ಟೈಟನ್‌ ಸ್ವಂತ ಪರಿಶ್ರಮದಿಂದ ಬ್ರಾಂಡ್‌ ನ್ನು ಮುನ್ನಡೆಸಿದರು ಬಿಸ್‌ ನೆಸ್‌ ಲೀಡರ್‌ ಶಿಪ್‌ ಐಕಾನ್‌ ಅವಾರ್ಡ್‌ ಟೈಟನ್‌ ಕಂಪನಿ ಲಿ.ನ ಚೀಫ್‌ ಎಗ್ಸಿಕ್ಯೂಟಿವ್ ‌ಆಫೀಸರ್‌ (ವಾಚಸ್‌ವೇರೆಬಲ್ ಡಿವಿಶನ್‌) ಸುಪರ್ಣಾ ಮಿತ್ರಾರ ಪರಿಚಯವನ್ನು ಹೊಸದಾಗಿ ಮಾಡಿಕೊಡಬೇಕಿಲ್ಲ. ತಮ್ಮ ಸ್ವಸಾಮರ್ಥ್ಯ, ದೂರದರ್ಶಿ ಸ್ವಭಾವದಿಂದ ಈಕೆ ಈ ಕಂಪನಿಯನ್ನು ಅತಿ ಎತ್ತರಕ್ಕೆ ಏರಿಸಿದ್ದಾರೆ. ಇವರ ಮುಖದಲ್ಲಿ ಆತ್ಮವಿಶ್ವಾಸ ಮತ್ತು ಸದೃಢತೆ ಸಹಜವಾಗಿಯೇ ಸಿದ್ಧಿಸಿಬಿಟ್ಟಿದೆ. ಅದು ಇವರ ಕೆಲಸಗಳಲ್ಲಿ ಹೊರಹೊಮ್ಮುತ್ತಿರುತ್ತದೆ.

ಸುಪರ್ಣಾ ಜಾಧವಪುರ್‌ ವಿ.ವಿ.ದಿಂದ ಎಲೆಕ್ಟ್ರಿಕ್‌ ಎಂಜಿನಿಯರ್‌ ಆದರು. ಕೋಲ್ಕಾತಾದಿಂದ ಫಲ್ ಮಾಡಿಕೊಂಡಿದ್ದಾರೆ. ಇವರ ಬಳಿ ವಾಣಿಜ್ಯೋದ್ಯಮದ ಅಪಾರ ಅನುಭವಿದೆ. ಈಕೆ ಮ್ಯಾನೇಜ್‌ ಮೆಂಟ್‌ ಟ್ರೇನಿ ರೂಪದಲ್ಲಿ ತಮ್ಮ ಕೆರಿಯರ್‌ ಆರಂಭಿಸಿದರು. ನಂತರ ಟೈಟನ್‌ ಸೇರಿದರು. ಅಲ್ಲಿ ಅವರು ಹೋಂ ಇಂಟರ್‌ ನ್ಯಾಷನಲ್ ಮಾರ್ಕೆಟಿಂಗ್‌ ಡಿವಿಶನ್‌ ಎರಡನ್ನೂ ಸಂಭಾಳಿಸಿದರು. ಮುಂದೆ ಇವರು ತಾಲಿಸ್ಮಾ ಕಾರ್ಪ್‌ ಗೆ ಪ್ರಾಡೆಕ್ಟ್ ಮಾರ್ಕೆಟಿಂಗ್‌ ನ ನಿರ್ದೇಶಕಿಯಾಗಿ ಜಾಯಿನ್‌ ಆದರು. ನಂತರ 2006ರಲ್ಲಿ ಈಕೆ ಮತ್ತೆ ಟೈಟನ್‌ ಗೇ ಮರಳಿದರು, ಅಲ್ಲಿನ ಗ್ಲೋಬಲ್ ಮಾರ್ಕೆಟಿಂಗ್‌ ಹೆಡ್‌ ಆಗಿ ಜವಾಬ್ದಾರಿ ವಹಿಸಿಕೊಂಡರು. ಇಲ್ಲಿ ಈಕೆ ಭಾರತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಎಲ್ಲಾ ಕೆಲಸಗಳನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ನೇತೃತ್ವ ಹಾಗೂ ಸಾಧನೆ

ಇವರ ಮಾರ್ಗದರ್ಶನದಲ್ಲಿ ಟೈಟನ್‌ ಹಲವು ಇನೋವೇಶನ್ಸ್ ಮಾಡಿದೆ. ಕಾರ್ಬನ್‌ ಫೈಬರ್‌, ಸೆರಾಮಿಕ್‌ ನಂಥ ಉನ್ನತ ಸಾಮಗ್ರಿಗಳ ಬಳಕೆ ಇಲ್ಲಿ ಪ್ರಮುಖ. 2024ರಲ್ಲಿ ಟೈಟನ್‌ ತನ್ನ 40ನೇ ವಾರ್ಷಿಕೋತ್ಸವದಲ್ಲಿ ಸೀಮಿತ ಸಂಸ್ಕರಣದ ಸಂಗ್ರಹ ಪ್ರಸ್ತುತಪಡಿಸಿತು. ಇದರಲ್ಲಿ ಫ್ಲೈಯಿಂಗ್‌ ಟೂರ್‌ ಬಿಲಾನ್‌ ವಾಚ್‌ ಅತಿ ಪ್ರಮುಖ. ಇದು ಭಾರತದಲ್ಲಿ ತಯಾರಾದ ಮೊಟ್ಟಮೊದಲ ಟೂರ್‌ ಬಿಲಾನ್‌ ವಾಚ್‌ ಎನಿಸಿತು.

ಸುಪರ್ಣಾರ ನೈತೃತ್ವದಲ್ಲಿ ಟೈಟನ್

ಬಹಳಷ್ಟು ಫೈನಾನ್ಶಿಯಲ್ ಗ್ರೋಥ್‌ ಕಂಡಿತು. ಈಕೆಯ ನಿರ್ದೇಶಾನುಸಾರ ಟೈಟನ್‌ ವಾಚಸ್‌ವೇರೆಬಲ್ ಉಪಕರಣಗಳ ವಿಭಾಗ  22ರ ಏಪ್ರಿಲ್ ‌ಜೂನ್‌ ತ್ರೈಮಾಸದಲ್ಲಿ 280%ನಷ್ಟು ವರ್ಷಾವರ್ಷ ಅಭಿವೃದ್ಧಿ ಪ್ರದರ್ಶಿಸಿತು. ಇದರ ಒಟ್ಟು ಹೂಡಿಕೆ 2 ಪಟ್ಟಾಗಿ ಮುಂದೆ 292 ಕೋಟಿಗಳಷ್ಟಾಯಿತು.

ಈಕೆ ತನ್ನ ಪ್ರಯಾಸಗಳಿಂದ ಬ್ರಾಂಡ್‌ ನ ವಿಕಾಸಕ್ಕಾಗಿ ಅಹರ್ನಿಶಿ ದುಡಿದಿದ್ದಾರೆ. ಟೈಟನ್‌ ಕಂಪನಿಗೆ ಒಂದು ಜಾಗತಿಕ ಐಡೆಂಟಿಟಿ ತಂದುಕೊಡುವಲ್ಲಿ ಇವರ ಪಾತ್ರ ಹಿರಿದು. 2022ರಲ್ಲಿ ಬಿಸ್‌ ನೆಸ್‌ ಸ್ಟಾಂಡರ್ಡ್‌ ವಾರ್ಷಿಕ ಪುರಸ್ಕಾರಗಳಿಂದ `ಕಂಪನಿ ಆಫ್‌ ದಿ ಇಯರ್‌'ನ ರೂಪದಲ್ಲಿ ಟೈಟನ್‌ ಗೆ ಮಾನ್ಯತೆ ತಂದುಕೊಟ್ಟರು.

ಪ್ರಸ್ತುತ ಈಕೆ ಸ್ವಿಗ್ಗಿಯ ನಿರ್ದೇಶಕರೂ ಹೌದು. ಅಲ್ಲಿ ಈಕೆ ತನ್ನ ಮಾರ್ಕೆಟಿಂಗ್‌ಬ್ರಾಂಡ್‌ ಮ್ಯಾನೇಜ್‌ ಮೆಂಟ್‌ ನ ಅನುಭವ ಬಳಸಿಕೊಳ್ಳುತ್ತಾ, ಕಂಪನಿಯ ಪ್ರಗತಿಪಥದ ರಣನೀತಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ನೇತೃತ್ವ ಶೈಲಿ

ಸುವರ್ಣಾ ಒಬ್ಬ ಸದೃಢ, ಗುರಿಯತ್ತ ಕೇಂದ್ರಿತ, ಇನೋವೇಶನ್ಸ್ ಗೆ ಹೆಚ್ಚು ಒತ್ತು ನೀಡುವಂಥ ಧುರೀಣೆಯಾಗಿ ಗುರುತಿಸಲ್ಪಡುತ್ತಾರೆ. ಈಕೆ ತಮ್ಮ ರಣನೀತಿಗಳಲ್ಲಿ ಸದಾ ಗ್ರಾಹಕರ ಬದಲಾಗುವ ಪ್ರಾಥಮಿಕತೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ, ಆಧುನಿಕ ಟೆಕ್ನಿಕ್ಸ್ ಬಳಸಿಕೊಳ್ಳುತ್ತಾ ಟೈಟನ್‌ ಗೆ ಒಂದು ಹೊಸ ದಿಕ್ಕಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ