ಜಾಗೀರ್ದಾರ್*

ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ನಾಯಕನಾಗಿ ನಟಿಸುತ್ತಿರುವ ಪೆದ್ದಿ ಸಿನಿಮಾತಂಡ ಶಿವಣ್ಣ ಬರ್ತಡೇಗೆ ಶುಭ ಕೋರಿದೆ. ಶಿವಣ್ಣ ಅವರ ಫಸ್ಟ್‌ ಲುಕ್‌ನ್ನು ಬಿಡುಗಡೆ ಮಾಡಲಾಗಿದೆ. ʼಗೌರ್‌ ನಾಯ್ಡುʼ ಪಾತ್ರದಲ್ಲಿ ಹ್ಯಾಟ್ರಿಕ್‌ ಹೀರೋ ನಟಿಸುತ್ತಿದ್ದು, ಉಗ್ರ ನೋಟ, ದಪ್ಪ ಮೀಸೆ ಮತ್ತು ರಗಡ್‌ ಆಗಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ಪೆದ್ದಿ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಪವರ್‌ ಫುಲ್‌ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಉಪ್ಪೇನ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನ ಪೆದ್ದಿ ಸ್ಫೋರ್ಟ್‌ ಆಕ್ಷನ್‌ ಡ್ರಾಮಾ ಕಥಾಹಂದರವೊಂದಿದೆ. ರಾಮ್‌ ಚರಣ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು ಮತ್ತು ದಿವೇಂದು ಶರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕೆ ಎ ಆರ್ ರೆಹಮಾನ್ ಸಂಗೀತ ನೀಡುತ್ತಿದ್ದು, ವೆಂಕಟ ಸತೀಶ್ ಕಿಲಾರು ಹಣ ಹಾಕುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ನಿರ್ಮಾಣದಲ್ಲಿ ಸಾಥ್ ನೀಡಿದೆ. ಆರ್. ರತ್ನವೇಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ರಾಮ್‌ ಚರಣ್‌ ಹುಟ್ಟುಹಬ್ಬ ಅಂಗವಾಗಿ ಅಂದರೆ ಮಾರ್ಚ್ 27, 2026 ರಂದು ಬಹುಭಾಷಾಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ