`ಏನಿದು..... ಎಲ್ಲರಿಗೂ ಕಾಣೋ ಹಾಗೆ ಬ್ರಾ ಒಣಗೋದಕ್ಕೆ ಹಾಕಿದ್ದೀಯಲ್ಲ?'

`ನಿನ್ನ ಬ್ರಾ ಸ್ಟ್ರಾಪ್‌ ಕಾಣಿಸುತ್ತಾ ಇದೆ, ಸರಿ ಮಾಡಿಕೊ,'

`ನೋಡು, ಅವಳು ಬಿಳಿ ಡ್ರೆಸ್‌ಗೆ ಕಪ್ಪು ಬ್ರಾ ಹಾಕಿಕೊಂಡಿದ್ದಾಳೆ. ಅಷ್ಟೂ ಗೊತ್ತಾಗೋದಿಲ್ಲವೇ?'

ಬ್ರಾ ಬಗ್ಗೆ ಯುವತಿಯರು ಈ ಬಗೆಯ ಮಾತನ್ನು ಕೇಳುತ್ತಿರಬೇಕಾಗುತ್ತದೆ.

ನಮ್ಮ ಸಮಾಜದಲ್ಲಿ ಒಬ್ಬ ಹುಡುಗಿ ಚಿಕ್ಕ ಸ್ಕರ್ಟ್‌ ಅಥವಾ ಸೊಂಟ ಕಾಣುವಂತಹ ಟೀ ಶರ್ಟ್‌ ಧರಿಸಿದರೆ ಅದೊಂದು ದೊಡ್ಡ ವಿಷಯವಾಗುತ್ತದೆ. ಅವಳು ಬಟ್ಟೆ ಧರಿಸಿಯೇ ಇಲ್ಲವೇನೋ ಎಂಬಂತಹ ಭಾವನೆ ಮೂಡಿಸಿಬಿಡಲಾಗುತ್ತದೆ. ಹುಡುಗಿಯರು ಕಿಶೋರಾವಸ್ಥೆ ತಲುಪಿದಾಗ ಅವರಿಗೆ ಬ್ರಾದ ಅಗತ್ಯ ಬೀಳುತ್ತದೆ. ಅದನ್ನು ಹಾಕಿಕೊಂಡಾಗ ಅದೇನಾದರೂ ಹೊರಗೆ ಕಾಣಿಸಿತೆಂದರೆ, ಜನರು ಅವರೆಡೆಗೆ ದುರುದುರು ನೋಡುತ್ತಾ ಅವರು ತಲೆಯೆತ್ತಿ ನಡೆಯದಂತೆ ಮಾಡಿಬಿಡುತ್ತಾರೆ. ಒಬ್ಬ ಹುಡುಗಿಗೆ ತನ್ನ ಉಡುಪು ಮತ್ತು ಶರೀರದ ವಿಷಯವಾಗಿ ಏನು ಮಾಡಬೇಕು, ಏನು ಬಿಡಬೇಕು ಎಂಬ ಅಧಿಕಾರವಿಲ್ಲವೇ?

ಒಳ ಉಡುಪಿನ ಇತಿಹಾಸ

ಅನಾದಿಕಾಲದಿಂದಲೂ ಹೆಣ್ಣು ತನ್ನ ಸ್ತನಗಳನ್ನು ಬಿಗಿದು ಕಟ್ಟುತ್ತಾ ಬಂದಿದ್ದಾಳೆ. ಬಟ್ಟೆಯ ತುಂಡಿನಿಂದ ಹಿಡಿದು ಕೋರ್ಸೆವೆಟ್ ಮತ್ತು ವೇಸ್ಟ್ಗಳಿಂದ ಮಹಿಳೆಯರು ಸ್ತನಗಳನ್ನು ಬಿಗಿಯುತ್ತಾ ಬಂದಿದ್ದಾರೆ. ವಿಕ್ಟೋರಿಯನ್‌ ಕಾಲದಲ್ಲಿ ಮಹಿಳೆಯರು ಜಾಕೆಟ್‌ ಮಾದರಿಯ ಕೋರ್ಸೆವೆಟ್‌ ಧರಿಸುತ್ತಿದ್ದರು. ಅದನ್ನು ಬೆನ್ನ ಹಿಂದೆ ದಾರದಿಂದ ಬಲವಾಗಿ ಬಿಗಿಯಲಾಗುತ್ತಿದ್ದು, ಅದು ಆರೋಗ್ಯಕ್ಕೆ ಹಾನಿಕರವಾಗುತ್ತಿತ್ತು. ಒಂದು ಪತ್ರಿಕೆಯ ವರದಿಯ ಪ್ರಕಾರ, 1889ರಲ್ಲಿ ಫ್ರಾನ್ಸ್ ನ ಹರ್ಮಿನಿ ಕಾಡೊಲ್ ‌ಎಂಬಾತ ಮೊದಲ ಬಾರಿ ಆಧುನಿಕ ಬ್ರಾ ಒಂದನ್ನು ಸಿದ್ಧಪಡಿಸಿದ ಎಂದು ತಿಳಿದುಬಂದಿದೆ.

ಬ್ರಾ ಧರಿಸಲು ಕಾರಣ

ಹೆಚ್ಚಿನ ಮಹಿಳೆಯರು ಅವಶ್ಯಕತೆಗಾಗಿ ಬ್ರಾ ಧರಿಸಿದರೆ, ಕೆಲವರು ಅದನ್ನು ಆಕರ್ಷಣೆಯ ಅಸ್ತ್ರವನ್ನಾಗಿ ಬಳಸುತ್ತಾರೆ. ಕೆಲವರಿಗೆ ಕಾನ್‌ಫಿಡೆಂಟ್‌ ಫೀಲಿಂಗ್‌ ಕೊಟ್ಟರೆ, ಇನ್ನು ಕೆಲವರಿಗೆ ಸೆಕ್ಸಿ ಫೀಲಿಂಗ್‌ ನೀಡುತ್ತದೆ. ಮತ್ತೆ ಕೆಲವರು ಪುರುಷರನ್ನು ಉತ್ತೇಜಿಸಲೆಂದೇ ಲೇಸ್‌ನಿಂದ ಕೂಡಿದ ಪುಶ್‌ ಅಪ್‌ ಬ್ರಾ ಧರಿಸುತ್ತಾರೆ.

ಬಾಲಿವುಡ್‌ ನಟಿ ಪ್ರಿಯಾಂಕಾ ಛೋಪ್ರಾ ಅವರನ್ನು ಒಂದು ಫ್ಯಾಷನ್‌ ವೆಬ್‌ಸೈಟ್‌ ಮೂಲಕ ನಡೆಸಿದ ಸಂದರ್ಶನದಲ್ಲಿ `ಈಗಿನ ಟ್ರೆಂಡ್‌ನಂತೆ ನೀವು ಶರ್ಟ್‌ ಇಲ್ಲದೆ ಕೇವಲ ಬ್ರಾ ಧರಿಸಲು ಇಷ್ಟಪಡುತ್ತೀರಾ?' ಎಂದು ಪ್ರಶ್ನಿಸಿದಾಗ ಅವರು, ``ಇಲ್ಲ, ನಾನು ಕೊಂಚ ನಾಚಿಕೆಯ ಸ್ವಭಾವದವಳು. ಆದ್ದರಿಂದ ಶರ್ಟ್‌ ಇಲ್ಲದೆ ಬ್ರಾ ಧರಿಸಲು ಇಷ್ಟಪಡುವುದಿಲ್ಲ. ಬ್ರಾ ಮುಚ್ಚುವಂತಿರಬೇಕು, ಬಿಚ್ಚಿ ತೋರುವಂತಹದಲ್ಲ,'' ಎಂದು ಉತ್ತರಿಸಿದರು.

ಚಾಲೆಂಜ್

ಇನ್ನೊಬ್ಬರ ಕಷ್ಟ ತೊಂದರೆಯು ನಮಗೆ ಅರ್ಥವಾಗುವುದು, ನಾವು ಆ ತೊಂದರೆಯನ್ನು ಅನುಭವಿಸಿದಾಗ ಮಾತ್ರ. ಸೋಶಿಯಲ್ ಮೀಡಿಯಾದ ಯೂಟ್ಯೂಬ್‌ನಲ್ಲಿ ಒಂದು ವೀಡಿಯೋವನ್ನು ಅಪ್‌ಲೋಡ್‌ ಮಾಡಲಾಗಿತ್ತು. ಬ್ರಾ ಧರಿಸುವುದರಿಂದ ಹುಡುಗಿಯರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ಈ ವೀಡಿಯೋದಲ್ಲಿ ತಮಾಷೆ ಮತ್ತು ಸ್ವಾರಸ್ಯಕರವಾದ ರೀತಿಯಲ್ಲಿ ತೋರಿಸಲಾಗಿತ್ತು. ಹುಡುಗಿಯರು ಬ್ರಾ ಧರಿಸುವುದರಿಂದ ತಮಗೆ ಆಗುವ ತೊಂದರೆಗಳ ಬಗ್ಗೆ ಹೇಳುತ್ತಾ, ಇದರಿಂದ ನೀವು, ರಾಶೆಸ್‌ ಮತ್ತು ಬೆವರು ಬರುತ್ತದೆ. ಬ್ರಾನ ಅಳತೆ ಸರಿಯಿಲ್ಲದಿದ್ದರೆ, ತೊಂದರೆ ಇನ್ನೂ ಹೆಚ್ಚುತ್ತದೆ ಎಂದು ಹೇಳಿದರು. ನಂತರ ಹುಡುಗಿಯರು ಹುಡುಗರಿಗೆ 1 ಗಂಟೆಯ  ಕಾಲ ಬ್ರಾ ಧರಿಸಿರುವ ಚಾಲೆಂಜ್‌ ಒಡ್ಡಿದರು. ಆದರೆ ಹುಡುಗರು ಬ್ರಾ ಧರಿಸಿ 5 ನಿಮಿಷಕ್ಕಿಂತ ಹೆಚ್ಚು ಸಮಯ ನಿಲ್ಲಲಾರದೆ ಹೋದರು ಮತ್ತು ಬ್ರಾ ಧರಿಸುವಿಕೆಯು ನಿಜಕ್ಕೂ ಒಂದು ಕಷ್ಟಕರ ಕೆಲಸ ಎಂದು ಒಪ್ಪಿಕೊಂಡರು. ಇದರಲ್ಲಿ ಭಾಗವಹಿಸಿದ ಎಲ್ಲ ಹುಡುಗರೂ, 1 ಗಂಟೆಯ ಕಾಲ ಬ್ರಾ ಧರಿಸಿದರೆ ಕಣ್ಣಿಗೆ ಕತ್ತಲು ಕವಿಯುವಂತಾಗುವುದೆಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ