ಧರ್ಮದಿಂದ ವಿಭಜಿಸುತ್ತಿರುವ ವಿಶ್ವ :  ಇರಾನ್‌ನಲ್ಲಿ ಆರ್ಮೇನಿಯನ್‌ರ ಸಂಖ್ಯೆ ಹೆಚ್ಚುತ್ತಿದೆ, ಇವರು ಕ್ರೈಸ್ತ ಪಂಥದವರು. ಈ ಆರ್ಮೇನಿಯನ್‌ರು ಎಲ್ಲೇ ಇರಲಿ, ಅಲ್ಲಿ ಬಹುಸಂಖ್ಯಾತರಾದ ಅನ್ಯಧರ್ಮೀಯರು ಇವರನ್ನು ಹಿಂಸಿಸುತ್ತಾರೆ. ಒಂದು ವಿಧದಲ್ಲಿ ಧರ್ಮ ಇವರಿಗೆ ಹೊರೆಯಾಗಿದೆ. ಇವರೆಲ್ಲರೂ ಕೂಡಿ ಅತಿ ಕಂದಾಚಾರಿಗಳ ನಾಡಾದ ಇರಾನ್‌ನಲ್ಲಿ ಸುಂದರ ಚರ್ಚ್‌ ಕಟ್ಟಿದ್ದಾರೆ, ದುರಾಚಾರಿಗಳ ಧ್ವಂಸಕ್ಕೆ ಅದಿನ್ನೂ ಸಿಲುಕಿಲ್ಲ. 1606ರ ಈ ಚರ್ಚ್‌ ಎಲ್ಲಾ ಪ್ರವಾಸಿಗರಿಗೂ ಪ್ರಿಯ.

ಅಂದಿನ ಶಾಸಕರು ಇಂದು ಕಂಬಿಗಳ ಹಿಂದೆ : ಯಾರು ಅಧಿಕಾರಕ್ಕೆ ಬಂದು ಜೋರು ಜಬರ್ದಸ್ತಾಗಿರುವರೋ, ಅವರು ಹಿಂದಿನ ಶಾಸಕರನ್ನು ಮೂಲೆಗುಂ ಪಾಗಿಸಿ, ಸಹಾಯಕರೊಂದಿಗೆ ಬಂಧಿಸಿ ಗೋಳುಗುಟ್ಟಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಲಿಬಿಯಾದ ಸರ್ವಾಧಿಕಾರಿ ಕರ್ನಲ್ ಗಡಾಫಿಯ ಸಹಾಯಕರನ್ನು ಕಂಬಿ ಹಿಂದೆ ಕಂಡು ಎಷ್ಟೋ ಸಾವಿರಾರು ಹೆಣ್ಣುಮಕ್ಕಳು ನೆಮ್ಮದಿಯ ನಿಟ್ಟುಸಿರಿಟ್ಟಿದ್ದರೆ ಆಶ್ಚರ್ಯವಿಲ್ಲ. ಕ್ರೂರಿ ಗಡಾಫಿ ಈ ಮುಗ್ಧ ಹೆಣ್ಣುಮಕ್ಕಳನ್ನು ಸೆರೆಹಿಡಿದು ಕಾಮತೃಷೆಗಾಗಿ ಗೋಳಾಡಿಸಿದ್ದನಂತೆ.

samachar-darshan-3

ಯಾವುದಕ್ಕೆ ವೇದಿಕೆ? :  ಅವಾರ್ಡ್‌ ಫಂಕ್ಷನ್ಸ್ ಎಂಬುದು ಈಗ ಮಾಡೆಲ್ ‌ಗಳಿಗೆ ತಮ್ಮ ದೇಹ ಹಾಗೂ ಅದನ್ನು ಮುಚ್ಚದ ಉಡುಗೆಗಳ ಪ್ರದರ್ಶನಕ್ಕೆ ದೊಡ್ಡ ವೇದಿಕೆಯಾಗಿದೆ. ಬಿಲ್ ಬೋರ್ಡ್‌ ಮ್ಯೂಸಿಕ್‌ ಅವಾರ್ಡ್‌ಗೆ ಬಂದಿದ್ಧ ಡಾನಿಕಾ ಮ್ಯಾಕ್ಲೇರ್‌ ಅಲ್ಲಿ ಗ್ಲಾಮರಸ್‌ ಆಗಿ ಮಿಂಚಿದ್ದೇನೋ ಸರಿ, ಆದರೆ ಲಾಸ್‌ವೇಗಸ್‌ ಸಿಟಿಯಲ್ಲಿ ಇದಕ್ಕಿಂತಲೂ ಸ್ಲಿಮ್ ಆಗಿ ಮಿಂಚುವವರಿಗೆ ಬರವಿಲ್ಲ.

samachar-darshan-4

ಆತಂಕದ ಹೊಸ ರೂಪ : ಅಮೆರಿಕಾದಲ್ಲಿ ಕರಿಯರ ವಿರೋಧಿ ಕೂಲ್ ಕ್ಲಾಸ್ ಕ್ಲಾನ್‌ ಇತ್ತೀಚೆಗೆ ಮತ್ತೆ ಸಕ್ರಿಯರಾಗಿದ್ದಾರೆ. ಇವರು ವಿಹಿಂಪದವರಂತೆಯೇ ಅತಿ ಕಂದಾಚಾರದವರು. ಬಿಳಿಯರ ಕ್ರೈಸ್ತ ರಾಜ್ಯ ಸ್ಥಾಪಿಸುವುದು ಇವರ ಉದ್ದೇಶ. ಇವರು ಎಣಿಕೆಯಲ್ಲಿ ಅಲ್ಪಸಂಖ್ಯಾತರಾದರೂ, ಉಪಟಳದಲ್ಲಿ ಕಡಿಮೆಯೇನಲ್ಲ, ಅಮೆರಿಕಾವನ್ನೇ ಅಲುಗಾಡಿಸಿ ಭಯಪಡಿಸಿದ್ದಾರೆ! ಕೆಲವು ಪ್ರಸಂಗಗಳಲ್ಲಿ ಅಲ್‌ಖೈದಾವನ್ನೂ ಮೀರಿದ್ದಾರೆ.

samachar-darshan-5

ಬಾಯಲ್ಲಿ ಜೊಲ್ಲು ಸುರಿಯದಿದ್ದೀತೇ....? :  ಛೇ...ಛೇ! ಮೇಜಿನ ಮೇಲೆ ಬಡಿಸಿರುವ ಊಟ ಕಂಡು ಜೊಲ್ಲು ಸುರಿದಿದ್ದಲ್ಲ, ಅದನ್ನು ಸರ್ವ್ ‌ಮಾಡುವ ಮಾಣಿ.... ಅಲ್ಲ..... ಮಾನಿನಿಯ ನೋಡಿ! ಚೀನಾದ ಒಂದು ನಗರದಲ್ಲಿ ಒಂದು ಹೊಸ ರೆಸ್ಟೋರೆಂಟ್ ಉದ್ಘಾಟನೆಯ ದಿನ ಎಲ್ಲಾ ವೇಟ್ರೆಸ್‌ ಕೇವಲ ಬಿಕಿನಿಯಲ್ಲೇ ಸರ್ವ್ ‌ಮಾಡಬೇಕೆಂದು ಸ್ಟಂಟ್‌ ಮಾಡಿತು. ಬಂದ ಗ್ರಾಹಕರು ಭರ್ಜರಿ ಬಾರಿಸಿದರಂತೆ, ಅವರ ಗಮನ ಪ್ಲೇಟುಗಳತ್ತ ಇರಲಿಲ್ಲ ಬಿಡಿ.

samachar-darshan-6

ಧರ್ಮದ ದಂಧೆ ಚಾಲ್ತಿಯಲ್ಲಿದೆಭಾರತದಿಂದ ಥೈಲೆಂಡ್‌ಗೆ ವಲಸೆ ಹೋದ ಹಿಂದೂ ಧರ್ಮದ ಪುರೋಹಿತರು, ಅಲ್ಲಿನ ರಾಜನ ಮೇಲೆ ಸಾಕಷ್ಟು ಪ್ರಭಾವ ಬೀರಿ ನೆಲೆ ನಿಂತಿದ್ದಾರೆ. ಅಲ್ಲಿ ಪ್ರತಿ ವರ್ಷ ಹೊಲಗದ್ದೆಗಳಲ್ಲಿ ಬೀಜ ಬಿತ್ತುವಾಗ, ಒಂದು ಉತ್ಸವದಂತೆ ಮೊದಲು ರಾಜ ನೊಗ ಹೊತ್ತರೆ, ಈ ಪುರೋಹಿತರು ಎತ್ತನ್ನು ಹಿಡಿದು ಮುನ್ನಡೆಸುತ್ತಾರೆ.

samachar-darshan-7

ಮುಗ್ಧತೆಗೆ ಮರುಳಾಗದಿರಿ :  ಇಲ್ಲಿನ ಯುವತಿ ಹಾಗೂ ಅವಳ ಬಾಯ್‌ಫ್ರೆಂಡ್‌ ಮುಖ ನೋಡಿ ಬಹಳ ಮುಗ್ಧರೆಂದೇನೂ ಭಾವಿಸದಿರಿ. ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನು ಇಂಡೋನೇಷ್ಯಾದ ಪ್ರವಾಸಕ್ಕೆ ಕರೆದೊಯ್ಯುವ ನೆಪದಲ್ಲಿ, ಇವಳು ನಿರ್ದಾಕ್ಷಿಣ್ಯವಾಗಿ ಹೆತ್ತಮ್ಮನನ್ನೇ ಬ್ಯಾಟ್‌ನಿಂದ ಹೊಡೆದು ಕೊಂದಳಂತೆ! ಹೆಣವನ್ನು ಬಚ್ಚಿಡಲು ಒಂದು ಸೂಟ್‌ಕೇಸಿಗೆ ತುರುಕಿ ಎಲ್ಲೋ ಬಿಸಾಡಿದಳು, ಇಂದು ಇಂಡೋನೇಷ್ಯಾದ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾಳೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ