90ರ ದಶಕದಲ್ಲಿ ಮೊದಲ ಬಾರಿಗೆ ದೆಹಲಿ ಪ್ರವಾಸಕ್ಕೆ ಹೋಗಿದ್ದಾಗ ರಸ್ತೆಯಲ್ಲಿ ಗಾಡಿಗಳ ಮೇಲೆ 25 ಪೈಸೆಗೆ  ಒಂದು ಲೋಟ ನೀರು ಮಾರುತ್ತಿದ್ದದ್ದನ್ನು ಕಂಡು ನಿಜಕ್ಕೂ ಆಚ್ಚರಿಯಾಗಿತ್ತು.  ಏಕೆಂದರೆ ಅದುವರೆಗೂ ನಾನು  ದುಡ್ಡು ಕೊಟ್ಟು ನೀರು ಕುಡಿದಿರಲಿಲ್ಲ ಮತ್ತು  ಅಂತಹ ಪ್ರಮೇಯವೂ ಬಂದಿರಲಿಲ್ಲ. ಎಲ್ಲಿ  ಬೇಕಾದರೂ, ಯಾರನ್ನೂ ಬೇಕಾದರೂ ಕುಡಿಯಲು ನೀರು ಕೊಡಿ ಎಂದರೆ ನೀರಿನ ಜೊತೆ ಬಾಯಾರಿಕೆಯನ್ನು ನಿವಾರಿಸುವ ಬೆಲ್ಲವನ್ನೂ ಕೊಡುವ ಕರುನಾಡು ನಮ್ಮದಾಗಿತ್ತು. ಆದರೆ ನಿಧಾನವಾಗಿ ಖನಿಜಯುಕ್ತ ನೀರಿನ ಹೆಸರಿನಲ್ಲಿ ಬಾಟೆಲ್ಲುಗಳಲ್ಲಿ ನೀರು ತುಂಬಿಸುವ ಉದ್ಯಮ ಬೆಳೆದಿರುವ ಪರಿ ನಿಜಕ್ಕೂ ಅಚ್ಚರಿ ಮತ್ತು ಗಾಬರಿಯನ್ನೂ ಮೂಡಿಸುತ್ತದೆ. ಅದೇ ರೀತಿಯಾಗಿ ನೀರಿನ ಜೊತೆ ಬೆಲ್ಲವನ್ನೂ ಕೊಡುತ್ತಿದ್ದ ನಾಡಿನವರೇ ಆದ ಶ್ರೀ ಸತ್ಯಶಂಕರ್ ಅವರು ಖನಿಜಯುಕ್ತ ನೀರಷ್ಟೇ ಅಲ್ಲದೇ ಜೀರಿಗೆ ನೀರನ್ನು ಮಾರುವ ಮೂಲಕ ಕೋಟ್ಯಾಧಿಪತಿಗಳಾಗಿರುವ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

ಮೂಲತಃ ಪುತ್ತೂರು ಬಳಿಯ ಬೆಳ್ಳಾರೆ ಗ್ರಾಮದಲ್ಲಿ ಸಾಂಪ್ರಾದಾಯಕ ಕೃಷಿಕ ಕುಟುಂಬದಲ್ಲಿ ಜನಿಸಿದರು ಜುಲೈ 1964ರಲ್ಲಿ  ಸತ್ಯ ಶಂಕರ್ ಆಟ ಪಾಠದಲ್ಲಿ ಚುರುಕಾಗಿದ್ದರೂ ಮನೆಯ  ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದ ಕಾರಣ  ಪಿಯುಸಿ ಓದುವಾಗಲೇ  ಓದನ್ನು ಅರ್ಧಕ್ಕೆ ನಿಲ್ಲಿಸಿ ಕುಟುಂಬದ ನಿರ್ವಹಣೆಗಾಗಿ ಸಣ್ಣ ಪುಟ್ಟ ಕೆಲಗಳನ್ನು ಮಾಡಲು ಪ್ರಾರಂಭಿಸುತ್ತಾರೆ.  ಅದೇ ಸಮಯದಲ್ಲಿ ಒಂದೂರಿಂದ ಮತ್ತೊಂದು ಊರಿಗೆ ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿದ್ದದ್ದನ್ನು ಗಮನಿಸಿ, ಕೇಂದ್ರ ಸರ್ಕಾರದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಆಟೋ ರಿಕ್ಷಾ ಖರೀದಿಸಿ ಆಟೋ ತಮ್ಮ ವೃತ್ತಿಜೀವನದನ್ನು ಆರಂಭಿಸಿ ಆಟೋ ಶಂಕರ್  ಎಂದೇ ಪ್ರಖ್ಯಾತರಾಗಿದ್ದಲ್ಲದೇ, ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಆಟೋಗಾಗಿ ಮಾಡಿದ್ದ  ಸಾಲವನ್ನು  ತೀರಿಸಿದಾಗ ಅವರಿಗೆ ಸ್ವಲ್ಪ ಧೈರ್ಯ ಬಂದು ಇದ್ದ ಆಟೋ ಮಾರಿ ಮತ್ತಷ್ಟು ಸಾಲವನ್ನು ಮಾಡಿ  ಡೀಸೆಲ್ ಅಂಬಾಸಿಡರ್ ಕಾರನ್ನು ಖರೀದಿಸಿ ಸ್ವತಃ ಅವರೇ ಸುಮಾರು ಒಂದೂವರೆ ವರ್ಷಗಳ ಕಾಲ ಓಡಿಸಿ  ಇದ್ದ ಸಾಲವನ್ನೆಲ್ಲಾ ತೀರಿಸಿ ಸುಮಾರು  1 ಲಕ್ಷ ಹಣ ತಮ್ಮ ಕೈಯಲ್ಲಿ ಇದ್ದಾಗ, ಕಾರನ್ನು ಮಾರಿ ಹೊಸಾ ವ್ಯವಹಾರವನ್ನು  ಮಾಡಲು ನಿರ್ಧರಿಸಿರುತ್ತಾರೆ.

ಈ ಬಾರಿ ತಿರುಗಾಟದ ಕೆಲಸ ಬೇಡ ಎಂದು ನಿರ್ಧರಿಸಿ ಡಿಸೆಂಬರ್ 1987 ರಲ್ಲಿ ಪುತ್ತೂರಿನಲ್ಲಿ  ಆಟೋಮೊಬೈಲ್ ಬಿಡಿಭಾಗಗಳ ಅಂಗಡಿಯನ್ನು ಪ್ರಾರಂಭಿಸಿದಾಗ,  ಅವರನ್ನು ಬೆಂಬಲಿಸಿದ್ದಕ್ಕಿಂತಲೂ,  ಏ ಈ ವ್ಯವಹಾರಗಳೆಲ್ಲವೂ ನಮ್ಮಂತಹವವರಿಗೆ ಆಗಿಬಾರದು  ಎಂದು ಭಯ ಪಡಿಸಿದವರೇ ಹೆಚ್ಚಾಗಿದ್ದರೂ, ಅದಕ್ಕೆಲ್ಲಾ  ಅಂಜದೆ ಆರಂಭಿಸಿದ ಹೊಸಾ ವ್ಯವಹಾರ  ಆವರ ಕೈ ಹಿಡಿಯುತ್ತಿದ್ದೇ ತಡಾ, 1989 ಟೈರ್ ಡೀಲರ್‌ಶಿಪ್ ಅಂಗಡಿಯನ್ನು ಸಹ ಆರಂಭಿಸುವ  ಮೂಲಕ ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ದೊಡ್ದ ಮಟ್ಟದ ಉದ್ಯಮಿಯಾಗುವ ಲಕ್ಷಣಗಳನ್ನು ತೋರಿಸುತ್ತಾರೆ.

ಈಗಾಗಲೇ ವಾಹನಗಳನ್ನು ಖರೀದಿಸುವಾಗ ಬ್ಯಾಂಕುಗಳ ಹತ್ತಾರು ಪ್ರಕ್ರಿಯೆಗಳು ಬಹಳ ಗೊಂದಲಮಯವಾಗಿದ್ದು ಸಣ್ಣ ಪುಟ್ಟವರು ವಾಹನಗಳನ್ನು ಖರೀಧಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳುವುದು ದುಸ್ಸಾಹಸವಾಗುತ್ತಿದ್ದದ್ದನ್ನು ಗಮನಿಸಿದ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದ ಶಂಕರ್, ಅಂತಹ ಜನರಿಗೆ ಸಹಾಯ ಮಾಡಲೆಂದೇ ಈಗಾಗಲೇ ಬಳಸಿದ್ದ  ಆಟೋ ಮತ್ತು ಕಾರುಗಳನ್ನು ಕೊಂಡುಕೊಳ್ಳಲು ಬಹಳ ಸುಲಭವಾಗಿ ಮತ್ತು ಸರಳ ಬಡ್ಡಿಯಲ್ಲಿ ಸಾಲ ಕೊಡುವಂತಹ  ಪ್ರವೀಣ್ ಕ್ಯಾಪಿಟಲ್ ಎಂಬ  ಆಟೋ ಹಣಕಾಸು ಸಂಸ್ಥೆಯನ್ನು 1994 ರಲ್ಲಿ ಆರಂಭಿಸಿ ತಮ್ಮ ವ್ಯವಹಾರದ ಪರಿಧಿಯನ್ನು ವಿಸ್ತರಿಸಿಕೊಂಡ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.  ಪ್ರಸ್ತುತ ಅವರ ಪ್ರವೀಣ್ ಕ್ಯಾಪಿಟಲ್  ಕರ್ನಾಟಕ ರಾಜ್ಯದಾದ್ಯಂತ ಸುಮಾರು 9 ಶಾಖೆಗಳನ್ನು  ಹೊಂದಿದ್ದು, ವಾಹನ ಮತ್ತು ಭೂ ಸಾಲಗಳನ್ನು ಕೊಡುವ ಸಂಸ್ಥೆಯಾಗಿ ಜನರ ಮನ್ನಣೆ ಗಳಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ