ಹೊಂಡಾ ಮೋಟಾರ್ ಕಂಪನಿ ಲಿಮಿಟೆಡ್  ಜಪಾನ್ ಮೊಬಿಲಿಟಿ ಶೋ 2025ರಲ್ಲಿ ಮುಂದಿನ ತಲೆಮಾರಿನ ಇವಿ ಹೊಂಡಾ 0 α (ಆಲ್ಫಾ) ಪ್ರೊಟೊಟೈಪ್ ಅನ್ನು ವಿಶ್ವಕ್ಕೆ ಮೊದಲ ಬಾರಿಗೆ ಪರಿಚಯಿಸಿದೆ. ಈ ಮಾದರಿಯು ನವೆಂಬರ್ 9ರವರೆಗೆ ಹೊಂಡಾ ಬೂತ್ ನಲ್ಲಿ ಪ್ರದರ್ಶನದಲ್ಲಿರುತ್ತದೆ.

PrototypeofHonda0α : ಹೊಂಡಾ 0 α ಅನ್ನು ನಗರ ಮತ್ತು ನೈಸರ್ಗಿಕ ಪರಿಸರಗಳನ್ನು ಸುಂದರವಾಗಿ ಸಂಯೋಜಿಸುವ ಎಸ್.ಯು.ವಿ. ಆಗಿ ಅಭಿವೃದ್ಧಿಪಡಿಸಿದ್ದು ಪ್ರತಿ ಸನ್ನಿವೇಶಕ್ಕೂ ಜನರ ಜೀವನಗಳಿಗೆ ಬೆಂಬಲಿಸುತ್ತದೆ. ಈ ವರ್ಷದ ಜನವರಿಯಲ್ಲಿ ಸಿ.ಇ.ಎಸ್. ಹೊಂಡಾ 0 ಸಲೂನ್ ಮತ್ತು ಹೊಂಡಾ 0 ಎಸ್.ಯು.ವಿ. ಬಿಡುಗಡೆ ಮಾಡಿದ ನಂತರ ಹೊಂಡಾ 0 α ಈ ಶ್ರೇಣಿಗೆ ಹೊಡಾ 0 ಸರಣಿಯ”ಗೇಟ್ ವೇ ಮಾದರಿ”ಯಾಗಿ ಸೇರಿಸಲಾಗಿದ್ದು ಇದು ಪರಿಷ್ಕರಿಸಿದ ವಿನ್ಯಾಸ, ವಿಶಾಲ ಕ್ಯಾಬಿನ್ ಹೊಂದಿದ್ದು ಕಂಫರ್ಟಬಲ್ ಫೀಲ್​ ನೀಡುತ್ತದೆ.

ಹೊಂಡಾ 0 ಸೀರೀಸ್ ಅಭಿವೃದ್ಧಿಯ ವಿಧಾನದ `ತೆಳು, ಹಗುರ ಮತ್ತು ಜಾಣತನ’ದ ತಂತ್ರಜ್ಞಾನಗಳೊಂದಿಗೆ ಸನ್ನದ್ಧವಾಗಿರುವ ಹೊಂಡಾ 0 α ನಿರ್ಮಾಣದ ಮಾದರಿಯು ಜಾಗತಿಕವಾಗಿ ಮುಖ್ಯವಾಗಿ ಜಪಾನ್ ಮತ್ತು ಭಾರತದಲ್ಲಿ 2027ರಿಂದ ಮಾರಾಟವಾಗಲಿದೆ.

ಪ್ಯಾಕೇಜಿಂಗ್,  ವಿನ್ಯಾಸ: “ತೆಳು” ವಿಧಾನ ಆಧರಿಸಿ ಪ್ಯಾಕೇಜಿಂಗ್ ವಿನ್ಯಾಸ ರೂಪಿಸಿದ್ದು, ವಾಹನ ಕಡಿಮೆ ಎತ್ತರವಿದ್ದು, ಇದನ್ನು ಗ್ರೌಂಡ್ ಕ್ಲಿಯರೆನ್ಸ್ ನಲ್ಲಿ ರಾಜಿಯಾಗದೆ ರೂಪಿಸಲಾಗಿದೆ. ಇದು ತೆಳು ಕ್ಯಾಬಿನ್ ನೀಡುತ್ತದೆ ಆದರೂ ಒಳಗಿರುವವರಿಗೆ ವಿಶಾಲ ಮತ್ತು ಅನುಕೂಲಕರ ಸ್ಥಳ ನೀಡುತ್ತದೆ. ಅಗಲವಾದ ನಿಲುವು ಎಸ್.ಯು.ವಿ.ಗಳಿಗೆ ವಿಶಿಷ್ಟವಾದ ಸ್ಥಿರತೆ ಚಲನಶೀಲ ಗುಣಗಳನ್ನು ನೀಡುತ್ತದೆ.

ಹೊರಾಂಗಣ ವಿನ್ಯಾಸ ಹೊಂಡಾ 0 ಸೀರೀಸ್ ಗೆ ವಿಶಿಷ್ಟವಾದ ತೆಳು ಮತ್ತು ಅತ್ಯಾಧುನಿಕ ಬಾಡಿ ವಿನ್ಯಾಸ ಹಾಗೂ ಎಸ್.ಯು.ವಿ.ಯ ಮೂಲ ಪ್ರಮಾಣ ನೀಡುತ್ತದೆ. ವಾಹನದ ಮುಂಬದಿ ಹಾಗೂ ಹಿಂಬದಿಗಳಲ್ಲಿ ಸ್ಕ್ರೀನ್ ಪ್ರದೇಶಗಳಿವೆ. ಮುಂಬದಿಯಲ್ಲಿ ಬಿಡಿಭಾಗಗಳನ್ನು ಅನುಕೂಲಕರವಾಗಿ ಪ್ರತ್ಯೇಕಗೊಳಿಸಲಾಗಿದೆ. ಅವುಗಳಲ್ಲಿ ಹೆಡ್ ಲೈಟ್ಸ್, ಚಾರ್ಜಿಂಗ್ ಲಿಡ್ ಮತ್ತು ಇಲ್ಯುಮಿನೇಟೆಡ್ ಎಂಬ್ಲೆಮ್ ಎಲ್ಲವೂ ಸ್ಕ್ರೀನ್ ಪ್ರದೇಶಕ್ಕೆ ಜೋಡಿಸಲಾಗಿದೆ. ಹಿಂಬದಿಯಲ್ಲಿ ಯು-ಆಕಾರದ ಬೆಳಕು ಹಿಂಬದಿ ದೀಪಗಳನ್ನು, ಬ್ಯಾಕಪ್ ಲ್ಯಾಂಪ್ಸ್ ಮತ್ತು ಟರ್ನ್ ಸಿಗ್ನಲ್ ಲ್ಯಾಪ್ಸ್ ಸಂಯೋಜಿಸಿ, ಹಿಂಬದಿ ಸ್ಕ್ರೀನ್ ಪ್ರದೇಶದ ಅಲಂಕರಣ ಹೆಚ್ಚಿಸುವ ಮೂಲಕ ನೋಟಕ್ಕೆ ಮತ್ತು ಕಾರ್ಯ ನಿರ್ವಹಣೆಗೆ ಪರಿಷ್ಕರಿಸಿದ ವಿನ್ಯಾಸ ನೀಡಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ