ದಿನೇ ದಿನೇ ಹೆಚ್ಚುತ್ತಿರುವ ಅಗ್ನಿ ದುರಂತದ ಅವಘಡಗಳನ್ನು ಗಮನಿಸಿದಾಗ, ಎಲ್ಲಕ್ಕೂ ಮೂಲವಾದ ಶಾರ್ಟ್ಸರ್ಕ್ಯೂಟ್ ತಡೆಹಿಡಿದು, ವಿದ್ಯುತ್ಸುರಕ್ಷೆ ಒದಗಿಸುವುದು ಪ್ರತಿಯೊಬ್ಬ ಸುನಾಗರಿಕರ ಕರ್ತವ್ಯವಾಗಿದೆ, ಹಾಗಾದಾಗ ಮಾತ್ರ ಅವರು ನಿಶ್ಚಿಂತರಾಗಬಹುದು…….

ಇತ್ತೀಚೆಗೆ ಎಲ್ಲೆಲ್ಲೂ ಈ ಶಾರ್ಟ್‌ ಸರ್ಕ್ಯೂಟ್‌ನ ಹಾವಳಿ ಹೆಚ್ಚುತ್ತಿದ್ದು, ಬೆಂಕಿ ಅನಾಹುತಗಳಿಗೆಲ್ಲ ಇದು ಕಾರಣವಾಗಿದೆ. ಸಾಮಾನ್ಯವಾಗಿ ಇಂಥ ಸುರಕ್ಷತೆಗೆ ಸಂಬಂಧಿಸಿದ ಮಹತ್ವಪೂರ್ಣ ಎಚ್ಚರಿಕೆಗಳನ್ನು ನಾವು ನಿರ್ಲಕ್ಷಿಸುತ್ತೇವೆ ಅಥವಾ ಗೊತ್ತಿದ್ದೋ ಇಲ್ಲದೆಯೋ ವಿದ್ಯುದುಪಕರಣಗಳ ದುರುಪಯೋಗಕ್ಕೂ ಕಾರಣವಾಗುತ್ತೇವೆ.

ಎಲೆಕ್ಟ್ರಿಕ್‌ ಶಾರ್ಕ್ಸ್ ಹಾಗೂ ಬೆಂಕಿ ದುರಂತಗಳಿಂದ ಮಾರಣಾಂತಿಕ ಪರಿಣಾಮ ಎದುರಿಸಬೇಕಾದೀತು. ಈ ದುರಂತಗಳು ಸಾಮಾನ್ಯವಾಗಿ ವೈರಿಂಗ್‌ ಮತ್ತು ಎಲೆಕ್ಟ್ರಿಕ್‌ ಸಿಸ್ಟಂಗಳ ವೈಫಲ್ಯ ಹಾಗೂ ಅನುಚಿತ ಜೋಡಣೆಗಳಿಂದಾಗಿ ಆಗುತ್ತವೆ. ಅನಿವಾರ್ಯವಾದ ನ್ಯಾಶನಲ್ ಎಲೆಕ್ಟ್ರಿಕ್‌ ಕೋಡ್‌ಗಳ ಬಗ್ಗೆ ಪೂರ್ವ ಮಾಹಿತಿ ಇರಿಸಿಕೊಳ್ಳಬೇಕು. ಬೆಂಕಿ ದುರಂತಗಳು ಹಾಗೂ ಎಲೆಕ್ಟ್ರಿಕ್‌ ಶಾರ್ಕ್ಸ್ ವಿರುದ್ಧ ಸುರಕ್ಷತೆಗಾಗಿ ಈ ನಿಯಮಗಳ ಪ್ರಕ್ರಿಯೆಗಳನ್ನು ತಪ್ಪದೆ ಅನುಸರಿಸಿ.

ವಿದ್ಯುತ್‌ ಸುರಕ್ಷತೆಗೆ ಸಂಬಂಧಿಸಿದ ಎಚ್ಚರಿಕೆಗಳನ್ನು ಅನುಸರಿಸಿ ನಿಮ್ಮ ಹಾಗೂ ನಿಮ್ಮ ಪರಿವಾರದ ಸುರಕ್ಷಿತ ಜೀವನದ ಕುರಿತಾಗಿ ಹೀಗೆ ನಿಶ್ಚಿಂತರಾಗಿ :

ಮಲ್ಟಿ ಪಿನ್‌ ಪ್ಲಗ್ಸ್ ನ್ನು ಹೆಚ್ಚಾಗಿ ಬಳಸಿ, ಸಿಂಗಲ್ ಪಾಯಿಂಟ್‌ (ಸಾಕೆಟ್‌ ಔಟ್‌ಲೆಟ್‌)ನ್ನು ಓವರ್‌ ಪ್ಲಗ್‌ ಮಾಡಬೇಡಿ.

ಪ್ಲಗ್ಸ್ ನ್ನು ಉತ್ತಮ ರೀತಿಯಲ್ಲಿ ಬಿಗಿಯಾಗಿ ಹಾಕಲಾಗಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಸಡಿಲ ಆಗುವುದರಿಂದ ಅವುಗಳಲ್ಲಿ ಸ್ಪಾರ್ಕಿಂಗ್‌ ಆಗಿ, ಬೆಂಕಿ ದುರಂತ ಸಂಭವಿಸಬಹುದಾಗಿದೆ.

ಬೆಂಕಿ ನಂದಿಸುವ ಯಂತ್ರಗಳು ಸುಸ್ಥಿತಿಯಲ್ಲಿವೆ ತಾನೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಟ್ಯೂಬ್‌ಲೈಟ್‌ಗೆ ಬದಲಾಗಿ LED ಬಲ್ಬ್ಸ್ ಹೆಚ್ಚಾಗಿ ಬಳಸಿರಿ. ಇದರಿಂದ ಧಾರಾಳ ವಿದ್ಯುತ್‌ ಖರ್ಚು ಉಳಿಯುತ್ತದೆ.

ವಿದ್ಯುತ್‌ನ ಎಲ್ಲಾ ಉಪಕರಣಗಳನ್ನೂ ಅಳವಡಿಸಲು ಸದಾ ತರಬೇತಿ ಹೊಂದಿದ, ನುರಿತ  ಎಲೆಕ್ಟ್ರಿಶಿಯನ್‌ರ ಸೇವೆಯನ್ನೇ ಪಡೆಯಿರಿ.

ಎಮರ್ಜೆನ್ಸಿ ಸಂದರ್ಭದಲ್ಲಿ ಹೊರಗೆ ಓಡಿಹೋಗಲು ಮೆಟ್ಟಿಲ ಏರಿಯಾವನ್ನು ಖಾಲಿ ಇಟ್ಟುಕೊಳ್ಳಬೇಕು. ನೀವು ಮನೆಯಲ್ಲಿ ಎಲೆಕ್ಟ್ರಿಕ್‌ ಸಿಸ್ಟಮ್ ಅಳವಡಿಸಿದ್ದರೆ, ಅವುಗಳ ಈ ಕೆಳಗಿನ ಉಪಯೋಗಗಳ ಬಗ್ಗೆ ತಿಳಿದಿರಬೇಕು.

ಉಪಕರಣಗಳ ಸುರಕ್ಷತೆ

ನಿಮ್ಮ ವಿದ್ಯುತ್‌ ಉಪಕರಣಗಳು ಹಾಗೂ ಅವುಗಳ ವೈರಿಂಗ್‌ನ ನಿಯಮಿತ ಪರೀಕ್ಷೆ ಮಾಡಿಸಿ. ಅಲ್ಲಲ್ಲಿ ತುಂಡರಿಸಿದ, ಹಾಳಾದ ವಿದ್ಯುತ್‌ ವೈರ್‌ಗಳನ್ನು ತಕ್ಷಣ ಬದಲಾಯಿಸಿಬಿಡಿ, ಇಲ್ಲದಿದ್ದರೆ ಏನಾದರೂ ಪ್ರಾಣಾಂತಿಕ ದುರ್ಘಟನೆ ನಡೆಯಬಹುದು. ನಿಮ್ಮ ವಿದ್ಯುತ್‌ ಉಪಕರಣಗಳ ಬಳಿ ಯಾವುದೇ ಜ್ವಲನಶೀಲ (ಬೆಂಕಿಯನ್ನು ಆಕರ್ಷಿಸುವ) ಪದಾರ್ಥಗಳನ್ನು ಇರಿಸಲೇಬೇಡಿ. ಅದರಲ್ಲೂ ಮುಖ್ಯವಾಗಿ ಅಡುಗೆಮನೆಯಲ್ಲಿ ಈ ವಿಷಯವನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಳ್ಳಿ. ಇಲ್ಲಿ ಗ್ಯಾಸ್‌ ಸ್ಟವ್, ಸಿಲಿಂಡರ್‌ಗಳ ಕಾರಣ ವಿದ್ಯುತ್‌ ಉಪಕರಣಗಳಿಗೆ ಬೆಂಕಿ ತಗುಲುವ ಸಾಧ್ಯತೆಗಳು, ಅಪಾಯಗಳು ಹೆಚ್ಚಿರುತ್ತವೆ. ಒಂದೇ ಸಲ ಇದ್ದಬದ್ದ ಎಲ್ಲಾ ಅಡಾಫ್ಟರ್‌ಗಳನ್ನೂ ಪವರ್‌ ಪಾಯಿಂಟ್‌ಗೆ ಸಿಗಿಸಿ ಓವರ್‌ ಲೋಡ್‌ ಮಾಡಿಕೊಳ್ಳಬೇಡಿ. ಒಂದು ಸಲಕ್ಕೆ ಯಾವುದು ಅತಿ ಅಗತ್ಯವೋ ಅದನ್ನು ಮಾತ್ರ ಬಳಸಿ.

ಉತ್ತಮ ಅರ್ಥಿಂಗ್‌ : ಅರ್ಥಿಂಗ್‌ ಮಾಡಿಸುವಿಕೆ ಒಂದು ಮನೆಗೆ ಅತ್ಯುತ್ತಮ ಮಹತ್ವಪೂರ್ಣ ರಕ್ಷಾಕವಚ ಎನ್ನಬಹುದು. ಅರ್ಥಿಂಗ್ ಸಿಸ್ಟಮ್ ಸದಾ ಸಕ್ಷಮವಾಗಿ ಕೆಲಸ ಮಾಡುತ್ತಿರುವಂತೆ ನೋಡಿಕೊಳ್ಳಿ. ಇದನ್ನು ನುರಿತ ಟೆಕ್ನಿಶಿಯನ್‌ ಕೈಲೇ ಪರೀಕ್ಷಿಸಿ. ಅಗತ್ಯವಾಗಿ ಫ್ಯೂಸ್‌ ಮತ್ತು ಮನೆಯೊಳಗೆ ಎಲೆಕ್ಟ್ರಿಕ್‌ ಲೀಕೇಜ್‌ ಪ್ರೊಟೆಕ್ಷನ್‌ ಡಿವೈಸ್‌ಗಳನ್ನು ಬಳಸಿ, ಯಾವುದೇ ಅಪಘಾತದಿಂದ ನಿಮ್ಮ ವಿದ್ಯುದುಪಕರಣಗಳು (ಟಿ.ವಿ., ಕಂಪ್ಯೂಟರ್‌) ಹಾಳಾಗದಂತೆ ಅವು ಕಾಪಾಡುತ್ತವೆ. `ಟ್ರಿಪ್‌' ಆಗಿರುವುದನ್ನು ಸೂಚಿಸಿ ಇಂಥವನ್ನು ರಕ್ಷಿಸುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ