``ಶಮ್ಮೀ, ದೀಪ್ತಿ ಬಂದಿದ್ದಾಳೆ ನೋಡು.'' ಅಮ್ಮನ ದನಿ ಕೇಳಿ ಛಂಗನೆ ಹಾರಿ ಬಂದೆ. ನನ್ನ ಆಪ್ತ ಗೆಳತಿ ದೀಪ್ತಿಯನ್ನು ನೋಡಲು.

``ಬಾರೇ, ಯಾವಾಗ್ಬಂದೆ ಮೈಸೂರಿಂದ? ನಾನು ಹೋದ ವಾರಾನೇ ಬಂದೆ. ನೀನು ಊರಲ್ಲಿರದೇ ಹೋದದ್ದು ಎಷ್ಟು ಬೇಸರವಾಯ್ತು ಗೊತ್ತಾ?'' ಒಂದು ವಾರದ ತೊಳಲಾಟವನ್ನೆಲ್ಲ ಒಟ್ಟಿಗೆ ಕಕ್ಕಿದೆ.

``ದಿಢೀರ್‌ ಅಂತ ನನ್ನ ಕಸಿನ್‌ ಮದುವೆ ಫಿಕ್ಸ್ ಆಯ್ತು. ಹಾಗೇ ಹೋಗ್ಬಂದ್ವಿ.''

``ಎಲ್ಲರೂ ಹೋಗಿದ್ರಾ?''

ನನ್ನ ಇಂಗಿತ ಅವಳಿಗೆ ಗೊತ್ತು.``ಹೌದು ಪಮ್ಮಿನೂ ಬಂದಿದ್ದ. ಅವನಿಗೇನೋ ಆಫೀಸ್‌ ಕೆಲ್ಸವಂತೆ. ಇನ್ನೂ ಅಲ್ಲೇ ಇದ್ದಾನೆ. ನಾಳೆ ಬರ್ತಾನೆ''

ಅಪ್ರಮೇಯನ ವಿಷಯ ಕೇಳಿ ಜೀವ ತುಸು ಹಗುರವಾಯಿತು. ನನ್ನ ಅಣ್ಣನ ಮಗನ ತೊಟ್ಟಿಲಿಗೆಂದು ದೆಹಲಿಗೆ ಹೋದವಳು ಒಂದು ತಿಂಗಳು ಅಲ್ಲಿಯೇ ಉಳಿದಿದ್ದೆ. ಆದರೆ ನಿರಾಶೆಯಾಗಿತು. ಅವರಾರೂ ಇಲ್ಲದ್ದು ತಿಳಿದು ಅಪ್ರಮೇಯನೂ!

ಆಮ್ಮ ತಂದಿಟ್ಟ ಉಪ್ಪಿಟ್ಟು, ಕಾಫಿ ಮುಗಿಸಿ ಹೊರಗಡೆ ಹೊರಟೆ. ಮನೆಯಲ್ಲಿ, ಮನಬಿಚ್ಚಿ ಮಾತನಾಡಲೇ ಆಗುವುದಿಲ್ಲ. ``ಈ ತಿಂಗಳ ಇಪ್ಪತ್ತಕ್ಕೆ ಲಗ್ನಪತ್ರಿಕೆ. ಮುಂದಿನ ತಿಂಗಳು ಮದುವೆ'' ದಾರಿಯಲ್ಲಿ ಅವಳೇ ಮೌನ ಮುರಿದಳು.

``ಓಹ್‌! '' ಉದ್ಗರಿಸಿದೆ.

``ರಮೇಶ ಬಂದಿದ್ನಾ?''

``ಇಲ್ಲ. ಫೋನ್‌ ಮಾಡಿದ್ದ.''

ರಮೇಶ್‌, ಅವಳ ಸೋದರತ್ತೆಯ ಮಗ, ಭಾವೀ ಪತಿ. ನನ್ನ ದೆಹಲಿಯ ಅನುಭವ ಹೇಳಿ ಮುಗಿಸುವ ಹೊತ್ತಿಗೆ ತಿರುಗಾಟ ಮುಗಿದಿತ್ತು.

ದೀಪ್ತಿ ನನ್ನ ಅಚ್ಚುಮೆಚ್ಚಿನ ಗೆಳತಿ. ಕಾಲೇಜಿನಲ್ಲಿ ಒಟ್ಟಿಗೇ ಓದಿದರು. ಅಪ್ರಮೇಯ ಅವಳಣ್ಣ. ನನ್ನ ಪರಮಾಪ್ತ ಜೀವ. ಮದ್ರಾಸಿನಿಂದ ಎಂಜಿನಿಯರಿಂಗ್‌ ಮುಗಿಸಿ ಬಂದಾಗಲೇ ಅವನನ್ನು ಪ್ರತ್ಯಕ್ಷವಾಗಿ ನೋಡಿದ್ದು, ಸ್ಛುರದ್ರೂಪಿ ತರುಣ ವಿದ್ಯಾವಂತ, ಬುದ್ಧಿವಂತ, ಮೊದಮೊದಲು ಅವನನ್ನು ನೋಡಿದಾಗ ನಾಚುತ್ತಿದ್ದೆ, ಕ್ರಮೇಣ ಸ್ನೇಹದ ಹಾದಿ ಹಿಡಿದಾಗ `ಧನ್ಯೆ' ಎನಿಸಿತ್ತು. ನನ್ನನ್ನು ಮೆಚ್ಚಿಕೊಂಡಾಗ ಸ್ವರ್ಗಕ್ಕೆ ಮೂರೇ ಗೇಣು. ನಾನು ಅವನ ಕೈ ಹಿಡಿಯುವುದಾದರೇ ಅದಕ್ಕಿಂತ ಭಾಗ್ಯವೇ ಎಂಬೆಲ್ಲ, ಲೆಕ್ಕಾಚಾರಗಳು. ನಮ್ಮೀರ್ವರ ಒಲವಿನ ಬಗ್ಗೆ ದೀಪ್ತಿಗೂ ತಿಳಿಯದಿರಲಿಲ್ಲ.

`` ನಿನ್ನನ್ನು ಅತ್ತಿಗೆಯಾಗಿ ಪಡೆಯೋಕ್ಕೆ ಪುಣ್ಯ ಮಾಡಿರಬೇಕು,'' ಎಂದು ಅವಳು ಹರ್ಷಿಸಿದಾಗ ನಾಚಿ ನೀರಾಗಿದ್ದೆ. ಅವಳ ಬಗ್ಗೆ ನನಗಿದ್ದ ವಿಶ್ವಾಸ ಇಮ್ಮಡಿಯಾಗಿತ್ತು. ಅಂದಿನಿಂದ ದಿನ, ಅವಳ ಮನೆಯಲ್ಲೋ ಅಥವಾ ಹೊರಗಡೆ ವಾಕಿಂಗ್‌ ಹೊರಟಾಗಲೋ ಅಪ್ರಮೇಯನ ಭೇಟಿಯಾಗುತ್ತಿತ್ತು. ಒಂದು ದಿನ ನೋಡದಿದ್ದರೂ, ನನಗೆ ಹೇಳಲಾಗದ ಸಂಕಟವಾಗುತ್ತಿತ್ತು. ಡಿಗ್ರಿ ಮುಗಿದ ಮೇಲೆ ಕೆಲಸಕ್ಕೆ ಸೇರುವ ಇಚ್ಛೆ ಇದ್ದರೂ ನಮ್ಮ ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಮೇಲಾಗಿ ಅಪ್ರಮೇಯನಂತೂ ಖಂಡಿತವಾಗಿ ಹೇಳಿಬಿಟ್ಟಿದ್ದ, ``ನನಗೆ ನನ್ನ ಹೆಂಡತಿ ಹೊರಗೆ ದುಡಿಯುವುದು ಇಷ್ಟವಿಲ್ಲ. ಉತ್ತಮ ಗೃಹಿಣಿಯಾಗಿದ್ದರೆ ಸಾಕು.'' ನಾನು ಕೆಲಸ ಮಾಡುವ ಅಸೆಯನ್ನೇ ಕಿತ್ತಿಸೆದು ಅಪ್ರಮೇಯನ ಮುದ್ದಿನ ಮಡದಿಯಾಗಿ ಅವನ ಮಕ್ಕಳ ತಾಯಾಗುವ ಬಯಕೆಗಳನ್ನು ಕುರಿತು ಯೋಚಿಸುವುದು, ಪೋಷಿಸುವುದು, ಎಷ್ಟೊಂದು ಮಧುರ!

ನಿರೀಕ್ಷಿಸಿದ್ದ ಆ ನಾಳೆ ಬಂದಿತು. ಮತ್ತೊಂದು `ನಾಳೆ'ಯೂ ಕಳೆಯಿತು. ಆದರೆ ಅಪ್ರಮೇಯನ ಭೇಟಿಯಾಗಲೇ ಇಲ್ಲ. ದೀಪ್ತಿಯೂ ಮನೆಕಡೆ ಸುಳಿದಿರಲಿಲ್ಲ. ಕೊನೆಗೆ ನಾನೇ ಹೋದೆ. ಅವರ ಮನೆಗೆ ರಮೇಶ ಬಂದಿದ್ದರಿಂದ ದೀಪ್ತಿ ಹೊರಗೆ ಹೋಗಿದ್ದರೆ, ಅಪ್ರಮೇಯ ನನ್ನನ್ನು ನೋಡಿ, ಮಾತನಾಡಲೂ ಹಿಂಜರಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ