ಗೀತಾಳ ನಡವಳಿಕೆ ಮತ್ತು ವ್ಯವಹಾರಗಳನ್ನು ಕಂಡು ಶೋಭಾ ಸ್ತಂಭಿತಳಾದಳು. 1-2 ಭೇಟಿಯಲ್ಲೇ ಎದುರಿನಲ್ಲಿರುವ ವ್ಯಕ್ತಿಯ ಸ್ವಭಾವವನ್ನು ಅರಿಯಬಲ್ಲವಳಾಗಿದ್ದ ಶೋಭಾಳ ಎಣಿಕೆ ಸಂಪೂರ್ಣವಾಗಿ ತಪ್ಪಾಗಿಬಿಟ್ಟಿತ್ತು.

ಮಂಗಳೂರಿನಿಂದ ಶೋಭಾಳ ಚಿಕ್ಕಪ್ಪ ಫೋನ್‌ ಮಾಡಿದ್ದರು. ಅವರ ಸ್ನೇಹಿತನ ಮಗಳಿಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದೆ. ನಾಲ್ಕಾರು ದಿನ ನೀನು ಅವಳನ್ನು ಮನೆಯಲ್ಲಿರಿಸಿಕೊಂಡರೆ, ಆಮೇಲೆ ಅವಳು ಬೇರೆ ಜಾಗ ನೋಡಿಕೊಂಡು ಹೋಗುತ್ತಾಳೆ. ಹೀಗೆಂದು ಹೇಳಿ ಚಿಕ್ಕಪ್ಪ ಆ ಹುಡುಗಿಯನ್ನು ಶೋಭಾಳ ಮನೆಗೆ ಕಳುಹಿಸಿಕೊಟ್ಟಿದ್ದರು. ಇಲ್ಲಿ ವಾಸಿಸಲು ತೊಡಗಿ 3 ತಿಂಗಳಾಗಿದೆ. ಆ ಹುಡುಗಿ ಮನೆಯ ಮೇಲೆ ಅಧಿಕಾರ ಸ್ಥಾಪಿಸುವಂತಿದೆ. ಹಿಂದಿನ ದಿನವಂತೂ ಶೋಭಾ ಏನೂ ಅರ್ಥವಾಗದೆ ಕಣ್ಣರಳಿಸಿ ನಿಂತಿದ್ದೇ ಆಯಿತು. ಮನೆ ನೋಡಲು ತಾಯಿ ಮತ್ತು ಮಗ ಬಂದಿದ್ದರು. ಅವರ ಮುಂದೆ ಗೀತಾ ಅದು ತನ್ನದೇ ಮನೆ ಎಂಬಂತೆ ವ್ಯವಹರಿಸಿದಳು.

``ಮನೆ ಬಹಳ ಚೆನ್ನಾಗಿದೆ..... ಸೋಫಾ, ಕರ್ಟನ್ಸ್ ಎಲ್ಲ ಬಹಳ ಹೊಂದಿಕೊಂಡಿವೆ..... ಈ ಪೇಂಟಿಂಗ್‌ ನೀನು ಮಾಡಿದೆಯಾ? ಇದಕ್ಕೆಲ್ಲ ಸಮಯ ಹೇಗೆ ಸಿಗುತ್ತದೆ?''

``ಆಸಕ್ತಿ ಇದ್ದರೆ ಸಮಯ ಸಿಕ್ಕೇ ಸಿಗುತ್ತದೆ ಆಂಟಿ.''

ಇದನ್ನು ಕೇಳಿ ಶೋಭಾ ಬೆರಗಾದಳು, `ನಾನು ಪೇಂಟ್‌ ಮಾಡಿದ ಕಲಾಕೃತಿಯನ್ನು ಒಂದಿಷ್ಟೂ ಹಿಂಜರಿಕೆಯಿಲ್ಲದೆ ಈ ಹುಡುಗಿ ತನ್ನದೆಂದು ಹೇಳಿಕೊಂಡಳಲ್ಲ,' ಆದರೂ ಬಂದರ ಎದುರಿಗೆ ಮುಜುಗರವಾಗಬಾರದೆಂದು ಶೋಭಾ ಮಾತನಾಡಲಿಲ್ಲ.

``ನೀವು ಗೀತಾಳ ಆಂಟಿ ಅಲ್ಲವೇ? ಇನ್ನೂ ಸ್ವಲ್ಪ ದಿವಸ ಇಲ್ಲೇ ಇರುತ್ತೀರಿ ತಾನೇ..... ಈ ಭಾನುವಾರ ನಮ್ಮ ಮನೆಗೆ ಬನ್ನಿ,'' ಹೊರಡುವಾಗ ಆ ಮಹಿಳೆ ತನ್ನ ಕಾರ್ಡ್‌ ಕೊಟ್ಟು ಆಹ್ವಾನಿಸಿದರು.

ಶೋಭಾಳ ಮಗ ಸುಮಂತ್‌ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದ. ಅವಳ ಪತಿ ಕಾಲವಾಗಿ 3 ವರ್ಷಗಳಾಗಿತ್ತು. ಶೋಭಾ ಒಬ್ಬಳೇ ಇದ್ದಾಳೆ. ಅವಳು ತನ್ನ ಫ್ಲಾಟ್‌ನ್ನು ಬಹಳ ಮುತುರ್ಜಿಯಿಂದ ಅಲಂಕರಿಸಿದ್ದಾಳೆ.

ಈ ಹುಡುಗಿ ಯಾವ ಆಟ ಆಡುತ್ತಿದ್ದಾಳೆ? ಕಡೆಗೆ ನನ್ನನ್ನು ಅಪಾಯದ ಅಂಚಿಗೆ ತಳ್ಳಿಬಿಡಬಹುದು ಎನ್ನಿಸಿ ಶೋಭಾ ಚಿಕ್ಕಪ್ಪನಿಗೆ ಪೋನ್‌ ಮಾಡಿದಳು.``ಏನು..... ಅವಳಿನ್ನೂ ನಿನ್ನ ಮನೆಯಲ್ಲೇ ಇದ್ದಾಳಾ.....? ಕಳೆದ ಸಲ ಬಂದಾಗ ಬೇರೆ ಜಾಗ ನೋಡಿಕೊಂಡಿದ್ದೇನೆ. ಶಿಫ್ಟ್ ಮಾಡುತ್ತೇನೆ ಅಂತ ಹೇಳಿದ್ದಳಲ್ಲ......''

ಅದು 2 ತಿಂಗಳ ಹಿಂದಿನ ಮಾತು. ಈಗ ವಿಷಯ ತಿಳಿದು ಚಿಕ್ಕಪ್ಪ ಆಶ್ಚರ್ಯಗೊಂಡರು. ಆದರೆ ಉಳಿದ ವಿಷಯವನ್ನೆಲ್ಲ ಶೋಭಾ ಹೇಳಲು ಹೋಗಲಿಲ್ಲ.

``ನಿನಗೆ ಹಣ ಕೊಟ್ಟಳಾ....? ಊಟ ತಿಂಡಿಗೆ ಮತ್ತು ವಾಸಕ್ಕೆ ಎಲ್ಲದಕ್ಕೂ ಹಣ ಕೊಡುತ್ತೇನೆ ಅಂತ ಹೇಳಿದ್ದಳು......''

``ಇಲ್ಲ ಚಿಕ್ಕಪ್ಪ.... ಮಕ್ಕಳು ಊಟ ತಿಂಡಿ ಮಾಡಿದ್ದಕ್ಕೆ ನಾನು ಹಣ ತೆಗೆದುಕೊಳ್ಳಬೇಕೇ?''

ಚಿಕ್ಕಪ್ಪ ಮತ್ತೂ ಬೆರಗಾದರು, ``ಈ ಹುಡುಗಿ ಇಷ್ಟೊಂದು ಕಿಲಾಡಿ ಅಂತ ನನಗೆ ಗೊತ್ತಿರಲಿಲ್ಲ. 8-10 ದಿವಸಕ್ಕೆ ಅಂತ ನಾನು ಹೇಳಿದ್ದೆ. ಈಗಾಗಲೇ 3 ತಿಂಗಳಾಗಿದೆ. ಇದು ಬಹಳ ಹೆಚ್ಚಾಯಿತು. ನಿನಗೆ ಹೇಗೆ ಸರಿ ಅನ್ನಿಸುತ್ತದೋ ಹಾಗೆ ಮಾಡು. ನನ್ನದೇನೂ ಅಭ್ಯಂತರವಿಲ್ಲ.''

``ಸರಿ ಚಿಕ್ಕಪ್ಪ.....''

ಹೇಗೆ ಸರಿ ಮಾಡುವುದು ಎಂದು ಶೋಭಾ ಯೋಚಿಸತೊಡಗಿದಳು. ಪಕ್ಕದ ಫ್ಲಾಟ್‌ನ ನಳಿನಿಯೊಂದಿಗೆ ಶೋಭಾಗೆ ಸ್ನೇಹವಿತ್ತು. ಗೀತಾ ಸಹ ಅವಳೊಂದಿಗೆ ಮಾತುಕತೆ ಆಡುತ್ತಿದ್ದುದುಂಟು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ