ಹದಿನೇಳು ವರ್ಷದ ಶ್ರೀಲಕ್ಷ್ಮಿ, ಕೇರಳದ ಕ್ಯಾಲಿಕಟ್‌ ನಗರದ ಸಂತ ಜೋಸೆಫ್‌ ಪದವಿ ಕಾಲೇಜಿನಲ್ಲಿ ಬಿಬಿಎ ಪ್ರಥಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ತಾವೇ ಸ್ಥಾಪಿಸಿದ `ಇನ್ ಡಿಸೈನ್‌ ಟೆಕ್ನಾಲಜೀಸ್‌' ಹೆಸರಿನ ಸಂಸ್ಥೆಯ ಸಿಇಓ ಆಗಿರುವ ಇವರು ಜಗತ್ತಿನ ಕಿರಿಯ ಸಿಇಓ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಕೇರಳ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಸೇರಿದಂತೆ ಹಲವಾರು ಪ್ರಮುಖ ವೆಬ್‌ಸೈಟ್ಸ್ ಸೃಜಿಸಿರುವ ಶ್ರೀಲಕ್ಷ್ಮಿ ಇದುವರೆಗೂ 100ಕ್ಕೂ ಅಧಿಕ ಗ್ರಾಹಕರಿಗಾಗಿ 150ಕ್ಕೂ ಮೇಲ್ಪಟ್ಟು ವೆಬ್‌ಸೈಟ್ಸ್ ರೂಪಿಸಿದ್ದಾರೆ.

ತಾನು ಎಂಟರ ವಯಸ್ಸಿನಲ್ಲಿರುವಾಗಲೇ ತನ್ನ ಶಾಲೆಗೊಂದು ವೆಬ್‌ಸೈಟ್‌ ರೂಪಿಸಿಕೊಟ್ಟ ಈಕೆ ಅಂದಿನಿಂದಲೂ ವೆಬ್‌ ಡಿಸೈನಿಂಗ್‌ ಹಾಗೂ ಡೆವೆಲಪ್‌ಮೆಂಟ್‌ನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇವರ ಈ ಅಸಾಮಾನ್ಯ ಸಾಧನೆಯನ್ನು ಗುರುತಿಸಿ ಅಮೆರಿಕನ್‌ ವೆಬ್‌ ಮಾಸ್ಟರ್‌ ಸಂಸ್ಥೆಯ ಸದಸ್ಯತ್ವ, ಭಾರತ ಸರ್ಕಾರ ಕೊಡ ಮಾಡುವ ಅಸಾಧಾರಣ ಸಾಧನೆಗಾಗಿನ 2008ನೇ ಸಾಲಿನ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಸೇರಿದಂತೆ ಕೇರಳ ಸರ್ಕಾರದ ಪ್ರಶಸ್ತಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಒಲಿದುಬಂದಿವೆ.

ಅಂತಹ ಅದ್ಭುತ ಪ್ರತಿಭಾವಂತೆಯನ್ನು ನಮ್ಮ ಓದುಗರಿಗೂ ಪರಿಚಯಿಸುವ ಸಲುವಾಗಿ `ಗೃಹಶೋಭಾ' ಅವರನ್ನು ಸಂಪರ್ಕಿಸಿ, ನಡೆಸಿದ ಸಂದರ್ಶನದ ಮುಖ್ಯಾಂಶ ಕೆಳಗಿನಂತಿದೆ :

ನಿಮ್ಮ ಬಗ್ಗೆ ತಿಳಿಸಿ.

ನಾನೊಬ್ಬ ಸಾಧಾರಣ ಹುಡುಗಿ. ನಾನು ಮಾಡಿದ ಕೆಲಸವನ್ನು ನನ್ನದೇ ವಯಸ್ಸಿನ ಯಾರು ಬೇಕಾದರೂ ಮಾಡಲು ಸಾಧ್ಯವಿದೆ. ನನ್ನ ಬಾಲ್ಯದ ದಿನಗಳಿಂದಲೇ ನನಗೆ ಕಂಪ್ಯೂಟರ್‌ ಬಳಸಲು ಅನುಮತಿ ಸಿಕ್ಕಿತ್ತು. ನಾನು ಮೊದಲಿಗೆ ಎಂಎಸ್‌ ಪೇಂಟ್ ಬಳಸಿಕೊಂಡು ಚಿತ್ರ ಬಿಡಿಸುವುದನ್ನು ಕಲಿತೆ. ಆ ಸಮಯದಲ್ಲಿ ನನ್ನ ಅಪ್ಪಾಜಿ ಒಬ್ಬ ಚಿಕ್ಕ ವಯಸ್ಸಿನ ಬಾಲಕ ರಚಿಸಿದ ವೆಬ್‌ಸೈಟ್ ತೋರಿಸಿದರು. ಅದು ನನ್ನಲ್ಲಿ ವಿಶೇಷವಾಗಿ ವೆಬ್‌ಸೈಟ್‌ ವಿನ್ಯಾಸದತ್ತ ಆಸಕ್ತಿ ತಳೆಯುವಂತೆ ಮಾಡಿತು. ಮುಂದೆ ನಾನು ಎಂಎಸ್ ಫ್ರಂಟ್‌ ಪೇಜ್‌ ಬಳಸಿಕೊಂಡು ವೆಬ್‌ಸೈಟ್‌ ರಚಿಸುವುದನ್ನು ಕಲಿತೆ. ನಾನು ಒಳ್ಳೆಯ ವೆಬ್‌ಸೈಟ್‌ ರೂಪಿಸಬಲ್ಲೆ ಎನ್ನುವ ನಂಬಿಕೆ ಹುಟ್ಟಿದ ಬಳಿಕ ನನ್ನ ಶಾಲೆಗಾಗಿ ನಾನೊಂದು ವೆಬ್‌ಸೈಟ್‌ ರೂಪಿಸಲು ನಿರ್ಧರಿಸಿದೆ.

webdesigner-3

ಆದರೆ ಈ ವಿಚಾರವನ್ನು ನನ್ನ ಮುಖ್ಯೋಪಾಧ್ಯಾಯಿನಿ ಬಳಿ ಪ್ರಸ್ತಾಪಿಸಲು ನನಗೆ ಧೈರ್ಯವಾಗಲಿಲ್ಲ. ಅದಕ್ಕಾಗಿ ನಾನು ನನ್ನ ಅಪ್ಪಾಜಿಯ ನೆರವು ಬೇಡಿದೆ. ಅಪ್ಪಾಜಿ ಅದಕ್ಕೆ ಸಂತೋಷದಿಂದ ಒಪ್ಪಿ ತಾವೇ ಶಾಲೆಯ ಮುಖ್ಯೋಪಾಧ್ಯಾಯಿನಿ ಬಳಿ ಮಾತನಾಡಿದರು. ಅವರ ಮಾತಿಗೆ ಒಪ್ಪಿಕೊಂಡ ನಮ್ಮ ಮುಖ್ಯೋಪಾಧ್ಯಾಯಿನಿ ಶಾಲೆಯ ಸಿಬ್ಬಂದಿಯೊಬ್ಬರ ಮೂಲಕ ನನಗೆ ಬೇಕಾದ ಮಾಹಿತಿಗಳನ್ನೆಲ್ಲಾ ಒದಗಿಸಿದರು. ಹೀಗೆ ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ನನ್ನ ಶಾಲೆಗಾಗಿ ಒಂದು ವೆಬ್‌ಸೈಟ್ಸ್ ರೂಪಿಸಿಕೊಟ್ಟೆ! ಆ ಬಳಿಕ ನಾನು ಸಾಕಷ್ಟು ಸಂಘಟನೆಗಳಿಗೂ, ಕ್ಲಬ್‌ಗಳಿಗೂ ವೆಬ್‌ಸೈಟ್‌ ರಚಿಸಿ ಕೊಟ್ಟಿದ್ದೇನೆ. ನಾನು ಹತ್ತನೇ ವಯಸ್ಸಿನಲ್ಲಿರುವಾಗ ನನ್ನದೇ ಆದ `ಇನ್ ಡಿಸೈನ್‌ ಟೆಕ್ನಾಲಜೀಸ್‌' ಎನ್ನುವ ವೆಬ್‌ ಡಿಸೈನ್‌ ಸಂಸ್ಥೆಯೊಂದನ್ನು ಪ್ರಾರಂಭಿಸಿದೆ.

ನಿಮ್ಮ ತಂದೆಯವರ ಬಗ್ಗೆ ಹೇಳಿ.

ನನ್ನ ತಂದೆ ಸುರೇಶ್‌ ಮೆನನ್‌. ವೃತ್ತಿಯಲ್ಲಿ ವಕೀಲರು. ಅವರ ಬೆಂಬಲ, ಪ್ರೋತ್ಸಾಹದ ಫಲವಾಗಿಯೇ ನನಗಿಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ