ಒಂದು ಪುಟ್ಟ ಪಠ್ಯಪುಸ್ತಕ ಬದಲಿಸಿದ ಬದುಕಿನ ಹಾದಿ, ಮೂವರು ಮಕ್ಕಳಿಂದ ಆರಂಭವಾದ ಸೇವೆ ಇಂದು ಸಾವಿರಾರು ನಿರ್ಗತಿಕರ ಬದುಕಿಗೆ ಆಸರೆಯಾಗಿದೆ!

ಸಮಾಜದಲ್ಲಿ ಸಾಧನೆ ಮಾಡಲು ದೊಡ್ಡ ಶ್ರೀಮಂತಿಕೆ, ಅಧಿಕಾರ, ಪ್ರಭಾವ ಅಥವಾ ಉನ್ನತ ಸ್ಥಾನಮಾನವೇ ಬೇಕೆಂದಿಲ್ಲ. ಸಮಾಜದ ನೋವಿಗೆ ಮಿಡಿಯುವ ಹೃದಯ, ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಸಂಕಲ್ಪ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ದೃಢಸಂಕಲ್ಪವಿದ್ದರೆ ಸಾಕು ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದವರು ಬೆಂಗಳೂರಿನ ಹಿರಿಯ ಸಮಾಜಸೇವಕಿ ಡಾ. ಎಸ್.ಜಿ. ಸುಶೀಲಮ್ಮ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

ಇಂದು ಅಮ್ಮ ಎಂದೇ ಸಾವಿರಾರು ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಸುಶೀಲಮ್ಮ ಅವರು, ಐದು ದಶಕಗಳಿಗೂ ಹೆಚ್ಚು ಕಾಲ ಅನಾಥ ಮಕ್ಕಳು, ನಿರ್ಗತಿಕ ಮಹಿಳೆಯರು, ವೃದ್ಧರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹಾಗೂ ಬುಡಕಟ್ಟು ಸಮುದಾಯಗಳ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕೇವಲ 15 ರೂಪಾಯಿಗಳಿಂದ 1975ರಲ್ಲಿ ಆರಂಭವಾದ ಅವರ ಸಮಾಜಸೇವೆಯ ಪಯಣ ಇಂದು ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿಯವರೆಗೆ ವಿಸ್ತರಿಸಿದೆ. ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2026ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಬಾಲ್ಯದಲ್ಲಿಯೇ ಮೊಳಕೆಯೊಡೆದ ಸಮಾಜಸೇವೆಯ ಬೀಜ

ಸುಶೀಲಮ್ಮ ಅವರು 1939ರ ಮೇ 24ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಗಣೇಶಪ್ಪ ಮತ್ತು ಚೆನ್ನಮ್ಮ ದಂಪತಿಯ ಪುತ್ರಿಯಾಗಿ ಜನಿಸಿದರು. ಅವರ ಕುಟುಂಬ ಆರಂಭದಲ್ಲಿ ಸಾಕಷ್ಟು ಅನುಕೂಲಸ್ಥವಾಗಿತ್ತು. ತಂದೆ ನೇಯ್ಗೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ದೇಶ ವಿಭಜನೆಯ ನಂತರ ಉಂಟಾದ ಆರ್ಥಿಕ ಬದಲಾವಣೆಗಳು, ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಉದ್ಯಮದಲ್ಲಿನ ಸಂಕಷ್ಟಗಳಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಕ್ರಮೇಣ ಹದಗೆಟ್ಟಿತು.

ಒಂದು ಕಾಲದಲ್ಲಿ ಇತರರಿಗೆ ಸಹಾಯ ಮಾಡುತ್ತಿದ್ದ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದಾಗ, ಬಡತನದ ನೋವು ಎಂದರೇನು ಎಂಬುದನ್ನು ಅವರು ಸ್ವತಃ ಅನುಭವಿಸಿದರು. ಚಾಮರಾಜಪೇಟೆಯ ವಾಣಿ ವಿಲಾಸ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಶೀಲಮ್ಮ ಅವರ ಜೀವನದಲ್ಲಿ ಒಂದು ಸಣ್ಣ ಘಟನೆ ದೊಡ್ಡ ಬದಲಾವಣೆಗೆ ಕಾರಣವಾಯಿತು. ಅವರು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾಗ, ಶಾಲೆಯ ಹಳೆಯ ವಿದ್ಯಾರ್ಥಿಗಳು ನೀಡಿದ ದೇಣಿಗೆಯಿಂದ ಖರೀದಿಸಿದ್ದ ಪಠ್ಯಪುಸ್ತಕಗಳನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುಶೀಲಮ್ಮ ಅವರೂ ಆ ಸಾಲಿನಲ್ಲಿ ನಿಂತು ಪುಸ್ತಕವನ್ನು ಸ್ವೀಕರಿಸಿದರು. ಆ ಪುಸ್ತಕವನ್ನು ನೀಡುವಾಗ ಶಿಕ್ಷಕರು, ಈ ಪುಸ್ತಕಗಳನ್ನು ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ಖರೀದಿಸಲಾಗಿದೆ ಎಂದು ತಿಳಿಸಿದರು.

ಆ ಕ್ಷಣ ಸುಶೀಲಮ್ಮ ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. ಇಂದು ನಾನು ಬೇರೆಯವರು ನೀಡಿದ ಪುಸ್ತಕವನ್ನು ಸ್ವೀಕರಿಸುತ್ತಿದ್ದೇನೆ. ಮುಂದೆ ನಾನೂ ದುಡಿದು ಇಂತಹ ಮಕ್ಕಳಿಗೆ ನೆರವಾಗಬಾರದೇ? ಅಂದೇ ತಮ್ಮ ದುಡಿಮೆಯಿಂದ ಬಡ ಮಕ್ಕಳಿಗೆ ಸಹಾಯ ಮಾಡಬೇಕೆಂಬ ಸಂಕಲ್ಪವನ್ನು ಮಾಡಿಕೊಂಡರು. ಮುಂದೆ ಅವರ ಇಡೀ ಜೀವನವೇ ಆ ಸಂಕಲ್ಪದ ಸಾಕಾರ ರೂಪವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ