ಆಫೀಸಿನ ಮಹಿಳಾ ಉದ್ಯೋಗಿಗಳ ನಡುವೆ ಏಕೈಕ ಪುರುಷ ಬಂದ. ಅವನ ಜೊತೆಗೆ ಅಂಥದ್ದೇನು ಘಟನೆ ನಡೆದು ಅವನು ಟ್ರಾನ್ಸ್ ಫರ್ಬಗ್ಗೆ ಯೋಚಿಸುವಂತಾಯಿತು........?

ಹೊಸ ಆಫೀಸಿನಲ್ಲಿ ಹುಡುಗಿಯರೇ ಹೆಚ್ಚಿದ್ದರು. ಇಲ್ಲ.... ಇಲ್ಲ.... ಹೀಗೆ ಹೇಳುವುದು ತಪ್ಪಾಗುತ್ತದೆ. ಅಲ್ಲಿ ಕೇವಲ ಒಬ್ಬರೇ ಒಬ್ಬ ಪುರುಷನಿದ್ದ, ಉಳಿದವರೆಲ್ಲ ಮಹಿಳೆಯರೇ. ಅವನು ಹೆಡ್‌ ಆಫೀಸಿನ ಬಾಸ್‌ ಗೆ ಮನವಿ ಮಾಡಿಕೊಂಡ, ``ಮಹಿಳೆಯರೆ ಇರುವ ಈ ಸಂಸ್ಥೆಯಿಂದ ನನ್ನನ್ನು ಬೇರೆಡೆ ವರ್ಗಾವಣೆ ಮಾಡಿ, ಇಲ್ಲಿ ಇಲ್ಲಿಗೆ ಇನ್ನೊಬ್ಬರನ್ನಾದರೂ ಕಳಿಸಿಕೊಡಿ.'' ಅವನು ಕೆಲವು ದಿನಗಳ ಹಿಂದ ಇಲ್ಲಿಗೆ ಬಂದಿದ್ದ.

ಈ ಹುಡುಗಿಯರು ಇಡೀ ದಿನ ತಮ್ಮ ಅತ್ತೆಯಂದಿರ ಬಗ್ಗೆ ಮಾತನಾಡುತ್ತಿರುತ್ತಾರೆ, ಇಲ್ಲವೇ ಯಾವುದೇ ರೆಸಿಪಿ ಬಗ್ಗೆ ಚರ್ಚೆ ಮಾತನಾಡುತ್ತಿರುತ್ತಾರೆ. ಯಾವಾಗಲಾದರೊಮ್ಮೆ ಬಟ್ಟೆಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಅವು ಮಾತಿನ ವೈಖರಿ ಯಾವಾಗ ಅವನನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆಂದರೆ, ಅವರು ನೆಟ್‌ ಫ್ಲಿಕ್ಸ್ ಸಿನಿಮಾಗಳ ಕಥೆ ಹೇಳಲಾರಂಭಿಸಿದಾಗ.

ಆಶ್ಚರ್ಯದ ಸಂಗತಿಯೆಂದರೆ, ಪರಸ್ಪರರ ಬಗ್ಗೆ ಬೆನ್ನ ಹಿಂದೆ ಮಾತನಾಡಿಕೊಳ್ಳುವ ಇವರೆಲ್ಲ ಊಟದ ಸಮಯಕ್ಕೆ ಮಾತ್ರ ಒಂದೇ ಕಡೆ ಸೇರುತ್ತಾರೆ. ಹಂಚಿಕೊಂಡು ಊಟ ಮಾಡುತ್ತಾರೆ. ಅಲ್ಲಿಯೇ ಸಮೀಪದ ಪುಟ್ಟ ಹೋಟೆಲೊಂದರಿಂದ ಬಜ್ಜಿ ಬೋಂಡಾ ತರಿಸದೇ ಅವರ ಊಟ ಪರಿಪೂರ್ಣವಾಗುತ್ತಿರಲಿಲ್ಲ.

`ಯಾರಿಗೆ ಹೇಗೆ ತೋರುತ್ತೋ ಹಾಗೆ ಮಾಡಿ. ಇದು ಪ್ರಜಾಪ್ರಭುತ್ವ, ಆದರೆ ಇಷ್ಟು ಕೃಪೆ ಮಾಡಿ ದೇವಿಯರೇ, ನಿಮಗೆ ಯಾವ ಕಂಪನಿಯ ಸಂಬಳ ದೊರಕುತ್ತಿದೆಯೋ ಅದಕ್ಕೂ ಒಂದಷ್ಟು ಕೆಲಸಾವಾದರೂ ಮಾಡಿ,' ಎಂದು ಅವನ ಮನಸ್ಸು ಯೋಚಿಸುತ್ತಿತ್ತು.

ಕಡಿಮೆ ಮಾತಾಡುವುದು ಹಾಗೂ ತನ್ನ ಕೆಲಸದ ಬಗ್ಗೆ ಗಮನಕೊಡುವುದು ಅವನ ಅಭ್ಯಾಸವಾಗಿತ್ತು. ಬಾಸ್‌ ತನ್ನನ್ನು  ಉದ್ದೇಶಪೂರ್ವಕವಾಗಿಯೇ ಈ ಆಫೀಸಿಗೆ ಕಳಿಸಿದ್ದಾರೆ ಎಂದು ಬಾಸ್‌ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ಈ ಹುಡುಗಿಯರಿಗೆ ನೆರವಾಗಲು ಪುರುಷೋಚಿತ ಅಭಿಮಾನದಿಂದ ಅವನ ಹೃದಯ ಹೆಮ್ಮೆಯಿಂದ ಬೀಗುತ್ತಿತ್ತು.

ಈ ಹುಡುಗಿಯರ ಕೆಲಸ ಮಾಡುವ ವಿಧಾನವೇ ವಿಚಿತ್ರ. ಮೊದಲ ಬಾರಿ ಯಾವುದಾದರೂ ಹೊಸ ಕೆಲಸ ಮಾಡಬೇಕಿದ್ದಾಗ ಅಥವಾ ಹೊಸದೊಂದು ಆ್ಯಪ್‌ ನ್ನು ತೆರೆಯಬೇಕಿದ್ದಾಗ ಒಂದಿಬ್ಬರೂ ಹುಡುಗಿಯರು ಅವಶ್ಯವಾಗಿ ಗಾಬರಿ ಬೀಳುತ್ತಿದ್ದರು. ಆಗ ಒಬ್ಬರು ಡೆಸ್ಕ್ ಟಾಪ್‌ ನಿಂದ ಇನ್ನೊಬ್ಬರ ಡೆಸ್ಕ್ ಟಾಪ್‌ ಗೆ ಕೆಲಸ ವರ್ಗಾವಣೆ ಆಗುತ್ತಿತ್ತು. ಕೆಲಸ ಮುಗಿಯವವರೆಗೆ ಅವರ ಮುಖದಲ್ಲಿ ತಳಮಳ ಎದ್ದು ಕಾಣುತ್ತಿತ್ತು. ಕೆಲಸ ಮುಗಿದ ಮೇಲೆ ಅದ್ಹೇಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರೆಂದರೆ, ಎವರೆಸ್ಟ್ ಶಿಖರ ಏರಿಬಂದಂತೆ.

ಒಂದು ವೇಳೆ ಇವರು ಹರಟೆ ಹೊಡೆಯುವ ಸಮಯವನ್ನು ಸೆಟ್ಟಿಂಗ್ಸ್ ಗೆ ಹೋಗಿ, ಅಲ್ಲಿ ಅದನ್ನು ಓದಿ ಅರ್ಥ ಮಾಡಿಕೊಂಡು  ಕೆಲಸ ಮಾಡಿದ್ದಿದ್ದರೆ, ಎಲ್ಲ ಕೆಲಸವನ್ನು ಕಲಿತುಕೊಂಡು ಬಿಡುತ್ತಿದ್ದರು ಎಂದು ಅವನು ಯೋಚಿಸುತ್ತಿದ್ದ.

ಆಗ ಅವನ ಯೋಚನಾ ಸರಣಿ ತುಂಡರಿಸಿತು. ``ಸರ್‌, ನಿಮಗೆ ಒಂದು ವಿಷಯ ಗೊತ್ತಿಲ್ಲ. ಅನಿಸುತ್ತೆ, ಶುಕ್ರವಾರದಂದು ಆಫೀಸಿನಲ್ಲಿ ನಾವೆಲ್ಲ ಕ್ಯಾಜಲ್ ಸ್ಲೀವ್ ‌ಧರಿಸಿ ಬರುತ್ತೇವೆ. ನೀವು ಜೀನ್ಸ್ ಧರಿಸಿ ಬನ್ನಿ ಸರ್‌,'' ಆ ಹುಡುಗಿಯರಲ್ಲಿ ಅತಿ ಹೆಚ್ಚು ಮಾತನಾಡುವವಳೊಬ್ಬಳು ಹೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ