ಏಪ್ರಿಲ್ ‌ರಿಂದ ಪ್ರತಿ ಸಲ ಹೊಸ ಆರ್ಥಿಕ ವರ್ಷ ಆರಂಭಗೊಳ್ಳುತ್ತದೆ. ಹೊಸ ಆರ್ಥಿಕ  ವರ್ಷದ ಆರಂಭದಲ್ಲಿ ಹೆಚ್ಚಿನ ಜನ ತಮಗಾಗಿ ಫೈನಾನ್ಶಿಯಲ್ ಪ್ಲ್ಯಾನಿಂಗ್‌ ಮಾಡಿಕೊಳ್ಳುತ್ತಾರೆ. ಅದೇ ಹೊತ್ತಿಗೆ ಟ್ಯಾಕ್ಸ್ ರಿಟರ್ನ್ಸ್ ಫೈಲ್ ‌ಮಾಡುವ ಸಂದರ್ಭ ಬಂದಿರುತ್ತದೆ. ಆರ್ಥಿಕ ತಜ್ಞರ ಅಭಿಪ್ರಾಯದಲ್ಲಿ, ಎಷ್ಟೋ ಜನಕ್ಕೆ ಟ್ಯಾಕ್ಸ್ ಉಳಿಸುವ ಐಡಿಯಾ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವ  ಹೊತ್ತಿನಲ್ಲೇ ಹೊಳೆಯುವುದು. ಬುದ್ಧಿವಂತರಾದ ಜನ, ಆರ್ಥಿಕ ವರ್ಷದ ಆರಂಭದಲ್ಲೇ ಟ್ಯಾಕ್ಸ್ ಉಳಿಸುವ ಮತ್ತು ಹೂಡಿಕೆಗೆ ತೊಡಗುವ ಪ್ಲ್ಯಾನಿಂಗ್‌ ಮಾಡುತ್ತಾರೆ.

ಪಬ್ಲಿಕ್ಪ್ರಾವಿಡೆಂಟ್ಫಂಡ್‌ (ಪಿಪಿಎಫ್)

ಭಾರತೀಯ ಹೂಡಿಕೆದಾರರಿಗೆ ಪಿಪಿಎಫ್ ಟ್ಯಾಕ್ಸ್ ಉಳಿಸುವ ಜನಪ್ರಿಯ ವಿಧಾನವಾಗಿದೆ. ಇದರಲ್ಲಿ ಹೂಡಿಕೆ, ಹೂಡಿಕೆಗೆ ಸಿಗುವ ರಿಟರ್ನ್ಸ್ ಮತ್ತು ಮೆಚ್ಯುರಿಟಿಯಿಂದ ಸಿಗಲಿರುವ ಮೊತ್ತ ಎಲ್ಲ ತೆರಿಗೆಮುಕ್ತ ಎನಿಸಿದೆ. ಇದರ ಮೇಲೆ ಬಡ್ಡಿ ದರ 10 ವರ್ಷಗಳ ಸರ್ಕಾರಿ ಬಾಂಡ್‌ನ  ಆಧಾರದ ಪ್ರತಿ ವರ್ಷ ನಿಗದಿಯಾಗುತ್ತದೆ. ಪಿಪಿಎಫ್ ನೆರವಿನಿಂದ ಒಬ್ಬ ವ್ಯಕ್ತಿ ವಾರ್ಷಿಕ 1 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಿ ತೆರಿಗೆ ಅಧಿನಿಯಮ ಕಲಂ 80 ರ ಪ್ರಕಾರ ಆದಾಯ ತೆರಿಗೆ ವಿನಾಯಿತಿಯ ಲಾಭ ಪಡೆಯಬಹುದು.

ನ್ಯಾಷನಲ್ ಪೆನ್ಶನ್ಸ್ಕೀಂ (ಎನ್ ಪಿಎಸ್)

ಎನ್ ಪಿಎಸ್ ಬಹುತೇಕ ಪಿಪಿಎಫ್ ತರಹವೇ ಇರುತ್ತದೆ. ಅದರ ತರಹ ಇಲ್ಲೂ ಸಹ ನಿಮಗೆ ಸರಳ ನಿಯಮಗಳು, ಹೆಚ್ಚಿನ ಸೌಲಭ್ಯ, ಕಡಿಮೆ ಹೂಡಿಕೆ ಮತ್ತು ಮಾರ್ಕೆಟ್‌ ಲಿಂರ್ಡ್ ರಿಟರ್ನ್ಸ್ ಸಿಗುತ್ತವೆ. ಈ ಸ್ಕೀಂ ಪ್ರಕಾರ ನಿಮಗೆ ಈಕ್ವಿಟಿ ಕಾರ್ಪೊರೇಟ್‌ಡೆಟ್‌ ಅಥವಾ ಸರ್ಕಾರಿ ಡೆಟ್‌ನಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಎನ್ ಪಿಎಸ್ ಪ್ರಕಾರ ಅಪ್ಲಿಕೆಂಟ್‌ ತನ್ನ ಮೂಲ ಸಂಬಳದ ಶೇ.10 ರಷ್ಟನ್ನು ಎನ್ ಪಿಎಸ್ ಅಕೌಂಟ್‌ನಲ್ಲಿ ಹೂಡಿದರೆ, ಈ ಮೊತ್ತವನ್ನು ಹೆಚ್ಚುವರಿ ಕಡಿತ ಎಂದು ತಿಳಿಯಲಾಗುತ್ತದೆ ಮತ್ತು ಆ ವ್ಯಕ್ತಿ ಇದರ ಮೇಲೆ ಟ್ಯಾಕ್ಸ್ ಕಡಿತಕ್ಕಾಗಿ ನಿವೇದಿಸಬಹುದು. ಇದರ ಮೇಲೆ ಕಲಂ 80 ಅನ್ವಯ ನಿಯಮಿತ ಪೆನ್ಶನ್‌ ವಿನಾಯಿತಿ ಮಾತ್ರವಲ್ಲದೆ ತೆರಿಗೆ ವಿನಾಯಿತಿ ಲಾಭ ಇದೆ.

ಫಿಕ್ಸ್ಡ್ ಡೆಪಾಸಿಟ್‌ (ಎಫ್.ಡಿ)

ಯಾರು ಎಫ್.ಡಿ.ಗಳಲ್ಲಿ ಹಣ ಹೂಡಿರುತ್ತಾರೋ ಅವರಿಗೆ ಕಲಂ 80ಯ ಪ್ರಕಾರ ತೆರಿಗೆ ವಿನಾಯಿತಿಯ ಲಾಭ ಸಿಗುತ್ತದೆ. ಆದರೆ ಇಲ್ಲಿ ತೆರಿಗೆ ವಿನಾಯಿತಿಯ ಲಾಭ ಸಿಗಬೇಕೆಂದರೆ, ನಿಮ್ಮ ಎಫ್.ಡಿ.ಯ ಮೆಚ್ಯೂರಿಟಿ ಅವಧಿ ಕನಿಷ್ಠ 5 ವರ್ಷ ಆಗಿರಲೇಬೇಕು. ಇದು ನಿಶ್ಚಿತ ರಿಟರ್ನ್ಸ್ ತಂದುಕೊಡು ತೆರಿಗೆ ಉಳಿತಾಯದ ಏಕಮಾತ್ರ ವಿಧಾನವಾಗಿದ್ದು, ಮಾರ್ಕೆಟ್‌ನ ಏರಿಳಿತದ ಯಾವ ಪ್ರಭಾವ ಇದಕ್ಕೆ ತಟ್ಟದು.

ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ಕೀಂ (ELSS) ಫಂಡ್

ತೆರಿಗೆ ಉಳಿತಾಯ ಮಾಡುವುದಕ್ಕಾಗಿ ಮ್ಯೂಚುವಲ್ ‌ಫಂಡ್‌ ಅಂದರೆ ELSS 3 ವರ್ಷಗಳ ಲಾಕ್‌ ಇನ್‌ ಪೀರಿಯಡ್‌ನ  ಹೂಡಿಕೆಯಾಗಿದೆ. ಇದು ಈಕ್ವಿಟಿ ಅಸೆಟ್‌ ಕ್ಲಾಸ್‌ನಡಿ ಬರುವಂಥ ತೆರಿಗೆ ಉಳಿಸುವ ಒಂದು ವಿಧಾನವಾಗಿದೆ. ELSSನ ಹೂಡಿಕೆ

ಮೊತ್ತ ಕಡಿಮೆ ಆಗಿದೆ, ಜೊತೆಗೆ ಇದರಲ್ಲಿ ಹೆಚ್ಚು ಪಾರದರ್ಶಕತೆಯೂ ಇದೆ. ಇದರ ಪ್ರಕಾರ ಹೂಡಿಕೆದಾರ 1 ವರ್ಷದಲ್ಲಿ ಗರಿಷ್ಠ 1 ಲಕ್ಷ ರೂ.ಗಳಷ್ಟು ಹಣ ಹೂಡಬಹುದಾಗಿದೆ. ಇದಕ್ಕಾಗಿ ಪ್ರತಿ ತಿಂಗಳೂ ಕನಿಷ್ಠ ರೂ.500ರ ಮೊತ್ತದಿಂದಲೇ ಆರಂಭಿಸಬಹುದು. ನೀವು ಡೈರ್ಸಿಫೈಡ್‌ ಈಕ್ವಿಟಿ ಫಂಡ್‌ ಮತ್ತು ವಿಭಿನ್ನ ವಿಧಾನಗಳ 30-80 ಶೇರ್‌ಗಳ ಪೋರ್ಟ್‌ಪೇಲಿಯೋಗಳಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆದಾರರು ತಮ್ಮ ತೆರಿಗೆಯಿಂದ ಮುಕ್ತರಾಗಲು ELSS ಒಂದು ಉತ್ತಮ ಫಂಡ್‌ ಆಗಿ ಮೂಡಿದೆ.

ಹೆಲ್ತ್ ಇನ್ಶೂರೆನ್ಸ್

ನೀವು ಒಂದು ವೇಳೆ ನಿಮಗಾಗಿ ಮತ್ತು ನಿಮ್ಮ ಕುಟುಂಬದವರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಕೊಂಡಿದ್ದರೆ, ನೀವು ಇದಕ್ಕಾಗಿ ತೆರಿಗೆ ವಿನಾಯಿತಿಯ ಲಾಭ ಪಡೆಯಬಹುದು. ಕಲಂ 80 ಪ್ರಕಾರ ಹೆಲ್ತ್ ಇನ್ಶೂರೆನ್ಸ್ ನಲ್ಲಿ ತೆರಿಗೆ ಕಡಿತದ ಸೌಲಭ್ಯ ಒದಗಿಸಲಾಗಿದೆ. ಒಂದುವೇಳೆ ನೀವು ನಿಮಗಾಗಿ ಮತ್ತು ಕುಟುಂಬ (ಹೆಂಡತಿ, ಮಕ್ಕಳ) ದವರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ತುಂಬುತ್ತಿರುವಿರಾದರೆ, ಆಗ ನಿಮಗೆ ವಾರ್ಷಿಕ ರೂ.20 ಸಾವಿರದ ಮೊತ್ತದವರೆಗೂ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ನಿಮ್ಮ ತಾಯಿ ತಂದೆಯರ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಸಹ ಕಟ್ಟುತ್ತಿರುವಿರಾದರೆ, ನಿಮಗೆ ರೂ.15 ಸಾವಿರದತನಕ ಹೆಚ್ಚುವರಿ ತೆರಿಗೆ ವಿನಾಯಿತಿ ಸಿಗುತ್ತದೆ.

ಹೋಂ ಲೋನ್

ನೀವು ಯಾವುದೇ ಹಣಕಾಸು ಸಂಸ್ಥೆಯಿಂದ ಹೋಂ ಲೋನ್‌ ಪಡೆದಿದ್ದರೆ ಕಲಂ 80ಯ ಅನ್ವಯ ಇದಕ್ಕಾಗಿ ಮಾಡಲಾದ ಮೂಲ ಧನದ ಪಾವತಿಗಾಗಿ ನಿಮಗೆ ವಾರ್ಷಿಕ ರೂ.1 ಲಕ್ಷದ ಮೊತ್ತದವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಇದು ನಿಮಗೆ ಪ್ರೀಮಿಯಂ,  ಪಿಪಿಎಫ್, ಟ್ಯಾಕ್ಸ್ ಸೇವಿಂಗ್‌ನ್ನೂ ಸೇರಿಸಿಕೊಂಡೇ ದೊರಕುತ್ತದೆ. ಈ ಕಾರಣದಿಂದಲೇ ನೀವು ಹೋಮ್ ಲೋನ್‌ನ ಮೂಲಧನದ ಪಾವತಿಯೊಂದಿಗೆ ಈ ಎಲ್ಲದಕ್ಕೂ 1 ಲಕ್ಷಕ್ಕೂ ಹೆಚ್ಚಿನ ಮೊತ್ತದ ಪಾವತಿ ಮಾಡದಿದ್ದರೆ, ಆಗಲೂ ಸಹ ನಿಮಗೆ ಕೇವಲ 1 ಲಕ್ಷದ ಮೊತ್ತದವರೆಗೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ. ಎಲ್ಲಿಯವರೆಗೆ ಹೋಂ ಲೋನಿನ ಪಾವತಿ ಆಗುತ್ತಿರುತ್ತದೆಯೋ, ಅಲ್ಲಿಯವರೆಗೆ ನಿಮಗೆ ಕಲಂ 23 ಅನ್ವಯ ವಾರ್ಷಿಕ 1.5 ಲಕ್ಷ ರೂ.ಗಳವರೆಗೆ ತೆರಿಗೆ ವಿನಾಯಿತಿಯ ಲಾಭ ಸಿಗುತ್ತದೆ. ನೀವು ನಿಮ್ಮ ಪತ್ನಿ ಅಥವಾ ಇತರ ನೆಂಟರ ಜೊತೆ ಬೆರೆತು ಜಾಯಿಂಟ್‌ ಲೋನ್‌ ಪಡೆದಿದ್ದರೆ, ಆಗ ನಿಮಗೆ ಬಡ್ಡಿ ಪಾವತಿ ಮೇಲೆ ತೆರಿಗೆ ವಿನಾಯಿತಿಯು ಯಾವ ಅನುಪಾತದಲ್ಲಿ ನೀವು ಲೋನ್‌ ಪಡೆದಿರುವಿರೋ ಅದೇ ಕ್ರಮದಲ್ಲಿ ಸಿಗುತ್ತದೆ. ಪ್ರಾಪರ್ಟಿಯಲ್ಲಿ ನಿಮ್ಮಿಬ್ಬರ ಪಾಲಿನ ಅನುಪಾತ ಎಷ್ಟಿದೆ ಎಂಬುದಕ್ಕೂ ಇದಕ್ಕೂ ಸಂಬಂಧವಿಲ್ಲ. ಹೋಮ್ ಲೋನಿನ ಬಡ್ಡಿ ಪಾವತಿಗಾಗಿ ತೆರಿಗೆ ವಿನಾಯಿತಿಯ ಲಾಭ ಪಡೆಯಲು ನಿಮಗೆ ಸಾಲ ಕೊಟ್ಟ ಬ್ಯಾಂಕಿನಿಂದ ಇಂಟ್ರೆಸ್ಟ್ ಸರ್ಟಿಫಿಕೇಟ್‌ ಪಡೆಯಬೇಕು.

ಎಜುಕೇಶನ್ಲೋನ್

ನೀವು ನಿಮ್ಮ ಮಕ್ಕಳ ಸೆಕೆಂಡರಿ ಎಜುಕೇಶನ್‌ ಅಥವಾ ಉನ್ನತ ಶಿಕ್ಷಣಕ್ಕಾಗಿ ಎಜುಕೇಶನ್‌ ಲೋನ್‌ ಪಡೆದಿದ್ದರೆ, ಇದಕ್ಕಾಗಿ ಮಾಡಲಾಗುವ ಬಡ್ಡಿ ಪಾವತಿಗಾಗಿ ಆದಾಯ ತೆರಿಗೆ ಅಧಿನಿಯಮ ಕಲಂ 80 ಅನ್ವಯ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ. ಎಜುಕೇಶನ್‌ ಲೋನಿನ ರೀಪೇಮೆಂಟ್‌, ಶಿಕ್ಷಣದ ಸಮಯದಲ್ಲಿ ಅಥವಾ ಶಿಕ್ಷಣ ಮುಗಿದ ನಂತರ ಮಾಡಬಹುದು. ಸದ್ಯಕ್ಕೆ ಎಜುಕೇಶನ್‌ ಲೋನಿನ ಬಡ್ಡಿಗಾಗಿ ವಿನಾಯಿತಿ ಪಡೆಯಲು ಯಾವ ಅಡ್ಡಿಯೂ ಇಲ್ಲ.

ವಾಸ್ತವದಲ್ಲಿ ತುಂಬಲಾಗುವ ಬಡ್ಡಿಯ ಆಧಾರದ ಮೇಲೆಯೇ, ಸಾಲಗಾರರಿಗೆ ವಿನಾಯಿತಿಯ ಸೌಲಭ್ಯ ಕಲ್ಪಿಸಲಾಗಿದೆ. ನೀವು 1 ವರ್ಷದಲ್ಲೇ 1 ವರ್ಷದ ಬಡ್ಡಿ ಪೂರ್ತಿ ಕಟ್ಟಿಬಿಟ್ಟರೆ, ಆಗ ವಾಸ್ತವ ಬಡ್ಡಿಯ ಪಾವತಿ ಆದಾಗ, ವಿನಾಯಿತಿಯ ಲಾಭ ಕ್ಲೇಮ್ ಮಾಡಬಹುದು. ಒಂದು ಪಕ್ಷ ನೀವು ಬಡ್ಡಿಯ ಅರಿಯರ್ಸ್‌ ಪಾವತಿ ಮಾಡಿದ್ದಲ್ಲಿ, ನಿಮಗೆ ನಿಮ್ಮ ಬ್ಯಾಂಕರ್‌ನಿಂದ ಪಾವತಿಸಲಾದ ಬಡ್ಡಿಯ ಒಟ್ಟು ಮೊತ್ತಕ್ಕಾಗಿ ಒಂದು ಪ್ರಮಾಣಪತ್ರ ಪಡೆಯಬೇಕು. ಎಜುಕೇಶನ್‌ ಲೋನಿನ ಬಡ್ಡಿಯ ಪಾವತಿಗಾಗಿ ಸಿಗುವ ವಿನಾಯಿತಿ ಸತತ 8 ವರ್ಷ ದೊರಕುತ್ತದೆ. ಈ ಎಜುಕೇಶನ್‌ ಲೋನಿಗಾಗಿ ಯಾವ ವರ್ಷದಿಂದ ನೀವು ಬಡ್ಡಿ ಕಟ್ಟುತ್ತಿದ್ದೀರೋ, ಅದನ್ನು ಈ ಪಾವತಿಯ ಮೊದಲ ವರ್ಷವೆಂದೇ ತಿಳಿಯಲಾಗುತ್ತದೆ. ನೀವು ಈ ವರ್ಷ ಲೋನ್‌ ಪಡೆದಿದ್ದೀರೋ ಇಲ್ಲವೋ ಎಂಬುದರಲ್ಲಿ ಅಂಥ ವ್ಯತ್ಯಾಸವೇನೂ ಇಲ್ಲ.

ಹೌಸ್‌ ರೆಂಟ್‌ ಅಲೋಯೆನ್ಸ್ ಸಹ ತೆರಿಗೆ ಉಳಿತಾಯದ ಒಂದು ಉತ್ತಮ ವಿಧಾನ ಎಂದು ಪರಿಗಣಿಸಲಾಗಿದೆ. ಸಂಬಳದಾರರಿಗೆ ಆದಾಯ ತೆರಿಗೆ ಅಧಿನಿಯಮ 1961ರ ಕಲಂ 10(13)ರ ನಿಯಮ 2 ಅನ್ವಯ ಪಾವತಿಸಬಹುದು. ಯಾರು ಸ್ವಉದ್ಯೋಗಿಗಳೋ ಅವರಿಗೆ ಕಲಂ 80 ಅನ್ವಯ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ಈ ಮೂಲಕ ತೆರಿಗೆ ವಿನಾಯಿತಿ ಪಡೆಯ ಬಯಸಿದರೆ, 4 ವಿಷಯಗಳನ್ನು ಅಗತ್ಯವಾಗಿ ನೆನಪಿಡಬೇಕು. ಉದಾ : ಇದರಲ್ಲಿ ನಿಮ್ಮ ಸಂಬಳ, ಸಿಗುತ್ತಿರುವ, ಅಸಲಿ ಮನೆ ಬಾಡಿಗೆ ಹಣ, ನೀವು ವಾಸಿಸುತ್ತಿರುವ ಊರು ಎಲ್ಲ ಸೇರುತ್ತದೆ.

ಇದರಲ್ಲಿ ನೆನಪಿಡಬೇಕಾದ ಮತ್ತೊಂದು ವಿಷಯ ಎಂದರೆ, ನೀವು ಯಾವುದಾದರೂ ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದೀರೋ ಅಥವಾ ನಾನ್‌ ಮೆಟ್ರೋ ನಗರದಲ್ಲೋ ಎಂಬುದು. ಈ 4 ವಿಷಯಗಳೂ ಇಡೀ 5 ವರ್ಷ ಒಂದೇ ತರಹ ಇದ್ದರೆ, ಮೇಲೆ ತೆರಿಗೆ ವಿನಾಯಿತಿಯ ಗಣನೆಯನ್ನು ವಾರ್ಷಿಕವಾಗಿ ತೆಗೆದುಕೊಳ್ಳಲಾಗುತ್ತದೆ. ಅಕಸ್ಮಾತ್‌ ಈ ನಾಲ್ಕರಲ್ಲಿ ಏನಾದರೂ ಬದಲಾವಣೆಗಳಿದ್ದರೆ, ಅಂದರೆ ಬಾಡಿಗೆ ಹೆಚ್ಚಾಗಿದ್ದರೆ ಅಥವಾ ನೀವು ವಾಸಿಸುವ ಊರು ಬದಲಾಗಿದ್ದರೆ, ಆಗ ಗಣನೆ ಮಾಸಿಕವಾಗುತ್ತದೆ. ಇದರಲ್ಲಿ ನೀವು ವಾಸಿಸುವ ಊರು ಬಹಳ ಮುಖ್ಯ. ಅಂದರೆ, ನೀವು ಬೆಂಗಳೂರಿನಂಥ ಮೆಟ್ರೋ ವಾಸಿ ಆಗಿದ್ದರೆ, ನಿಮಗೆ 50%ರವರೆಗೆ ವಿನಾಯಿತಿ ದೊರಕುತ್ತದೆ. ಅಕಸ್ಮಾತ್‌ ಅದೇನಾದರೂ ನಾನ್‌ ಮೆಟ್ರೋ ಊರಾಗಿದ್ದರೆ, ಆಗ ಕೇವಲ 40% ಮಾತ್ರ ವಿನಾಯಿತಿ ಸಿಗುತ್ತದೆ.

ಬಾಡಿಗೆ ಹಣ ಪಾವತಿಗಾಗಿ

ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ, ಆಗಲೂ ಸಹ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ಮನೆ ಮಾಲೀಕರಿಗೆ ಬಾಡಿಗೆ ನೀಡಿದರೆ ಮಾತ್ರ ನಿಮಗೆ ವಿನಾಯಿತಿ ಸಿಗುತ್ತದೆ ಅಂತೇನಿಲ್ಲ. ಈ ವಿನಾಯಿತಿಯ ಲಾಭ ಪಡೆಯಲು ನೀವು ನಿಮ್ಮ ತಾಯಿ ತಂದೆ ಅಥವಾ ಸಂಗಾತಿಗೂ ಸಹ ಬಾಡಿಗೆ ಕೊಡುತ್ತಿರಬಹುದು. ಆದರೆ ಇದಕ್ಕಾಗಿ ಈ ಆದಾಯವನ್ನು ಅವರು ತಮ್ಮ ಮೂಲ ಆದಾಯದಿಂದ ಬೇರೆ ಎಂದು ತೋರಿಸಿರಬೇಕು. ಅದಕ್ಕಾಗಿ ಅವರು ಟ್ಯಾಕ್ಸ್ ಕಟ್ಟಬೇಕಾಗಿ ಬರುತ್ತದೆ.

ಇದಕ್ಕಾಗಿ ನೀವು ರೆಂಟ್‌ ರೆಸಿಪ್ಟ್ ಗಳ ನೆರವಿನಿಂದ ಬಾಡಿಗೆ ಕಟ್ಟುತ್ತಿರುವ ಪ್ರೂಫ್‌ ತೋರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಆರ್ಥಿಕ ವರ್ಷದ ಮೊದಲ ಹಾಗೂ ಕೊನೆಯ ತಿಂಗಳ 2 ರಸೀತಿ ತೋರಿಸಿದರೂ ಸಾಕು. ಇದಕ್ಕಾಗಿ ನಿಮಗೆ 1 ರೂ. ರೆವಿನ್ಯೂ ಸ್ಟ್ಯಾಂಪ್‌ ಹಚ್ಚಿರುವ ರಸೀದಿ ತೋರಿಸಬೇಕಾಗುತ್ತದೆ. ಇದರಲ್ಲಿ ಬಾಡಿಗೆ ಪಡೆದ ವ್ಯಕ್ತಿಯ ಸಹಿ ಅಗತ್ಯವಾಗಿ ಇರಬೇಕು. ಜೊತೆಗೆ ಇದರಲ್ಲಿ ವಾಸಸ್ಥಳದ ವಿಳಾಸ, ಬಾಡಿಗೆ ಮೊತ್ತ, ಬಾಡಿಗೆ ನೀಡಿದವರ, ಪಡೆದವರ ವಿವರಗಳಿರಬೇಕು.

ಎಲ್ಲಾ ಮೂಲಗಳಿಂದ ನಿಮ್ಮ ಆದಾಯ ಗುರುತಿಸಿ

ನೀವು ಬೇರೆ ಬೇರೆ ಶೀರ್ಷಿಕೆಗಳಡಿ ನಿಮ್ಮ ಆದಾಯದ ಗಣನೆ ಮಾಡಬೇಕು. ಆದಾಯ ತೆರಿಗೆ ಅಧಿನಿಯಮದ ಪ್ರಕಾರ, ವ್ಯಕ್ತಿಯೊಬ್ಬನ ಆದಾಯವನ್ನು 5 ಶೀರ್ಷಿಕೆಗಳಡಿ ಗುರುತಿಸಬೇಕು. ಇದರಲ್ಲಿ ಸಂಬಳ, ಹೌಸ್‌ ಪ್ರಾಪರ್ಟಿ ಆದಾಯ, ಉದ್ಯಮದ ಆದಾಯ, ಕ್ಯಾಪಿಟಲ್ ಗೇನ್‌ನಿಂದ ಬಂದ ಆದಾಯ, ಇತರ ಮೂಲಗಳ ಆದಾಯ ಸೇರಿರುತ್ತದೆ. ಹೀಗಾಗಿ ನೀವು ಎಲ್ಲಾ ಮೂಲಗಳಿಂದ ದೊರಕಿರುವ ಆದಾಯ ಗುರುತಿಸಿ ನಿಮ್ಮ ರಿಟರ್ನ್ಸ್ ನಲ್ಲಿ ಅದನ್ನು ನಮೂದಿಸಬೇಕು.

ಅಗತ್ಯ ದಸ್ತಾವೇಜುಗಳ ನೆರವು

ನೀವು ರಿಟರ್ನ್ಸ್ ಫೈಲ್ ‌ಮಾಡುವಾಗ ಫಾರ್ಮ್ 16ರ ನೆರವು ಪಡೆಯಬೇಕು, ಇದು ನಿಮ್ಮ ಉದ್ಯೋಗದಾತರಿಂದ ಜಾರಿಗೊಳಿಸಲಾಗುತ್ತದೆ. ನಿಮ್ಮ ಉದ್ಯೋಗದಾತರು ನಿಮಗೆಷ್ಟು ಸಂಬಳ ಕೊಟ್ಟರು, ಎಷ್ಟು ಟ್ಯಾಕ್ಸ್ ಕಡಿತಗೊಳಿಸಿದರು ಇತ್ಯಾದಿ ವಿವರಗಳು ಅದರಲ್ಲಿರುತ್ತದೆ.

ನಿಮ್ಮ ಬ್ಯಾಂಕ್‌ ಖಾತೆಯ ಸ್ಟೇಟ್‌ಮೆಂಟ್‌ನ್ನು ಅಗತ್ಯವಾಗಿ ಪರಿಶೀಲಿಸಿ. ಇದರ ಸಮ್ಮರಿ ನೋಡುವುದರಿಂದ ನಿಮಗೆ ವರ್ಷವಿಡೀ ಎಷ್ಟು ಆದಾಯವಿತ್ತು ಹಾಗೂ ನೀವೆಷ್ಟು ಹೂಡಿಕೆಗಳಲ್ಲಿ ತೊಡಗಿಸಿದ್ದೀರಿ ಎಂಬುದೂ ತಿಳಿಯುತ್ತದೆ. ಯಾವುದೇ ಹೂಡಿಕೆ ಮೇಲೆ ನೀವು ಡಿಡಕ್ಷನ್‌ ಕ್ಲೇಮ್ ಮಾಡಿಲ್ಲ ಎಂದಾಗಬಾರದು.

ತಪ್ಪು ಮಾಹಿತಿ ನೀಡದಿರಿ

ರಿಟರ್ನ್ಸ್ ಫೈಲ್ ‌ಮಾಡುವಾಗ ಎಂದೂ ತಪ್ಪು ಮಾಹಿತಿ ನೀಡಬೇಡಿ. ಈ ರೀತಿ ನೀವು ಮಾಡಿದ್ದೇ ಆದರೆ, ಅದನ್ನೆಂದೂ ಸುಧಾರಣೆ ಮಾಡಲಾಗದು. ನಿಮಗೆ ರಿಟರ್ನ್ಸ್ ಫೈಲ್ ‌ಮಾಡಲು ಬರುವುದಿಲ್ಲ ಅನಿಸಿದರೆ, ಯಾರಾದರೂ ಲೆಕ್ಕ ಪರಿಶೋಧಕರ ನೆರವು ಪಡೆಯಿರಿ.

–  ಎಸ್‌. ಮಮತಾ

Tags:
COMMENT