ಇದೊಂದು ನೈಜ ಘಟನೆ. ಇದನ್ನು ಓದಿ ವ್ಯರ್ಥ ಧಾರ್ಮಿಕ ಸಂಪ್ರದಾಯಗಳು ಮತ್ತು ಪದ್ಧತಿಗಳ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು. ಸುಂದರಿಯಾಗಿದ್ದ ಹಾಗೂ ಒಳ್ಳೆಯ ಗುಣಗಳುಳ್ಳ ಉಷಾಳ ತಾಯಿ ನಿಧನರಾದರು. ತಂದೆ ಮಗಳನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಆಗ ಅವಳ ಚಿಕ್ಕಪ್ಪ ಹಾಗೂ ಚಿಕ್ಕಮ್ಮ ಅವಳನ್ನು ತಮ್ಮ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡಿದರು. ವಯಸ್ಕಳಾದ ಮೇಲೆ ಅವಳಿಗೆ ಒಬ್ಬ ಎಂಜಿನಿಯರ್‌ ಹುಡುಗನೊಂದಿಗೆ ಮದುವೆ ನಿಶ್ಚಿತಾರ್ಥವಾಯಿತು.

ನಿಶ್ಚಿತಾರ್ಥ ಚೆನ್ನಾಗಿ ನಡೆಯಿತು. ಮದುವೆಯ ಶಾಸ್ತ್ರಗಳು ಹಾಗೂ ವರದಕ್ಷಿಣೆ ಬಗ್ಗೆ ಮಾತುಕಥೆ ನಡೆಯುವಾಗ ಹುಡುಗನ ತಾಯಿ, ``ನಮಗೆ ವರದಕ್ಷಿಣೆ ಬೇಡ. ನಮಗೆ ಕೋರ್ಟ್‌ ಮ್ಯಾರೇಜ್‌ ಸಾಕು. ನಾವು ಯಾವುದೇ ರೀತಿಯ ಧಾರ್ಮಿಕ ಪದ್ಧತಿಗಳನ್ನು ನಡೆಸುವುದಿಲ್ಲ,'' ಎಂದರು.

ಇದನ್ನು ಕೇಳಿ ಉಷಾಳ ಮನೆಯವರ ಮಧ್ಯೆ ನಿಶ್ಶಬ್ದ ಆವರಿಸಿತು. ಯಾವುದೇ ಶಾಸ್ತ್ರಗಳಿಲ್ಲದೆ, ಧಾರ್ಮಿಕ ಪೂಜೆಗಳಿಲ್ಲದೆ ಮದುವೆ ಹೇಗಾಗುತ್ತದೆ? ಎಂದುಕೊಂಡರು.

ಅವರು ಪೂಜೆ ಹಾಗೂ ದೇವರನ್ನು ಏಕೆ ನಂಬುವುದಿಲ್ಲ ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು. ವರನ ಕುಟುಂಬ ಒಳ್ಳೆಯದಾಗಿದ್ದರಿಂದ ಸಂಬಂಧವನ್ನೂ ಬಿಡುವಂತಿರಲಿಲ್ಲ. ಹೀಗಾಗಿ ಚಿಕ್ಕಮ್ಮ ಹುಡುಗನ ತಾಯಿಯ ಜೊತೆ ಮಾತಾಡುವುದು ಉಚಿತವೆಂದುಕೊಂಡರು.

``ನೀವೇಕೆ ದೇವರು, ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ನಂಬುವುದಿಲ್ಲ?'' ಎಂದು ಹುಡುಗನ ತಾಯಿಯನ್ನು ಕೇಳಿದರು.

ಅವರ ಉತ್ತರ ಹೀಗಿತ್ತು, ``ಅಂದಹಾಗೆ, ನನ್ನ ಮಗನಿಗೆ ದೇವರಲ್ಲಿ ಯಾವುದೇ ನಂಬಿಕೆ ಇಲ್ಲ. ನನ್ನ ಗಂಡ ಅಂದರೆ ಇವನ ತಂದೆ ತೀವ್ರ ಕಾಯಿಲೆಯಿಂದ ನರಳುತ್ತಿದ್ದರು. ಇವನು ಎಲ್ಲ ದೇವರುಗಳ ಪೂಜೆ ಮಾಡಿದ. ಹೋಮಗಳನ್ನು ಮಾಡಿಸಿದ. ಆದರೂ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಆಗಿನಿಂದ ನಾವು ಪೂಜೆ, ಹೋಮ, ಹವನಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ.''

ಹುಡುಗನ ತಾಯಿಯಿಂದ ಈ ಮಾತುಗಳನ್ನು ಕೇಳಿ ಉಷಾಳ ಚಿಕ್ಕಮ್ಮನಿಗೆ ಆಶ್ಚರ್ಯವಾಯಿತು. ಅವರ ಆಲೋಚನೆ ಬದಲಾಯಿತು. ಅವರು ಹುಡುಗನ ತಾಯಿ ಹೇಳಿದ ಪ್ರಕಾರ ಕೋರ್ಟ್‌ ಮ್ಯಾರೇಜ್‌ ಮತ್ತು ರಿಸೆಪ್ಶನ್‌ಗೆ ಸಿದ್ಧತೆ ನಡೆಸಿದರು.

ಉಷಾ ಯಾವುದೇ ಮದುವೆ ಶಾಸ್ತ್ರಗಳು, ಧಾರ್ಮಿಕ ಕ್ರಿಯಗಳಿಲ್ಲದೆ ವಿವಾಹವಾಗಿದ್ದರೂ ಇಂದು ಎಲ್ಲ ರೀತಿಯಲ್ಲಿ ಸುಖವಾಗಿದ್ದಾಳೆ. ಶಾಸ್ತ್ರಗಳಿಲ್ಲದೆ ಯಾವುದೇ ವಿವಾಹವನ್ನು ಭಾರತೀಯ ಸಮಾಜದಲ್ಲಿ ಅಪೂರ್ಣ ಅಥವಾ ಅಸಫಲ ಎಂದು ಭಾವಿಸಲಾಗುತ್ತದೆ. ಭಾರತೀಯ ಸಮಾಜದಲ್ಲಿ ಧಾರ್ಮಿಕ ಪದ್ಧತಿಗಳು, ಪೂಜೆಗಳು ದಿನನಿತ್ಯ ಬದುಕಿನ ಎಲ್ಲಾ ಚಿಕ್ಕಪುಟ್ಟ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಈ ಪದ್ಧತಿಗಳು ಶತಮಾನಗಳಿಂದ ನಡೆಯುತ್ತ ಬಂದಿವೆ. ಅವು ನಮ್ಮ ದಿನಚರಿಯಲ್ಲಿ ಹಾಸುಹೊಕ್ಕಾಗಿದ್ದು ಬಹಳ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ.

ಈ ಧಾರ್ಮಿಕ ಪದ್ಧತಿಗಳ ಹೊರತಾಗಿ ಉಷಾಳನ್ನು ಮದುವೆಯಾಗುವ ಗಂಡಿನಂತೆ ಯೋಚಿಸುವುದೂ ಸಾಧ್ಯವಿಲ್ಲ. ಏಕೆಂದರೆ ಈ ಧಾರ್ಮಿಕ ಪದ್ಧತಿಗಳು ಕೆಟ್ಟ ಚಟದಂತೆ ಜನರ ನರನಾಡಿಗಳಲ್ಲಿ ಸೇರಿಕೊಂಡಿವೆ. ಆದರೆ ಈ ಧಾರ್ಮಿಕ ಕ್ರಿಯೆಗಳು, ಪೂಜೆಗಳು, ಹೋಮ ಹವನಗಳ ಬಗ್ಗೆ ಸಾಮಾನ್ಯ ವ್ಯಕ್ತಿಯ ಆಲೋಚನೆ, ಅವನ ದಿನಚರಿ ಮತ್ತು ಬದುಕಿನ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ?

Reethi-Rivaju-2

ಭ್ರಮೆ ಮತ್ತು ಭಯದ ನೆರಳು

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ