ಬಹು ನಿರೀಕ್ಷಿತ ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್ ಅದ್ದೂರಿಯಾಗಿ ಆರಂಭವಾಗಲಿದೆ. ಬಾಲಿವುಡ್‌ನ ಜನಪ್ರಿಯ ಗಾಯಕಿ ಸುನಿಧಿ ಚೌಹಾಣ್  ಜನವರಿ 25ರಂದು ಗೋವಾದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅದ್ಭುತ ಸಂಗೀತ ಪ್ರದರ್ಶನದ ಮೂಲಕ ವೇದಿಕೆ ಅಲಂಕರಿಸಲಿದ್ದಾರೆ.

ರೋಚಕ ಕ್ರಿಕೆಟ್ ಹಾಗೂ ವಿಶ್ವಮಟ್ಟದ ಮನರಂಜನೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಟೂರ್ನಿಯು ಜನವರಿ 26ರಿಂದ ಫೆಬ್ರವರಿ 4, 2026ರವರೆಗೆ ವರ್ಣದ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ರೀಡೆ, ಸಂಗೀತ ಮತ್ತು ಉತ್ಸಾಹದ ಮರೆಯಲಾಗದ ಸಂಭ್ರಮಕ್ಕೆ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.

ಉದ್ಘಾಟನಾ ರಾತ್ರಿಗೆ ಸುನಿಧಿ ಚೌಹಾನ್ ಅವರ ಪ್ರದರ್ಶನವು ಹೆಚ್ಚುವರಿ ಆಕರ್ಷಣೆ ನೀಡಲಿದ್ದು, ಕ್ರಿಕೆಟ್ ಪರಂಪರೆ, ಉತ್ಸಾಹ ಮತ್ತು ಮನರಂಜನೆಯನ್ನು ಸಂಭ್ರಮಿಸುವ ಈ ಲೀಗ್‌ಗೆ ಪರಿಪೂರ್ಣ ಆರಂಭ ನೀಡಲಿದೆ.

ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್ ವಿಶ್ವದ ವಿವಿಧ ಭಾಗಗಳಿಂದ ಅನೇಕ ಶ್ರೇಷ್ಠ ಕ್ರಿಕೆಟಿಗರನ್ನು ಒಂದೇ ವೇದಿಕೆಗೆ ತರಲಿದೆ. ಶಿಖರ್ ಧವನ್, ದಿನೇಶ್ ಕಾರ್ತಿಕ್, ಕ್ರಿಸ್ ಗೇಲ್, ಡೇಲ್ ಸ್ಟೇನ್, ಅಲಿಸ್ಟರ್ ಕುಕ್, ಶೇನ್ ವಾಟ್ಸನ್, ಸ್ಟುವರ್ಟ್ ಬ್ರಾಡ್ ಸೇರಿದಂತೆ ಹಲವು ಖ್ಯಾತ ಆಟಗಾರರು ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಟ್ಟು ಆರು ತಂಡಗಳಾದ ದೆಹಲಿ ವಾರಿಯರ್ಸ್, ದುಬೈ ರಾಯಲ್ಸ್, ಗುರುಗ್ರಾಮ್ ಥಂಡರ್ಸ್, ಮಹಾರಾಷ್ಟ್ರ ಟೈಕೂನ್ಸ್, ಪುಣೆ ಪ್ಯಾಂಥರ್ಸ್ ಮತ್ತು ರಾಜಸ್ಥಾನ್ ಲಯನ್ಸ್ ತಂಡಗಳಲ್ಲಿ 90 ಆಟಗಾರರು ಸ್ಪರ್ಧಿಸಲಿದ್ದಾರೆ.

ಹತ್ತು ದಿನಗಳ ಕಾಲ ನಡೆಯುವ ಈ ಟೂರ್ನಿಯು ಟಿ20 ಕ್ರಿಕೆಟ್‌ನ್ನು ಸಂಭ್ರಮಿಸುವ ಜೊತೆಗೆ ಆಟಕ್ಕೆ ಅಮೂಲ್ಯ ಕೊಡುಗೆ ನೀಡಿದ ದಿಗ್ಗಜ ಆಟಗಾರರನ್ನು ಗೌರವಿಸುವ ಉದ್ದೇಶ ಹೊಂದಿದೆ. ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್ 2026ರ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಿರುವಂತೆ, ಅಭಿಮಾನಿಗಳು ಸ್ಫೋಟಕ ಕ್ರಿಕೆಟ್, ಮೈದಾನದಲ್ಲಿನ ಐಕಾನಿಕ್ ಪ್ರದರ್ಶನಗಳು ಹಾಗೂ ಸುನಿಧಿ ಚೌಹಾಣ್ ಅವರ ನೇತೃತ್ವದ ಅದ್ಭುತ ಉದ್ಘಾಟನಾ ಸಮಾರಂಭವನ್ನು ನಿರೀಕ್ಷಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ