ನನ್ನಾಕೆ ಶ್ರೀಮಂತ ಮನೆತನದಿಂದ ಬಂದವಳು. ಆದರೆ ಒಂದು ದಿನ ನನಗಿಷ್ಟವಾಗದ ಮಾತುಗಳನ್ನು ಅವಳಿಂದ ಕೇಳಲೇಬೇಕಾಗಿತ್ತು. ಬಹಳ ಪ್ರಯಾಸದಿಂದ ಬ್ಯಾಂಕಿನಲ್ಲಿ ಸಾಲ ಪಡೆದು 2 ಕೋಣೆಯ ಒಂದು ಮನೆಯನ್ನು ನಗರದ ಹೊರಭಾಗದಲ್ಲಿ ನಾನು ಖರೀದಿಸಿದ್ದೆ. ಅದು ಕೊಂಚ ಅಗ್ಗವಾಗಿದ್ದರಿಂದ ಖರೀದಿಸಿದ್ದೆ. ಇಲ್ಲದಿದ್ದರೆ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ಕಳೆಯಬೇಕಾಗಿತ್ತು. ಗೃಹಪ್ರವೇಶಕ್ಕೆ ನನ್ನ ಒಬ್ಬರೇ ಅತ್ತೆ ವಕ್ಕರಿಸಿದ್ದರು. ಅವರ ಸಲಹೆಯಂತೆ ಸುತ್ತಮುತ್ತಲಿನ ಮನೆಯವರನ್ನು ಪರಿಚಯಕ್ಕಾಗಿ ಕರೆಯಲಾಯಿತು. ಈಗಂತೂ ಸುಮ್ಮನೆ ಕರೆದುಬಿಟ್ಟರೆ ಪರಿಚಯ ಆಗೋದಿಲ್ಲ. ಅವರಿಗೆಲ್ಲಾ ಭೂರಿ ಭೋಜನದ ವ್ಯವಸ್ಥೆ ಮಾಡಲಾಯಿತು. ಸಲಹೆ ಕೊಟ್ಟ ಅತ್ತೆಗೆ 1 ಪೈಸೆ ಕೂಡಾ ಖರ್ಚಾಗಲಿಲ್ಲ , ಅದರೆ ನನ್ನ ಸಾವಿರಾರು ರೂಪಾಯಿ ಕೈಬಿಟ್ಟುಹೋಯಿತು.

ನೆರೆಹೊರೆಯವರ ಬಳಿ ನನ್ನಾಕೆ ನನ್ನ ಬಗ್ಗೆ ಹೇಳೋದು ಬಿಟ್ಟು ತನ್ನ ತವರು ಮನೆಯ ಬಗ್ಗೆ ಸುಮಧುರವಾಗಿ ವರ್ಣಿಸುತ್ತಿದ್ದಳು. ಬೇರೇನೂ ಮಾರ್ಗವಿಲ್ಲದೆ ನಾನು ತೆಪ್ಪಗೆ ಕೇಳುತ್ತಿದ್ದೆ.

ನನ್ನಾಕೆ ಯಾರಿಗೋ ಹೇಳುತ್ತಿದ್ದಳು, ``ಮದುವೇಲಿ ನನ್ನಮ್ಮ 10 ಸವರನ್‌ ಸರ ಕೊಟ್ರು.  4 ಸವರನ್‌ ಬಳೆಗಳು, 5 ಸವರನ್ ತಾಳಿ... ಇನ್ನೂ ಏನೇನೋ ಕೊಟ್ರು...'' ಅವಳು ಒಡವೆಗಳನ್ನು ಮೈಮೇಲೆ ಹೇರಿಕೊಂಡು ನಡೆದಾಡುವ ಅಂಗಡಿಯಂತೆ ಕಾಣುತ್ತಿದ್ದಳು. ನನಗಂತೂ 1 ಸಣ್ಣ ಉಂಗುರವನ್ನೂ ಕೊಟ್ಟಿರಲಿಲ್ಲ. ನಾನು ಯಾರ ಬಳಿ ಹೇಳಿಕೊಳ್ಳಲಿ? ಮಗಳ ಮೇಲೆ ಅತ್ತೆಯ ಬಳಿ ದೂರು ಕೊಡಲು ಯಾವ ಅಳಿಯನಿಗಾದರೂ ತಾಕತ್ತಿದೆಯೇ? ನಾನಂತೂ ಈ 2 ಕೋಣೆಯ ಮನೆಯಲ್ಲಿ ಖುಷಿಯಾಗಿದ್ದೆ. ಅಂದು ರಾತ್ರಿ ಪಾರ್ಟಿ ಮುಗಿದ ಮೇಲೆ ನಾನು ಸುಸ್ತಾಗಿ ಮಲಗಲು ಹೋದಾಗ ನನ್ನಾಕೆ ಹೇಳಿದಳು, ``ಈವತ್ತಂತೂ ನನಗೆ ಬಹಳ ನಾಚಿಕೆ ಆಗೋಯ್ತು,''

``ಯಾಕೆ? ಏನು ವಿಷಯ...?''

``ಈ ಡಿಸೈನಿನ ಒಡವೆಗಳು ಇಲ್ಲಿ ಸಿಗೋದಿಲ್ಲ, ಎಲ್ಲಿಂದ ತಂದ್ರಿ ಎಂದು ಎಲ್ಲರೂ ಕೇಳಿದರು. ಕೊನೆಗೆ ನಾನು ಇದೆಲ್ಲಾ ನಮ್ಮಮ್ಮ ಕೊಟ್ಟಿದ್ದು ಅಂತ ಹೇಳಲೇಬೇಕಾಯಿತು.''

``ಸರಿ, ಅದಕ್ಕೇನೀಗ?''

`` ನೀವು ಬೇಜಾರು ಮಾಡಿಕೊಳ್ಳಲ್ಲ ಅಂದ್ರೆ ಒಂದು ಮಾತು ಹೇಳ್ಲಾ?''

`` ಹೇಳು''

`` ನೀವು ಹೇಳೂಂದ್ರೆ ಹೇಳ್ತೀನಿ,''

`` ಹೇಳೂಂತ ಹೇಳಿದ್ನಲ್ಲಾ...?''

``ನೀವು ಸ್ವಲ್ಪ ಒಡವೆಗಳನ್ನು ನನಗೆ ಕೊಡಿಸಿ. ಆಗ ನಾನು ನೀವು ತಂದುಕೊಟ್ಟ ಒಡವೆಗಳು ಅಂತ ಎಲ್ಲರ ಬಳಿ ಹೇಳ್ಕೋಬಹುದು.''

ನಾನು ವ್ಯಂಗ್ಯವಾಗಿ, ``ಖಂಡಿತ ಕೊಡಿಸ್ತೀನಿ... ಖಂಡಿತ ಕೊಡಿಸ್ತೀನಿ. ಆದರೆ ಮನೆಯ ಸಾಲದ ಕಂತುಗಳನ್ನು ಯಾರು ತೀರಿಸ್ತಾರೆ? ನಿಮ್ಮ... ''

``ಅರೆ, ನಾನು ಒಡವೆಗಳ ಬಗ್ಗೆ ಮಾತಾಡಿದ್ರೆ ನೀವು ಮನೆ ಸಾಲದ ಪುರಾಣ ಬಿಚ್ಚಿದ್ರಿ,'' ಕೋಪದಿಂದ ಅವಳು ಮಗ್ಗುಲು ಬದಲಿಸಿದಳು.

`ಹುಂ ನನ್ನ ಹಣೆಯಲ್ಲಿ ಶಾಂತಿ ಅನ್ನೊ ಪದ ಬರೆದಿಲ್ಲ. ನನ್ನ ಕಷ್ಟ ಯಾರ ಬಳಿ ಹೇಳಿಕೊಳ್ಳಲಿ,' ಎಂದು ಯೋಚಿಸುತ್ತಾ ಮಲಗಿದಾಗ ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ.

ರಾತ್ರಿ ಎದೆಯ ಮೇಲೆ ಭಾರದ ವಸ್ತು ಬಿದ್ದಂತಾದಾಗ ನನ್ನ ನಿದ್ದೆ ಹಾಳಾಯಿತು. ನನ್ನ ಎದೆಯ ಮೇಲೆ ಕುಳಿತು ನನ್ನಾಕೆ ಯಾವುದೋ ಟ.ವಿ ಸೀರಿಯಲ್ ನೋಡುತ್ತಿದ್ದಳು, ``ರೀ, ಏನು ಯೋಚನೆ ಮಾಡಿದ್ರಿ?'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ