ನಾನು ದೈಹಿಕವಾಗಿ ಏನು ಮಾಡಿ ತೋರಿಸಬಲ್ಲವು ಎಂಬುದಕ್ಕಾಗಿ ನಾನು ಸ್ಪೋರ್ಟ್ಸ್ ಮಾಧ್ಯಮ ಆರಿಸಿಕೊಂಡೆ. “ಮಾನವ ಮನಸ್ಸು ಮಾಡಿದರೆ ಏನನ್ನು ತಾನೇ ಸಾಧಿಸಲಾಗದು? ಕಂಡ ಕನಸನ್ನು ಜಾಗೃತಾವಸ್ಥೆಯಲ್ಲಿ ನನಸಾಗಿ ಸಾಧಿಸಿ ತೋರಿಸುವವರೇ ಧೀರೋದಾತ್ತರು!” ಎನ್ನುತ್ತಾರೆ 50ರ ಹರೆಯದ ಮಹಿಳಾ ಕ್ರೀಡಾಪಟು ದೀಪಾ ಮಲಿಕ್.
ವಿಕಲಚೇತನರಾಗಿಯೂ ಲಕ್ಷಾಂತರ ಹೆಣ್ಣುಮಕ್ಕಳಿಗೆ ಇವರು ಮಾರ್ಗದರ್ಶಿ ಆಗಿದ್ದಾರೆ. ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ವಿಜೇತೆ ದೀಪಾ, ಪ್ಯಾರಾ ಒಲಿಂಪಿಕ್ (ರಿಯೋ, 2016) ನಲ್ಲಿ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ಮಹಿಳಾ ಪ್ಯಾರಾ ಅಥ್ಲೀಟ್ ಎನಿಸಿದರು.
1990ರಲ್ಲಿ ಟ್ಯೂಮರ್ ಕಾರಣ 29ರ ಹರೆಯದಲ್ಲೇ 2 ಸಲ ಪಾರ್ಶ್ವವಾಯು (ಲಕ್ವಾ)ವಿಗೆ ತುತ್ತಾಗಿದ್ದರೂ ಸಹ, ವಿಕಲಚೇತನರು ದೈಹಿಕವಾಗಿ ಅಲ್ಲ ಮಾನಸಿಕವಾಗಿ ಎಂಥ ದೃಢಚಿತ್ತರು ಎಂಬುದನ್ನು ನಿರೂಪಿಸಿದ್ದಾರೆ. ಮನಸ್ಸಿನ ಮೇಲೆ ದೃಢ ವಿಜಯ ಸಾಧಿಸಿದರೆ, ದೈಹಿಕ ಕೊರತೆ ಅವರ ದಾರಿಗೆ ಅಡ್ಡವಾಗದು ಎಂಬುದನ್ನು ಇವರನ್ನು ನೋಡಿ ಆಡಿಕೊಳ್ಳುತ್ತಿದ್ದ ಸಮಾಜಕ್ಕೆ ಸಾಧಿಸಿ ತೋರಿಸಿದ್ದಾರೆ.
ನಿಮ್ಮ ದೈಹಿಕ ಸಮಸ್ಯೆಗಳನ್ನು ಕಡೆಗಣಿಸಿ, ನೀವು ಕ್ರೀಡಾ ಕ್ಷೇತ್ರದಲ್ಲಿ ಹೊಸ ಕೀರ್ತಿ ಗಳಿಸಿದ್ದೀರಿ. ಈ ಸಾಹಸಗಾಥೆಯ ಹಿಂದಿನ ಪ್ರೇರಣೆ ಏನು?
ನನ್ನ ಮೊದಲ ಪ್ರೇರಣೆ ಎಂದರೆ ಅಮ್ಮ ಅಪ್ಪನ ಸಾಕುವಿಕೆ. ಅವರು ನನ್ನ ಮನದಲ್ಲಿ ಸಕಾರಾತ್ಮಕ ಚಿಂತನೆಯ ಬೀಜ ನೆಟ್ಟವರು. ನಾನು 5 ವರ್ಷದವಳಿದ್ದಾಗ ನನ್ನ ಸ್ಪೈನಲ್ ಕಾರ್ಡ್ ನಲ್ಲಿ ಟ್ಯೂಮರ್ ಬೆಳೆದ ಕಾರಣ, 3 ವರ್ಷ ಕಾಲ ನಾನು ಪ್ಯಾರಲೈಸ್ ಆಗಿದ್ದೆ. ಆಗ ನನ್ನ ಅಮ್ಮ ಅಪ್ಪ ನನ್ನಲ್ಲಿ ಅಪಾರ ಧೈರ್ಯ ತುಂಬಿದರು. ಬಾಲ್ಯದ ಆ ಟ್ರೇನಿಂಗ್ ಇದುವರೆಗೂ ನನ್ನನ್ನು ಕಾಪಾಡುತ್ತಿದೆ.
ಮದುವೆಯಾದ ಮೇಲೆ ನನ್ನ ಪತಿ ಸಹ ಹೊಸ ಜೀವನಕ್ಕೆ ನನಗೆ ತುಂಬಾ ಪ್ರೋತ್ಸಾಹ ನೀಡಿ, ಪ್ರೇರಣೆಯಾಗಿ ನಿಂತರು. ನಂತರ ನನ್ನ ಇಬ್ಬರು ಹೆಣ್ಣುಮಕ್ಕಳು. ಅವರ ಮುಂದೆ ನಾನೆಂದೂ ಒಬ್ಬ ಅಂಗವಿಕಲೆಯಾಗಿ ಅಸಹಾಯಕ ತಾಯಿ ಎನಿಸಬಾರದೆಂಬ ಪ್ರೇರಣೆ ಮೂಡಿಸಿದರು. ನನ್ನ ಕಾರಣ ಅವರಲ್ಲಿ ಹೀನಭಾವನೆ ಉಂಟಾಗದಂತೆ ಎಚ್ಚರ ವಹಿಸಿದ್ದೇನೆ. ಮಕ್ಕಳ ಜೀವನ ಸುಖಕರವಾಗಲು ನಾನು ಬಹಳ ಸಂಭಾಳಿಸಿಕೊಂಡಿದ್ದೇನೆ.
ನಿಮ್ಮ ಜೀವನದ ಯಾವ ಕ್ಷಣಗಳು ನಿಮ್ಮ ಪಾಲಿಗೆ ಅತ್ಯಮೂಲ್ಯ ಎನಿಸಿದವು???????
ಅದು ನನ್ನ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ ಘಳಿಗೆ. ಇಂದು ನನ್ನ ಹಿರಿಯ ಮಗಳು ಅಂಗವಿಕಲರ ಅಭ್ಯುದಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಇದೇ ವಿಷಯವಾಗಿ ಅವಳು ಪಿಂ.ಳಿ????? ಮಾಡಿಕೊಂಡಿದ್ದಾಳೆ. `ವೀಲಿಂಗ್ ಹ್ಯಾಪಿನೆಸ್’ ಎಂಬ ಸಂಸ್ಥೆ ನಡೆಸುತ್ತಾ, ಅಂಗವಿಕಲರ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದಾಳೆ. ಅವಳು ಮುಖ್ಯವಾಗಿ ಹಳ್ಳಿಗಾಡಿನ ಕ್ಷೇತ್ರಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಹೋರಾಡುತ್ತಿದ್ದಾಳೆ. ಮೆಡಿಕಲ್ ಕ್ಯಾಂಪ್ ಆಯೋಜಿಸುತ್ತಾಳೆ. 500ಕ್ಕೂ ಹೆಚ್ಚಿನ ವಿಕಲಚೇತನರಿಗೆ ಅವಳು ಸ್ವಂತ ಖರ್ಚಿನಿಂದ ವೀಲ್ ಚೇರ್ ಹಂಚಿದ್ದಾಳೆ. ಅವಳಿಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ `ಯಂಗ್ ಲೀಡರ್’ ಅವಾರ್ಡ್ ಹಾಗೂ `ವುಮನ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ’ ಅವಾರ್ಡ್ ಸಿಕ್ಕಿದೆ.
ನನ್ನ ಕಿರಿಯ ಮಗಳು ಫ್ ಮಾಡಿಕೊಂಡು ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರು ಮಕ್ಕಳೂ ಕೂಡಿ ನನಗೆ ಸ್ನಾನ ಮಾಡಿಸುತ್ತಾರೆ, ಡೈಪರ್ ಬದಲಾಯಿಸುತ್ತಾರೆ, ನಾನು ಸದಾ ಸಮಾಜಮುಖಿಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಾರೆ. ಅವರುಗಳ ಪ್ರಯತ್ನದಿಂದಲೇ ನಾನು `ಕೌನ್ ಬನೇಗಾ ಕರೋಡ್ ಪತಿ’ ಶೋನಲ್ಲಿ ಅಮಿತಾಭ್ ಬಚ್ಚನ್ ರ ಜನ್ಮದಿನದಂದು ಅಲ್ಲಿಗೆ ತಲುಪಿದ್ದೆ.
ನೀವು ಜೀವನದಲ್ಲಿ ಡಬಲ್ ಚಾಲೆಂಜ್ ಎದುರಿಸಿದ್ದೀರಿ. ಇದರಿಂದ ಹೊರಬರಲು ನಿಮ್ಮ ಸಕಾರಾತ್ಮಕ ಚಿಂತನೆ ಎಷ್ಟು ನೆರವಾಯಿತು?
ಇಬ್ಬರು ಮಕ್ಕಳು ಹುಟ್ಟಿದ ನಂತರ 1999ರಲ್ಲಿ ನನಗೆ ಸ್ಟ್ರೋಕ್ ಹೊಡೆದಾಗ, ನನ್ನ ಪತಿ ಸೇನೆಯಲ್ಲಿದ್ದರು ಸ್ವಯಂ ನಿವೃತ್ತಿ ತೆಗೆದುಕೊಂಡು ಬಂದುಬಿಟ್ಟರು. ಆಗ ಜನ ನನ್ನನ್ನು ಇವಳು ಗಂಡನಿಗೆ ಆರ್ಥಿಕ ಹೊರೆ ಎಂದು ಹಂಗಿಸಿದರು. ರಿಟೈರ್ ಆದ ನನ್ನ ಕರ್ನಲ್ ಪತಿ ಹೇಗೆ ಸಂಭಾಳಿಸಿಯಾರು ಎಂದೆಲ್ಲ ಸಹಾನುಭೂತಿ ತೋರಿಸಿದರು. ಆಗ ನನಗೆ ಬಹಳ ಕೆಡುಕೆನಿಸಿತು. ಆಗ ನನಗೆ ಯಾವ ಗಂಡಸೇ ಇರಲಿ…. ಗಂಡ, ತಂದೆ, ಅಣ್ಣ, ತಮ್ಮ….. ಯಾರಿಂದಲೂ ಆರ್ಥಿಕ ನೆರವು ಪಡೆಯಲೇಬಾರದು ಎನಿಸಿತು.
ಅದಾದ ಮೇಲೆ ಹಣ ಸಂಪಾದನೆಗಾಗಿ ಸಣ್ಣ ರೆಸ್ಟೋರೆಂಟ್ ತೆರೆದೆ. ಕಾರ್ ರೇಸಿಂಗ್, ಮೋಟರ್ ಸೈಕಲ್ ಇವೆಂಟ್ಸ್ ನಿಂದ ಹಣ ಗಳಿಸಿದೆ. ಕ್ಯಾಶ್ ಅವಾರ್ಡ್ ಮತ್ತು ಮೋಟಿವೇಶನ್ ಸ್ಪೀಕರ್ ರೂಪದಲ್ಲಿ ನನಗೆ ಸಿಕ್ಕಿದ ಮೊತ್ತವನ್ನು ಬಳಸಿಕೊಂಡೆನೇ ಹೊರತು ಯಾರ ಬಳಿಯೂ ಹಣಕ್ಕಾಗಿ ಕೈಯೊಡ್ಡಲಿಲ್ಲ.
ನೀವು ಈ ಕ್ಷೇತ್ರವನ್ನೇ ನಿಮ್ಮ ಕೆರಿಯರ್ ಆಗಿಸಿಕೊಂಡದ್ದು ಏಕೆ?
ಒಂದು ಕಾಲದಲ್ಲಿ ದೈಹಿಕ ನ್ಯೂನತೆಯ ಕಾರಣ ಜನ ನನ್ನ ಬಗ್ಗೆ ಆಡಿಕೊಂಡಿದ್ದರು. ಕೈಲಾಗದವಳು, ಸ್ಟ್ರೋಕ್ ನಿಂದ ಅರೆ ಹೆಣವಾದಳು ಎಂದೆಲ್ಲ ಹೇಳಿದ್ದಾರೆ. ನನ್ನ ದೇಹವೇ ನಾಲಾಯಕ್ ಎಂದು ಟೀಕಿಸುತ್ತಾ, ನಾನು ಏನೇ ಮಾಡಿದರೂ ಅದರ ಕ್ರೆಡಿಟ್ ಗಂಡನಿಗೆ ಹೋಗುತ್ತಿತ್ತು. ಪಾಪ, ಇಂಥ ಹೆಂಡತಿಯಿಂದ ಅವನೇನು ಸುಖ ಪಡಬಲ್ಲ ಎಂದೆಲ್ಲ ಹೀಯಾಳಿಸಿದ್ದಾರೆ. ಜನರ ಈ ಆಕ್ಷೇಪಣೆ ಖಂಡಿಸುವುದೇ ನನ್ನ ಉದ್ದೇಶವಾಗಿತ್ತು. ನಾನು ನನ್ನ ಈ ದುರ್ಬಲ ದೇಹದಿಂದ ಏನನ್ನು ಸಾಧಿಸಿ ತೋರಿಸಬಲ್ಲೆ ಎಂಬುದು ದೊಡ್ಡ ಸವಾಲಾಗಿತ್ತು. ಆಗ ನಾನೆಂಥ ಗಟ್ಟಿಗಳು ಎಂದು ತೋರಿಸಲು ಕ್ರೀಡಾ ಕ್ಷೇತ್ರ ಆರಿಸಿಕೊಂಡೆ.
– ಜಿ. ಪಂಕಜಾ