ಜನಪ್ರಿಯ ಹೆವೆನ್ಸ್ ಅಪಾರ್ಟ್ಮೆಂಟ್ ಅಳ್ಳಾಳಸಂದ್ರ ಬೆಂಗಳೂರು.
ಏಪ್ರಿಲ್ ಪರೀಕ್ಷೆಗಳು ಮುಗಿಯುತ್ತಿದ್ದಂತೆ, ಬಹಳಷ್ಟು ಅಪಾರ್ಟ್ಮೆಂಟ್ ನಿವಾಸಿಗಳ ಗಮನ ಮಕ್ಕಳನ್ನು ಯಾವ summer camp ಗೆ ಸೇರಿಸುವುದು, ಅದರ ಶುಲ್ಕ , ಸಾರಿಗೆ ವ್ಯವಸ್ಥೆ, ಬೇಗೆಯ ಬಿಸಿಲಲ್ಲಿ ಮಕ್ಕಳನ್ನು ಎಬ್ಬಿಸಿ ಸ್ನಾಕ್ಸ್ ಕಟ್ಟಬೇಕಲ್ಲ , ಮತ್ತೆ ಅಮ್ಮಂದರಿಗೆ ವರ್ಷದ ಅದೇ ಒತ್ತಡದ ಮಾತು. ಇದಕ್ಕೆ ಪರ್ಯಾಯವಾಗಿ ನಮ್ಮ ಅಪಾರ್ಟ್ಮೆಂಟ್ ಮಕ್ಕಳಿಗೆ ನಾವೇ ಕ್ಯಾಂಪ್ ನಡೆಸುವ ಎಂಬ ಬೆಂಬಲ ನೀಡಿ ಪ್ರೋತ್ಸಹಿಸಿದ್ದು ನಮ್ಮ ಅಪಾರ್ಟ್ಮೆಂಟ್ ಅಸೋಸಿಯೇಷನ್ ಪ್ರೆಸಿಡೆಂಟ್ ಶ್ರೀ ಪ್ರದೀಪ್ ಮತ್ತು ಅವರ ಪತ್ನಿ ಶ್ರೀಮತಿ ಡಾ.ಶಶಿಕಲಾ ( HOD ಸರ್ಕಾರೀ ಕಾಲೇಜು ಯೆಲಹಂಕ).

ನಮ್ಮಲಿಯೇ ಇರುವ ಒಂದು ಸಣ್ಣ ಕಮ್ಯೂನಿಟಿ ಹಾಲ್, ಮಕ್ಕಳಿಗೆ ಉಚಿತವಾಗಿ ಶಿಬಿರದ ತಾಣ ಒದಗಿಸಿತ್ತು. ಶಾಲಾ, ಕಾಲೇಜಿನಲ್ಲಿ ಶಿಕ್ಷಕರಾಗಿ ನಿವೃತ್ತ ಶಿಕ್ಷಕರು, ಕಲಿಸುವ ಆಸಕ್ತಿಯುಳ್ಳ ಪ್ರತಿಭಾವಂತರು, ಮಕ್ಕಳನ್ನು ನಿಭಾಯಿಸುವ ತಜ್ಞರು ಸಂತೋಷದಿಂದ ಸ್ವಇಚ್ಛೆಯಿಂದ ಕೈಗೂಡಿಸಿದ್ದು ಅದೃಷ್ಟವೇ ಆಗಿತ್ತು. ಸರಾಸರಿ ೪೦ ಮಕ್ಕಳ ಕಲರವದಿಂದ ಕಂಗೊಳಿಸಿದ್ದ ಶಿಬಿರ ದಿನದಿಂದ ದಿನಕ್ಕೆ ಆಕರ್ಷಣೀಯವಾಗಿತ್ತು. ಮೂರು ವರ್ಷದಿಂದ ೧೫ ವರ್ಷದವರೆಗಿನ ಪುಟಾಣಿಗಳ ಸಂಭ್ರಮ ಹೇಳತೀರದು. ನಮ್ಮಲ್ಲಿಯೇ ಇರುವ ಯೋಗ ಟೀಚರ್ ಮಕ್ಕಳಿಗೆ ದಿನನಿತ್ಯದ ಬೇಸಿಕ್ ಯೋಗಾಭ್ಯಾಸ ಕಲಿಸಿದರೆ ನಂತರ ನಮ್ಮ ಸಾಂಪ್ರದಾಯಿಕ ಪ್ರಾರ್ಥನಾ ಶ್ಲೋಕಗಳು ನಂತರ ಬೇರೆ ಬೇರೆ ಆಟಗಳನ್ನು ಆಡಿಸುವತ್ತ ಚಿತ್ತ. ತೀರಾ ಚಿಕ್ಕ ಮಕ್ಕಳಿಗೆ ಫ್ರೀ ಡ್ರಾಯಿಂಗ್, ಕಲರಿಂಗ್, ಚುಕ್ಕೆಜೋಡಿಸಿ ಚಿತ್ರ ಬಿಡಿಸುವುದು, ಪ್ರೌಡಮಕ್ಕಳಿಗೆ ಮಂಡಾಳ ಕಲೆಯಲ್ಲಿ ಬಣ್ಣ ತುಂಬುವುದನ್ನು ವಿಶೇಷವಾಗಿ ಪ್ರೋತ್ಸಾಹಿಸಲಾಗಿತ್ತು. ಹತ್ತೂವರೆಗೆ ಶುರುವಾಗುವ ಕ್ಲಾಸಿಗೆ ಹನ್ನೊಂದು ಮುಕ್ಕಳಿಗೆ ಒಂದು ಶಾರ್ಟ್ ಬ್ರೇಕ್. ಆ ಸಮಯದಲ್ಲಿ ತಂಪು ಪಾನೀಯ, ಶರಬತ್, ಐಸ್ ಕ್ರೀಮ್ ಸವಿಯುವ ಸಮಯ.ನಂತರ ಮತ್ತೆ ಕ್ಲಾಸ್ ಮುಂದುವರೆಯುತ್ತಿತ್ತು. ಈ ಅವಧಿಯಲ್ಲಿ ಕೇರಂ,ಚೆಸ್, ಚೌಕಾಬಾರ, ಪೆಬ್ಬಲ್ ಪ್ಲೇ ದೊಡ್ಡವರನ್ನು ಸೆಳೆದರೆ ಚಿಣ್ಣರಿಗೆ ಬೌಲಿಂಗ್, ಪಿರಮಿಡ್ ಬಿಲ್ಡಿಂಗ್, ಸಾರ್ಟಿಂಗ್ ದಿ ಸ್ಟಾಕಿಂಗ್, ಮ್ಯೂಸಿಕಲ್ ಚೇರ್, ಪಾಸಿಂಗ್ ದಿ ಬಾಲ್ ಇತ್ಯಾದಿ ಸೆಳೆದಿತ್ತು. ವಯೋಮಾನಕ್ಕನುಗುಣವಾಗಿ ಮಕ್ಕಳನ್ನು ನಾಲ್ಕೈದು ಭಾಗಗಳಲ್ಲಿ ವಿಂಗಡಿಸಿ ಪ್ರತ್ಯೇಕವಾಗಿ ಕಾಳಜಿ ವಹಿಸುತ್ತಿದ್ದರು. ಸಮಾರೋಪ ಸಮಾರಂಭಕ್ಕೆ ಮಕ್ಕಳಿಂದಲೇ ಯೋಗಕಲೆ, ಹಾಡು ನೃತ್ಯ ಅಭ್ಯಾಸ ಮಾಡಿಸುತ್ತಿದ್ದರು. ದಿನದ ಕ್ಲಾಸ್ ಮುಗಿಯುತ್ತಿದಂತೆ ಸಾಂಪ್ರದಾಯಿಕವಾಗಿ ವಂದಿಸಿ ಎಲ್ಲರಿಗು ಆ ದಿನದ ಲಘು ಉಪಹಾರವನ್ನು ಕೊಟ್ಟು ಕಳುಹಿಸುತ್ತಿದ್ದರು.

ಸಮರೋಪಾಸಮಾರಂಭದ ದಿನ ನಮ್ಮ ಹಿರಿಯ ನಿವಾಸಿಗರನ್ನೇ ಮುಖ್ಯ ಅಥಿತಿಗಗಳಾಗಿ ಕರೆಸಿ, ಮಕ್ಕಳು ಮಾಡಿದ ಚಿತ್ರಕಲೆ ಪ್ರದರ್ಶನಕ್ಕೆ ಇಡಲಾಗಿತ್ತು. ಸಾಂಪ್ರದಾಯಿಕ ದೇವತಾ ಪ್ರಾಥನೆ, ಮ್ಯೂಸಿಕ್ ವಿಥ್ ಯೋಗ , ಸಿಂಗ್ ವಿಥ್ action , ವೆಸ್ಟೆರ್ನ್ ಡಾನ್ಸ್ , ಫ್ಯೂಶನ್ ಡಾನ್ಸ್ , ಪುಟ್ಟ ಮಕ್ಕಳಿಗೆ ಅವರ ಇಷ್ಟದ ಉಡುಗೆ ತೊಟ್ಟು ಒಂದು ರಾಂಪ್ ವಾಕ್ ಮಾಡಿಸಲಾಗಿತ್ತು. ಎಲ್ಲ ಮಕ್ಕಳಿಗೆ ಪ್ರಮಾಣಪತ್ರ, ಉಡುಗೊರೆಗಳನ್ನು ಕೊಟ್ಟು ಬೀಳ್ಕೊಟ್ಟರು. ಜೊತೆಗೆ ಮಕ್ಕಳೊಂದಿಗೆ ತಮ್ಮ ಬಾಲ್ಯವನ್ನು ಮರುಕಳಿಸಿಕೊಂಡ ಟೀಚರ್ಸ್ ಗಳನ್ನೂ ಗೌರವಿಸಲಾಯಿತು. ಈ ಎಲ್ಲ ಕೆಲ ಸಗಳಿಗೆ ಎಲೆಮರೆಕಾಯಿಯಂತೆ ದುಡಿದಿದ್ದ ಬ್ಯಾಕ್ ಆಫೀಸ್ ಸಿಬ್ಬಂದಿಗೂ ಕಿರುಕಾಣಿಕೆಗಳ ಮೂಲಕ ಧನ್ಯವಾದಗಳನ್ನು ಅರ್ಪಿಸಲಾಯಿತು.





