ತಾಂತ್ರಿಕ ‌ದೋಷದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸ್ಟಾರ್​ ಏರ್ ವಿಮಾನ (Star Air Flight) ತುರ್ತು ಭೂಸ್ಪರ್ಶ ಮಾಡಿದೆ. ಇದರಿಂದಾಗಿ ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 48 ಪ್ರಯಾಣಿಕರು ಸೇಫಾಗಿದ್ದಾರೆ.

ಸ್ಟಾರ್ ಏರ್​ನ S5111 ವಿಮಾನವು ಬೆಳಗಾವಿಯಿಂದ ಮುಂಬೈಗೆ ಹೊರಟ್ಟಿತ್ತು. ಈ ವೇಳೆ ವಿಮಾನದ ಎಂಜಿನ್​​ನಲ್ಲಿ ಪೆಟ್ರೋಲ್ ಲೀಕ್ ಆಗುತ್ತಿದ್ದುದು ಕಂಡುಬಂದಿದೆ. ಹೀಗಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿ ಸುಮಾರು 48 ಪ್ರಯಾಣಿಕರು ವಿಮಾನದಲ್ಲಿದ್ದರು. ಪೈಲೆಟ್ ಹಾಗೂ ವಿಮಾನ ಸಿಬ್ಬಂದಿಯ  ಜಾಗರೂಕತೆಯಿಂದ ಭಾರೀ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಟೇಕ್ ಆಫ್ ಆದ 15 ನಿಮಿಷದಲ್ಲಿ ಮತ್ತೆ ಏರ್​​ಪೋರ್ಟ್​​​ಗೆ ಲ್ಯಾಂಡ್ ಆಗಿದೆ. ಮಧ್ಯಾಹ್ನ 2.30ಕ್ಕೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ ಸ್ಟಾರ್ ಏರ್ ಕಂಪನಿ ಪ್ರಯಾಣಿಕರನ್ನು ಕರೆದೊಯ್ದಿದೆ. ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ