ಭಿಕಾರಿ : ನೋಡಿ ತಾಯಿ, ನಿಮ್ಮ ಅಕ್ಕಪಕ್ಕದ ಮನೆಯವರು ಏನೇನೋ ತಿಂಡಿ ತಿನಿಸು ಕೊಟ್ಟಿದ್ದಾರೆ. ನೀವೇನು ಕೊಡ್ತೀರೋ ನೋಡಿ.....
ಗೃಹಿಣಿ : ಇರಲಿ, ಈ ಹಾಜ್ಮೋಲಾ ಮಾತ್ರೆ ತಗೋ ಅವರೆಲ್ಲ ಕೊಟ್ಟಿದ್ದು ಜೀರ್ಣವಾಗಲು ಇದು ತುಂಬಾ ಸಹಾಯ ಮಾಡುತ್ತದೆ.
ಒಂದು ಗುಡಿ ಮುಂದೆ ಒಂದು ಹಸು, ಆಗ ತಾನೇ ಮದುವೆಯಾಗಿದ್ದ ಕತ್ತೆಗಳ ಜೋಡಿಯೊಂದು ನಿಂತಿದ್ದವು. ಗುಡಿಯಿಂದ ಆಚೆ ಬರುತ್ತಿದ್ದ ಜನರೆಲ್ಲ ಹಸುವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಮುಂದೆ ಸಾಗುತ್ತಿದ್ದರು. ಆದರೆ ಯಾರೂ ಈ ಕತ್ತೆಗಳನ್ನು ಕ್ಯಾರೇ ಅನ್ನುತ್ತಿರಲಿಲ್ಲ.
ಹುಲ್ಲು ಮೇಯುತ್ತಿದ್ದ ಗಂಡನನ್ನು ನವವಧು ಕತ್ತೆ ಕೇಳಿತು, ``ಯಾಕ್ರಿ, ಎಲ್ಲರೂ ಆ ಹಸುವನ್ನು ಮಾತ್ರ ಮುಟ್ಟಿ ಮುಟ್ಟಿ ಕಣ್ಣಿಗೊತ್ತಿಕೊಳ್ಳುತ್ತಾರೆ. ನನ್ನನ್ನು ಮಾತ್ರ ಯಾರೂ ಮುಟ್ಟೋದೇ ಇಲ್ಲ.... ಯಾಕೆ?''
ಆಗ ನವವಿವಾಹಿತ ಪತಿ ಕತ್ತೆ ಸ್ಟೈಲಾಗಿ ಹೇಳಿತು, ``ಗಂಡ ಅನ್ನಿಸಿಕೊಂಡ ನಾನು ನಿನ್ನ ಪಕ್ಕಾನೇ ನಿಂತಿರೋವಾಗ, ಯಾವ ನನ್ನ ಮಗನಿಗೆ ನಿನ್ನನ್ನು ಮುಟ್ಟುವ ಧೈರ್ಯ ಬಂದೀತು?''
ಗುಂಡ : ಈ ಗೂಗಲ್ ಮ್ಯಾಪ್ ಲೋಕೇಶನ್ ಬಗ್ಗೆ ನನಗೊಂದು ಕೆಟ್ಟ ಕೋಪವಿದೆ!
ಸೀನ : ಅದೇನಯ್ಯ ಅಂಥದ್ದು?
ಗುಂಡ : ಎಲ್ಲದಕ್ಕೂ ಲೆಫ್ಟ್ ರೈಟ್ ಅಂತ ತೋರಿಸುತ್ತಲ್ಲಾ.... ನಮ್ಮ ಬಳಿ ಲೈಸೆನ್ಸ್ ಇಲ್ಲದಿದ್ದಾಗ, ಮುಂದಿನ ರಸ್ತೇಲಿ ಟ್ರಾಫಿಕ್ ಮಾಮಾ ನಿಂತಿದ್ದಾನೆ, ಇಂತಿಂಥ ಗಲ್ಲಿಗಳಲ್ಲಿ ನುಗ್ಗಿ ಹೋಗಿ ಅಂತ ಯಾಕೆ ಹೇಳಬಾರದು?
ಮಿಟಕಲಾಡಿ ಮೋನಾ ಗಿಫ್ಟ್ ಕಾರ್ನರ್ ಗೆ ಹೋಗಿ 3 ಗಂಟೆ ಕಾಲ ತಡಕಾಡಿದರೂ ಫ್ರೆಂಡ್ ಮದುವೆಗಾಗಿ ಒಳ್ಳೆಯ ಗಿಫ್ಟ್ ಆರಿಸಲು ಆಗಲೇ ಇಲ್ಲ. ಅವಳಿಗೆ ಬೇರೆ ಬೇರೆ ಗಿಫ್ಟ್ ಐಟಂ ತೋರಿಸಿ ಅಲ್ಲಿದ್ದ ಸೇಲ್ಸ್ ನವರೆಲ್ಲ ರೋಸಿಹೋದರು.
ಏನೂ ಬೇಡ ಅಂತ ಮೋನಾ ಅಲ್ಲಿಂದ ಹೊರಡಲು ಸಿದ್ಧಳಾದಳು. ಇನ್ನೇನು ಹೊರ ಬರಬೇಕು ಅನ್ನುವಾಗ, ಮೂಲೆಯೊಂದರಲ್ಲಿ ನಿಂತಿದ್ದ ಜೀವಂತ ಬೊಂಬೆ ಅವಳ ಗಮನ ಸೆಳೆಯಿತು.
``ರೀ, ಸ್ಮೈಲ್ ಕೊಡ್ತಾ ಇರೋ ಈ ದೆವ್ವದ ಬೊಂಬೆಯ ರೇಟ್ ಎಷ್ಟು?'' ಎಂದು ಆ ಬೊಂಬೆ ಕಡೆ ಕೈ ತೋರಿಸುತ್ತಾ ಕೇಳಿದಳು.
``ಸರಿಯಾಗಿ ನೋಡಿ ಮೇಡಂ, ನೀವು ಕೇಳ್ತಿರೋದು ನಿಮ್ಮ ಎದುರಿಗಿರುವ ಮೇಕಪ್ ಮಿರರ್ ನ ತಾನೇ?'' ಎನ್ನುವುದೇ ಆ ಸೇಲ್ಸ್ ಮ್ಯಾನ್.
ಅಂದು ಬೆಳಗಿನ ಹೊತ್ತಿಗೇ ಗಡಬಡಿಸುತ್ತಾ ವಿಶಾಲು ವಿಶ್ವನ ಬಳಿ ಬಂದು ಕೇಳಿದಳು, ``ಬೇಗ.... ನನಗೆ ಇವತ್ತಿನ ಪೇಪರ್ ಕೊಡಿ!''
``ಅಯ್ಯೋ..... ಇಷ್ಟೆಲ್ಲ ಕಲಿತವಳು ನೀನು, ಇನ್ನು ಹಾರ್ಡ್ ಕಾಪಿ ಪೇಪರ್ ಗೆ ಏಕೆ ಅಂಟಿಕೊಂಡಿರಬೇಕು? ನನ್ನ ಲ್ಯಾಪ್ ಟಾಪ್ ಅಲ್ಲೇ ಟೇಬಲ್ ಮೇಲಿದೆ ನೋಡು, ಅದನ್ನು ತಗೊಂಡು ಇ-ಪೇಪರ್ ನೋಡಬಾರದೇ?'' ಎಂದು ವಿಶ್ವ ಬೋಧಿಸಿದ.
ಅದಾದ ಸ್ವಲ್ಪ ಹೊತ್ತಿಗೆ ಅಡುಗೆಮನೆಯಲ್ಲಿ ಧಡಾರ್ ಎಂದು ವಿಶಾಲು, ಅಲ್ಲಿದ್ದ ಸ್ಲಾಬ್ ನ್ನು ಬಾರಿಸುತ್ತಿರುವುದು ವಿಶ್ವನಿಗೆ ಇಲ್ಲಿಂದಲೇ ಗೊತ್ತಾಯಿತು ಏನಾಯಿತೋ ಏನೋ ಎಂದು ಧಡಬಡಿಸಿ ಒಳಗೆ ಓಡಿದ ವಿಶ್ವ. ನಿರ್ದಾಕ್ಷಿಣ್ಯವಾಗಿ ವಿಶಾಲು ಅವನ ಲ್ಯಾಪ್ ಟಾಪ್ ನಿಂದ ಕಿಚನ್ ಸ್ಲಾಬ್ ನ್ನು ಬಾರಿಸುತ್ತಿರಬೇಕೇ?





