ಮೊದಲ ಡೇಟ್‌ನಲ್ಲಿ ದೊರೆತ ಮೊದಲ ಗಿಫ್ಟ್. ಅದಕ್ಕೆ ಸುತ್ತಿದ್ದ ಬಣ್ಣದ ಕಾಗದವನ್ನು ಬಿಚ್ಚುವಾಗ ಕಾಂಚನಾಳ ಕೈ ನಡುಗುತ್ತಿತ್ತು. ನರೇಂದ್ರನೊಡನೆ ಗೆಳೆತನವನ್ನು ಮುಂದುವರಿಸಲು ಅವಳ ಮನಸ್ಸು ಹಿಂದೆಗೆಯುತ್ತಿತ್ತು. ಅವನ ನಿರ್ಮಲ ಮನಸ್ಸಿಗೆ ಪೆಟ್ಟು ಬೀಳಬಾರದೆಂಬುದು ಅವಳ ಇಚ್ಛೆ.

ಆದರೆ ಕಾಂಚನಾಳ ಒಳ್ಳೆಯ ಸ್ವಭಾವ ಅವನನ್ನು ಸೆಳೆದಿತ್ತು. ಕೆಲವೊಮ್ಮೆ ಒಳ್ಳೆಯತನವೇ ಮುಳುವಾಗಬಲ್ಲದೆಂದು ಹೇಳುತ್ತಾರೆ. ಕಾಂಚನಾಳ ಬದುಕಿನಲ್ಲಿಯೂ ಹಾಗೇ ಆಗಿದೆ. ಅವಳು ತನ್ನ ಪುಟ್ಟ ಪ್ರಪಂಚದಲ್ಲಿ ಅದೆಷ್ಟು ನೋವನ್ನು ನುಂಗಿದ್ದಾಳೆಂದರೆ, ತನ್ನಿಂದ ಬೇರೆ ಯಾರಿಗೂ ನೋವಾಗಬಾರದೆಂದು ಸದಾ ಎಚ್ಚರಿಕೆಯಲ್ಲಿರುತ್ತಾಳೆ. ಹಾಗಾಗಿಯೇ ಅವಳಿಗೆ ಇಂದು ನರೇಂದ್ರನ ಡೇಟ್ ಪ್ರಸ್ತಾಪವನ್ನು ನಿರಾಕರಿಸಲಾಗಲಿಲ್ಲ. ನರೇಂದ್ರ ಅವಳ ಸಹೋದ್ಯೋಗಿ, ಅವಳ ಸ್ನೇಹಿತ, ಅವಳ ಮೆಂಟರ್‌, ಅವಳ ಲೋಕಲ್ ಗಾರ್ಡಿಯನ್‌ ಎಲ್ಲವೂ ಆಗಿದ್ದ. ಕಾಂಚನಾಳ ಬಗ್ಗೆ ಅವನ ಮನಸ್ಸಿನಲ್ಲಿ ಮೃದು ಭಾವನೆಗಳು ತುಂಬಿದ್ದವು. ಅದು ಅವಳಿಗೂ ತಿಳಿದಿತ್ತು. ಆದರೂ ತಿಳಿಯದವಳಂತೆ ನಟಿಸುತ್ತಿದ್ದಳು. ಹಿಂದಿನ ಸಾಯಂಕಾಲ ಅವನು ಪ್ರಥಮ ಡೇಟ್‌ಗಾಗಿ ಇನ್‌ವೈಟ್‌ಮಾಡಿದಾಗ ಅವಳು ಅದೆಷ್ಟೋ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು. `ಈ ನರೇಂದ್ರ ಒಳ್ಳೆ ಪತ್ತೇದಾರಿ ಜಾತಿಯವನು...... ಇಂದು ನನ್ನ ಜನ್ಮದಿನ ಅನ್ನುವುದು ಅವನಿಗೆ ಹೇಗೆ ಗೊತ್ತಾಯಿತೋ, ಏನು ಹೇಳಿದರೂ ಬಿಡಲಿಲ್ಲ,' ಕಾಂಚನಾ ಯೋಚಿಸುತ್ತಾ ಗಿಫ್ಟ್ ರಾಪರ್‌ನ್ನು ತೆರೆದಳು.

ಸುಂದರವಾಗಿ ಪ್ಯಾಕ್‌ ಮಾಡಲಾಗಿದ್ದ ಲೇಟೆಸ್ಟ್ ಮಾಡೆಲ್ ‌ಮೊಬೈಲ್ ಫೋನ್‌ನ್ನು ಕಂಡಾಗ ಕಾಂಚನಾಳ ಮುಖ ಕೊಂಚ ಬಿರುಸಾಯಿತು. ಇಂತಹದೇ ಏನೋ ಇರುವುದೆಂದು ಅವಳು ಮೊದಲೇ ನಿರೀಕ್ಷಿಸಿದ್ದಳು. ಏಕೆಂದರೆ ಅವಳ ಓಲ್ಡ್ ಮಾಡೆಲ್ ಮೊಬೈಲ್ ‌ಹ್ಯಾಂಡ್‌ಸೆಟ್‌ ಬಗ್ಗೆ ನರೇಂದ್ರ ಆಗಾಗ ಆಫೀಸ್‌ನಲ್ಲಿ `ಓಲ್ಡ್ ಲೇಡಿ ಆಫ್‌ ನ್ಯೂ ಜನರೇಶನ್‌' ಎಂದು ಹಾಸ್ಯ ಮಾಡುತ್ತಿದ್ದುದುಂಟು.

ಈ ಚಿಕ್ಕ ಮೊಬೈಲ್‌ನಿಂದಲೇ ಅವಳ ಬಾಳಿನಲ್ಲಿ ಬಿರುಗಾಳಿ ಬೀಸಿ ಸಂಸಾರ ಮೂರಾ ಬಟ್ಟೆಯಾಗಿಬಿಟ್ಟಿತೆಂಬ ವಿಷಯವನ್ನು ಅವಳು ನರೇಂದ್ರನಿಗೆ ಹೇಗೆ ತಾನೇ ಹೇಳಿಯಾಳು? ಸುಮಾರು 10 ವರ್ಷಗಳ ಹಿಂದೆ ನಡೆದ ಘಟನೆ ಅವಳಿಗೆ ಇಂದೂ ಚೆನ್ನಾಗಿ ನೆನಪಿದೆ. ಆ ದಿನ ಅವಳ ತಂದೆಯೊಡನೆ ಜಗಳಾಡಿದ ನಂತರ ಅವಳ ತಾಯಿ ಕೋಪದಲ್ಲಿ ತಮ್ಮನ್ನು ತಾವೇ ಬೆಂಕಿಯಲ್ಲಿ ಸುಟ್ಟುಕೊಂಡುಬಿಟ್ಟಿದ್ದರು. ತಾಯಿಯ ಆರ್ತನಾದ ಇಂದೂ ರಾತ್ರಿಯಲ್ಲಿ ಅವಳನ್ನು ನಿದ್ರೆಯಿಂದ ಬೆಚ್ಚಿ ಬೀಳುವಂತೆ ಮಾಡುತ್ತದೆ.

ಬಹುಶಃ ತಾಯಿಗೆ ಸಾಯುವ ಉದ್ದೇಶ ಇರಲಿಲ್ಲ. ತಂದೆಯ ಮೇಲೆ ಮಾನಸಿಕ ಒತ್ತಡ ಹೇರಲು ಹಾಗೆ ಮಾಡಿದ್ದಿರಬಹುದು. ತಂದೆ ಬಂದು ತಡೆಯುವರು ಎಂಬುದು ಅವರ ನಂಬಿಕೆ. ಆದರೆ ತಂದೆ ಕೋಪದಿಂದ ಮೊದಲೇ ಮನೆಯಿಂದಾಚೆ ಹೋಗಿಬಿಟ್ಟಿದ್ದರು. ತಾಯಿ ಎಂತಹ ಅಪಾಯಕಾರಿ ಹೆಜ್ಜೆಯಿಡುತ್ತಿದ್ದಾರೆಂದು ಅವರು ನೋಡಿರಲೇ ಇಲ್ಲ.

ಬೆಂಕಿಯ ಜ್ವಾಲೆಯಲ್ಲಿ ತಾಯಿ ಕಿರಿಚುತ್ತಿರುವುದನ್ನು ಕಂಡು ಕಾಂಚನಾ ಭಯ, ಗಾಬರಿಯಿಂದ ತಂದೆಯನ್ನು ಕರೆಯಲು ಓಡಿದಳು. ಆದರೆ ತಂದೆ ಎಲ್ಲಿಯೂ ಕಾಣದಿದ್ದಾಗ ನೆರೆಹೊರೆಯವರು ಬಂದು ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ದರು. ಪಕ್ಕದ ಮನೆಯ ಅನಿಲ್ ‌ಅಂಕಲ್ ಮೊಬೈಲ್‌ನಿಂದ ತಂದೆಗೆ ವಿಷಯ ತಿಳಿಸಿದರು. ಆದರೆ ಎಲ್ಲವೂ ತಡವಾಗಿತ್ತು. ಮೊಬೈಲ್ ‌ಫೋನ್‌ ಅವಳ ತಾಯಿಯನ್ನು ಅವಳಿಂದ ಕಸಿದುಕೊಂಡಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ