ಕ್ಯಾನ್ಸರ್ಬಯಾಲಜಿಸ್ಟ್ ಪ್ರೊಫೆಸರ್

ಕ್ಯಾನ್ಸರ್‌ ಅನುಸಂಧಾನವನ್ನು ಮುಂದುವರಿಸಲು ಮಹತ್ವಪೂರ್ಣ ಪಾತ್ರ ವಹಿಸಿದರು ಎಕ್ಸಿನ್ಸ್ ಇನ್‌ ಸ್ಟೆಮ್ ಅವಾರ್ಡ್‌

ಡಾ. ಬುಶ್ರಾ ಅತೀಕ್‌ ಒಬ್ಬ ಪ್ರಮುಖ ಕ್ಯಾನ್ಸರ್‌ ಜೀವಿಜ್ಞಾನಿ ಹಾಗೂ ಆಂಕಾಲಜಿಸ್ಟ್. ಸದ್ಯದಲ್ಲಿ ಈಕೆ ಇಂಡಿಯನ್‌ ಇನ್‌ ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಕಾನ್ಪುರದಲ್ಲಿ ಜೈವಿಕ ವಿಜ್ಞಾನ ಹಾಗೂ ಜೈ ಎಂಜಿನಿಯರಿಂಗ್‌ ವಿಭಾಗದಲ್ಲಿ ಹಿರಿಯ ಪ್ರೊಫೆಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾನು ಹೈಸ್ಕೂಲು ವಿದ್ಯಾರ್ಥಿನಿ ಆಗಿದ್ದಾಗಿನಿಂದಲೇ ಬುಶ್ರಾರಿಗೆ ಬಯಾಲಜಿ ಅಂದ್ರೆ ಪ್ರಾಣ. ಈ ಕಾರಣದಿಂದಲೇ ಈಕೆ ಮುಂದೆ ಜೆನಿಟಿಕ್ಸ್ ನಲ್ಲಿ ಉನ್ನತ ಶಿಕ್ಷಣ ಪಡೆದರು. ಈ ಕ್ಷೇತ್ರದಲ್ಲಿ ಪಿಂ.ಳಿ ಮಾಡಿದ ನಂತರ, ಅಖಿಲ ಭಾರತೀಯ ಆರ್ಯವಿಜ್ಞಾನ ಸಂಸ್ಥೆ, ನವದೆಹಲಿ ಹಾಗೂ ರಾಷ್ಟ್ರೀಯ ಇಮ್ಯುನಾಲಜಿ ವಿಜ್ಞಾನಸಂಸ್ಥೆ ಸಹಿತ ಅನೇಕ ಪ್ರತಿಷ್ಠಿತ ಸಂಸ್ಥಾನಗಳಲ್ಲಿ ಪೋಸ್ಟ್ ಡಾಕ್ಟರ್ ಸಂಶೋಧನೆಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಕೆನಡಾದ ಮಾಂಟ್ರಿಯಲ್ ನ ಮೆಕಾನಿಕಲ್ ವಿ.ವಿದಲ್ಲಿ ಹಾಗೂ ನಂತರ ಮಿಶಿಗನ್ ವಿ.ವಿ.ದಲ್ಲಿ `ಮಿಶಿಗನ್‌ ಸೆಂಟರ್‌ ಫಾರ್‌ ಟ್ರಾನ್ಸ್ ಸೀಶನ್‌ ಪೆಥಾಲಜಿ'ಯಲ್ಲಿ ತಮ್ಮ ಸಂಶೋಧನೆ ಮುಂದುವರಿಸಿದರು. ಅಲ್ಲಿ ಅವರು ಒಬ್ಬ ಸಂಶೋಧಕರಾಗಿ (ಜೂನಿಯರ್‌ ಫ್ಯಾಕಲ್ಟಿ) ಯಶಸ್ವಿ ಎನಿಸಿದರು. ಫೆಬ್ರವರಿ 2013ರಲ್ಲಿ ಈಕೆ ಕಾನ್ಪರ್‌ ಸೇರಿದರು. ಅಲ್ಲಿ ಇವರು ಕ್ಯಾನ್ಸರ್‌ ಅನುಸಂಧಾನವನ್ನು ಮುಂದೆ ತರುವಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದರು.

ಲೇಖನಗಳಿಗಾಗಿ ಅನೇಕ ಪುರಸ್ಕಾರಗಳು

ಡಾ. ಬುಶ್ರಾರ ಸಂಶೋಧನೆ ಜೆನಿಟಿಕ್ಸ್ ಎಪಿ ಜೆನಿಟಿಕ್‌ ಪರಿವರ್ತನೆಗಳನ್ನು ಅರ್ಥೈಸಿಕೊಳ್ಳುವುದರಲ್ಲಿ ಕೇಂದ್ರಿತವಾಗಿದೆ. ಇವರ ಕೆಲಸ ಆವರ್ಣಿಕ ಲಕ್ಷಣ ವರ್ಣನೆ ಹಾಗೂ ಸಂಭಾವಿತ ಚಿಕಿತ್ಸೀಯ ಲಕ್ಷ್ಯಗಳಲ್ಲಿ ಮಹತ್ವಪೂರ್ಣ ಸಂಶೋಧನೆಗಳಿಗೆ ದಾರಿ ಮಾಡಿದ. ಇದು ವಿಭಿನ್ನ ಮೆಡಿಕಲ್ ಜರ್ನಲ್ಸ್ ನಲ್ಲಿ ಪ್ರಕಟಗೊಳ್ಳುತ್ತಿವೆ.

ಇವರ ಪ್ರಮುಖ ಕೆಲಸ ಪ್ರೋಸ್ಟೇಟ್‌ ಕ್ಯಾನ್ಸರ್‌ ವಿರುದ್ಧ ಹೋರಾಟ. ಬಯೋಮಾರ್ಕರ್‌ ನ್ನು ಐಡೆಂಟಿಫೈ ಮಾಡುವುದರಲ್ಲಿ  ಮಹತ್ವಪೂರ್ಣ ಎನಿಸಿದೆ. ಇದರಿಂದ ಉಪಶಮನ ಹಾಗೂ ಚಿಕಿತ್ಸೀಯ ರಣನೀತಿಗಳಲ್ಲಿ ಸಾಕಷ್ಟು ಸುಧಾರಣೆಗಳಾದವು. ನಮ್ಮ ದೇಶದಲ್ಲಿ 50+ನ ಅನೇಕ ಗಂಡಸರಲ್ಲಿ ಪ್ರೋಸ್ಟೇಟ್‌ ಕ್ಯಾನ್ಸರ್‌ ನ ಸಮಸ್ಯೆ ಹೆಚ್ಚುತ್ತಿದೆ. ಈ ಸಮಸ್ಯೆ ಉಲ್ಬಣಗೊಂಡಾಗ ಮಾತ್ರ, ನಮಗೆ ಅದರ ಅರಿವಾಗುವುದು. ಇತ್ತೀಚೆಗಂತೂ 30+ನ ಯುವಕರು ಸಹ ಈ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದಕ್ಕೆ ಮೂಲ ಕಾರಣ, ಲೈಫ್‌ ಸ್ಟೈಲ್ ಡಿಸ್‌ ಆರ್ಡರ್ಸ್‌. ಕೇವಲ 2-3 ಕೇಸುಗಳಲ್ಲಿ ಆನುವಂಶೀಯತೆ ಕಾರಣವಾಗಬಹುದು.

MG_2716

ಡಾ. ಬುಶ್ರಾ ಹೇಳುತ್ತಾರೆ, `ಸಕಾಲಕ್ಕೆ ಇದನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದರೆ, ಸಮತೋಲಿತ ಆಹಾರ, ವ್ಯಾಯಾಮ, ಲಕ್ಷಣಗಳ ಆಧಾರದಿಂದ ಅದನ್ನು ಸಂಪೂರ್ಣ ನಿಯಂತ್ರಿಸಬಹುದು.'

ಆನುವಂಶಿಕತೆಗೆ ಸಂಬಂಧಿಸಿದ ಶೋಧದ ಕುರಿತಾಗಿ ಈಕೆ ಸಮರ್ಪಣಾ ಪ್ರಯೋಗಶಾಲಾ ಸಂಶೋಧನೆ ಹಾಗೂ ಸೈದ್ಧಾಂತಿಕ ಅನುಪ್ರಯೋಗಗಳ ನಡುವಿನ ಅಂತರ ಗುರುತಿಸಿ, ಕ್ಯಾನ್ಸರ್‌ ರೋಗಿಗಳ ಉತ್ತಮ ಆರೈಕೆ ಹಾಗೂ ಚಿಕಿತ್ಸೆಗೆ ದಾರಿ ಕಂಡುಕೊಂಡಿದ್ದಾರೆ. ಇದಕ್ಕಾಗಿ ಇವರಿಗೆ ಪುರಸ್ಕಾರಗಳು ದೊರಕಿವೆ.

ಹಲವು ವಿಧದಲ್ಲಿ ಪ್ರೇರಣೆ

ಚಿಕಿತ್ಸಾ ವಿಜ್ಞಾನದಲ್ಲಿ, ಸೈನ್ಸ್ ಟೆಕ್ನಾಲಜಿಗೆ ಶಾಂತಿ ಸ್ವರೂಪ್‌ ಭಟ್ನಾಗರ್‌ ಪುರಸ್ಕಾರ, ಎಸ್‌. ರಾಮಚಂದ್ರನ್‌ ರಾಷ್ಟ್ರೀಯ ಜೈವಿಕ ವಿಜ್ಞಾನ ಪ್ರಶಸ್ತಿ, ಜೈ ಟೆಕ್ನಾಲಜಿ ಬಸಂತಿದೇವಿ ಅಮೀರ್‌ ಚಂದ್‌ ಪ್ರಶಸ್ತಿ, ರಾವ್ ‌ಸಂಪಾಯ ಪ್ರಶಸ್ತಿ, ಸಯೀದಾ ಬೇಗಂ ಮಹಿಳಾ ವೈಜ್ಞಾನಿಕ ಪುರಸ್ಕಾರ, ಖೇಲ್ಕರ್‌ ಅನುಸಂಧಾನ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ