ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ಹಾಗೂ ಉತ್ತರ ಕನ್ನಡ 3ನೇ ಸ್ಥಾನ ಪಡೆದುಕೊಂಡಿದೆ. ಕಲಬುರಗಿ ಕೊನೆಯ ಸ್ಥಾನದಲ್ಲಿದೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈ ಬಾರಿ ಪರೀಕ್ಷೆ ಬರೆದ ಶೇಕಡಾ 94.1 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 5 ಸಾವಿರ ವಿದ್ಯಾರ್ಥಿಗಳು ಗೈರಾಗಿದ್ದರು. 7.7 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಶೇಕಡಾ 80 ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇಕಡಾ 14 ರಷ್ಟು ಹೆಚ್ಚಳವಾಗಿರುವುದು ದೊಡ್ಡ ಸಾಧನೆ ಎಂದು ತಿಳಿಸಿದರು.ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ವಾಟ್ಸ್​ಆ್ಯಪ್‌/ಎಸ್‌ಎಂಎಸ್‌ ಮೂಲಕವೂ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ. ಜತೆಗೆ ಫಲಿತಾಂಶ ಪಟ್ಟಿಯು ಶಾಲೆಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಲಭ್ಯವಾಗಿದೆ. ಈ ವರ್ಷ ಪ್ರಥಮ ಬಾರಿಗೆ ವಿಶೇಷವಾಗಿ, ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್‌ ಮೂಲಕ ನೀಡಲಾಗಿದೆ. ಅಲ್ಲಿಯೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ

ಈ ಬಾರಿ ಪರೀಕ್ಷೆಯಲ್ಲಿ ಏಳು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿದ್ದಾರೆ. ದಾವಣಗೆರೆಯ ಭರತ್‌, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿ ಪ್ರೀತಂ, ವಿಜಯಪುರದ ಸೌಜನ್ಯ, ಬೆಂಗಳೂರು ಉತ್ತರ ಧನುಷ್‌ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಉತ್ತೀರ್ಣ ಪ್ರಮಾಣ: ದಕ್ಷಿಣ ಕನ್ನಡ  ಶೇ. 98.4, ಉಡುಪಿ ಶೇ. 98.18, ಉತ್ತರ ಕನ್ನಡ ಶೇ. 98.09, ಹಾಸನ      ಶೇ. 97.51, ಮಂಡ್ಯ ಶೇ. 97.45, ಶಿರಸಿ ಶೇ. 97.21, ಹಾವೇರಿ ಶೇ. 96.87, ಕೊಡಗು ಶೇ. 96.68, ಶಿವಮೊಗ್ಗ ಶೇ. 96.56, ವಿಜಯನಗರ ಶೇ.96.39, ಬೆಂಗಳೂರು ಗ್ರಾಮಾಂತರ ಶೇ.95.83, ಧಾರವಾಡ ಶೇ. 95.59, ಕೋಲಾರ ಶೇ.95.5, ಬಾಗಲಕೋಟೆ ಶೇ. 95.42,  ಬೆಂಗಳೂರು ಉತ್ತರ ಶೇ. 95.33, ಗದಗ ಶೇ. 95.24, ಚಿಕ್ಕಮಗಳೂರು ಶೇ. 94.99, ಬೆಳಗಾವಿ ಶೇ.94.75, ದಾವಣಗೆರೆ ಶೇ.94.64, ಮೈಸೂರು ಶೇ. 94.45, ರಾಯಚೂರು ಶೇ. 94.41, ವಿಜಯಪುರ ಶೇ.94.16, ಚಿಕ್ಕೋಡಿ ಶೇ.94.09, ಬಳ್ಳಾರಿ ಶೇ. 93.35, ಕೊಪ್ಪಳ ಶೇ. 93.1, ರಾಮನಗರ ಶೇ.92.83, ಚಿತ್ರದುರ್ಗ ಶೇ. 92.25, ಬೀದರ್ ಶೇ. 92.17, ತುಮಕೂರು ಶೇ.92.04, ಚಾಮರಾಜನಗರ ಶೇ. 91.89, ಯಾದಗಿರಿ ಶೇ. 91.89, ಬೆಂಗಳೂರು ದಕ್ಷಿಣ ಶೇ. 91.64, ಚಿಕ್ಕಬಳ್ಳಾಪುರ    ಶೇ. 90.88, ಮಧುಗಿರಿ ಶೇ. 90.24, ಕಲಬುರಗಿ ಶೇ.85.06  ಫಲಿತಾಂಶ ಪಡೆದಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ