ಚಳಿಗಾಲದಲ್ಲಿ ನಿಮ್ಮ ವುಲ್ಲನ್ ಡ್ರೆಸೆಸ್ ನ್ನು ಸದಾ ಹೊಸತಾಗಿರುವಂತೆ ಕಾಪಾಡಿಕೊಳ್ಳಲು, ಇಲ್ಲಿನ ಸಲಹೆಗಳನ್ನು ಅಗತ್ಯ ಅನುಸರಿಸಿ.....!
ಚಳಿಗಾಲದ ಉತ್ತಮ ಹವೆಯ ಮಜಾ ಪಡೆಯುವುದರ ಜೊತೆ, ಎಂಜಾಯ್ ಮಾಡಲು ಎಷ್ಟೋ ಸಲ ನಾವು ಗಿರಿಧಾಮಗಳಿಗೂ ಹೋಗುತ್ತೇವೆ. ಇದಕ್ಕಾಗಿ ನಾವು ಅಗತ್ಯವಾಗಿ ವುಲ್ಲನ್ ಸ್ವೆಟರ್ಸ್, ಜ್ಯಾಕೆಟ್ಸ್, ಕೋಟ್ಸ್, ಸ್ಟ್ಸೋಲ್ ಇತ್ಯಾದಿ ಬಳಸುತ್ತೇವೆ. ಇದು ನಮ್ಮ ದೇಹವನ್ನು ಬೆಚ್ಚಗಿಡುವುದು ಮಾತ್ರವಲ್ಲದೆ, ಸ್ಟೈಲ್ ಸ್ಟೇಟ್ ಮೆಂಟ್ ಗಳೂ ಆಗಿವೆ.
ಹೀಗಾಗಿ ಈ ದುಬಾರಿ ಉಣ್ಣೆ ಉಡುಗೆಗಳನ್ನು ಅತಿ ಜೋಪಾನವಾಗಿ ಸಂರಕ್ಷಿಸಬೇಕಾದುದು ಅನಿವಾರ್ಯ. ಆಗ ಮಾತ್ರ ಇದರ ಹೊಳಪು ಹಾಗೇ ಉಳಿಯುತ್ತದೆ, ಸದಾ ಹೊಸದರಂತೆ ಕಾಣಿಸುತ್ತದೆ. ಅದಕ್ಕಾಗಿ ಈ ಸಲಹೆಗಳನ್ನು ಅಗತ್ಯವಾಗಿ ಅನುಸರಿಸಿ :
ಇಂಥವನ್ನು ಒಗೆಯಬೇಕಾದಾಗೆಲ್ಲ, ಅದರ ಮೇಲೆ ನಮೂದಿಸಲಾಗಿರುವ ಸೂಚನೆಗಳ ಪ್ರಕಾರವೇ ಮುಂದುವರಿಯಿರಿ. ಯಾವುದರ ಮೇಲೆ `ಓನ್ಲಿ ಡ್ರೈ ಕ್ಲೀನ್' ಇರುತ್ತದೋ ಅದನ್ನು ವಾಶಿಂಗ್ ಮೆಶೀನ್ ಅಥವಾ ಕಲ್ಲಿನ ಮೇಲೆ ಕಸಕಿ ಒಗೆಯಬೇಡಿ. ಒಗೆದ ನಂತರ ಇದರಿಂದ ಹೆಚ್ಚುವರಿ ನೀರು ಹೊರತೆಗೆಯಲು, ಅವನ್ನು ಬಲವಾಗಿ ಹಿಂಡುವ ಬದಲು, ಕಾಟನ್ ಟವೆಲ್ ನಲ್ಲಿ ಸುತ್ತಿ, ನೇತುಹಾಕಿ. ತಂತಾನೇ ನೀರು ಹೋಗಿ, ಅದು ಬೇಗ ಒಣಗುತ್ತದೆ. ಲೂಸ್ ಆಗಿ ಹೋಗುವ ರಿಸ್ಕ್ ಸಹ ಇಲ್ಲ.
ವುಲ್ಲನ್ ವಸ್ತುಗಳ ಮೇಲೆ ಎಂದೂ ಪರ್ಫ್ಯೂಮ್ ಸಿಂಪಡಿಸಬೇಡಿ. ಇದರಿಂದ ಅದಕ್ಕೆ ಕ್ರಿಮಿಕೀಟ ಕೂಡಿಕೊಳ್ಳುವ ಸಂಭವ ಇದೆ. ಟೂರ್ ಹೊರಟಾಗ, ಇವುಗಳ ಆಕಾರ ಕೆಡದಿರಲು, ಅದು ಶ್ರಿಂಕ್ ಆಗದಂತೆ ತಡೆಗಟ್ಟಲು, ಇನ್ನು ತುಸು ಲೈಟಾಗಿ ಫೋಲ್ಡ್ ಮಾಡಿ, ಟಿಶ್ಯು ಪೇಪರ್ ನಲ್ಲಿ ಸುತ್ತಿಡಿ.
ಇದನ್ನು ಒಗೆಯಲು ಮೈಲ್ಡ್ ಲಿಕ್ವಿಡ್ ಡಿಟರ್ಜೆಂಟ್ ಮಾತ್ರ ಬಳಸಬೇಕು. ಇದರಿಂದ ಅವು ಕೆಡುವುದೂ ಇಲ್ಲ, ಕಲರ್ ಫೇಲ್ಡ್ ಆಗುವ ರಿಸ್ಕಿಲ್ಲ. ಇವನ್ನು ಸದಾ ಬ್ರಶ್ ನಿಂದ ಮಾತ್ರ ಕ್ಲೀನ್ ಮಾಡಿ, ಧೂಳು ಕೊಡವಬೇಕು. ಇದರಿಂದ ಉಣ್ಣೆ ವಸ್ತ್ರ ಹೆಚ್ಚು ದಿನ ಬಾಳಿಕೆ ಬರುತ್ತದೆ.
ಇವನ್ನು ನೀವು ಬೀರು, ಕಬೋರ್ಡ್ ಎಲ್ಲೇ ಇಡಿ, ಅದರ ಜೊತೆ ಅಗತ್ಯವಾಗಿ ಬೇವಿನ ಎಲೆ, ನುಸಿಗುಳಿಗೆ ಇತ್ಯಾದಿ ಇರಿಸಿ. ಇದರಿಂದ ಇವಕ್ಕೆ ಎಂದೂ ಕ್ರಿಮಿಕೀಟದ ಬಾಧೆ ತಗುಲುವುದಿಲ್ಲ. ಇವನ್ನು ವಾಶಿಂಗ್ ಮೆಶೀನಿನ ಡ್ರೈಯರ್ ಗೆ ಎಂದೂ ಹಾಕಬೇಡಿ.
ಇದರ ದೀರ್ಘಾವಧಿ ಬಾಳಿಕೆಗಾಗಿ, ಸದಾ ಇವನ್ನು ಉಲ್ಟಾ ಮಾಡಿ ಮಡಿಚಿರಿ. ಇವು ಒಗೆದು, ಚೆನ್ನಾಗಿ ಒಣಗಿದ ನಂತರವೇ ಇಸ್ತ್ರೀ ಮಾಡಬೇಕು. ಆಗ ಇದರಲ್ಲಿ ಫೋಲ್ಡಿಂಗ್ ಕಾಣಿಸುದಿಲ್ಲ. ಇಸ್ತ್ರೀ ಮಾಡುವಾಗ ಇವುಗಳ ಫ್ಯಾಬ್ರಿಕ್ ಸುಡಬಾರದೆಂದರೆ, ಸದಾ ಸ್ಟೀಂ ಪ್ರೆಸ್ ಮಾತ್ರ ಮಾಡಬೇಕು.
ಸ್ವೆಟರ್ ಇತ್ಯಾದಿಗಳನ್ನು ಎಂದೂ ಹ್ಯಾಂಗರ್ ನಲ್ಲಿ ನೇತು ಹಾಕಬೇಡಿ. ಬದಲಾಗಿ ಲೈಟಾಗಿ ಫೋಲ್ಡ್ ಮಾಡಿಯೇ ಇರಿಸಬೇಕು, ಒಗೆದು ಒಣಗಿಸುವಾಗಲೂ, ತಂತಿ ಮೇಲೆ ನೇರವಾಗಿ ಒಣಗಿಸಿ. ನೇತು ಹಾಕುವುದರಿಂದ, ಎಳೆದಂತಾಗಿ ಅದರ ಆಕಾರ ಕೆಡುತ್ತದೆ, ಲುಕ್ಸ್ ಹಾಳಾಗುತ್ತದೆ. ಇಕ್ಕೆ ದುರ್ವಾಸನೆ ತಗುಲಬಾರದು ಎಂದರೆ, ಕಬೋರ್ಡ್ ಒಳಗಿನ ಜಾಗ 100% ಡ್ರೈ ತಾನೇ ಎಂದು ಖಚಿತಪಡಿಸಿಕೊಳ್ಳಿ, ಒಂದಿಷ್ಟೂ ತೇವಾಂಶ ಇರಲೇಬಾರದು!





