ಸುಜಾತಾ ನಗುವನ್ನು ನಿಲ್ಲಿಸುತ್ತಲೇ ಇಲ್ಲ. ಮೀರಾ ಅವಳನ್ನು ಎಚ್ಚರಿಸಿದಳು. ಬೆಳಗಿನ ವಾಕಿಂಗ್‌ ಮಾಡುತ್ತಿದ್ದವರೆಲ್ಲರ ದೃಷ್ಟಿ ಅವಳ ಮೇಲೆ ಬಿತ್ತು. ಅವಳೇ ಒಂದು ನಮೂನೆ.... 50 ವರ್ಷ ದಾಟಿದ್ದರೂ ಸುಜಾತಾ ಇಂದೂ ಬದುಕನ್ನು ಹಾಯಾಗಿ, ಸಂತೋಷವಾಗಿ ಕಳೆಯುತ್ತಾಳೆ. ಆದರೆ ಕೆಲವೊಮ್ಮೆ ಅವಳ ಈ ಹುಡುಗಾಟಿಕೆ ಸಾರ್ವಜನಿಕ ಸ್ಥಳದಲ್ಲಿ ಅವಳನ್ನು ಆಕರ್ಷಣೆಯ ಕೇಂದ್ರಬಿಂದುವಾಗಿಸುತ್ತದೆ. ಆ ದಿನ ಆದದ್ದೂ ಹಾಗೆಯೇ. ದಿನ ನಿತ್ಯದಂತೆ ಬೆಳಗಿನ ವಾಕಿಂಗ್‌ ಮಾಡುತ್ತಿದ್ದ ಗೆಳತಿಯರಿಬ್ಬರೂ ತಮ್ಮ ಯಾವುದೋ ಮಾತಿಗೆ ನಗತೊಡಗಿದರು. ವೀರಾಳೇನೋ ಬೇಗನೆ ತನ್ನ  ನಗುವನ್ನು ಹತೋಟಿಗೆ ತಂದಳು. ಆದರೆ ಅಭ್ಯಾಸ ಬಲದಿಂದ ಸುಜಾತಾ ನಗುವನ್ನು ತಡೆಯಲಾರದೆ ಹೋದಳು.

ನಗರಪಾಲಿಕೆಯವರು ನಿರ್ಮಿಸಿರುವ ಸುಂದರವಾದ ಪಾರ್ಕ್‌ಗಳಲ್ಲಿ ಬೆಳಗಿನ ವಾಕಿಂಗ್‌ ಮಾಡುವವರ ಸಂಖ್ಯೆ ದೊಡ್ಡದಾಗಿರುತ್ತದೆ. ಈಗ ರಸ್ತೆಗಳೂ ದೊಡ್ಡದಾಗಿದ್ದು ಬೆಳಗಿನ ಜಾವದಲ್ಲಿ ವಾಹನ ಸಂಚಾರ ಹೆಚ್ಚಾಗಿ ಇರುವುದಿಲ್ಲವಾದ್ದರಿಂದ ಜನರು ವಾಕಿಂಗ್‌ಗೆ ರಸ್ತೆಗಳನ್ನೂ ಆರಿಸಿಕೊಳ್ಳುತ್ತಾರೆ.

ಆದರೆ ಸುಜಾತಾ ಮತ್ತು ಮೀರಾ ಪ್ರತಿದಿನ ಪಾರ್ಕ್‌ನಲ್ಲೇ ವಾಕಿಂಗ್‌ ಮಾಡುತ್ತಾರೆ. ಸುಜಾತಾಳ ಮನೆ ಪಾರ್ಕ್‌ನ ಹತ್ತಿರದಲ್ಲಿಯೇ ಇದೆ. ಅವಳ ಪತಿ 2 ವರ್ಷಗಳ ಹಿಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪತಿಯೊಂದಿಗೆ ಸಂತೋಷವಾಗಿ ಜೀವನ ಕಳೆದಿದ್ದ ಸುಜಾತಾ, ವಿಧಿ ಬರಹನ್ನು ಸಹಜವಾಗಿಯೇ ಸ್ವೀಕರಿಸಿ ಮುಂದೆ ನಡೆದಿದ್ದಳು.

ಪತಿಯ ಮರಣಾನಂತರ, ಈಗ 6 ತಿಂಗಳ ಹಿಂದೆ ಸುಜಾತಾ ತನ್ನ ಏಕಮಾತ್ರ ಪುತ್ರಿ ಪಲ್ಲವಿಯನ್ನು ಸಾಫ್ಟ್ ವೇರ್‌ ಎಂಜಿನಿಯರ್ ಆಗಿದ್ದ ವರನೊಂದಿಗೆ ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟಿದ್ದಳು. ಚೆನ್ನೈನಲ್ಲಿದ್ದ ಮಗಳು ಅಳಿಯನ ಮನೆಗೆ ಹೋಗಿ ಅವರು ಸಂತೋಷ, ಸಂತೃಪ್ತಿಯಿಂದ ಬಾಳುತ್ತಿರುವುದನ್ನು ನೋಡಿ ಸಮಾಧಾನದಿಂದ ಹಿಂದಿರುಗಿದ್ದಳು. ಪ್ರಾರಂಭದಿಂದಲೂ ಶಿಸ್ತಿನ ಜೀವನ ನಡೆಸುತ್ತಿದ್ದ ಸುಜಾತಾ, ತನ್ನ ಉತ್ತಮ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮ ಮಾಡುವ ಕ್ರಮದಿಂದಾಗಿ ವಾಸ್ತವ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನವಳಂತೆ ಕಾಣುತ್ತಿದ್ದಳು.

ಆ ದಿನ ಮೀರಾಳ ಆರೋಗ್ಯ ಸರಿಯಿಲ್ಲದುದ್ದರಿಂದ ಸುಜಾತಾ ಒಬ್ಬಳೇ ವಾಕಿಂಗ್‌ ಮಾಡುತ್ತಿದ್ದಳು. ಅವಳು ತನ್ನ ವಾಕಿಂಗ್‌ ಮುಗಿಸಿ ಮನೆಯ ಕಡೆಗೆ ಹೊರಟಳು. ಆಗ ಇದ್ದಕ್ಕಿದ್ದಂತೆ ಒಂದು ನಾಯಿ ಎದುರಿಗೆ ಓಡಿಬರುತ್ತಿದ್ದುದನ್ನು ನೋಡಿದಳು. ಅವಳು ಪಕ್ಕಕ್ಕೆ ಸರಿಯುವಷ್ಟರಲ್ಲಿ ನಾಯಿ ಅವಳ ಮೇಲೆ ನೆಗೆದು ಓಡಿಹೋಯಿತು.

ಸುಜಾತಾ ಬೀಳದಿರಲು ಪ್ರಯತ್ನಿಸಿದರೂ ಸಾಧ್ಯವಾಗದೆ ಕೆಳಗೆ ಬಿದ್ದಳು. ಹತ್ತಿರದಲ್ಲಿ ಹೋಗುತ್ತಿದ್ದ ಜನರು ಅವಳತ್ತ ಓಡಿಬಂದರು. ಒಬ್ಬ ಮಹಿಳೆ ಅವಳು ಮೇಲೇಳಲು ಸಹಾಯ ಮಾಡಿದಳು. ಆಗ ಅದೇ ನಾಯಿಯನ್ನು ಸರಪಳಿ ಹಾಕಿ ಹಿಡಿದುಕೊಂಡ ಒಬ್ಬರು 60 ವರ್ಷ ವಯಸ್ಸಿನ ವ್ಯಕ್ತಿ ಅವಳ ಬಳಿಗೆ ಬಂದರು.

ಆ ವ್ಯಕ್ತಿ ಸುಜಾತಾಳನ್ನು ಕ್ಷಮೆ ಕೇಳುತ್ತಾ, ``ನನ್ನ ಬಂಟಿ ಮಾಡಿದ ಕೆಲಸದಿಂದ ನನಗೆ ನಾಚಿಕೆಯಾಗುತ್ತಿದೆ. ಸಾಧಾರಣವಾಗಿ ಇದು ಶಾಂತವಾಗಿರುತ್ತದೆ. ಆದರೆ ಈ ದಿನ ಇದಕ್ಕೇನಾಯಿತೋ ಗೊತ್ತಿಲ್ಲ..... ನಿಮಗೆ ಹೆಚ್ಚು ಪೆಟ್ಟಾಗಿಲ್ಲ ತಾನೇ?''

``ಇಲ್ಲ, ಏನಾಗಿಲ್ಲ,'' ಎನ್ನುತ್ತಾ ಸುಜಾತಾ ತನ್ನ ಮೊಳಕೈಗೆ ಅಂಟಿದ್ದ ಮಣ್ಣನ್ನು ಕೊಡವುತ್ತಾ ಹೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ