``ರೀ... ನೀವಂತೂ ಮೊದಲಿನ ತರಹ ಇಲ್ಲವೇ ಇಲ್ಲ ಬಿಡಿ!'' ಬೆಳಗಿನ ಬಿಸಿ ಕಾಫಿ ಹೀರುವ ಸಮಯದಲ್ಲಿ ನನ್ನ ಶ್ರೀಮತಿ ಹೀಗೊಂದು ನೇರ ಪ್ರಸ್ತಾಪ ಇಡುವುದೇ? ನಾನೋ.... ಬೈ ಎಲೆಕ್ಷನ್‌ ಭರಾಟೆಯಲ್ಲಿ ಎಲ್ಲಿ ನಮ್ಮ ಸರ್ಕಾರ ಬಿದ್ದು ಹೋದೀತೋ ಎಂದು ಯೋಚಿಸುತ್ತಿದ್ದೆ.

``ಅಯ್ಯೋ ಹುಚ್ಚಿ.... 40 ವರ್ಷಗಳು ಕಳೆದ ಮೇಲೆ ನಿನಗೇಕೆ ಈ ಡೌಟು?''

``ನೋಡಿ.... ಈ ಸಂಸಾರದ ಪ್ರಗತಿಗಾಗಿ ನಾನು ಎಷ್ಟೆಲ್ಲ ದುಡಿದಿದ್ದೇನೆ.... ನೀವು ಇದ್ದೀರಿ, ನನ್ನ ಪರಿಶ್ರಮವನ್ನೆಲ್ಲ ಹೊಳೆಯಲ್ಲಿ ಕಿವುಚಿದ ಹುಣಿಸೆ ಮಾಡಿದ್ದೀರಿ!'' ಎಂದು ಗುಡುಗಿದಳು.

``ಇದೇನೇ ಇದು ಹೀಗೆ ಹೇಳಿಬಿಟ್ಟೆ..... ಮಧ್ಯಮ ವರ್ಗದವರಾದ ನಾವು ಕೇವಲ ಸಂಸಾರದ ಚಿಂತೆ ಮಾತ್ರ ಮಾಡುವುದಲ್ಲ..... ರಾಜ್ಯ, ರಾಷ್ಟ್ರದ ಬಗ್ಗೆಯೂ ಚಿಂತಿಸುತ್ತಿರುತ್ತೇವೆ. ಯಾರೋ ಮಹಾನ್‌ ರಾಜಕಾರಣಿಗಳು ವೇದಿಕೆಯಲ್ಲಿ ಕುಳಿತಿದ್ದರೂ ಸದಾ ಕಣ್ಣು ಮುಚ್ಚಿಕೊಂಡು ದೇಶದ ಪ್ರಗತಿಯ ಬಗ್ಗೆ ಸದಾ ಚಿಂತಿಸುತ್ತೇನೆ ಎಂಬಂತೆ ಪೋಸ್‌ ಕೊಡ್ತಾರಲ್ಲ, ಹಾಗೆ ಅಂತ ಅಂದುಕೊಳ್ಳಬೇಡ ಮತ್ತೆ!'' ನಾನೂ ಸರಿಯಾಗಿ ತಿರುಗೇಟು ಕೊಟ್ಟೆ.

``ಓಹೋ.... ಇದಕ್ಕೆಲ್ಲ ಏನೂ ಕಡಿಮೆ ಇಲ್ಲ ಬಿಡಿ.''

``ಅದು ಸರಿ, ನಮ್ಮ ಸರ್ಕಾರದಲ್ಲಿ ಅದೇನು ಕೊರತೆ ಕಂಡೆ ನೀನು?''

``ನಿಮ್ಮದಿರಲಿ..... ನಮ್ಮ ಸರ್ಕಾರದ ಪ್ರವರ ಹೇಳಲು ಶುರು ಮಾಡಿದರೆ ನಡೆಯುತ್ತಿರುವ ನಿಮ್ಮ ಸರ್ಕಾರದ ಗಾಡಿಯ ಚಕ್ರ ಹಳ್ಳದಲ್ಲಿ ಹೂತುಹೋದೀತು!''

ನನ್ನ ಇಂತಹ ಎಚ್ಚರಿಕೆ, ಸೂಚನೆಗಳ ಬಗ್ಗೆ ಅವಳೆಂದೂ ಗಮನ ಕೊಡುವವಳೇ ಅಲ್ಲ. ಈ ಸಲ ಅವಳು ನನ್ನ ಮಾತುಗಳನ್ನು ನಿರ್ಲಕ್ಷಿಸುತ್ತಿದ್ದಳೇನೋ, ಆದರೆ ನಾನು ಆವೇಶದಿಂದ ತುಸು ಗಟ್ಟಿಯಾಗಿಯೇ ಮಾತನಾಡಿದ್ದೆ. ಪರಿಣಾಮವಾಗಿ ಅವಳು ದಾಂಪತ್ಯ ಜೀವನದ ಶಾಂತಿ ಭಂಗ ಮಾಡಿ, ನೆಮ್ಮದಿಯ ಸೀಮೋಲ್ಲಂಘನ ಮಾಡಿದ್ದಳು. ಆವೇಶ ಇಳಿದ ಮೇಲೆ ತಾನೇ ತುಸು ಸರಿಹೋದಳು.

ಅವಳನ್ನು ನಾರ್ಮಲ್ ಮೋಡ್‌ಗೆ ತರಲು ಯತ್ನಿಸುತ್ತಾ ಹೇಳಿದೆ, ``ಹಸುಗೂಸಿನ ಸ್ವಭಾವದ ನಿನ್ನ ಗಂಡ, ಆಫೀಸ್‌ ಬಿಟ್ಟ ತಕ್ಷಣ ಸೀದಾ ಮನೆಗೆ ಬಂದುಬಿಡ್ತಾನೆ. ಬರುವ ದಾರಿ ತುಂಬಾ ಸಾವಿರಾರು ಅಬಲೆ ಸಬಲೆಯರು ಡಿಕ್ಕಿ ಹೊಡೆಯುತ್ತಿದ್ದರೂ ಯಾರನ್ನೂ ಕಣ್ಣೆತ್ತಿಯೂ ನೋಡುವುದಿಲ್ಲ, ಅಂಥ ಕಟ್ಟುನಿಟ್ಟು, ಏಕಪತ್ನೀ ವ್ರತಸ್ಥ ಆಗಿರಬೇಕೆಂಬ ನೇಮ, ನಿಷ್ಠೆ ಉಂಟು. ಹೀಗಿರವಾಗ ನಾನು ಮೊದಲಿನಂತೆ ಉಳಿದಿಲ್ಲ ಅಥವಾ ಪ್ರೀತಿಸುತ್ತಿಲ್ಲ ಅಂದ್ರೆ ಏನರ್ಥ?''

``ಇರಲಿ, ಮೊದಲು ಈಗಿನ ನಿಮ್ಮ ಪ್ರೀತಿಯಲ್ಲಿ ಏನೇನು ಉತ್ತಮ ಅಂಶಗಳಿವೆ ಅಂತ ಹೇಳಿಬಿಡಿ, ಆಮೇಲೆ ಅದರಲ್ಲಿ ಏನೇನು ಲೋಪದೋಷಗಳಿವೆ ಅಂತ ಪಟ್ಟಿ ಮಾಡೋಣ. ನಮ್ಮ ಮದುವೆ ಆಗಿ 40 ವರ್ಷಗಳಾದ ಮೇಲೆ ಪಾರ್ಲಿಮೆಂಟ್‌ನಲ್ಲಿ ಅಪರೂಪಕ್ಕೆ ವಿರೋಧ ಪಕ್ಷದವರು ಬಾಯಿ ಬಿಡುವಂತೆ ಬಿಟ್ಟಿದ್ದೀರಿ,'' ಎಂದು ತಿಪ್ಪೆ ಸಾರಿಸಿದಳು.

``ಉದಾಹರಣೆಗೆ ಹೇಳು ನೋಡೋಣ....''

``ಉದಾ ಹೇಳುವುದಾದರೆ... ಹ್ಞಾಂ, ನಮ್ಮ ಹನಿಮೂನ್‌ ನೆನಪಿಸಿಕೊಳ್ಳಿ. ಆಗ ಎಲ್ಲದಕ್ಕೂ ನೀವು ಗುಡುಗುಡು ಅಂತ ಮುಂದೆ ಓಡಿ ಬಂದು ಎಲ್ಲಾ ಕೆಲಸಕ್ಕೂ ಕೈ ಹಾಕುತ್ತಿದ್ದಿರಿ. ರೈಲಿನಿಂದ ಮೊದಲು ಕೆಳಗಿಳಿದು, ನನ್ನ ಬಳಿಯಿದ್ದ ಲಗೇಜ್‌ ಪಡೆದು ನೀವೇ ಹೊತ್ತುಕೊಂಡು ಬರ್ತಿದ್ರಿ. ಪ್ರತಿ ಹೋಟೆಲ್‌ಗೆ ಊಟತಿಂಡಿ ಅಂತ ಹೋದಾಗಲೂ ಮೊದಲು ನನ್ನ ಕೈಗೆ ಮೆನುಕಾರ್ಡ್‌ ಕೊಟ್ಟು ನಾನು ಹೇಳುತ್ತಿದ್ದುದನ್ನೇ ತರಿಸುತ್ತಿದ್ದಿರಿ. ನಾನು ಕೇಳದೆಯೇ ಶಾಪಿಂಗ್‌ಗೆ ಕರೆದುಕೊಂಡು ಹೋಗಿ, ಹಲವು ಅಂಗಡಿಗಳ ಮೆಟ್ಟಿಲು ಏರಿ ಇಳಿದು, ಮಾಲ್‌ಗಳಲ್ಲಿ ಎಷ್ಟೇ ಸುತ್ತಾಡಿದರೂ ಹಿಂದೆ ಹಿಂದೆಯೇ ಬಂದು ಎಲ್ಲಾ ಕವರ್‌, ಬ್ಯಾಗ್‌ ಹೊತ್ತು ತರುತ್ತಿದ್ದಿರಿ. ಅಷ್ಟು ಮಾತ್ರವಲ್ಲದೆ, ನಾನು ಕೊಂಡದ್ದನ್ನೆಲ್ಲ ಹೊಗಳುತ್ತಿದ್ದೀರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ