`ಸೇಲ್, ಡಿಸ್ಕೌಂಟ್, ಒಂದು ಖರೀದಿಸಿ ಇನ್ನೊಂದು ಪಡೆಯಿರಿ.' ಇಂತಹ ಸಾಲುಗಳು ನಮಗೆ ಅನೇಕ ಕಡೆ ಓದಲು, ನೋಡಲು ಸಿಗುತ್ತವೆ. ಮೊದಲು ಹಬ್ಬದ ಸಂದರ್ಭದಲ್ಲಿ ಮಾತ್ರ ಇಂತಹ ಡಿಸ್ಕೌಂಟ್ ಆಫರ್‌ಗಳು ಕೇಳಿ ಬರುತ್ತಿದ್ದ. ಆದರೆ ಈಗ ಡಿಸ್ಕೌಂಟ್‌ಗಳಿಗಾಗಿ ಹಬ್ಬದ ನಿರೀಕ್ಷೆ ಮಾಡುತ್ತಾ ಕೂತಿರಬೇಕಾದ ಅಗತ್ಯವಿಲ್ಲ. ಏಕೆಂದರೆ ಈಗ ಸೇಲ್‌ನ ಸಂಭ್ರಮ ವರ್ಷವಿಡೀ ಯಾವುದಾದರೊಂದು ಹೆಸರಿನ ಮೇಲೆ ನಡೆಯುತ್ತಿರುತ್ತದೆ.
ಹಬ್ಬಗಳು ಜನರ ಗಮನ ಸೆಳೆಯುವ ಒಂದು ನೆಪ ಅಷ್ಟೆ. ಸೇಲ್‌ನಳೆಂದರೆ ವಾಸ್ತವದಲ್ಲಿ ಹಬ್ಬಗಳ ಹೆಸರಿನಲ್ಲಿ ಬಹುದೊಡ್ಡ ಲಾಭ ಪಡೆದುಕೊಳ್ಳುವ ದಂಧೆಯಾಗಿರುತ್ತದೆ. ಅದು ಸೇಲ್ ಆಗಿರದೆ ಕಂಪನಿಯ ಹೊಸ ತಂತ್ರವೇ ಆಗಿರುತ್ತದೆ. ಅದರನ್ವಯ ತಮ್ಮ ಉತ್ಪಾದನೆಗಳನ್ನು ಮಾರುವ ಒಂದು ತಂತ್ರವಾಗಿರುತ್ತದೆ.
ಬಗೆ ಬಗೆಯ ಆಫರ್ಗಳು
ಇಂದಿನ ದಿನಗಳಲ್ಲಿ ಬೆಲೆ ಏರಿಕೆ ನಾಗರಿಕರನ್ನು ಕಂಗೆಡಿಸಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಕಂಪನಿಗಳ ಬಳಿ ಗ್ರಾಹಕರನ್ನು ಆಕರ್ಷಿಸಲು ಯಾವುದೇ ಉಪಾಯಗಳಿಗಾಗಲಿ, ಸ್ಕೀಮುಗಳಿಗಾಗಲಿ ಕೊರತೆ ಇಲ್ಲ.
ಹಲವು ವರ್ಷಗಳ ಕಾಲ ಕೇವಲ ಸೇಲ್ ಹಾಗೂ ಡಿಸ್ಕೌಂಟ್‌ನ ಹೆಸರಿನ ಮೇಲೆ ನಡೆಯುವ ಕಂಪನಿಗಳು ಈಗ ಅವನ್ನು ಇನ್ನಷ್ಟು ಅಪೀಲಿಂಗ್ ಮಾಡಲು ಅದರಲ್ಲಿ ಬದಲಾವಣೆ ತಂದಿವೆ. ಹೀಗಾಗಿ ಈಗ ಸೇಲ್‌ಬದಲಿಗೆ ಕ್ಲಿಯರೆನ್ಸ್ ಸೇಲ್, ಮಾನ್ಸೂನ್ ಸೇಲ್, ವಿಂಟರ್ ಸೇಲ್, ಪ್ರಿರಿನೋೀಶನ್ ಸೇಲ್, ಇಂಡಿಪೆಂಡೆನ್ಸ್ ಡೇ ಸೇಲ್ ಹಾಗೂ ಫೆಸ್ಟಿವಲ್ ಸೀಝನ್ ಹೆಸರಿನ ಮೇಲೆ ನಡೆಯುವ ಸೇಲ್‌ಗಳ ಪಟ್ಟಿ ಬಹು ಉದ್ದವಾಗಿದೆ.
ಈ ರೀತಿ ರಿಯಾಯಿತಿಗಳ ಸಾಕಷ್ಟು ವೆರೈಟಿಗಳು ನಿಮಗೆ ನೋಡಲು ಸಿಗುತ್ತವೆ. 20%, 30%, 50%ನ ರಿಯಾಯಿತಿ ಹೆಚ್ಚುತ್ತ ಹೆಚ್ಚುತ್ತಾ ಈಗ 70ರ ತನಕ ಹೋಗಿ ತಲುಪಿದೆ. ಇದರ ಜೊತೆಗೆ 1 ತೆಗೆದುಕೊಳ್ಳಿ, ಇನ್ನೊಂದು ಉಚಿತ ಎನ್ನುವುದರ ಜೊತೆಗೆ ಆ ಸಂಖ್ಯೆ ಈಗ 2, 3 ಹೀಗೆ 4ರ ತನಕ ತಲುಪಿದೆ. ಫ್ಯಾಷನ್ನಿನ ಹೊಸ ಇತಿಹಾಸ ಸೃಷ್ಟಿ ರಚನೆ ಮಾಡಿರುವುದಾಗಿ ಹೇಳುವ ರೆಡಿಮೇಡ್ ಗಾರ್ಮೆಂಟ್ ಕಂಪನಿಯೊಂದು ಹೀಗೆ ಜಾಹೀರಾತು ಮಾಡಿತ್ತು, ``ಬೆಳಬೆಳಗ್ಗೆ ಹಾಗೂ ರಾತ್ರಿ ಶಾಪಿಂಗ್ ಮಾಡಿ ಹಾಗೂ ಪ್ರತಿಯೊಂದು ಐಟಮ್ ನ ಮೇಲೆ ಫ್ಲ್ಯಾಟ್ 50% ರಿಯಾಯಿತಿ ಪಡೆಯಿರಿ,' ಕಂಪನಿಯ ಈ ಫಾರ್ಮುಲಾ ಹಿಟ್ ಆಯ್ತು.
ಕಂಪನಿಯವರು ಹೇಳಿಕೊಳ್ಳುವುದೇನೆಂದರೆ, 8 ಗಂಟೆಯಲ್ಲಿ ಎಷ್ಟು ಮಾರಾಟ ಆಗುತ್ತೊ, ಅಷ್ಟೊಂದು ಇಡೀ ಸೀಝನ್ನಿನಲ್ಲಿಯೇ ಆಗುವುದಿಲ್ಲ. ಫ್ಯೂಚರ್ ಗ್ರೂಪ್‌ನ ಹೈಪರ್ ಮಾರ್ಕೆಟ್ ಚೇನ್ ಬಿಗ್ ಬಜಾರ್ ಪ್ರತಿ ಸಲ ಸ್ವಾತಂತ್ರ್ಯ ದಿನದ ಪ್ರಯುಕ್ತ ಬಹುದೊಡ್ಡ ಉಳಿತಾಯದ ಅವಕಾಶ ನೀಡುತ್ತದೆ. ಆಗ ಉಚಿತ ಉಡುಗೊರೆಗಳಿಂದ ಹಿಡಿದು ಆಕರ್ಷಕ ಆಫರ್‌ಗಳನ್ನು ನೀಡುತ್ತದೆ.
ಹೆಚ್ಚಿದ ಡಿಸ್ಕೌಂಟ್ ಕುಗ್ಗಿದ ಗುಣಮಟ್ಟ
ಸಾಮಾನ್ಯವಾಗಿ ಶೇ.90ರಷ್ಟು ಡಿಸ್ಕೌಂಟ್ ಕೊಟ್ಟ ಬಳಿಕ ಈ ದೊಡ್ಡ ಬ್ರ್ಯಾಂಡಿನ ಪ್ರಾಫಿಟ್ ಮಾರ್ಜಿನ್ 200%ಗಿಂತಲೂ ಹೆಚ್ಚಿಗೆ ಇರುತ್ತದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹತ್ತಿಯ ಬೆಲೆಯಲ್ಲಿ ಶೇ.20-25ರಷ್ಟು ಏರಿಕೆ ಕಂಪನಿಗಳಿಗೆ ಬೇರೆ ರೀತಿಯಲ್ಲಿ ಯೋಚನೆ ಮಾಡುವ ಹಾಗೆ ಮಾಡಿದೆ. ಇದರ ಪರಿಣಾಮ ಡಿಸ್ಕೌಂಟ್ ಆಫರ್‌ನಲ್ಲಿ ಕೊಡಲಾಗುವ ಬಟ್ಟೆಗಳಿಗಾಗಿ ಗ್ರಾಹಕ ಯಾವ ಲೆಕ್ಕದಲ್ಲಿ ಹಣ ಪಾವತಿಸುತ್ತಾನೋ, ಗುಣಮಟ್ಟ ಅದಕ್ಕೆ ತಕ್ಕಂತೆ ಇರುವುದಿಲ್ಲ.