ಡ್ಯಾನ್ಸ್ ಫ್ಲೋರ್‌ನಲ್ಲಿ ಗಾಯತ್ರಿ ತನ್ನ ವುಡ್‌ಬಿ ಶೇಖರ್‌ನೊಂದಿಗೆ ಮೋಜಿನಿಂದ ಕುಣಿಯುತ್ತಿದ್ದಳು. ಯೌವನ ತುಂಬಿದ ಸುಂದರ ಶರೀರದ ಗಾಯತ್ರಿ ಪಾರ್ಟಿಯಲ್ಲಿ ಹಾಜರಾಗಿದ್ದ ಪ್ರತಿ ಯುವಕರ ಹೃದಯದ ಬಡಿತ ಏರಿಸುತ್ತಿದ್ದಳು.

ಶೇಖರ್‌ ತನ್ನ ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಕ್ಕಿದ್ದಂತೆ ಗಾಯತ್ರಿಯೊಂದಿಗೆ ತಾನು ಬೇಗ ಮದುವೆಯಾಗುವುದಾಗಿ ಘೋಷಿಸಿ ಎಲ್ಲ ಗೆಳೆಯರನ್ನೂ ಆಶ್ಚರ್ಯಪಡಿಸಿದ.

``ಈ ಸುಂದರ ಚಿಟ್ಟೆ ಕೊನೆಗೂ ಒಬ್ಬ ಶ್ರೀಮಂತ ಹುಡುಗನನ್ನು ತನ್ನ ಸೌಂದರ್ಯದ ಜಾಲದಲ್ಲಿ ಸಿಕ್ಕಿಸುವಲ್ಲಿ ಯಶಸ್ವಿಯಾದಳು. ಸಾಧಾರಣ ಫ್ಲ್ಯಾಟ್‌ನಲ್ಲಿ ವಾಸಿಸುವ ಈ ಹುಡುಗಿ ಈಗ ಅರಮನೆಯಲ್ಲಿ ರಾಣಿಯಾಗುತ್ತಾಳೆ,'' ಗಾಯತ್ರಿ ತನ್ನ ಗೆಳೆಯರು ಈ ರೀತಿ ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳದೆ ಪಾರ್ಟಿಯ ಸಂಪೂರ್ಣ ಆನಂದ ಪಡೆಯುತ್ತಿದ್ದಳು.

ಶೇಖರನ ಕಣ್ಣುಗಳಲ್ಲಿ ಪ್ರೀತಿಯಿಂದ ಇಣುಕಿ ನೋಡುತ್ತಾ ಗಾಯತ್ರಿ ಅವನು ಸ್ವಲ್ಪ ಹೊತ್ತಿನ ಮುಂಚೆ ತೊಡಿಸಿದ್ದ ವಜ್ರದುಂಗುರವನ್ನು ಮುತ್ತಿಕ್ಕಿ ಅವನ ಸದೃಢ ಶರೀರವನ್ನು ಬಳಸಿ ಕುಣಿಯತೊಡಗಿದಳು.

ಗಾಯತ್ರಿಯ ಸುಂದರ ಶರೀರದ ಸುವಾಸನೆ ಹಾಗೂ ಬೆಚ್ಚನೆಯ ಸ್ಪರ್ಶ ಶೇಖರನ ಭಾವನೆಗಳನ್ನು ಕೆರಳಿಸತೊಡಗಿತು. ಅವನ ಕಿವಿಯಲ್ಲಿ ತನ್ನ ಬಿಸಿಯುಸಿರನ್ನು ಬಿಡುತ್ತಾ ಗಾಯತ್ರಿ ಹೇಳಿದಳು, ``ಐ ಲವ್ ಯು ಮೈ ಡಾರ್ಲಿಂಗ್‌.''

ಶೇಖರ್‌ ತನ್ನ ಭಾವನೆಗಳನ್ನು ನಿಯಂತ್ರಿಸಲಾಗದೆ ಡ್ಯಾನ್ಸ್ ನಿಲ್ಲಿಸಿ ಗಾಯತ್ರಿಯನ್ನು ತನ್ನ ಬಾಹುಗಳಲ್ಲಿ ಹಿಡಿದು ಅವಳ ಗುಲಾಬಿ ತುಟಿಗಳ ಮೇಲೆ ತನ್ನ ತುಟಿಯನ್ನಿಟ್ಟು ದೀರ್ಘ ಚುಂಬನ ನೀಡಿದ.

ಶೇಖರನ ಗೆಳೆಯರು ಖುಷಿಯ ಆವೇಶದಲ್ಲಿ `ಹೋ' ಎಂದು ಕೂಗಿ ಅವನ ಸಾಮರ್ಥ್ಯ ಹೆಚ್ಚಿಸಿದರು. ಗಾಯತ್ರಿ ಒಯ್ಯಾರದಿಂದ ಶೇಖರನ ಕೈ ಹಿಡಿದು ಕೆಳಗಿಳಿದಳು. ಶೇಖರ್‌ ಅವಳಿಗೆ ಕೂಲ್ ಡ್ರಿಂಕ್ಸ್ ತರಲು ಹೋದ. ಗಾಯತ್ರಿ ಫ್ರೆಶ್‌ ಆಗಲು ಟಾಯ್ಲೆಟ್‌ಗೆ ಹೋದಳು. ಸುಮಾರು 10 ನಿಮಿಷಗಳ ನಂತರ ಗಾಯತ್ರಿ ಟಾಯ್ಲೆಟ್‌ನಿಂದ ಹೊರಬಂದಾಗ ಎದುರಿಗೆ ಅವಳ ಹಳೆಯ ಪ್ರೇಮಿ ರೋಹಿತ್‌ ನಿಂತಿದ್ದ.

``ಕಂಗ್ರಾಟ್ಸ್ ಸ್ವೀಟಿ,'' ರೋಹಿತ್‌ ಅವಳನ್ನು ತಡೆದು ಹೇಳಿದ.

``ಥ್ಯಾಂಕ್ಸ್ ಡಿಯರ್‌,'' ಗಾಯತ್ರಿ ನಗುತ್ತಾ ಹೇಳಿ ಬೆರಳಲ್ಲಿ ತೊಟ್ಟ ವಜ್ರದುಂಗುರವನ್ನು ತೋರಿಸಿದಳು.

``ಗಾಯತ್ರಿ, ಶೇಖರನ ಜಾಗದಲ್ಲಿ ನಾನಿರಬೇಕಿತ್ತು....'' ಗಾಯತ್ರಿಯನ್ನು ಆಸೆ ತುಂಬಿದ ಕಣ್ಣುಗಳಿಂದ ನೋಡುತ್ತಾ ರೋಹಿತ್‌ತನ್ನ ಮನದಾಸೆಯನ್ನು ವ್ಯಕ್ತಪಡಿಸಿದ.

``ನಿನಗೆ ಒಳ್ಳೆ ಅವಕಾಶ ಇತ್ತು. ಆಗ ನೀನು ಆ ಮಾಡೆಲ್ ಸಲುವಾಗಿ ನನ್ನನ್ನು ಬಿಟ್ಟು ಹೋದೆ. ನನ್ನನ್ನು ಕಳೆದುಕೊಂಡೆ ರೋಹಿತ್‌,'' ಎಂದಳು.

``ಈಗ ಏನು ಮಾಡೋಕೂ ಆಗಲ್ವಾ? ನಾನು ಶೇಖರ್‌ಗಿಂತ ಸ್ಮಾರ್ಟ್‌ ಆಗಿದ್ದೀನಿ. ನೀನು ಅವನನ್ನು ಬಿಟ್ಟು ನನ್ನವಳಾಗು.''

``ನೀನು ಅವನಿಗಿಂತ ಸ್ಮಾರ್ಟ್‌ ಹೌದು. ಆದರೆ.....''

``ಅವನಷ್ಟು ಶ್ರೀಮಂತ ಅಲ್ಲ,'' ರೋಹಿತ್‌ ಅವಳ ವಾಕ್ಯವನ್ನು ನಗುತ್ತಾ ಪೂರ್ತಿ ಮಾಡಿದ.

``ಹೌದು...ಹೌದು,'' ಗಾಯತ್ರಿ ಜೋರಾಗಿ ನಕ್ಕಳು.

``ಸುಂದರವಾಗಿರೋ ಜೊತೆಗೆ ನೀನು ಇಂಟಲಿಜೆಂಟ್‌ ಕೂಡ.''

``ಥ್ಯಾಂಕ್ಸ್.''

``ಮತ್ತೊಮ್ಮೆ ಕಂಗ್ರಾಟ್ಸ್ ಸ್ವೀಟ್‌ ಹಾರ್ಟ್‌,'' ಎಂದು ರೋಹಿತ್‌ ಕೈ ಚಾಚಿದ.

``ಥ್ಯಾಂಕ್ಸ್,'' ಗಾಯತ್ರಿ ತನ್ನ ಕೈಯನ್ನು ಅವನ ಕೈಯಲ್ಲಿಟ್ಟಳು.

ಗಾಯತ್ರಿಯ ಕೈಯನ್ನು ಗಟ್ಟಿಯಾಗಿ ಹಿಡಿದ ರೋಹಿತ್‌ ನಗುತ್ತಾ ಹೇಳಿದ, ``ಹಿಂದೆ ನಾವು ಒಟ್ಟಿಗೇ ಕಳೆದ ಕ್ಷಣಗಳನ್ನು ನೆನೆಸಿಕೊಂಡು ಇವತ್ತು ಪ್ರೀತಿಯಿಂದ ಒಂದು ಕಿಸ್‌ ಕೊಡು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ