ನ್ಯೂಟ್ರಿಶನಿಸ್ಟ್, ಫೌಂಡರ್‌ ಆಫ್‌ ಹೆಲ್ತ್ ಕೇರ್‌

ಸುಮನ್‌ ಕೇವಲ ನ್ಯೂಟ್ರಿಶನ್‌ ಇಂಡಸ್ಟ್ರಿಯ ಸುಪ್ರಸಿದ್ಧ ಸೆಲೆಬ್ರಿಟಿ ಮಾತ್ರವಲ್ಲ, ಬದಲಿಗೆ ಒಬ್ಬ ಯಶಸ್ವಿ ಉದ್ಯಮಿ, ಲೇಖಕಿ, ಗಾಯಕಿ ಹಾಗೂ ನೃತ್ಯಗಾರ್ತಿಯೂ ಹೌದು. ವೆಯ್ಟ್ ಲಾಸ್‌, ವೆಯ್ಟ್ ಮೇಂಟೇನ್‌, ವೆಯ್ಟ್ ಗೆಯ್ನ್, ಡಯೆಟ್‌ ಫಾರ್‌ ಬೂಸ್ಟಿಂಗ್‌ ಇಮ್ಯುನಿಟಿ, ಚಿಲ್ಡ್ರನ್‌ ನ್ಯೂಟ್ರಿಶನ್‌ ಮುಂತಾದ ಸೇವೆಗಳನ್ನು ಜನರಿಗೆ ತಲುಪಿಸಲು 2001ರಲ್ಲಿ  ಈಕೆ ಮುಂಬೈ ಮತ್ತು ಕೋಲ್ಕತಾದಲ್ಲಿ ಹೆಲ್ತ್ ಕೇರ್‌ ಸೆಂಟರ್‌ ಆರಂಭಿಸಿದರು. ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆಕೆ `ದಿ ಡಾಂಟ್‌ ಡಯೆಟ್‌ ಕುಕ್‌ಬುಕ್‌, ಅನ್‌ಜಂಕ್ಡ್ ಹೆಲ್ದಿ ಈಟಿಂಗ್‌ ಫಾರ್‌ ವೆಯ್ಟ್ ಲಾಸ್‌, ಸೂಪರ್‌ ಕಿಡ್‌ ಹೆಲ್ದಿ ಈಟಿಂಗ್‌ ಫಾರ್‌ ಕಿಡ್ಸ್, ಟೀನೇಜರ್ಸ್’ ಇತ್ಯಾದಿ ಪುಸ್ತಕ ಬರೆದಿದ್ದಾರೆ. ತಾಯಿ ಆದ ನಂತರ ಕೆರಿಯರ್‌ ಆರಂಭಿಸಿ, ಯಶಸ್ಸು ಗಳಿಸಿರುವ ಸುಮನ್‌ರ ಕುರಿತಾಗಿ ವಿವರವಾಗಿ ತಿಳಿಯೋಣವೇ?

ನಿಮ್ಮ ಈವರೆಗಿನ ಪ್ರಯಾಣ ಹೇಗಿತ್ತು?

12-13ರ ವಯಸ್ಸಿನಿಂದಲೇ ನಾನು ಆರೋಗ್ಯ, ಕಾಯಿಲೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದತೊಡಗಿದೆ. ನನ್ನ ಮದುವೆ ಆದಾಗ ನನಗಿನ್ನೂ 20 ವಯಸ್ಸು, 22ಕ್ಕೆ ಮಗು ಆಯ್ತು. ಹೀಗಾಗಿ  ತಕ್ಷಣ ನಾನು ಕೆರಿಯರ್‌ ಕಡೆ ಗಮನಹರಿಸಲು ಸಾಧ್ಯವಾಗಲಿಲ್ಲ. 25ರ ಹೊತ್ತಿಗೆ ನನ್ನ ಮೂರನೇ ಮಗಳು ಹುಟ್ಟಿದಳು. ಅದಾದ ಮೇಲೆ 1 ವರ್ಷದ ಫುಡ್‌ ನ್ಯೂಟ್ರಿಷನ್‌ ಡಿಪ್ಲೊಮಾ ಮಾಡಿದೆ. ನನಗೆ ಯಾವಾಗಲೂ ಅನಿಸುತ್ತಿದ್ದುದು ಎಂದರೆ, ಏನಾದರೂ ತಿನ್ನುವುದರಿಂದ ರೋಗ ಬರುತ್ತದೆ ಎಂದಾದರೆ ಅದನ್ನು ನಿವಾರಿಸಲು ಬೇರೇನಾದರೂ ತಿನ್ನಬಾರದೇಕೆ?

ಈ ಆಲೋಚನೆ ಸರಿ ಇತ್ತು. ಕೋರ್ಸ್‌ ಮಾಡುವಾಗ ಇದಕ್ಕೆ ಒತ್ತುಕೊಡುವಂಥ ಪುಸ್ತಕಗಳೇ ಸಿಕ್ಕಿದವು. ನನ್ನ ಕೊನೆ ಮಗಳು 3 ವರ್ಷದವಳಾದಾಗ ನಾನು ಆಫೀಸ್‌ ಸೇರಿದೆ. ನಿಧಾನವಾಗಿ ನನ್ನ ಬಳಿ ಕ್ಲೈಂಟ್ಸ್ ಬರತೊಡಗಿದರು, ನನ್ನ ಬಿಸ್‌ನೆಸ್‌ ಇಂಪ್ರೂವ್‌ ಆಗತೊಡಗಿತು.

ಈ ಪುರುಷಪ್ರಧಾನ ಸಮಾಜದಲ್ಲಿ ನಿಮಗಾಗಿ ಒಂದು ಸ್ಥಾನ ಭದ್ರಪಡಿಸಿಕೊಳ್ಳುವುದು ಸುಲಭವಾಗಿತ್ತೇ?

ಮುಖ್ಯವಾಗಿ ಈ ನ್ಯೂಟ್ರಿಶನ್‌ ಫೀಲ್ಡ್ ನಲ್ಲಿ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರೇ ಇದ್ದಾರೆ ಎಂಬುದು ಖುಷಿ! ಹೀಗಾಗಿ ಹೆಚ್ಚಿನ ಪೈಪೋಟಿ ಇಲ್ಲದೆ ಕಡಿಮೆ ಸಂಖ್ಯೆಯ ಗಂಡಸರೊಂದಿಗೆ ಸ್ವರ್ಧಿಸಬೇಕಾಯ್ತು. ಆದರೆ ಆರಂಭದ ಸಮಯದಲ್ಲಿ ಎಷ್ಟೋ ಸಲ ನನ್ನ ಜೊತೆ ಹೀಗಾಗಿದೆ. ಏನೆಂದರೆ, ನನ್ನ ಪರಿಚಿತ ಪುರುಷ ಮಿತ್ರರು ತಮ್ಮ ಪರಿಚಿತ ಗಂಡಸರಿಗೆ ನನ್ನ ಬಳಿ ಬಂದು ಚಿಕಿತ್ಸೆ ಪಡೆಯುವಂತೆ ಹೇಳಿದರೆ, ಒಬ್ಬ ಹೆಂಗಸು ಎಂಥ ಚಿಕಿತ್ಸೆ ಕೊಟ್ಟಾಳು ಎಂದು ಉಡಾಫೆ ಮಾಡುತ್ತಿದ್ದರು. ಅಂಥ ಪ್ರತಿಕ್ರಿಯೆಗಳು ನನಗೆ ಎಷ್ಟೋ ಸಲ ನಿರಾಸೆ ಮಾಡಿದ್ದಿದೆ. ಆದರೆ ನಾನು ಇಂಥ ಕ್ಷುಲ್ಲಕ ವಿಚಾರಗಳನ್ನು ನಿರ್ಲಕ್ಷಿಸಿ ನನ್ನ ಗಮನವನ್ನೆಲ್ಲ ಕೆಲಸದ ಕಡೆ ಕೇಂದ್ರೀಕರಿಸುತ್ತಿದ್ದೆ. ಅದರ ಪರಿಣಾಮವಾಗಿ ಇಂದು ನನ್ನ ಬಳಿ ಸರಿಸಮಾನ ಪುರುಷ, ಸ್ತ್ರೀ ಕ್ಲೈಂಟ್ಸ್ ಇದ್ದಾರೆ.

ನಿಮ್ಮ ಐಡೆಂಟಿಟಿ ಉಳಿಸಿಕೊಳ್ಳಲು ಪ್ರೇರಣೆ ಎಲ್ಲಿಂದ ದೊರಕಿತು?

ನಿಜ ಹೇಳಬೇಕೆಂದರೆ ನನ್ನಲ್ಲಿ ನ್ಯೂಟ್ರಿಶನಿಸ್ಟ್ ಆಗಬೇಕೆಂಬ ಆಸೆ ತುಂಬಿದವರೇ ನನ್ನ ತಂದೆ. ಅವರಂತೂ ಬಹಳ ಹೆಚ್ಚು ಎಂಬಷ್ಟು ಹೆಲ್ತ್ ಕಾನ್ಶಿಯಸ್‌. ನಮ್ಮ ಇಡೀ ಪರಿವಾರ ಅಂದ್ರೆ ಅಮ್ಮ ಅಪ್ಪ ಮತ್ತು ನಾಲ್ವರು ಮಕ್ಕಳಾದ ನಾವು ಯಾವಾಗಲೂ ಒಟ್ಟಿಗೆ ಉಪಾಹಾರ ಸೇವಿಸುತ್ತಿದ್ದೆವು. ಅದಂತೂ 1 ಗಂಟೆ ಕಾಲದ ಕಾರ್ಯಕ್ರಮ. ಆಗೆಲ್ಲ ನಮ್ಮ ತಂದೆ ಯಾವುದು ಹೆಲ್ದಿ, ಅಲ್ಲ ಎಂದು ತಿಳಿಸುತ್ತಿದ್ದರು. ನಾವು ಏನನ್ನು ಸೇವಿಸಬೇಕು, ಬಾರದು ಎಂದು ತಿಳಿಸುತ್ತಿದ್ದರು. ಅವರು ನೇರವಾಗಿ ಈ ಫೀಲ್ಡ್ ಗೆ ಸಂಬಂಧಿಸಿದವರೇ ಅಲ್ಲ, ಆದರೂ ಇದರಲ್ಲಿ ಹೆಚ್ಚಿನ ಆಸಕ್ತಿ. ಆರೋಗ್ಯಕ್ಕೆ ಸಂಬಂಧಿಸಿದ ಬಹಳಷ್ಟು ಪುಸ್ತಕಗಳನ್ನು ಮನೆಗೆ ತರುತ್ತಿದ್ದರು.

ನೀವು ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು?

ನನ್ನ ಪಾಲಿಗಂತೂ ಮನೆಮಠ ಸಂಭಾಳಿಸುತ್ತಾ ನನ್ನ ಕೆರಿಯರ್‌ನಲ್ಲಿ ಈ ಮಟ್ಟ ಬೆಳೆದಿರುವುದೇ ಒಂದು ದೊಡ್ಡ ಸವಾಲು! ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಎಷ್ಟೋ ಸಲ ಅನಗತ್ಯವಾಗಿಯೂ ಬಿಟ್ಟು ಕೊಡಬೇಕಾಗುತ್ತಿತ್ತು. ನಾನೆಂದೂ ಆರಾಮವಾಗಿ ಟಿ.ವಿ ನೋಡುತ್ತಾ, ಎಂದೂ ಯಾವ ಕಿಟೀ ಪಾರ್ಟಿಗೂ ಹೋದವಳಲ್ಲ. ನನ್ನ ಫೋಕಸ್‌ ಸದಾ ನನ್ನ ಪರಿವಾರ ಮತ್ತು ಕೆಲಸವೇ ಆಗಿರುತ್ತಿತ್ತು. 2004ರಲ್ಲಿ ನಾನು ಬ್ರೇನ್‌ ಸರ್ಜರಿ ಸಹ ಮಾಡಿಸಿಕೊಂಡಿದ್ದೆ. ಆಗ ನನಗೆ ನನ್ನ ಮುಖದ ಎಡಭಾಗದತ್ತ ನನ್ನ ಕಂಟ್ರೋಲ್ ಇರಲಿಲ್ಲ. ಅದು ಸದಾ ಅಲುಗಾಡುತ್ತಲೇ ಇತ್ತು. ಆ ಕಾರಣದಿಂದ ನಾನು ಸ್ಮೈಲ್ ಮಾಡಲಿಕ್ಕೂ ಆಗುತ್ತಿರಲಿಲ್ಲ. ಹೀಗಾಗಿ ಬಹಳ ಟಾರ್ಚರ್‌ಗೆ ಒಳಗಾಗುತ್ತಿದ್ದೆ. ಆಗ ನಾನು ಡಿಪ್ರೆಶನ್‌ಗೂ ಜಾರಿದ್ದೆ.

ಆದರೆ ಇವೆಲ್ಲವುಗಳಿಂದ ನಾನು ಎದೆಗುಂದಲಿಲ್ಲ. ನನ್ನ ರಿಪೋರ್ಟ್‌ಗಳನ್ನು ವಿದೇಶಗಳಿಗೂ ಕಳುಹಿಸಿದ್ದೆ. ಅಂತೂ ಕೊನೆಗೆ ಜರ್ಮನಿಯಲ್ಲಿ ಆಪರೇಷನ್‌ ಮಾಡಿಸಿಕೊಂಡು, ಅದರಲ್ಲಿ ಸಕ್ಸೆಸ್‌ ಆದೆ!

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ