ನನಗೂ ಇದನ್ನು ಕೊಡಿಸಬಾರದೇ? :  ಕಾಮಿಕ್ಸ್ ಸೈನ್ಸ್ ಫಿಕ್ಷನ್‌ ಚಿತ್ರಗಳ ಹೀರೋ ಡಾರ್ಥ್‌ ಲಾಡೇರ್‌ ಇದೀಗ ಚಿನ್ನದಲ್ಲಿ ಲಭ್ಯ! ಅರ್ಥ ಆಗಲಿಲ್ಲವೇ? ಆ ಹೀರೋ ಮುಖವಾಡ ಖರೀದಿಗಿದೆ, ಅದನ್ನು ಕೊಳ್ಳಬೇಕೆಂದರೆ ಕೂಡಲೇ ಟೋಕಿಯೋಗೆ ಹೊರಡಿ. ಅಲ್ಲಿ ಗಿಂಜಾ ತನಾಕಾ ಜ್ಯೂವೆಲರ್ಸ್‌ನಲ್ಲಿ ಇದು ಲಭ್ಯ.

ರಸಿಕ ಅಭಿಮಾನಿಗಳ ಮಧ್ಯೆ ಶೋಆಫ್‌ : ಅರ್ನಾಲ್ಡ್ ಶ್ವಾರ್ಜ್‌ನೆಗರ್‌ ಹಾಲಿವುಡ್‌ ಚಿತ್ರಗಳ ಜನಪ್ರಿಯ ಹೀರೋ. ಚೀನಾದಲ್ಲೂ ಆತನ ಮಹಿಳಾ ಅಭಿಮಾನಿಗಳಿಗೆ ಕೊರತೆ ಇಲ್ಲ. ಆತ ಹೀಗೆ ಒಮ್ಮೆ ಬೀಜಿಂಗ್‌ ತಲುಪಿದಾಗ, ಆತನೊಂದಿಗೆ ಫೋಟೋ ತೆಗೆಸಿಕೊಳ್ಳಲೆಂದು ಲಲನಾಮಣಿಗಳು ನೂಕುನುಗ್ಗಲಲ್ಲಿ ಲಗ್ಗೆ ಹಾಕಿ ಫೋಟೋ ಕ್ಲಿಕ್ಕಿಸಿದ್ದೂ ಕ್ಲಿಕ್ಕಿಸಿದ್ದೆ! ಮುದಿಯಾಗುತ್ತಾ ಹೊರಟಿರುವ ಈತ, ತನಗೆ ಇನ್ನೂ ಇಂಥ ಕಿರಿವಯಸ್ಸಿನ ಅಭಿಮಾನಿಗಳಿದ್ದಾರಲ್ಲ ಎಂದು ಬೀಗುತ್ತಿರುವುದನ್ನು ನೋಡಿ!

ಇದಾವ ಗ್ರಹದ ಪ್ರಾಣಿಗಳು? :  ಇದೇನಿದು? ಮಾನವ ಕಪ್ಪೆಗಳ ಮಿಶ್ರ ತಳಿಯೇ ಅಂದುಕೊಳ್ಳದಿರಿ. ಹಾಗೆ ಡ್ರೆಸ್‌ ಧರಿಸಿ ಈ ಮಾಡೆಲ್ಸ್ ಜನರೆದುರು ಪೋಸ್‌ ನೀಡುತ್ತಿದ್ದಾರೆ. ಇವರು ಬೇರಾರೂ ಅಲ್ಲ, ಚೀನಾದ ಸರ್ಕಸ್‌ ಕಲಾವಿದರು. ಕೆನೆಡಿಯನ್ ಕಂಪನಿಗಾಗಿ ಕೆಲಸ ಮಾಡುವ ಇವರ ತಂಡವನ್ನು, ಬಿಸ್‌ನೆಸ್‌ಗಾಗಿ ವಿಶ್ವವಿಡೀ ಹರಡುತ್ತಿರುವ ಚೀನೀ ಕೈ ಖರೀದಿಸಿದೆ. ಇಷ್ಟರಲ್ಲೇ ನಿಮಗೆ ಹಾಲಿವುಡ್‌ನಲ್ಲೂ ಚೀನಾ ಮುಖಗಳು ಕಾಣಿಸಿದರೆ ಆಶ್ಚರ್ಯವಿಲ್ಲ. ಏಕೆಂದರೆ ಚೀನೀಯರು ಈಗ ಅಮೆರಿಕಾದಲ್ಲೂ ಭಾರಿ ಪ್ರಮಾಣದಲ್ಲಿ ಬಿಸ್‌ನೆಸ್‌ ನಡೆಸುತ್ತಿದ್ದಾರೆ.

ಇದೇನು ಫ್ಯಾಷನ್ನೋ.... ಅಂದಗೆಟ್ಟ ಮುಖವೋ? : ಇಗೊಳ್ಳಿ, ರಾಂಪ್‌ ಮೇಲೆ ಕಂಡುಬಂದ ಹೊಸ ಫ್ಯಾಷನ್ನಿನ ಅವತಾರ. ಸಿಡ್ನಿಯಲ್ಲಿ ಡಿಸೈನರ್‌ ಅಕಿರ ಇಸೋಗಾಲಾ ಈ ಹೊಸ ಪ್ರಯೋಗ ಪ್ರಸ್ತುತಪಡಿಸಿದರು. ನೋಡುಗರ ದೃಷ್ಟಿ ಈ ಮಾಡೆಲ್‌ನತ್ತ ತಿರುಗಬಹುದು, ಆದರೆ ಗುಡ್‌ ಅಥವಾ ಬ್ಯಾಡ್‌ ಎನಿಸುತ್ತೋ ಹೇಳಲಾಗದು.

ಆಹಾ.... ಚಿಕನ್ಸೂಪ್ರೆಡಿ! :  ಷರತ್ತು : ಒಂದು ಭಾರಿ ಬಾಣಲೆಯಲ್ಲಿ ಕೇವಲ 4,124 ಕಿಲೋದಷ್ಟು ಇದು ತಯಾರಾಗಿತ್ತು. ಇಷ್ಟು ಪ್ರಮಾಣದ ಸೂಪ್‌ಗೆ ಎಂಥ ಭಾರಿ ಬಾಣಲೆ ದೈತ್ಯಾಕಾರದ ಒಲೆ ಬೇಕಾಗಿರುತ್ತದೆ ಎಂದು ಲೆಕ್ಕಹಾಕಿ. ಇದಕ್ಕೆ ಬೆರೆತ ಚಿಕನ್ ಪೀಸ್‌, ಮಸಾಲೆಗಳ ಬಗ್ಗೆ ಏನು ಹೇಳುವುದು? ಅಂತೂ ಕೊನೆಯಲ್ಲಿ ಸಭಿಕರು ಮಜಾ ಉಡಾಯಿಸಿದರು. ಬಹುಶಃ ಬಿಟ್ಟಿ ಸಿಕ್ಕಿದ್ದರಿಂದ ಯಾರೂ ಇದರಲ್ಲಿ ಉಪ್ಪು, ಮೆಣಸು ಕಡಿಮೆ ಎಂದು ಗೊಣಗಿರಲಾರರು!

ದ್ವೇಷ ಸರಿದು ಪ್ರೀತಿ ಮೆರೆಯಲಿ : 100 ವರ್ಷಗಳ ಹಿಂದೆ ಜರ್ಮನಿಯಲ್ಲಿ ಆರ್ಮೇನಿಯನ್‌ರನ್ನು ಅಪಾರ ಸಂಖ್ಯೆಯಲ್ಲಿ ಘೋರವಾಗಿ ಸಂಹರಿಸಲಾಗಿತ್ತು, ಏಕೆಂದರೆ ಅವರ ಧರ್ಮ, ರಿವಾಜು ಜರ್ಮನಿಯರಿಗಿಂತ ಭಿನ್ನವಾಗಿತ್ತು. ರೋಚಕ ವಿಷಯವೆಂದರೆ ಅಲ್ಪಸಂಖ್ಯಾತರನ್ನು ಎಷ್ಟೇ ಕೊನೆಗಾಣಿಸಲಿ, ಫೀನಿಕ್ಸ್ ನಂತೆ ಅವರು ಮತ್ತೆ ಮತ್ತೆ ಎದ್ದು ಬರುತ್ತಿರುತ್ತಾರೆ. ಅವರನ್ನು ಪ್ರೀತಿಯಿಂದ ನಿಮ್ಮವರಾಗಿಸಿಕೊಳ್ಳಿ, ಮಗಳನ್ನು ಕೊಟ್ಟು ಸಂಬಂಧ ಕುದುರಿಸಿ.

samachar-darshan-7

ಜೀವನ ಇರುವುದೇ ಮಜಾ ಉಡಾಯಿಸಲು :  ರಂಗು ರಂಗಿನ ಜೀವನಶೈಲಿ ಬೇಸರದ ಯಾಂತ್ರಿಕ ಜೀವನದಿಂದ ಮುಕ್ತಿ ದೊರಕಿಸುತ್ತದೆ. ಸಾಮಾಜಿಕ ನೃತ್ಯಗಳು ಒಂದು ಥೆರಪಿಯ ಕೆಲಸ ಮಾಡುತ್ತವೆ. ಯೂರೋಪ್‌ನಲ್ಲಿ ಜನ ಅತಿ ಯಾಂತ್ರಿಕ ಕ್ರಿಯೆಯಿಂದ ಬೇಸತ್ತಿರುತ್ತಾರೆ, ಹೀಗಾಗಿ ಅವರು ಉತ್ಸಾಹದಿಂದ ಇಂಥ ನೃತ್ಯಗಳಲ್ಲಿ ಭಾಗವಹಿಸುತ್ತಾರೆ. ಫ್ರಾನ್ಸಿನ ಒಂದು ಸಣ್ಣ ನಗರ ತುಲೋಸ್‌ನಲ್ಲಿ ಇಂಥ ಒಂದು ಕಾರ್ನಿವಾಲ್ ‌ನಡೆದಾಗ, ರಂಗೀಲಾ ಹೆಂಗಸರು ಕುಣಿದದ್ದೇ ಬಂತು. ನಮ್ಮಲ್ಲಿ ಮದುವೆಯ ಮೆರವಣಿಗೆ ಅಥವಾ ಗಣೇಶೋತ್ಸವಗಳಲ್ಲಿ ಇಂಥ ಕುಣಿತ ಇರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ