ಗುರುತಾದರೂ ಸಿಗಲಿ : 2 ಸಾವಿರದ ನೋಟನ್ನು ಅಂಧರು ಸಹ ಗುರುತಿಸಬಹುದು, ಏಕೆಂದರೆ ಇದರಲ್ಲಿ ಅಂತಹ ಗೆರೆಗಳನ್ನು ಹಾಕಲಾಗಿದೆ, ಆದರೆ ಇಲ್ಲಿನ ಸವಾಲು ಎಂದರೆ ನೋಟು 2,000, 500, 1,000 ಯಾವುದೇ ಇರಲಿ... ಸರ್ಕಾರ ಹಣವನ್ನು ಜನಸಾಮಾನ್ಯರ ಬಳಿ ಇರಲು ಬಿಡುವುದೇ? ಯಾವ ರೀತಿ ದಿನೇದಿನೇ ನಿಯಮಗಳು ಬದಲಾಗುತ್ತಿವೆ ಅಂದರೆ, ಅದರಿಂದ ಬಹುಶಃ ಸರ್ಕಾರ ರೊಟ್ಟಿ-ಪಲ್ಯದ ಸಣ್ಣ ಅಂಗಡಿ ತೆರೆದು ಸಂಪಾದನೆಗೆ ಹೊಸ ದಾರಿ ಹುಡುಕಬಹುದು.
ಚೀನೀಯರ ವಿಷಯವೇ ಬೇರೆ! : ಇಲ್ಲಿನ ಚೀನೀ ಕ್ಯಾಸಿನೋ, ಅಮೆರಿಕಾದ ಲಾಸ್ ವೇಗಾಸ್‌ನ ಉದ್ಘಾಟನೆಯಂದು ನಡೆಯಲಿರುವ ಚೀನೀ ನೃತ್ಯಪಟುಗಳ ಕಲಾಪ್ರಕಾರವಾಗಿದೆ. ಭಾರತೀಯರ ಡೋಲು, ಚಂಡೆಮದ್ದಳೆಗಳನ್ನು ಈಗ ಅಮೆರಿಕಾದಲ್ಲೂ ಕೇಳಬಹುದು, ಆದರೆ ಚೀನೀಯರ ವಿಷಯವೇ ಬೇರೆ. ಚೀನೀಯರು ತಮ್ಮ ದೇಶದಲ್ಲಿ ಮಾತ್ರವಲ್ಲದೆ ಅಮೆರಿಕಾದಲ್ಲೂ ಯಶಸ್ವೀ ಎನಿಸಿದ್ದಾರೆ. ಭಾರತ-ಚೀನಾ ಎರಡೂ ದೇಶಗಳೂ 60 ವರ್ಷಗಳ ಹಿಂದೆ ಹೀನಾಯ ಸ್ಥಿತಿಯಲ್ಲಿದ್ದವು. ಈಗ ಚೀನೀ ಒಬ್ಬನ ಸರಾಸರಿ ಆದಾಯ ಭಾರತೀಯನಿಗಿಂತ 5 ಪಟ್ಟು ಹೆಚ್ಚು! ಅಮೆರಿಕಾದಲ್ಲೂ ಭಾರತೀಯರನ್ನು ದಾಟಿಕೊಂಡು ಹೋಗಿದ್ದಾರೆ. ಹೀಗಾಗಿಯೇ ಇಂಥ 250 ಕೋಣೆಗಳ ಜೂಜು ಕೇಂದ್ರ (ಕ್ಯಾಸಿನೋ) ತೆರೆದಿದ್ದಾರೆ!
ಕತ್ತಿಯಲ್ಲಿ ಭವಿಷ್ಯ : ಭಾರತದಲ್ಲಿ ಸರ್ಕಸ್ ಬಹುತೇಕ ಮುಗಿಯಿತೆಂದೇ ಹೇಳಬಹುದು. ಇವನ್ನು ನಡೆಸುವುದು ಅತಿ ದುಬಾರಿ ಆಗಿದೆ ಹಾಗೂ ಅದರಲ್ಲಿ ಪ್ರಾಣಿಗಳನ್ನು ಬಳುಸುವುದರ ಕುರಿತು ನಿಷೇಧ ಹೇರಿರುವುದರಿಂದ, ವೀಕ್ಷಕರು ಆಸಕ್ತಿ ಕಳೆದುಕೊಂಡಿದ್ದಾರೆ. ಈಗ ಸರ್ಕಸ್ ಕಲಾವಿದರು ಮಾತ್ರವೇ ತಮ್ಮ ಚಮತ್ಕಾರಿ ಪ್ರತಿಭೆಯಿಂದ ವೀಕ್ಷಕರನ್ನು ವಾಪಸ್ ಕರೆಸಬೇಕಿದೆ. ಸರ್ಕಸ್ ಕುರಿತಾಗಿ ಸಿನಿಮಾ, ಸೀರಿಯಲ್ ಬಂದಿರಬಹುದು... ಆದರೆ ಇದರ ಭವಿಷ್ಯ ಮಾತ್ರ ಕತ್ತಿಯಲ್ಲೇ!
ಭಾರಿ ವಾಹನಗಳ ನಿಷೇಧ : ಬೀಜಿಂಗ್‌ನಲ್ಲಿ ವಾಹನಗಳು ಹೇರಳವಾಗಿರುವುದು ಮಾತ್ರವಲ್ಲ, ಭಾರೀ ವಾಹನಗಳೂ ಹೆಚ್ಚಾಗಿವೆ. ಇವು ಅಲ್ಲಿ ಪರಿಸರ ಮಾಲಿನ್ಯ, ಟ್ರಾಫಿಕ್‌ಜ್ಯಾಂ ಹೆಚ್ಚಿಸಿವೆ. ಈಗ ಬೀಜಿಂಗ್‌ನಲ್ಲಿ ಭಾರಿ ವಾಹನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿದೆ. ಆಗ ಪೇರ್ಶ್, ರೋಲ್ಸ್ ರಾಯ್ಸ್ ನಂಥ ಕಾರುಗಳು ಕಡಿಮೆಯಾಗಿ, ಎಲೆಕ್ಟ್ರಿಕ್ ಕಾರ್ ಅಥವಾ ದ್ವಿಚಕ್ರ ವಾಹನ ಹೆಚ್ಚಲಿವೆ ಎಂಬುದು ಉದ್ದೇಶ. ಮೇಲಿನ ಚಿತ್ರದಲ್ಲಿ ಈಕೆ 80-90 ಲಕ್ಷದ 2 ಭಾರಿ ಕಾರುಗಳ ನಡುವೆ ತನ್ನ 30 ಸಾವಿರ ರೂ.ಗಳ ಗಾಡಿ ಓಡಿಸುತ್ತಿರುವಂತೆ... ನಮ್ಮ ಪ್ರಧಾನಿ ಸಹ 1000, 500ರ ನೋಟುಗಳನ್ನು ತೆಗೆಸಿಹಾಕಿ, ಎಲ್ಲರೂ 100ರ ನೋಟುಗಳಲ್ಲೇ ಕೆಲಸ ಮಾಡಿ ಎಂದಂತಿದೆ.
ನಾನು ಯಾರು ಬಲ್ಲಿರಾ? : ಈ ಮುದ್ದಾದ ಪುಟ್ಟ ಹುಡುಗಿ ಯಾವುದೋ ಬಾರ್ಬಿ ಡಾಲ್ ಅಲ್ಲ, ಉದಯೋನ್ಮುಖ ಮಾಡೆಲ್ ಕ್ಯಾರಿ ಪಾಮ್ಯೂ. ಇತ್ತೀಚೆಗೆ ಅಮೆರಿಕಾದಲ್ಲಂತೂ ಬಹುದೇಶಗಳ ಜನರು ಬಹಳ ಹೆಸರು ಗಳಿಸುತ್ತಿದ್ದಾರೆ. ಆದರೆ ಈಗ ಡೊನಾಲ್ಡ್ ಟ್ರಂಪ್‌ರ ದರ್ಬಾರ್‌ನಲ್ಲಿ ಏನೆಲ್ಲ ನಡೆಯಲಿದೆಯೋ ಗೊತ್ತಿಲ್ಲ. ಸಂಕುಚಿತ ಬುದ್ಧಿಯ ಬಿಳಿಯ ಕಂದಾಚಾರಿಗಳು ಈಗ ಏನು ಬೇಕಾದರೂ ಮಾಡಬಹುದು.