾಹವಿದೆ. ಬನ್ನಿ, ಆಕೆಯ ಬಾಯಿಂದಲೇ ಅವರ ಯಶಸ್ಸಿನ ಕುರಿತು ತಿಳಿಯೋಣ :

ನಿಮ್ಮ ದೃಷ್ಟಿಯಲ್ಲಿ ಸಕ್ಸಸ್‌ ಅಂದ್ರೆ ಏನು?

ಸಕ್ಸಸ್‌ ಅನ್ನುವುದು ನಮ್ಮ ಜೀವನದ ಹೈ ಪಾಯಿಂಟ್‌ ಆಗಿದೆ. ಇದರಲ್ಲಿ ನೀವು ಗ್ರೌಂಡೆಡ್‌ ಆಗಿರಬೇಕಾದುದು ಅತ್ಯಗತ್ಯ. ಅದನ್ನು ನೀವು ಎಂಜಾಯ್‌ ಮಾಡುವಂತಿರಬೇಕು. ಆದರೆ ಅದು ನಿಮ್ಮ ತಲೆ ಕೆಡಿಸುವ ಮಟ್ಟಕ್ಕೆ ಏರಬಾರದು. ಯಶಸ್ಸು ಕ್ಷಣಿಕ ಎಂಬುದೇ ಕಟುಸತ್ಯ. ಈ ಇಂಡಸ್ಟ್ರಿಯಲ್ಲಂತೂ ನೀವು ಎಂದೂ ಸಕ್ಸಸ್‌ನ್ನು ಪ್ರೆಡಿಕ್ಟ್ ಮಾಡಲು ಸಾಧ್ಯವಿಲ್ಲ. ನನಗೆ ಈ ಶೋನಲ್ಲಿ ಅವಕಾಶ ಸಿಕ್ಕಿದಾಗ, ನಾನು ಬಹಳ ನರ್ವಸ್ ಆಗಿದ್ದೆ. ಆದರೆ ನಾನು ನನ್ನ ಶ್ರದ್ಧೆ, ಪರಿಶ್ರಮಗಳಿಂದ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದೆ.

ನಿಮ್ಮ ಈ ಯಶಸ್ಸಿನಲ್ಲಿ ನಿಮ್ಮ ಕುಟುಂಬದ ಮುಖ್ಯವಾಗಿ ನಿಮ್ಮ ತಂದೆಯವರ ಪಾತ್ರವೇನು?

ನನ್ನ ತಂದೆಯವರದು ವರ್ಗಾವಣೆಯ ನೌಕರಿ. ನನಗೆ ಎಲ್ಲಿ ಯಾವ ಸೌಲಭ್ಯ ಸಿಕ್ಕಿತೋ ಅದನ್ನು ಬಳಸಿಕೊಳ್ಳತೊಡಗಿದೆ. ಹೀಗಾಗಿ ನನ್ನ ಎಂದಿನ ಶಿಕ್ಷಣದ ಜೊತೆಯಲ್ಲೇ ಕಥಕ್‌ನ್ನೂ ಕಲಿತೆ. ಸದಾ ಮುಂದುವರಿಯುತ್ತಿರುವುದೇ ನನ್ನ ಗುರಿ ಆಗಿರಬೇಕು ಎಂದು ಅಪ್ಪಾಜಿ ಹೇಳುತ್ತಿರುತ್ತಾರೆ. ನೀರು ಸಹ ಒಂದೇ ಕಡೆ ನಿಂತುಬಿಟ್ಟರೆ ಪಾಚಿ ಕಟ್ಟುತ್ತದೆ. ನಾವು ಮೂವರು ಅಕ್ಕತಂಗಿಯರು, ಅಪ್ಪಾಜಿ ನಮ್ಮ ಮೂವರನ್ನೂ ಮಹತ್ವಾಕಾಂಕ್ಷಿಗಳನ್ನಾಗಿಸಿದ್ದಾರೆ. ಮಾನಸಿಕ ಹಾಗೂ ಭಾವನಾತ್ಮಕವಾಗಿ ನಮ್ಮನ್ನು ಬಹಳ ಸ್ಟ್ರಾಂಗ್‌ ಆಗಿಸಿದ್ದಾರೆ.

ನೀವು ಇಲ್ಲಿಯವರೆಗೂ ಬಂದು ತಲುಪಲು ಎಂತೆಂಥ ಸವಾಲುಗಳನ್ನು ಎದುರಿಸಬೇಕಾಯಿತು?

ಈ ಮಟ್ಟ ತಲುಪಲು ನನ್ನ ಶಿಸ್ತುಬದ್ಧ ಜೀವನವೇ ಮೊದಲ ಪಾಠ. ಶ್ರದ್ಧೆನಿಷ್ಠೆಗಳಿಂದ ಕೆಲಸ ಮಾಡುವುದು, ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು ಬಲು ಮುಖ್ಯ. ಈ ಎಲ್ಲಾ ಗುಣಗಳೂ ನಿಮ್ಮ ಬಳಿ ಇದ್ದರೆ, ಯಾರೂ ನಿಮ್ಮನ್ನು ಮುನ್ನೇರದಂತೆ ತಡೆಯಲು ಸಾಧ್ಯವಿಲ್ಲ. ಇಲ್ಲಿ ನಿಮ್ಮನ್ನು ದಾರಿ ತಪ್ಪಿಸುವವರು ಬಹಳಷ್ಟು ಸಿಗುತ್ತಾರೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಬೇಕಾದವರು ನೀವೇ! ಕಳೆದ 10-11 ವರ್ಷಗಳಲ್ಲಿ ಇದನ್ನು ನಾನು ಚೆನ್ನಾಗಿ ಅರಿತಿದ್ದೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ