ತಾಜ್‌ ಮಹಲ್ ನೋಡಲು ಬಂದಿದ್ದ ಶಹಜಹಾನ್‌ನ 6ನೇ ಪೀಳಿಗೆಯ ಮೊಮ್ಮಗ ಹೇಳಿದನಂತೆ, ``ಇಂದು ನಮ್ಮದೂ ಬೇಕಾದಷ್ಟು ಬ್ಯಾಂಕ್‌ ಬ್ಯಾಲೆನ್ಸ್ ಉಳಿದಿರುತ್ತಿತ್ತು..... ಅಂದು ನಮ್ಮ ಅಜ್ಜನಜ್ಜನ ಲವ್ ಕಂಟ್ರೋಲ್‌ನಲ್ಲಿ ಇರಬೇಕಿತ್ತು!''

ಪಿ.ಯು.ಸಿ ಕಾಲೇಜಿನಲ್ಲಿ ಇಂಗ್ಲಿಷ್‌ ಕ್ಲಾಸ್‌ ನಡೆಯುತ್ತಿತ್ತು. ಹೊಸ ಮೇಡಂ ಉತ್ಸಾಹದಿಂದ ಕೊನೆ ಬೆಂಚಿನ ವೆಂಕಿಯನ್ನು ಕೇಳಿದರು, ``ಏನ್ರಿ ವೆಂಕಿ, ಎದ್ದು ನಿಂತು ಹೇಳಿ. ಇಂಗ್ಲಿಷ್‌ನಲ್ಲಿ ಗುಡಿಸಲಿಗೆ ಏನಂತಾರೆ?''

ಏನನ್ನೋ ಯೋಚಿಸುತ್ತಿದ್ದ ವೆಂಕಿಗೆ ಖಂಡಿತಾ ಉತ್ತರ ಹೊಳೆಯಲಿಲ್ಲ. ಅವನು ಎದ್ದು ನಿಂತು ಕಿಟಕಿಯಲ್ಲಿ ಇಣುಕಿದ. ಎಲ್ಲಿಂದಲೋ ಒಂದು ನೊಣ ಬಂದು ಅವನ ಮೂಗಿನ ಮೇಲೆ ಕೂರಲು ``ಹಟ್‌!'' ಎಂದು ಅದನ್ನು ಓಡಿಸಲೆತ್ನಿಸಿದ. ``ಶಭಾಷ್‌! ಎಲ್ಲರೂ ವೆಂಕಿಯ ಹಾಗೆ ಅಲರ್ಟ್‌ ಆಗಿರಿ,'' ಎಂದು ಮೇಡಂ ಹೇಳಲು ಕ್ಲಾಸು ದಂಗುಬಡಿಯಿತು!

 

ಕೋಲ್ಕತಾದಿಂದ ಬೆಂಗಳೂರಿನ ಕಾಲೇಜಿಗೆ ಹೊಸದಾಗಿ ಬಂದು ಸೇರಿದ್ದ ನಿವೇದಿತಾ ಎಷ್ಟು ದಿನಗಳಾದರೂ ತನ್ನ ಹಳೆ ಊರಿನ ಬಗ್ಗೆ ಹೆಮ್ಮೆ ಹೇಳಿಕೊಳ್ಳುವುದನ್ನು ಬಿಡಲಿಲ್ಲ. ``ನಮ್ಮ ಕಲ್ಕತ್ತಾದ ಪಾನ್‌ ಮಸಾಲ ಎಂಥ ಗ್ರೇಟ್‌ ಗೊತ್ತಾ?'' ಎಂದು ಮಾಮೂಲಾಗಿ ಶುರು ಹಚ್ಚಿಕೊಂಡಳು.

``ನಮ್ಮ ಬೆಂಗಳೂರಿನ ಬೆಣ್ಣೆ ಮಸಾಲೆಗಿಂತ ಏನು?'' ಸರಕ್ಕನೆ ಸರಳಾ ಕೇಳಿದಾಗ, ನಿವೇದಿತಾ ತಬ್ಬಿಬ್ಬು.ಹೊಸ ಹೋಟೆಲ್‌‌ನ ಕೊನೆ ಟೇಬಲ್‌ನಲ್ಲಿ ಕುಳಿತಿದ್ದ ಜೋಡಿಯೊಂದು ಬಹಳ ಹೊತ್ತಿನಿಂದ ಗುಸುಗುಸು ನಡೆಸಿತ್ತು. ಮಾಣಿ ಇಬ್ಬರಿಗೂ ಟೀ ತಂದಿಟ್ಟು ಹೋದ ಬಳಿಕ, ಹುಡುಗಿ ಎದ್ದವಳೇ ಸಿಡಾರನೇ ಹುಡುಗನ ಕೆನ್ನೆಗೊಂದು ಬಾರಿಸಿದಳು.

ಅಲ್ಲಿ ಕುಳಿತಿದ್ದ ಬೇರೆ ಜನರೆಲ್ಲ ಏನಾಯ್ತೋ ಏನೋ ಎಂದು ಆ ಟೇಬಲ್ ಬಳಿ ಓಡಿಬಂದವರೇ ``ಏನಾಯ್ತು...? ಯಾಕೆ ಹೊಡೆದದ್ದು....?'' ಎಂದು ವಿಚಾರಿಸಿದರು.

``ಇವನು.... ಇವನು..... ನನ್ನ ಟೀಗೆ ಏನೋ ತಾಯಿತ ಹಾಕಿ ನನ್ನ ವಶೀಕರಣ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೆ.... ಆಮೇಲೆ ನನ್ನ ಗತಿ?'' ಎಂದು ಬಡಬಡಿಸಿದಳು.

ಹುಡುಗ ತಕ್ಷಣ ತಡಬಡಾಯಿಸುತ್ತಾ.... ``ಇ...ಇ... ಇಲ್ಲ.... ಟೀ ಸ್ಟ್ರಾಂಗ್‌ ಇಲ್ಲ ಅಂತ ಟೀ ಬ್ಯಾಗ್‌ ಹಾಕಿದ್ದಷ್ಟೆ.....'' ಎಂದು ಅವನು ಅದನ್ನು ಎತ್ತಿ ತೋರಿಸಿದಾಗ, `ಛೇ..... ಇಷ್ಟೇನೇ....' ಎಂದು ಸ್ವಾರಸ್ಯ ಕಾಣದ ಮಂದಿ ಹುಡುಗಿಯನ್ನು ಗದರಿಕೊಂಡರು.

 

ಹೊಸದಾಗಿ ಮೊಬೈಲ್ ಫೋನ್‌ ಖರೀದಿಸಿದ್ದ ಕಲ್ಲೇಶಿ, ಅರ್ಧ ಗಂಟೆಯಲ್ಲೇ ಅದೇ ಅಂಗಡಿಗೆ ಓಡಿಬಂದು ಕೇಳಿದ, ``ನಾನು ಈ ಮೊಬೈಲ್‌ಗೆ ಎಂಪಿ3 ಹಾಡುಗಳನ್ನು ಹಾಕಿಸಬೇಕು,'' ಎಂದ. ಅಂಗಡಿಯವನು ಕಲ್ಲೇಶಿಯತ್ತ ತಿರುಗಿ, ``ನಿಮ್ಮ ಬಳಿ ಇದರ  ಮೆಮರಿ ಕಾರ್ಡ್‌ ಇದೇ ತಾನೇ?'' ಎಂದು ಕೇಳಿದ. ತಕ್ಷಣ ಅದಕ್ಕೆ ಅವನು, ``ಅದೇನೋ ಗೊತ್ತಿಲ್ಲ.

ಆದರೆ ರೇಷನ್‌ ಕಾರ್ಡ್‌ ಇದೆ, ಸಾಕಾಗೋಲ್ವೇ....?'' ಎನ್ನುವುದೇ?

 

ಬಲು ರೊಮ್ಯಾಂಟಿಕ್‌ ಮೂಡ್‌ನಲ್ಲಿ ಪುಟ್ನಂಜ ತನ್ನ ಗರ್ಲ್ ಫ್ರೆಂಡ್‌ಗೆ ಹೇಳಿದ, ``ಡಿಯರ್‌, ನೀನು ನನ್ನನ್ನು ಎಷ್ಟು ಪ್ರೀತಿಸ್ತೀಯಾ?''

ಪುಟ್ನಂಜಿ ಏನೂ ಕಡಿಮೆಯಿಲ್ಲದ ದನಿಯಲ್ಲಿ, ``ಡಾರ್ಲಿಂಗ್‌, ನೀನೆಷ್ಟು ನನ್ನನ್ನು ಪ್ರೀತಿಸುವೆಯೋ ಅಷ್ಟೇ!'' ಎಂದಳು.

``ಓ.. ಹಾಗಂದ್ರೆ ನೀನೂ ಟೈಂಪಾಸಿಗಾಗಿ ಬಂದಳು ಅನ್ನುವ....'' ಅರಿಯದೆ ಪುಟ್ನಂಜ ಸತ್ಯ ನುಡಿದಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ