ಡಿಸೆಂಬರ್‌ 16 ರಂದು ನಿರ್ಭಯಾ ಕಾಂಡಕ್ಕೆ 4 ವರ್ಷ ಮುಗಿಯಿತು. ಆದರೆ ಜನರು ಆ ಘಟನೆಯಿಂದ ಪಾಠ ಕಲಿತಿರಬಹುದೆಂದು ಅನಿಸುವುದೇ ಇಲ್ಲ. ಒಬ್ಬ ಮುಗ್ಧ ಹುಡುಗಿಯ ಮೇಲೆ ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರ ನಡೆಸಲಾಯಿತು ಹಾಗೂ ಆಕೆಯ ಜೊತೆಗಾರನನ್ನು ಮನಬಂದಂತೆ ಥಳಿಸಲಾಯಿತು. ಇಂತಹ ಘಟನೆ ನಡೆದದ್ದು ಅದೇ ಮೊದಲ ಬಾರಿ ಏನಲ್ಲ. ಆದರೆ ಈ ಮೊದಲಿನ ಘಟನೆಗಳು ಸುದ್ದಿಯ ಮುಖ್ಯ ಶೀರ್ಷಿಕೆಯಾಗಿರಲಿಲ್ಲ. ಆದರೆ ಈಗ ಅನಿಸುತ್ತೆ, ಈ ಅಮಾನವೀಯತೆ ನಮ್ಮ ಚಾರಿತ್ರ್ಯದ ಒಂದು ಭಾಗವಾಗಿದೆ, ನಮ್ಮ ಸಂಸ್ಕೃತಿಯಾಗಿದೆ, ನಮ್ಮ ರೀತಿಯಾಗಿದೆ ಎಂದು. ದೈಹಿಕ ಅನಾಚಾರ ಹಾಗೂ ಅತ್ಯಾಚಾರವನ್ನು ಪುರುಷರಿಗೂ ಅನುಭವಿಸಬೇಕಾಗಿ ಬರುತ್ತದೆ. ದಲಿತರು, ಆರೋಪಿಗಳು, ಕೆಳ ಜಾತಿಯವರು, ಕಾರ್ಮಿಕರು, ಮಕ್ಕಳು ಇವರನ್ನು ಯಾವುದೋ ನೆಪವೊಡ್ಡಿ ಮೃಗೀಯ ಆನಂದಕ್ಕಾಗಿ ಹಿಂಸಿಸಲಾಗುತ್ತದೆ, ಗಾಯಗೊಳಿಸಲಾಗುತ್ತದೆ. ಆದರೂ ಅವರ ಮೇಲೆ ಯಾವುದೇ ಅಪವಾದ ಹೊರಿಸಲಾಗುವುದಿಲ್ಲ.

ನಿರ್ಭಯಾ ಕಾಂಡ ಮತ್ತೊಂದು ಸಂಗತಿಯನ್ನು ಸಾಬೀತುಪಡಿಸಿತು. ಅದೇನೆಂದರೆ, ಅತ್ಯಾಚಾರಕ್ಕೊಳಗಾದವಳು ಕೇವಲ ದೈಹಿಕ ಹಿಂಸೆಯನ್ನಷ್ಟೇ ಅನುಭವಿಸಬೇಕಾಗಿ ಬರುವುದಿಲ್ಲ. ಆಕೆಯ ಚಾರಿತ್ರ್ಯದ ಮೇಲೆ ಅಪರಾಧಿ ಎಂಬ ಕಪ್ಪು ಚುಕ್ಕೆಯೂ ಅಂಟಿಕೊಂಡುಬಿಡುತ್ತದೆ. ಆಗಿನದಕ್ಕೂ ಈಗಿನದಕ್ಕೂ ಏನಾದರೂ ವ್ಯತ್ಯಾಸ ಆಗಿದೆ ಎಂದು ಅನಿಸುವುದಿಲ್ಲ.

ರೇಪ್‌ ಈಗಲೂ ಇಂತಹದೇ ಒಂದು ಅಪರಾಧವಾಗಿದೆ. ಅದರಲ್ಲಿ ಅಪರಾಧಿಗೆ ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ. ಆದರೆ ಬಲಾತ್ಕಾರ ಮಾಡಿದ ವ್ಯಕ್ತಿ 45 ವರ್ಷ ಅಥವಾ ಅದಕ್ಕೂ ಕಡಿಮೆ ಅವಧಿ ಶಿಕ್ಷೆ ಅನುಭವಿಸಿ ಮುಕ್ತನಾಗುತ್ತಾನೆ. ಅವನ ಮನೆಯವರು ಅವನನ್ನು ಮನೆಗೆ ಕರೆದುಕೊಳ್ಳುತ್ತಾರೊ ಇಲ್ಲವೋ ಗೊತ್ತಿಲ್ಲ. ಆದರೆ ಅವನ ಮನಸ್ಸಿನಲ್ಲಿ ಅಪರಾಧ ಭಾವನೆ ಅಷ್ಟಾಗಿ ಬರುವುದಿಲ್ಲ. ಏಕೆಂದರೆ ಹೆಚ್ಚಿನ ಅಪರಾಧಿಗಳು ತಲೆ ಎತ್ತಿಕೊಂಡೇ ಓಡಾಡುತ್ತಿರುತ್ತಾರೆ. ಅವರು ಬಗೆಬಗೆಯ ಉಪಾಯಗಳಿಂದ ತಮ್ಮ ಅಪರಾಧ ಅಥವಾ ಶಿಕ್ಷೆಯನ್ನು ಕಡಿಮೆಗೊಳಿಸಿಕೊಂಡುಬಿಡುತ್ತಾರೆ.

ಅತ್ಯಾಚಾರಕ್ಕೊಳಗಾದವಳ ನೋವು ಸಾಮಾಜಿಕವಾಗಿ ಜಾಸ್ತಿ, ದೈಹಿಕವಾಗಿ ಕಡಿಮೆ ಇರುತ್ತದೆ.

ಸೆಕ್ಸ್ ಸಂಬಂಧದಲ್ಲಿ ಗಂಡ ಹೆಂಡತಿ, ಪ್ರೇಮಿಪ್ರಿಯಕರ ಹಾಗೂ ವೇಶ್ಯೆಯರ ಜೊತೆ ಪರಪೀಡನೆ ಸುಖಕ್ಕಾಗಿ ಹಿಂಸೆ ಸಾಮಾನ್ಯ ಸಂಗತಿ. ಕೆಲವು ಹಂತದತನಕ ಅದರಲ್ಲಿ ಸಂತ್ರಸ್ತಳಿಗೆ ಯಾವುದೇ ನಿರಾಕರಣೆ ಇರುವುದಿಲ್ಲ. ಇಂತಹ ಪೋರ್ನ್‌ಗಳು ಬಹು ಪ್ರಚಲಿತ, ಅದರಲ್ಲಿ ಯುವತಿಯರ ಜೊತೆ ಒತ್ತಾಯ ಕಂಡುಬರುತ್ತದೆ. ಆದರೆ ಅದನ್ನು ಚಿತ್ರೀಕರಿಸಲು ಅವರ ಒಪ್ಪಿಗೆ ಇರುತ್ತದೆ. ಈ ನೋವು ಸಾಮಾಜಿಕವಾಗಿದೆ. ಸಂತ್ರಸ್ತೆಯನ್ನು ತಪ್ಪಿತಸ್ಥಳು ಎಂದು ಭಾವಿಸಲಾಗುತ್ತದೆ. ಬಹಳಷ್ಟು ಯುವತಿಯರಿಗೆ ಈ ವಿಷಯನ್ನು ಗೌಪ್ಯವಾಗಿ ಇಡಬೇಕಾಗಿ ಬರುತ್ತದೆ. ಇದರಲ್ಲಿ ಹುಡುಗಿಯದು ಕೂಡ ತಪ್ಪು ಇದೆ ಎಂದು ಹೇಳಲು ಸಮಾಜ ಹಿಂದೇಟು ಹಾಕುವುದಿಲ್ಲ.

ಈ ಮಾನಸಿಕತೆ ಬದಲಾಗಬೇಕಾದ ಅಗತ್ಯವಿದೆ. ಆದರೆ ಧರ್ಮ ಮತ್ತು ಕಾನೂನಿನ ಯೋಚನೆ ಬದಲಾಗುವ ತನಕ ಇದು ಬದಲಾಗದು. ಅವಿವಾಹಿತೆಯ ಹೆಸರಿನ ಹಿಂದೆ ಕುಮಾರಿ ಎಂದು ಬರೆಯುವುದರ ಅರ್ಥ ಏನು? ತಾನು ಸೆಕ್ಸ್ ಸಂಬಂಧ ಹೊಂದಿಲ್ಲ ಎಂದು ಮೇಲಿಂದ ಮೇಲೆ ಹೇಳಬೇಕಾದ ಅನಿವಾರ್ಯತೆಯನ್ನು ಏಕೆ ಸೃಷ್ಟಿಸಲಾಗುತ್ತದೆ? ಸೆಕ್ಸ್ ಸಂಬಂಧ ಹೊಂದಲು ಶೀಲಭಂಗ ಎಂದು ಕರೆಯಲಾಗುವುದಿಲ್ಲ. ಬಲಾತ್ಕಾರದ ಪ್ರಕರಣದಲ್ಲಿ ಸೆಕ್ಸ್ ಗೆ ಅಡಿಕ್ಟ್ ಆಗಿದ್ದಾರೆಂದು ಏಕೆ ಪರೀಕ್ಷಿಸಲಾಗುತ್ತದೆ? ಟೂ ಫಿಂಗರ್‌ ಟೆಸ್ಟ್ ಏಕೆ ಆಗುತ್ತದೆ?

ಈ ಪ್ರಶ್ನೆಗಳನ್ನು ಎತ್ತುವ ಬದಲು ಅಪರಾಧಿಗೆ ಗಲ್ಲು ವಿಧಿಸುವ ಅಥವಾ ಅವನ ಗುಪ್ತಾಂಗ ಕತ್ತರಿಸಬೇಕೆನ್ನುವ ಬೇಡಿಕೆ ಮಂಡಿಸಲಾಗುತ್ತದೆ. ಆದರೆ ಈ ಎರಡೂ ಅಪರಾಧ ನಡೆದ ಬಳಿಕವೇ ಆಗಬೇಕು, ಅದಕ್ಕೂ ಮೊದಲು ಅಲ್ಲ. ಒಂದು ವೇಳೆ ಯುವತಿಗೆ ಸಮಾಜ ತನ್ನ ಬೆಂಗಾವಲಿಗೆ ಇದೆ ಎಂದು ಗೊತ್ತಾದರೆ ಆಕೆ ಬಲಾತ್ಕಾರಿ ವ್ಯಕ್ತಿಯನ್ನು ಎದುರಿಸಬಲ್ಲಳು. ಒಂದು ವೇಳೆ ಬಲಾತ್ಕಾರ ಆದರೆ ಅದೇ ರೀತಿ ತಲೆ ಎತ್ತಿ ಕಾನೂನಿನ ಬಾಗಿಲನ್ನು ತಟ್ಟಬೇಕಾಗುತ್ತದೆ, ಪುರುಷ ಹೊಡೆದಾಟದ ಪ್ರಕರಣದಲ್ಲಿ ಮಾಡುವಂತೆ ಸಂತ್ರಸ್ತೆಯ ಬಗ್ಗೆ ಜನರ ಸಹಾನುಭೂತಿ ಇದ್ದರೆ ಅವಳಿಗೆ ಕೇಳಬಾರದ ಪ್ರಶ್ನೆಗಳನ್ನು ಕೇಳುವುದಿಲ್ಲ.

ಒಂದು ವೇಳೆ ಸಮಾಜದ ಯೋಚನೆಯ ದಾಟಿಯನ್ನು ಬದಲಿಸದಿದ್ದರೆ, ಡಿಸೆಂಬರ್‌ 16ನ್ನು ಪ್ರತಿವರ್ಷ ನೆನಪು ಮಾಡಿಕೊಳ್ಳಲು ಯಾವುದೇ ಅರ್ಥ ಇಲ್ಲ.

ದೇಶದ ಜಿಡಿಪಿ ಸುಧಾರಿಸಿದೆಯೇ…..?

ಇಡೀ ದೇಶದ ಆರ್ಥಿಕ ಪ್ರಗತಿಯನ್ನು ಜಿಡಿಪಿ ಅಂದರೆ ಗ್ರಾಸ್‌ ಡೊಮೆಸ್ಟಿಕ್‌ ಪ್ರೊಡಕ್ಷನ್‌ನಿಂದ ಅಳೆಯಲಾಗುತ್ತದೆ. ಅಂದರೆ ಇಡೀ ದೇಶದಲ್ಲಿ ಒಟ್ಟು ಎಷ್ಟು ವಸ್ತುಗಳನ್ನು ಉತ್ಪಾದಿಸಲಾಯಿತು ಎಂದರ್ಥ. ಭಾರತದ ಜಿಡಿಪಿಯಲ್ಲಿ ಹೆಚ್ಚಳ ಅತ್ಯಂತ ವೇಗದಲ್ಲಿದೆ ಎಂದು ಭಾರತ ಸರ್ಕಾರ ಖುಷಿಯಾಗುತ್ತಿತ್ತು. ಅರುಣ್‌ ಜೇಟ್ಲಿ ರೀತಿ ನರೇಂದ್ರ ಮೋದಿಯೂ ಇದು ತನ್ನಿಂದಲೇ ಆಗುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಇದಕ್ಕೆ ಕಾರಣ ಚೀನಾ ಮತ್ತು ಇತರ ಕೆಲವು ದೇಶಗಳು ಆರ್ಥಿಕವಾಗಿ ಕುಗ್ಗಿರುವುದು ಮತ್ತು ಭಾರತವನ್ನು ಹೊಸ ವಿಧಾನದಿಂದ ಅಳೆಯಲಾಗುತ್ತಿರುವುದು. ಆದರೆ ಈ ಹೆಚ್ಚಳ ಅಥವಾ ಒಟ್ಟು ಜಿಡಿಪಿ ಮನರಂಜನೆಯ ಒಂದು ದೊಡ್ಡ ನೆಪವಾಗಿದೆ. ನಮ್ಮ ಜನಸಂಖ್ಯೆಯ ಪ್ರಕಾರ, ನಾವು ಅಮೆರಿಕಾ, ಯೂರೋಪ್‌ ಬಿಡಿ, ಚೀನಾ, ಕಾಂಬೋಡಿಯಾ, ವಿಯೆಟ್ನಾಂ, ಸಿಂಗಾಪುರ್‌ಗಳಿಗಿಂತಲೂ ಬಹಳ ಹಿಂದಿದ್ದೇವೆ. ಈ ನೋಟು ರದ್ದು ತೀರ್ಮಾನ ನಮ್ಮನ್ನು ಬಹಳ ಹಿಂದೆ ತಳ್ಳಿಬಿಟ್ಟಿದೆ. ಪ್ರಧಾನಮಂತ್ರಿಗಳು ಈಗ ತಮ್ಮನ್ನು ಭಿಕ್ಷುಕರೆಂದು ಹೇಳಿಕೊಳ್ಳುತ್ತಿದ್ದಾರೆ. ಜೋಳಿಗೆ ಹಿಡಿದು ಹೊರಳಾಡುತ್ತಾರೆ. ಆದರೆ ಅವರಿಗೆ ಇಡೀ ದೇಶವನ್ನು ಭಿಕ್ಷುಕರನ್ನಾಗಿ ಮಾಡಲು ಅಪ್ಪಣೆಯಂತೂ ಇರಲಿಲ್ಲ.

ಭಾರತ ಹೆಚ್ಚು ಕಡಿಮೆ ಚೀನಾದಷ್ಟೇ ಜನಸಂಖ್ಯೆ ಹೊಂದಿದ್ದರೂ ಹಣ ಸಂಪತ್ತಿನಲ್ಲಿ ಜಿಡಿಪಿ ಲೆಕ್ಕದಲ್ಲಿ 5ನೇ ಸ್ಥಾನದಲ್ಲಿದೆ. ಅಮೆರಿಕಾಗೆ ಹೋಲಿಸಿದರೆ 6ರಷ್ಟು ದೊಡ್ಡದಾಗಿದ್ದರೂ ಜಿಡಿಪಿಯಲ್ಲಿ 8ನೇ ಸ್ಥಾನದಲ್ಲಿದೆ. ಇದು ಯಾವ ರೀತಿಯಲ್ಲಾದರೂ ಪ್ರತಿಷ್ಠೆ ಎಂದು ಹೇಳಿಕೊಳ್ಳಲು ಅರ್ಹವಾಗಿದೆಯೇ? ನೋಟು ರದ್ದು ಮಾಡಿದ ಸರ್ಕಾರ ಕೋಟ್ಯಂತರ ಜನರನ್ನು ಕ್ಯೂಗಳಲ್ಲಿ ನಿಲ್ಲಿಸಿ ಅವರ ಉತ್ಪಾದನೆಯನ್ನು ಕಿತ್ತುಕೊಂಡಿತು. ಫ್ಯಾಕ್ಟರಿಗಳು, ಹೊಲಗದ್ದೆಗಳು, ಮಾರುಕಟ್ಟೆಗಳು ಶೂನ್ಯವಾದವು. ಏಕೆಂದರೆ ಜನ ಕ್ಯೂಗಳಲ್ಲಿ ನಿಲ್ಲಬೇಕಾಯಿತು. ಮಕ್ಕಳು ಹಸಿದುಕೊಂಡು ಇರಬೇಕಾಯಿತು.  ಏಕೆಂದರೆ ಅಮ್ಮಂದಿರು ಕ್ಯೂಗಳಲ್ಲಿ ನಿಲ್ಲಬೇಕಾಯಿತು. ಮಕ್ಕಳು ಬಿಸಿಲು ಚಳಿಯನ್ನು ಸಹಿಸಬೇಕಾಯಿತು. ಏಕೆಂದರೆ ಅವರು ಅಮ್ಮನ ಕಂಕುಳಲ್ಲಿ 8-8 ಗಂಟೆಗಳ ಕಾಲ ಕ್ಯೂಗಳಲ್ಲಿ ನಿಂತಿರಬೇಕಾಯಿತು. ಈ ಸಾಲುಗಳು ಭಾರತದ ಜಿಡಿಪಿಯನ್ನು ಇನ್ನಷ್ಟು ಹಿಂದಿನ ಸಾಲಿಗೆ ತಳ್ಳಿದವು. ಶೇ.7.4ರಷ್ಟು ವೇಗದಲ್ಲಿ ಮುಂದೆ ಸಾಗುವ  ದೇಶ ಈಗ ಶೇ.4 ಅಥವಾ 5ಕ್ಕೆ ಬಂದು ಚೀನಾಕ್ಕಿಂತ ಅಭಿವೃದ್ಧಿಯಲ್ಲಿ ಹಿಂದುಳಿದುಬಿಟ್ಟರೆ ಆಶ್ಚರ್ಯವಿಲ್ಲ.

ಈ ನಷ್ಟವನ್ನು ಪ್ರತಿ ಮನೆಯೂ ಸಹಿಸಿಕೊಳ್ಳಬೇಕು. ಮನೆಯ ಸಂಪತ್ತಿನ ಸುಲಿಗೆ ಬೇರೆ ವಿಷಯ, ಕಡಿಮೆ ಕೆಲಸದ ಗಂಟೆಗಳು ಅದೂ ಬೇರೆ ವಿಷಯ. ಇಡೀ ದೇಶಕ್ಕೆ ಆದ ನಷ್ಟವನ್ನು ಪ್ರತಿ ಮನೆಗೂ ಹಂಚಿದರೆ ಅದನ್ನು ಲೆಕ್ಕ ಹಾಕಲಾಗುವುದಿಲ್ಲ. ಆದರೆ ಅದಕ್ಕೆ ಕಾರಣ ಮೂರ್ಖತನದಿಂದ ಕೂಡಿದ ಒಂದು ನಿರ್ಧಾರವೆಂದು ಹೇಳಬಹುದು. ಮಗಳು ಒಬ್ಬ ದರಿದ್ರ ಯುವಕನೊಂದಿಗೆ ಓಡಿಹೋಗಿರುವಂತೆ ಇದರ ನಷ್ಟವನ್ನು ದೇಶ ಹಲವಾರು ವರ್ಷಗಳ ಕಾಲ ಸಹಿಸಿಕೊಳ್ಳಬೇಕು.

ಜೀವನದಲ್ಲಿ ಗಾಂಭೀರ್ಯ ಅಗತ್ಯ

ದೇಶದ ಸಮಸ್ಯೆಗಳಿಗೆ ದೊಡ್ಡ ಕಾರಣ ಜನರು ಭಾವನೆಗಳಲ್ಲಿ ಕೊಚ್ಚಿ ಹೋಗುವುದು ಮತ್ತು ಸಮಸ್ಯೆಗಳನ್ನು ಮೋಜಿನಲ್ಲಿ ಉಡಾಯಿಸುವುದಾಗಿದೆ. ಒಂದು ಕಡೆ ಧಾರ್ಮಿಕತೆಯ ಆಡಂಬರದ ಪ್ರಚಾರ ಹಾಗೂ ಇನ್ನೊಂದು ಕಡೆ ವೊಬೈಲ್‌ನ ವಿನೋದ ಮಾನಸಿಕತೆಯನ್ನು ಕೀಳಾಗಿಸಿದೆ. ಜನರ ಆಲೋಚನೆ, ವಿಚಾರಗಳು ಎಷ್ಟು ಕಡಿಮೆಯಾಗಿವೆ ಎಂದರೆ, ನೋಟು ರದ್ಧತಿಯಂತಹ ವಿಷಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ತಮಾಷೆಯಿಂದ ನೋಡಲಾಯಿತು. ಅದರ ಪೆಟ್ಟಿನ ನೋವನ್ನು ಕಡಿಮೆ ಪ್ರಸ್ತುತಪಡಿಸಲಾಯಿತು.

ಜೀವನ ಒಂದು ಸಂಘರ್ಷವಾಗಿದೆ. ಪೈರುಗಳು ವಿನೋದದಿಂದ ಉತ್ಪತ್ತಿಯಾಗುವುದಿಲ್ಲ. ಮನೆಗಳು, ತಮಾಷೆ ಹಾಗೂ ನಗೆಹನಿಗಳಿಂದ ನಿರ್ಮಿಸಲ್ಪಡುವುದಿಲ್ಲ. ಪ್ರವಚನ ಹಾಗೂ ಮಂತ್ರಗಳಿಂದ ಮಕ್ಕಳು ಹುಟ್ಟುವುದಿಲ್ಲ. ಭಾಷಣಗಳಿಂದ ಅವರು ದೊಡ್ಡವರಾಗುವುದಿಲ್ಲ. ಜೀವನದಲ್ಲಿ ಗಾಂಭೀರ್ಯದ ಅಗತ್ಯವಿದೆ. ಯಾವ ಸಮಾಜ ಈ ಗಾಂಭೀರ್ಯವನ್ನು ಕಳೆದುಕೊಳ್ಳುತ್ತದೋ ಅದು ಮೂರ್ಖತನದಿಂದ ಅಥವಾ ಅಹಂಕಾರದಿಂದ ಸಾಯುತ್ತದೆ. ಒಂದು ಕಾಲದಲ್ಲಿ ಪಂಜಾಬ್‌ ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತ ರಾಜ್ಯವಾಗಿತ್ತು. ಆದರೆ ಅಹಂಕಾರ, ಧರ್ಮ, ಮದ್ಯ, ಡ್ರಗ್ಸ್ ಮತ್ತು ಮೋಜು ಇವೆಲ್ಲ ಅದನ್ನು ಇಂದು ಎಂತಹ ಪ್ರಪಾತಕ್ಕೆ ತಳ್ಳಿದೆ ಎಂದರೆ, `ಉಡ್ತಾ ಪಂಜಾಬ್‌’ನಂತಹ ಸಿನಿಮಾ ತಯಾರಿಸಲಾಗಿದೆ.

ನಿಮ್ಮ ಜೀವನದಲ್ಲಿ ಎಷ್ಟು ಗಂಭೀರರಾಗಿದ್ದೀರೆಂದು ನಿಮ್ಮನ್ನು ನೀವೇ ಪ್ರಶ್ನಿಸಿದ್ದೀರಾ? ಎಷ್ಟು ಹೊತ್ತು ಮೊಬೈಲ್‌ನಲ್ಲಿ ಜೋಕ್‌ಗಳನ್ನು ಫಾರ್ವರ್ಡ್ ಮಾಡಲು ಅಥವಾ ಕಿಟಿ ಪಾರ್ಟಿಗಳಲ್ಲಿ, ವ್ಯರ್ಥ ತಂಬೋಲಾಗಳಲ್ಲಿ ಖರ್ಚು ಮಾಡುತ್ತೀರಿ ಅಥವಾ ಎಷ್ಟು ಹೊತ್ತು ಸಮಸ್ಯೆಗಳನ್ನು ಅರಿಯಲು ಮತ್ತು ಪರಿಹರಿಸಿಕೊಳ್ಳುವ ಕಲೆಯನ್ನು ವಿಕಸಿತಗೊಳಿಸಲು ಪ್ರಯತ್ನಿಸಿದ್ದೀರಿ? ನಮ್ಮಲ್ಲಿ ಓದಿದವರು, ಸುಶಿಕ್ಷಿತ ಅಧ್ಯಾಪಕಿಯರೂ ಸಹ ವೈಚಾರಿಕವಾಗಿ ಮಾತಾಡುವುದಿಲ್ಲ, ಪುಸ್ತಕಗಳನ್ನು ಓದುವುದಿಲ್ಲ ಮತ್ತು ಏನನ್ನೂ ಬರೆಯುವುದಿಲ್ಲ. ಅವರು ಶಾಪಿಂಗ್‌ನಲ್ಲಿ, ಟಿವಿ ಶೋಗಳನ್ನು ಅಥವಾ ರಿಪೀಟ್‌ ಆಗುತ್ತಿರುವ ಸಿನಿಮಾಗಳನ್ನು ನೋಡುವುದರಲ್ಲಿ, ಮೊಬೈಲ್‌ನಲ್ಲಿ ಹರಟೆ ಹೊಡೆಯುವುದು ಅಥವಾ ಕಿವಿಯಲ್ಲಿ ಇಯರ್‌ಫೋನ್‌ ಸಿಕ್ಕಿಸಿಕೊಂಡು ಹಳೆಯ ಹಾಡುಗಳನ್ನು ಪದೇ ಪದೇ ಕೇಳುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ.

ಈ ಸಮಾಜ ಮೂರ್ಖರ ಸಮೂಹವಾಗುತ್ತಿದೆ. ಅದರಲ್ಲಿ ಕ್ರಿಕೆಟರ್‌ಗಳು ಮತ್ತು ಸಿನಿಮಾ ತಾರೆಯರ ಜೀವನದ ಪ್ರತಿ ಕ್ಷಣದ ಬಗ್ಗೆ ಯೋಚಿಸಲಾಗುತ್ತದೆ. ಆದರೆ ತಮಗೆ ಬರುತ್ತಿರುವ ಆಪತ್ತಿನ ಬಗ್ಗೆ ಯೋಚಿಸುವುದಿಲ್ಲ.

ಗಂಭೀರರಾಗಿರುವ ಜನರನ್ನು ಇಲ್ಲಿ ಏಕಾಂಗಿತನದಲ್ಲಿ ಬಂಧಿಸಿಡಲಾಗುತ್ತಿದೆ. ಅವರನ್ನು ಯಾವುದೇ ಗ್ರೂಪ್‌ನಲ್ಲಿಯೂ ಅರೋಗೇಟ್‌ ಎಜ್ಯುಕೇಟೆಡ್‌ ಎಂದು ಕರೆದು ಬೇರೆ ಮಾಡಲಾಗಿದೆ. ಪ್ರವಾಹದ ವಿರುದ್ಧ ಯೋಚಿಸುವವರನ್ನು ವಿಲಕ್ಷಣ ಎಂದು ತಿಳಿಯಲಾಗುತ್ತಿದೆ.

Tags:
COMMENT