ಒಂದು ದುರ್ಘಟನೆ ಹಲವು ಪ್ರಶ್ನೆಗಳು
ತನ್ನ ಸ್ವಂತ ಮಗಳನ್ನು ತನ್ನ ಕೈಗಳಿಂದಲೇ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ ಅವಳ ಹೆಣವನ್ನು ದೂರದ ಕಾಡಿನಲ್ಲಿ ಸುಟ್ಟು ಬಿಸಾಡುವುದು ಮತ್ತು 3 ವರ್ಷಗಳವರೆಗೆ ಏನೂ ಆಗಿಯೇ ಇಲ್ಲವೆಂಬಂತೆ ಹಗಲು ರಾತ್ರಿ ಕಣ್ಣು ಕುಕ್ಕುವ ಬೆಳಕಿನಲ್ಲಿ ಕ್ಯಾಮೆರಾಗಳ ಮುಂದೆ ಹೊಳೆಯುವುದು ಆಶ್ಚರ್ಯವೇ ಸರಿ!
ಪೀಟರ್ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ದಂಪತಿಗಳು ಹಲವು ವರ್ಷಗಳಿಂದ ಟೆಲಿವಿಷನ್ ಸ್ಕ್ರೀನ್‌ಗಳಲ್ಲಿ ಕಂಡುಬರುತ್ತಿದ್ದರು. ಅವರು ಸ್ಟಾರ್ ಟಿವಿ ಮತ್ತು ಐಎನ್‌ಎಕ್ಸ್ ಮೀಡಿಯಾಗೆ ಸೇರಿದವರಾಗಿದ್ದು ಕೆಲವು ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿಯೂ ಇದ್ದರು. ಆದರೆ ತಾಯಿಯಾಗಿದ್ದು ಅಂತಹ ಅಪರಾಧ ಮಾಡಿದರೆಂದರೆ ನಂಬಲಾಗುತ್ತಿಲ್ಲ.
ಬದುಕು ಬಹಳ ಕಠಿಣ. ಹಲವು ವರ್ಷಗಳ ಹಿಂದೆಯೇ ತನ್ನ ಮೊದಲ ಹಾಗೂ ಎರಡನೇ ಗಂಡನನ್ನು ಬಿಟ್ಟ ಹೆಣ್ಣು, ಮೊದಲ ದಿನವೇ ಮಗಳ ಜನ್ಮ ಪ್ರಮಾಣ ಪತ್ರದಲ್ಲಿ ತಂದೆ ತಾಯಿಯರ ಹೆಸರನ್ನು ಬೇರೇನೋ ಬರೆದ ಹೆಣ್ಣು, ಮೂರನೇ ಹೊಸ ಗಂಡನನ್ನು ಆಲಂಗಿಸಿಕೊಳ್ಳುತ್ತಲೇ, ಎರಡನೇ ಗಂಡನೊಂದಿಗೂ ಸಂಪರ್ಕ ಇಟ್ಟುಕೊಂಡಿದ್ದಂತಹ ವಿಲಕ್ಷಣ ಹೆಂಗಸಿನ ಸಂಪೂರ್ಣ ವಿವರವಂತೂ ಯಾವುದಾದರೂ ದಪ್ಪನೆಯ ಪುಸ್ತಕದಿಂದಲೇ ತಿಳಿದುಬರುತ್ತದೆ. ಸದ್ಯಕ್ಕೆ ಇಂದ್ರಾಣಿ ಮುಖರ್ಜಿ ತನ್ನ ಡ್ರೈವರ್ ಮತ್ತು ಪತಿ ನಂ.2 ಜೊತೆ ಜೈಲಿನಲ್ಲಿದ್ದಾರೆ. ಅವರು ಅಪರಾಧ ಎಸಗಿದ್ದು ಹೇಗೆ ಎಂಬುದರ ಪದರಗಳು ತೆರೆಯುತ್ತಿವೆ. ಆದರೆ ಆ ಪದರಗಳು ಅವರನ್ನು ಅಪರಾಧಿಯನ್ನಾಗಿ ಸಾಧಿಸುವುದೇ ಎಂದು ಹೇಳಲಾಗುವುದಿಲ್ಲ.
ಸದ್ಯಕ್ಕೆ ಹೇಳಬಹುದಾಗಿದ್ದೇನೆಂದರೆ ಕೆಲವು ಮಹಿಳೆಯರು ತಮ್ಮ ಬದಕಿನಲ್ಲಾದ ತಪ್ಪುಗಳನ್ನು ಮುಚ್ಚಿಹಾಕಲು ಇನ್ನಷ್ಟು ತಪ್ಪುಗಳನ್ನು ಮಾಡುತ್ತಾರೆ. ಹಾಗೆ ತಪ್ಪುಗಳನ್ನು ಮಾಡುತ್ತಾ ಸರಿಯಾದುದರ ಕಡೆ ಗಮನಕೊಡುವುದನ್ನೇ ಮರೆಯುತ್ತಾರೆ. ಕ್ಲಿಯೋಪಾತ್ರಾಳಂತಹ ತಮ್ಮ ಸುಂದರ ಸೌಮ್ಯ ಮುಖದಿಂದ ಎಲ್ಲ ಅಪರಾಧಗಳೂ ಮುಚ್ಚಿಹೋಗುತ್ತವೆಂದು ಅವರಿಗೆ ಅನ್ನಿಸುತ್ತದೆ.
ಇತಿಹಾಸ, ಸಾಹಿತ್ಯ ಮತ್ತು ಸಮಾಜಕ್ಕೆ ಈ ಮಹಿಳೆಯರ ದುಷ್ಕೃತ್ಯಗಳಿಗೆ ಕೊಂಚ ಉಪ್ಪು, ಖಾರ ಹಚ್ಚಿ ತೋರಿಸುವ ಅಭ್ಯಾಸ ಇದೆ. ಏಕೆಂದರೆ ಅ ಬಹಳ ಪರಿಶ್ರಮದಿಂದ ಮಹಿಳೆಯನ್ನು ಒಬ್ಬ ಅಸಹಾಯಕ, ಹಸುವಿನಂತೆ ಶಾಂತ, ಧರ್ಮ ಮತ್ತು ಕುಟುಂಬದ ಸತತ ದಬ್ಬಾಳಿಕೆಯಿಂದ ಪೀಡಿತ ಮಹಿಳೆಯನ್ನಾಗಿ ಮಾಡಲು ಸಾವಿರಾರು ವರ್ಷ ತೆಗೆದುಕೊಂಡಿವೆ. ಈ ಫ್ರೇಮ್ ವರ್ಕ್‌ನ್ನು ಮುರಿದ ಮಹಿಳೆಯನ್ನು ಸಮಾಜ ಒಪ್ಪಿಕೊಂಡಿಲ್ಲ. ಇಂದ್ರಾಣಿ ಮುಖರ್ಜಿ ಮತ್ತು ಸುನಂದಾ ಪುಷ್ಕರ್‌ರಂತಹವರು ಸಮಾಜಕ್ಕೆ ಒಪ್ಪಿಗೆಯಿಲ್ಲ. ಇಡೀ ಪ್ರಕರಣ ಸಹ ಪತ್ರಿಕೆಗಳ ಮುಖ್ಯ ಸುದ್ದಿಯಾಗಿ, ಟಿವಿಯಲ್ಲಿ ಹೆಡ್ ಲೈನ್ ನ್ಯೂಸ್‌ನ್ನು ಆಕ್ರಮಿಸಿಕೊಂಡಿದೆ. ಹೀಗಾಗಿಯೇ ಅವರು ಇಚ್ಛೆಯಿಲ್ಲದಿದ್ದರೂ, ಒಪ್ಪಿಗೆ ಇಲ್ಲದಿದ್ದರೂ ಹಾಗೆ ಮಾಡಿದರು.
ಇಂದ್ರಾಣಿ ಮುಖರ್ಜಿ ಹೊಸ ಹೊಸ ಹೆಸರುಗಳಿಂದ ಅವತರಿಸಿ, ಮಕ್ಕಳಿದ್ದಾಗ್ಯೂ ತನ್ನ ಬಣ್ಣ ರೂಪ ಉಳಿಸಿಕೊಂಡು, ಹಳೆಯ ಮತ್ತು ಹೊಸ ಗಂಡಂದಿರನ್ನು ಸಹಿಸಿಕೊಂಡು ಬಿಟ್ಟುಹೋದ ಮಕ್ಕಳನ್ನು ಸಂಭಾಳಿಸುತ್ತಿದ್ದೂ ಸಹ ತನ್ನ ಸುಂದರವಾದ ನಗುಮುಖವನ್ನು ಹೇಗೆ ತೋರುತ್ತಿದ್ದರೆಂಬುದು ಅಪ್ಸರೆಯರ ಪ್ರೇಮಕಥೆಗಳಂತಿದೆ. ಅವುಗಳಲ್ಲಿ ರಹಸ್ಯ, ರೋಮಾಂಚನ ತೋರಿಸುತ್ತಿದ್ದರೂ ಆ ಮಹಿಳೆ ಯಾವ ಯಾವ ನೋವು ಅನುಭವಿಸುತ್ತಿದ್ದರೂ ಸಹ ಏಕೆ ಹಾಗೂ ಹೇಗೆ ತನ್ನ ಮುಖದಲ್ಲಿ ಮಹತ್ವಾಕಾಂಕ್ಷೆಯನ್ನು ಆತ್ಮವಿಶ್ವಾಸದೊಂದಿಗೆ ಉಳಿಸಿಕೊಂಡಿರಬಹುದೆಂದು ತೋರಿಸುವುದಿಲ್ಲ.