ಮದುವೆ ಹಾಗೂ ಮಗು ಕೆರಿಯರ್ಗೆ ಅಡ್ಡಿಯೇನಲ್ಲ
ಯುವತಿಯರ ಎದುರು 2 ದೊಡ್ಡ ತಿರುವುಗಳು ಬರುತ್ತವೆ. ಒಂದು ಮದುವೆಯ ಬಗ್ಗೆ ಹಾಗೂ ಇನ್ನೊಂದು ಮಗುವಿಗೆ ಜನ್ಮ ಕೊಡುವ ಬಗ್ಗೆ. ಇಂದಿನ ಯುವತಿಯರು ನೌಕರಿಯಲ್ಲಿರುವವರು. ನೌಕರಿ ಚಿಕ್ಕದಿರಲಿ, ದೊಡ್ಡದಿರಲಿ ಮದುವೆಯಾಗಿದ್ದಕ್ಕೆ ಅಥವಾ ಮಗುವಾಗಿದ್ದಕ್ಕೆ ನೌಕರಿ ಬಿಡುವುದು ಕಷ್ಟವಾಗುತ್ತದೆ. ಹೇಗೆಂದರೆ ಮದುವೆಯ ನಂತರ ಅಮ್ಮನ ಮನೆ ಬಿಡುವುದು ಅಥವಾ ವಿವಾದದಿಂದಾಗಿ ಗಂಡನ ಮನೆ ಬಿಡುವುದು. ಮದುವೆಗಾಗಿ ಅಥವಾ ಮಕ್ಕಳಿಗಾಗಿ ಕೆರಿಯರ್‌ನ್ನು ಹಾಳು ಮಾಡಿಕೊಂಡರೆ ತಿಂಗಳುಗಟ್ಟಲೆ, ವರ್ಷಗಟ್ಟಲೆ ಕೆಡುಕೆನಿಸುತ್ತದೆ.
ಒಳ್ಳೆಯ ನೌಕರಿ ಇದ್ದು, ಒಳ್ಳೆಯ ಸಂಬಳ ಸಿಗುತ್ತಿದ್ದು, ಪ್ರಮೋಷನ್ ಸಿಗುತ್ತಿದ್ದರೆ ಮೇಲಿನ ಎರಡೂ ಸ್ಥಿತಿಗಳು ಹೆಚ್ಚಿನ ನೋವು ತರುತ್ತವೆ. ನೌಕರಿ ಕೊಡುವವರಿಗೆ, ಮದುವೆಯ ನಂತರ ಎಫಿಶಿಯನ್ಸಿ ಹಾಗೇ ಇದ್ದರೆ ಮಹಿಳೆಯರು ಮದುವೆಯಾದರೆ ಮತ್ತು ಮಕ್ಕಳಿಗೆ ಜನ್ಮ ಕೊಟ್ಟರೆ ಏನೂ ತೊಂದರೆಯಾಗುವುದಿಲ್ಲ. ಈ ಸಮಸ್ಯೆ ಪುರುಷರಿಗೆ ಬರುವುದಿಲ್ಲ. ಈ ಘಟನೆಯ ನಂತರ, ನೌಕರ ಮತ್ತಷ್ಟು ಸದೃಢನಾಗುತ್ತಾನೆ ಎಂದು ಕಂಪನಿಗಳು ತಿಳಿಯುತ್ತವೆ.
ಈ ವಿಕಟ ಸ್ಥಿತಿಗೆ ಮುಖ್ಯ ಕಾರಣ ನಮ್ಮ ಸಾಮಾಜಿಕ ವ್ಯವಸ್ಥೆ ಹಾಗೂ ಆಲೋಚನೆ. ಮದುವೆಯ ನಂತರ ಸಾಮಾನ್ಯವಾಗಿ ಹುಡುಗಿಯರು ಧಾರ್ಮಿಕ ಹಾಗೂ ಸಾಮಾಜಿಕ ಲೋಕಗಳಲ್ಲಿ ಹೆಚ್ಚು ಸಿಕ್ಕಿಕೊಳ್ಳುತ್ತಾರೆ. ಅವರು ಬಳೆ, ಮಂಗಳಸೂತ್ರ ಧರಿಸಿ ಕುಂಕುಮ ಇಟ್ಟುಕೊಂಡು ಆಫೀಸಿಗೆ ಹೋಗತೊಡಗುತ್ತಾರೆ. ಇಡೀ ದಿನ ವೈವಾಹಿಕ ಬಂಧನ ಅವರ ತಲೆಯ ಮೇಲೆ ಹೇರಲ್ಪಟ್ಟಿರುತ್ತದೆ. ಅವರ ಮೊಬೈಲ್‌ಗಳಲ್ಲಿ ಸ್ನೇಹಿತೆಯರ ಹೆಸರುಗಳು ಕಡಿಮೆಯಾಗಿ ಅತ್ತೆ, ನಾದಿನಿ, ಅತ್ತಿಗೆಯರ ಕರೆಗಳು ಹೆಚ್ಚು ಬರತೊಡಗುತ್ತವೆ.
ಮಗುವಾದ ಮೇಲಂತೂ ಅವರು ಶಕುನ, ರೀತಿ ರಿವಾಜುಗಳು, ಉಡುಪುಗಳ ಬಗ್ಗೆ ಉದಾಸೀನತೆ ಬಿಟ್ಟು ಅವಕ್ಕೆ ಇನ್ನೂ ಹೆಚ್ಚಿನ ಗಮನ ಕೊಡತೊಡಗುತ್ತಾರೆ. ಆ ದಿನಗಳು ಅಫೀಸಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ. ಮತ್ತೆ ಅಫೀಸಿಗೆ ಮರಳಿದಾಗ ಕೆಲಸದ ಅರ್ಧ ಸಮಯ ಮಕ್ಕಳ ಬಗ್ಗೆ ಚಿಂತಿಸುತ್ತಿರುತ್ತಾರೆ. ಆಮೇಲೆ ಮದುವೆ ಹಾಗೂ ಮಕ್ಕಳು ತಮ್ಮ ಕೆರಿಯರ್‌ಗೆ ಅಡ್ಡಿಯಾಗುತ್ತಿವೆ ಎಂದು ಗೊಣಗುತ್ತಾರೆ.
ಮದುವೆ ಹಾಗೂ ಮಕ್ಕಳಿದ್ದರೂ ಪ್ರಕೃತಿಯ ಎಲ್ಲ ಜೀವಿಗಳೂ ತಮ್ಮ ಜೀವನವನ್ನು ಹಿಂದಿನಂತೆಯೇ ನಡೆಸುತ್ತಾರೆ. ನಮ್ಮಲ್ಲಿ ಧರ್ಮ ಮಹಿಳೆಯರ ಮೇಲೆ ರೀತಿ ರಿವಾಜುಗಳನ್ನು ಹೇರಿದೆ. ತಮ್ಮನ್ನು ತಾವು ಗಮನಿಸಿಕೊಳ್ಳುವ ಮಕ್ಕಳನ್ನು ಹೇಗೆ ಪಾಲಿಸಬೇಕೆಂದು ಹಗಲು ರಾತ್ರಿ ಉಪದೇಶಿಸಲಾಗುತ್ತದೆ. ತಂದೆ ತಾಯಿಯರ ಸೇವೆ ಮಾಡು, ಗುರುಗಳ ಪಾದದಡಿಯಲ್ಲಿ ಕುಳಿತುಕೊ, ಪತಿಯನ್ನು ಗೌರವಿಸು, ದಾನ ಮಾಡು, ಮಕ್ಕಳನ್ನು ಗಮನಿಸು ಇತ್ಯಾದಿ ಆದೇಶಗಳನ್ನು ಒಟ್ಟಿಗೆ ಸೇರಿಸಿ ಕಾಕ್‌ಟೇಲ್ ಮಾಡಿ ಒಂದೇ ಉಸಿರಿನಲ್ಲಿ ಕುಡಿಸಲಾಗುತ್ತದೆ. ಮಹಿಳೆಯರಿಗೆ ಕೆರಿಯರ್ ಬಗ್ಗೆ ಯೋಚಿಸು ಎಂದು ಯಾರೂ ಹೇಳುವುದಿಲ್ಲ.ಮದುವೆ ಮತ್ತು ಮಗು ಕೆರಿಯರ್‌ನಲ್ಲಿ ಎಂದಿಗೂ ಅಡ್ಡಿಯಾಗುವುದಿಲ್ಲ. ಒಂದುವೇಳೆ ಮಹಿಳೆಯರು ರಜೆಯಲ್ಲಿದ್ದೂ ಮನಸ್ಸನ್ನು ಸಂಪೂರ್ಣವಾಗಿ ಕೆಲಸದ ಮೇಲೆ ಇಟ್ಟರೆ, ಹಣ ಸಿಗದಿದ್ದರೂ ಅವರು ಫೋನ್ ಮೂಲಕ ಕೆಲಸ ಮಾಡುತ್ತಿರಬಹುದು. ಅವಕಾಶ ಸಿಕ್ಕಾಗ 1-2 ಗಂಟೆ ಆಫೀಸಿಗೆ ಬಂದು ಕೆಲಸ ಮಾಡಬಹುದು. ಅವರು ಆಫೀಸಿನಲ್ಲಿ ಇಲ್ಲವೆಂದು ಯಾರಿಗೂ ಭಾಸವಾಗುವುದಿಲ್ಲ. ಆಫೀಸಿನಲ್ಲಿ ಅತ್ತೆಯ ಮಾತು ಕೇಳಿಸಿಕೊಂಡಂತೆ ರಜೆಯಲ್ಲಿ ಮನೆಯಲ್ಲಿಯೂ ಬಾಸ್ ಅಥವಾ ಸಹೋದ್ಯೋಗಿಯ ಮಾತನ್ನು ಕೇಳಿಸಿಕೊಂಡರೆ ತಪ್ಪೇನು?