ಆಕೆಗೆ ಬಾಲ್ಯದಿಂದಲೇ ಚಟಪಟನೆ ಮಾತನಾಡಿ, ಸುತ್ತಲಿನ ವಾತಾವರಣವನ್ನು ಚಕಿತಗೊಳಿಸುವ ವರ ಸಿದ್ಧಿಸಿತ್ತು. ಜೊತೆಗೆ ಹಾಡಿನ ಹುಚ್ಚು ಕೂಡ ಇತ್ತು. ತನ್ನ ಮಾತಿನ ಚಮತ್ಕಾರದಿಂದಲೇ ಮೋಡಿ ಮಾಡುತ್ತಾ ಮೀಡಿಯಾಗೆ ಕಾಲಿಟ್ಟರು, ಅವರೇ ರಶ್ಮಿ!

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಶ್ಮಿ, ತಮ್ಮ ಚಟುವಟಿಕೆಗಳನ್ನೆಲ್ಲ ಬಸವನಗುಡಿಯಿಂದಲೇ ಶುರು ಹಚ್ಚಿಕೊಂಡರು.

ವಾಣಿಜ್ಯೋದ್ಯಮದಲ್ಲಿ ಪದವೀಧರೆಯಾದ ಈಕೆ ಎಪಿಎಸ್‌ ಕಾಲೇಜಿನಲ್ಲಿ ಕಲಿತರು.

ತಮ್ಮ ಅಪೂರ್ವ ಬಗೆಯ ಮಾತುಗಳಿಂದ ಮೀಡಿಯಾಗೆ ಎಂಟ್ರಿ ಪಡೆದ ರಶ್ಮಿ, ಮೊದಲು ಉದಯ, ನಂತರ ಈ. ಟಿವಿ ವಾಹಿನಿಗಳಲ್ಲಿ ಆ್ಯಂಕರ್‌ ಆಗಿ ಕನ್ನಡಿಗರಿಗೆ ಪರಿಚಿತರಾದರು, ನಂತರ ರೇಡಿಯೋ ಜಾಕಿಯಾಗಿ ಜುಲೈ 2006ರಲ್ಲಿ  FM ರೇಡಿಯೋ ಸೇರಿದ ರಶ್ಮಿ ಮಾತಿನ ಮಳೆ ಸುರಿಸುವ ಮೂಲಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾರೆ.

ಮೊದ ಮೊದಲು ಬೆಳಗಿನ `ಸುಪ್ರಭಾತ' ಕಾರ್ಯಕ್ರಮದಿಂದ ತಮ್ಮನ್ನು ಶ್ರೋತೃಗಳಿಗೆ ಪರಿಚಯಿಸಿಕೊಂಡ ರಶ್ಮಿ ನಂತರ ಮಧ್ಯಾಹ್ನದ `ಬ್ರಾಡ್‌ ಕಾಸ್ಟ್ ಬಂಡಿ' ಮೂಲಕ ಜನಮಾನಸದಲ್ಲಿ ಗಟ್ಟಿಯಾಗಿ ಉಳಿದುಕೊಂಡರು.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಓಡಾಡಿ, ತಂತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಶ್ರೋತೃಗಳನ್ನು ನೇರವಾಗಿ ಮಾತನಾಡಿಸುತ್ತಾ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಾ, ಅವರಿಗೆ ಬೇಕುಬೇಕಾದ ಅತ್ಯುತ್ತಮ ಹಾಡುಗಳನ್ನು ಪ್ರಸಾರ ಮಾಡುತ್ತಾ ರಶ್ಮಿ ಕೇಳುಗರ ಮನದಲ್ಲಿ ಬಲವಾಗಿ ಬೇರೂರಿದರು. ಸದಾ ಸ್ಟುಡಿಯೋಗೆ ಅಂಟಿಕೊಂಡು ಇನ್‌ ಹೌಸ್‌ ನಿರೂಪಕಿ ಆಗದೆ, ಹೊರಗಿನ ಜನರೊಂದಿಗೆ ಮನೆಮಗಳಂತೆ ಸಹಜವಾಗಿ ಬೆರೆತು, ಅವರೊಂದಿಗೆ ಮಾತಿನ ಮಳೆಗರೆದು, ನಕ್ಕುನಗಿಸಿ, ಹಲವು ರಸಪ್ರಶ್ನೆಗಳನ್ನು ಕೇಳುತ್ತಾ, ವಿವಿಧ ವಿನೋದಾವಳಿಯ ಹಾಸ್ಯ ಚಟಾಕಿ ಹಾರಿಸುತ್ತಾ.... ಮಾತಿನ ಮೂಲಕ ಮಳೆಯನ್ನೇ ಸುರಿಸುವರು ಈ ಮಾತಿನಮಲ್ಲಿ. ಹಾಗಾಗಿಯೇ `ಬ್ರಾಡ್‌ ಕಾಸ್ಟ್ ಬಂಡಿ' ಕಾರ್ಯಕ್ರಮ ವಹಿಸುವವರಿಗೆ ಅನ್ವರ್ಥಕವಾಗಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬಂಡಿಯಂತೆ ಸಾಗುತ್ತಾ ರೋಡ್‌ ಶೋ ಕವರ್‌ ಮಾಡುತ್ತಿತ್ತು. ಹೀಗೆ ಅವರ ಕಾರ್ಯಕ್ರಮಗಳ ಪಟ್ಟಿ ಮುಂದುವರಿಯುತ್ತಾ, `ರಾಪಿಡ್‌ ಅಡ್ಡ, ಭಾರಿ ಬಿಂದಾಸ್‌' ಇತ್ಯಾದಿಗಳೊಂದಿಗೆ ಆಕೆ ಹೆಚ್ಚಿನ ಜನಪ್ರಿಯತೆ ಪಡೆದರು. ಸಹಜವಾಗಿಯೇ ಈ ಚಿನಕುರುಳಿಯಂಥ ಮಾತುಗಳು ಈಕೆಗೆ `ರಾಪಿಡ್‌ ರಶ್ಮಿ' ಎಂದು ಹೆಸರು ತಂದುಕೊಟ್ಟವು.

ಬೆಳ್ಳಿ ತೆರೆಯ ಬಂಗಾರದ ಹಾಡುಗಳನ್ನು ಪ್ರಸಾರ ಮಾಡುವ FM 92.7 ಸದಾ, `ಅಂದಿಗೂ ಹಿಟ್‌ ಎಂದೆಂದಿಗೂ ಹಿಟ್‌'  ಗೀತೆಗಳನ್ನಷ್ಟೇ ಕೇಳಿಸುತ್ತದೆ. ತನ್ನ ಚಾಕಚಕ್ಯತೆಯಿಂದ ಕಾರ್ಯಕ್ರಮಗಳನ್ನು ಅಮೋಘವಾಗಿ ನಿರೂಪಿಸುವ ರಾಪಿಡ್‌ ರಶ್ಮಿ, ಈಗ ಪ್ರತಿದಿನ ಮಧ್ಯಾಹ್ನ 1 ಗಂಟೆಯ `ರೆಟ್ರೋ ಸವಾರಿ' ಕಾರ್ಯಕ್ರಮದ ಮೂಲಕ ಕೇಳುಗರ ಮನಗೆದ್ದಿದ್ದಾರೆ. ರಾಪಿಡ್‌ ರಶ್ಮಿ ಇಲ್ಲದೆ ರೆಟ್ರೋ ಸವಾರಿ ಇಲ್ಲ ಎಂಬಷ್ಟು ಖ್ಯಾತಿ ಪಡೆದಿದ್ದಾರೆ. ಹೀಗೆ ಸೆಲೆಬ್ರಿಟಿ ಎನಿಸಿದ ರಶ್ಮಿ, ಯಾವುದೇ ಜನಪ್ರಿಯ ಸಾರ್ವಜನಿಕ ಕಾರ್ಯಕ್ರಮಕ್ಕೆ ಅತಿ ಅನಿವಾರ್ಯ ಎನ್ನುವಂತಾಗಿಬಿಟ್ಟರು. ಕಲರ್ಸ್‌ ಕನ್ನಡ ವಾಹಿನಿ `ಡ್ಯಾನ್ಸಿಂಗ್‌ ಸ್ಟಾರ್ಸ್‌' ಕಾರ್ಯಕ್ರಮ ಏರ್ಪಡಿಸಿದ್ದಾಗ, ಈಕೆಯ ಜನಪ್ರಿಯತೆ ಸತತ 8 ವಾರ ರಶ್ಮಿ ಅಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಸೃಜನ್ ಲೋಕೇಶ್‌ರ `ಮಜಾ ಟಾಕೀಸ್‌'ನಲ್ಲೂ ಸೆಲೆಬ್ರಿಟಿಯಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ