ಪ್ರಜ್ವಾ ಒಂದು ಶೈಕ್ಷಣಿಕ ಕಾರ್ಯಕ್ರಮ ನಡೆಸುತ್ತಿದ್ದಾಗ..... ವಿರೋಧಿಗಳ ದಂಡು ನನ್ನ ಮೇಲೆರಗಿ ಸಾಮೂಹಿಕ ಅತ್ಯಾಚಾರ ನಡೆಸಿತು. ಬಾಲ್ಯದಿಂದಲೇ ಸಮಾಜ ಸೇವೆಯ ಕೆಲಸದಲ್ಲಿ ತೊಡಗಿಕೊಂಡಿರುವ ಸುನೀತಾ ಕೃಷ್ಣನ್‌ ಅತ್ಯಾಚಾರಕ್ಕೆ ಒಳಗಾದರು. ಸೆಕ್ಸ್ ಟ್ರಾಫಿಕಿಂಗ್‌ ಗೆ ಸಿಕ್ಕಿದ ಸಂತ್ರಸ್ತೆಯರು, ಬಾಲಕಿಯರು, ದಲ್ಲಾಳಿಗಳ ಕಪಿಮುಷ್ಟಿಗೆ ಸಿಲುಕಿದ ಹೆಣ್ಣುಮಕ್ಕಳನ್ನು ರಕ್ಷಿಸುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಇವರ ಮೇಲೆ 17 ಸಲ ಜೀವ ತೆಗೆಯುವ ಹಲ್ಲೆ ನಡೆದಿದೆ, ಆದರೆ ಅಂಥ ದುರ್ಘಟನೆಗಳು ಇವರ ದೃಢ ವಿಶ್ವಾಸವನ್ನು ಕದಲಿಸಲು ಸಾಧ್ಯವಾಗಲಿಲ್ಲ. ಇವರ ಮೇಲೆ 15ರ ಹರೆಯದಲ್ಲೇ ಸಾಮೂಹಿಕ ಅತ್ಯಾಚಾರ ನಡೆಯಿತು. ದುಷ್ಕರ್ಮಿಗಳು ಲಾಠಿ, ದೊಣ್ಣೆಗಳಿಂದ ಸಾಯ ಹೊಡೆದಿದ್ದರು. ಹಲವು ಸಲ ಆ್ಯಸಿಡ್‌ ದಾಳಿಯ ಯತ್ನ ನಡೆಸಿದ್ದರು. ವಿಷ ಉಣಿಸಿ ಕೊಲ್ಲುವ ಪ್ರಯತ್ನ ನಡೆದಿತ್ತು!

ಆದರೆ ಈ ಎಲ್ಲಾ ಪ್ರಯತ್ನಗಳೂ ಸುನೀತಾರನ್ನು ಭಯಭೀತರಾಗಿಸಲಿಲ್ಲ, ಬದಲಿಗೆ ಸೈನಿಕರಂತೆ ಮಾಡಿತು. ನೋವು, ಯಾತನೆ, ಅಪಮಾನ, ಜೀವನದ ಕಾಠಿಣ್ಯಗಳು ಇವರನ್ನು ಮತ್ತಷ್ಟು ಕಠೋರವಾಗಿಸಿ ಸಶಕ್ತಗೊಳಿಸಿದವು.

ಕಳೆದ 30 ವರ್ಷಗಳಿಂದ ಸುನೀತಾ ಸತತ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. 15ರ ಸಣ್ಣ ಪ್ರಾಯದಲ್ಲೇ ದಲಿತ ಸಮುದಾಯವನ್ನು ಸಾಕ್ಷರರನ್ನಾಗಿಸುವ ಒಂದು ಉತ್ತಮ ಪ್ರಯತ್ನದಲ್ಲಿದ್ದಾಗ, ಇವರ ಮೇಲೆ 8 ಮಂದಿ ಬಲಿಷ್ಠ ಗೂಂಡಾಗಳು ಸಾಮೂಹಿಕ ಅತ್ಯಾಚಾರ ನಡೆಸಿದರು. ಆಕೆಗೆ ಬಿದ್ದ ದೊಣ್ಣೆ ಪೆಟ್ಟಿನಿಂದಾಗಿ ಬದುಕಿ ಉಳಿದದ್ದೇ ಹೆಚ್ಚು. ಈ ದುರ್ಘಟನೆ ಆಕೆಯನ್ನು ಮತ್ತು ಅವರ ಮನೆಯವರನ್ನು ಬಹಳ ಹೆದರಿಸಿಬಿಟ್ಟಿತ್ತು. ಭಯ ಮೆಟ್ಟಿದಾಗ ಮಾತ್ರ ಯಶಸ್ಸು ಎಂಬುದನ್ನು ತೋರಿಸಿಕೊಟ್ಟರು.

2016ರಲ್ಲಿ ಇವರಿಗೆ ದೇಶದ ಸರ್ವೋಚ್ಚ ಪದ್ಮಶ್ರೀ ಪ್ರಶಸ್ತಿ ಮತ್ತು ಮದರ್‌ ಥೆರೇಸಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರ ಸಾಹಸಗಾಥೆಯನ್ನು ಸಂಕ್ಷಿಪ್ತವಾಗಿ ತಿಳಿಯೋಣವೇ? :

ನೀವು ಬಾಲ್ಯದಿಂದೀ ಸಮಾಜ ಸೇವೆಗೆ ತೊಡಗಿದ್ದಿರಿ, ಅದರ ನಡುವೆ ಅನೇಕ ಅಪಾಯ, ಕರ್ಮಕಾಂಡಗಳನ್ನು ಅನುಭವಿಸಿದಿರಿ. ಆಗ ನಿಮ್ಮ ಮನೆಯವರು, ಬಂಧುಬಾಂಧವರು ನಿಮ್ಮನ್ನು ತಡೆಯಲಿಲ್ಲವೇ?

ನಾನು ಅತಿ ಸಣ್ಣ ವಯಸ್ಸಿನಿಂದಲೇ ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. 15ರ ಹರೆಯದಲ್ಲೇ ಹಳ್ಳಿಯ ದಲಿತರು, ಶೋಷಿತರು, ಶೈಕ್ಷಣಿಕ ಏಳಿಗೆಗಾಗಿ ದುಡಿಯುತ್ತಿದ್ದೆ. ಇದನ್ನು ವಿರೋಧಿಸಿದ ದುಷ್ಟರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. ಈ ದುರ್ಘಟನೆಯಿಂದ ನನ್ನ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾದವು. ಇದರಿಂದ ನನ್ನ ಮನದಲ್ಲಿ ಒಂದು ಬಗೆಯ ವಿರಕ್ತಿ ಮೂಡಿತು. ನಮ್ಮ ಮನೆಯವರು ಮೌನದ ಚಿಪ್ಪಿನಲ್ಲಿ ಅಡಗಿಹೋದರು. ಎಲ್ಲರೂ ನನ್ನನ್ನು ತೆಪ್ಪಗಿರುವಂತೆ ತಾಕೀತು ಮಾಡಿದರು. ಅದೊಂದು ನುಂಗಲಾರದ ತುತ್ತಾಗಿತ್ತು. ಇಡೀ ಸಮಾಜ ನನ್ನತ್ತ ವ್ಯಂಗ್ಯವಾಗಿ ಕುಹಕದ ಅಟ್ಟಹಾಸಗೈಯುತ್ತಿದೆ ಎಂದೆನಿಸಿತು. ಆದರೆ ಇದೀಗ 25-30 ವರ್ಷ ಕಳೆದ ನಂತರ, ನಾನು ಹಿಂದಿರುಗಿ ನನ್ನ 15ರ ಹರೆಯದ ದಿನಗಳನ್ನು ನೆನೆಸಿಕೊಂಡಾಗ ನಮ್ಮ ಮನೆಯವರ ಮೌನವೇ ನನಗೆ ಮುಂದೆ ನಡೆಯಲು ಮಾರ್ಗದರ್ಶನ ನೀಡಿತು ಎನ್ನಬಹುದು. ಅವರೇನಾದರೂ ಹೆಚ್ಚಿಗೆ ಮಾತನಾಡಿ, ನಾನು ಮುಂದುವರಿಯದಂತೆ ತಡೆದಿದ್ದರೆ, ಇಂದು ನಾನು ಇಷ್ಟು ಸಾಧನೆ ಮಾಡಲು ಆಗುತ್ತಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ