ಕೊರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ ದೃಢವಾಗಿ ಹೋರಾಡಿದವರು ಟೈಮ್ಸ್ ಐಕಾನ್ ಅವಾರ್ಡ್
ಕೆ.ಕೆ. ಶೈಲಜಾ ಕೇರಳದ ಆರೋಗ್ಯ ಮಂತ್ರಿ ಆಗಿದ್ದವರು. ಕೊರೋನಾ ಮಹಾಮಾರಿಯ ಅಟ್ಟಹಾಸದ ಕಾಲದಲ್ಲಿ, ಜನರು ಅದರ ಕಬಂಧ ಬಾಹುವಿನ ಸೋಂಕಿಗೆ ಸಿಲುಕದಂತೆ ರಕ್ಷಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು, ಅದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಈಕೆಗೆ ಒಂದು ಮಹತ್ತರ ಐಡೆಂಟಿಟಿ ತಂದುಕೊಟ್ಟಿತು. ಶೈಲಜಾ ಪ್ರಸ್ತುತ 15ನೇ ಕೇರಳ ವಿಧಾನಸಭೆಯಲ್ಲಿ ಮಟ್ಟನೂರು ಕ್ಷೇತ್ರದ ಪ್ರತಿನಿಧಿ ಎನಿಸಿದ್ದಾರೆ.
ಕೊರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ, ಯಾವ ರೀತಿ ತತ್ಪರರಾಗಿ ಸದೃಢತೆಯಿಂದ ತಮ್ಮ ಸಿಬ್ಬಂದಿಯೊಂದಿಗೆ ಕಟಿಬದ್ಧರಾಗಿ ನಿಂತರು ಎಂದರೆ, ಇಡೀ ವಿಶ್ವವೇ ಅದನ್ನು ಕಂಡು ನಿಬ್ಬೆರಗಾಯಿತು!
ದಿ. ಗಾರ್ಜಿಯನ್ ಪತ್ರಿಕೆ ಇವರನ್ನು `ಕೊರೋನಾ ವೈರಸ್ ಕಿಲ್ಲರ್, ರಾಕ್ ಸ್ಟಾರ್ ಆರೋಗ್ಯ ಮಂತ್ರಿ' ಎಂದೆಲ್ಲ ಹಾಡಿ ಹೊಗಳಿ ವರ್ಣಿಸಿತು. ಈಕೆಯನ್ನು ಏಷ್ಯಾದ ಮಹಿಳಾ ಕೊರೋನಾ ಸೇನಾನಿಗಳ ಪಟ್ಟಿಯಲ್ಲಿ ಅಗ್ರ ಶ್ರೇಣಿಯಲ್ಲಿ ನಿಲ್ಲಿಸಿದೆ! ಬ್ರಿಟಿಷ್ ಪತ್ರಿಕೆ ಪ್ರಾಸ್ಪೆಕ್ಟ್ ಈಕೆಯನ್ನು 2020ರ ವಿಶ್ವದ `ಅಗ್ರಗಣ್ಯ ವಿಚಾರಶೀಲರು' ಎಂದು ಸ್ಥಾಪಿಸಿತು. ಇವರನ್ನು ಆಮಂತ್ರಿಸಿ ಸನ್ಮಾನಿಸಿತು. ಬ್ರಿಟಿಷ್ ಪತ್ರಿಕೆ ಫೈನಾನ್ಶಿಯಲ್ ಟೈಮ್ಸ್ ಇವರನ್ನು 2020ರ `ಅತಿ ಪ್ರಭಾಶಾಲಿ ಮಹಿಳೆ' ಎಂದು ಹಣೆಪಟ್ಟಿ ನೀಡಿತು.
ರಾಜಕೀಯದ ಹಾದಿ
ಕಣ್ಣೂರು ಜಿಲ್ಲೆಯ ಮಟ್ಟನೂರಿನಲ್ಲಿ ಹುಟ್ಟಿ ಬೆಳೆದ ಶೈಲಜಾ, ಪದವೀಧರೆ. ಈಕೆ ರಾಜಕೀಯಕ್ಕೆ ಎಂಟ್ರಿ ಪಡೆದದ್ದು, `ಸ್ಟೂಡೆಂಟ್‌ಫೆಡರೇಶನ್ ಆಫ್ ಇಂಡಿಯಾ'ದ ಮೂಲಕ. ಈಕೆ ಮೊದಲ ಸಲ 1996ರಲ್ಲಿ ಕುತುಪರಂಬಾ ಸೀಟ್ ನಿಂದ ಶಾಸಕರಾಗಿ ಆರಿಸಿ ಬಂದರು. ಇದಾದ ನಂತರ 2006, 2016ರಲ್ಲಿ ಮತ್ತೆ ಶಾಸಕರಾಗಿ ಆರಿಸಿ ಬಂದರು.
2018ರಲ್ಲಿ ಆರೋಗ್ಯ ಮಂತ್ರಿಯಾಗಿ ಉನ್ನತ ಹುದ್ದೆಗೇರಿದರು. ಆಗ ಕೇರಳದಲ್ಲಿ ನಿಪಾ ವೈರಸ್ ಅಟ್ಟಹಾಸದಿಂದ ಮೆರೆಯತೊಡಗಿತು. ಇದಂತೂ ಕೊರೋನಾಗಿಂತಲೂ ಅತಿ ಭಯಂಕರ. ಇದರಲ್ಲಿ ಸಾವಿನ ಸಂಖ್ಯೆ 70% ಗಡಿ ದಾಟಿತು. ಅದೇ ಕೊರೋನಾದಲ್ಲಿ ಸಾವಿನ ಸಂಖ್ಯೆ 2%ನಷ್ಟೇ ಇತ್ತು. ಇದನ್ನು ಎದುರಿಸಲು ಈಕೆ ಉತ್ತಮ ರಣನೀತಿ ಹೂಡಿದರು. ತಾವೇ ಪ್ರತಿಯೊಂದು ಸರ್ಕಾರಿ ಆಸ್ಪತ್ರೆಗೂ ಅಚಾನಕ್ ಆಗಿ ಭೇಟಿ ನೀಡುತ್ತಿದ್ದರು. ಆಗಾಗ ಪತ್ರಿಕಾಗೋಷ್ಠಿಗೆ ಕರೆ ನೀಡುತ್ತಾ ಜನತೆಗೆ ಸ್ಪಷ್ಟ ಮಾಹಿತಿ ನೀಡುತ್ತಿದ್ದರು. ಇದಕ್ಕೆ ಮೊದಲು ಕೇರಳ ಇಬೋಲಾ ವೈರಸ್ ಗೂ ತುತ್ತಾಗಿತ್ತು.
ಎಂದೂ ಹಾಗೆ ಚಿಂತಿಸಿದವರಲ್ಲ
ಒಂದು ಚಿಕ್ಕ ಊರಿನಲ್ಲಿ ಹುಟ್ಟಿ ಬೆಳೆದ ಶೈಲಜಾ, ತಮ್ಮ ತಾಯಿ, ಅಜ್ಜಿಯಿಂದ ಅತ್ಯಧಿಕ ಪ್ರೇರಣೆ ಪಡೆದು ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡರು. ಮನೆ ಮಂದಿ ಕಮ್ಯುನಿಸ್ಟ್ ಕಂದಾಚಾರಿಗಳು. ಅವರುಗಳು ಕೇರಳದಲ್ಲಿ ಹರಡಿದ್ದ ಸಾಂಕ್ರಾಮಿಕ ರೋಗ ತಡೆಯಲ್ಲಿ ಮುಂದಾಗಿದ್ದರು. ನನ್ನ ತಾಯಿ ಮುಖಾಂತರ ಈಕೆ, ಯಾವ ರೀತಿ ಕಮ್ಯುನಿಸ್ಟ್ ಪಕ್ಷ ಭಯಭೀತಿ, ತಪ್ಪು ಕಲ್ಪನೆ ಹರಡುತ್ತಿದೆ ಎಂದು ಗುರುತಿಸಿದರು. ರೋಗ ತಡೆಗೆ ಅದರ ಕ್ರಮಗಳು ಇವರಿಗೆ ಒಪ್ಪಿಗೆ ಆಗುತ್ತಿರಲಿಲ್ಲ. ಆದರೆ ಮುಂದೆ ತಾವೇ ಈ ರೀತಿ ಹೋರಾಡಬೇಕಾಗುತ್ತದೆ ಎಂದು ಅವರು ಎಂದೂ ಚಿಂತಿಸಿರಲಿಲ್ಲ.





