ಕಥೆ - ಸುನೀತಾ ಶೆಟ್ಟಿ

ಸರಿಯಾದ ಸಮಯಕ್ಕೆ ಅಂದರೆ ಬೆಳಗ್ಗೆ 6 ಗಂಟೆಗೆ ಅಲಾರಂ ಹೊಡೆಯಿತು. ನಾನು ಎಂದಿನಂತೆ ಸೋಮಾರಿತನದಿಂದ ಹಾಸಿಗೆ ಬಿಟ್ಟು ಏಳಲಿಲ್ಲ. 6 ವರ್ಷಗಳ ಬಳಿಕ ಹಳೆಯ ಗೆಳತಿ ಪೂರ್ಣಿಮಾಳೊಂದಿಗೆ ನಿನ್ನೆ ಭೇಟಿಯಾದದ್ದು ನನ್ನಲ್ಲಿ ಹೀಗೆ ಬದಲಾಗುವ ಉತ್ಸಾಹ ಹಾಗೂ ಸಾಮರ್ಥ್ಯ ತುಂಬಿತ್ತು.

ಮಗ ರಜತ್‌ನ ನಿದ್ದೆಗೆ ಭಂಗ ತರದೆ ನಾನು ಪಕ್ಕಕ್ಕೆ ಹೊರಳಿ ಕಿರಣ್‌ ಕಿವಿಯಲ್ಲಿ ರೊಮ್ಯಾಂಟಿಕ್‌ ಧ್ವನಿಯಲ್ಲಿ ಹೇಳಿದೆ, ``ಗುಡ್‌ಮಾರ್ನಿಂಗ್‌ ಮೈ ಲವ್. ರಾತ್ರಿ ನನಗೆ ವಿಚಿತ್ರ ಕನಸು ಬಿತ್ತು. ಹೇಳ್ಲಾ?''

``ಮೊದಲು ಕಾಫಿ ಕೊಡು,'' ಅವರು ನನ್ನತ್ತ ತಿರುಗುತ್ತಾ ಹೇಳಿದರು.

``ಕಾಫಿ ಬದಲು ಇದರ ರುಚಿ ನೋಡಿ,'' ನಾನು ಅವರ ತುಟಿಗಳ ಮೇಲೆ ಚುಂಬಿಸಿದಾಗ, ಅವರು ಕೂಡಲೇ ಕಣ್ಣುಬಿಟ್ಟರು.

ಅವರು ನನ್ನನ್ನು ತೋಳುಗಳಿಂದ ಬಂಧಿಸಿ ಆಶ್ಚರ್ಯದಿಂದ ಹೇಳಿದರು, ``ಇವತ್ತೇನು ಒಳ್ಳೆ ಮೂಡ್‌ನಲ್ಲಿದ್ದೀಯ. ಇವತ್ತು ನೀರು ತುಂಬಿಸೋ ಕೆಲಸ ಇಲ್ವಾ?''

``ಸರಿ, ನನ್ನ ಜೊತೆ ಇರೋದು ನಿಮಗಿಷ್ಟವಿಲ್ಲ ಅನ್ನಿಸುತ್ತೆ. ನಾನು ಹೋಗ್ತೀನಿ,'' ನನ್ನನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡದೆ ನಾನು ಹುಸಿ ಕೋಪ ತೋರಿದೆ.

``ನಿನಗಿರೋ ಒಳ್ಳೆ ಮೂಡ್‌ನ ಲಾಭ ಪಡೆಯೋದೇ ಇರೋಕಾಗುತ್ತಾ? ಅದ್ಹೇಗೆ ಸಾಧ್ಯ?'' ಅವರು ನನ್ನನ್ನು ಜೋರಾಗಿ ತಮ್ಮತ್ತ ಎಳೆದುಕೊಂಡಾಗ ನಾನು ಮನದಲ್ಲೇ ನನ್ನ ಬೆನ್ನು ತಟ್ಟಿಕೊಂಡೆ.

``ಸ್ವಲ್ಪ ಹೊತ್ತು ನಿಮ್ಮ ಕೈಗಳನ್ನು ನಿಯಂತ್ರದಲ್ಲಿಟ್ಟುಕೊಳ್ಳಿ. ಮೊದಲು ನನ್ನ ಕನಸಿನ ಬಗ್ಗೆ ಕೇಳಿ.''

``ಹೇಳು,'' ಅವರು ತುಂಟತನದಿಂದ ನಗುತ್ತಿರುವುದನ್ನು ಬಹಳ ದಿನಗಳ ಬಳಿಕ ನೋಡಿದ್ದೆ.

``ಕನಸಿನಲ್ಲಿ ನಾನು ಸತ್ತುಹೋಗಿದ್ದೆ.''

``ಛೇ, ಯಾವುದಾದರೂ ಮನಸ್ಸಿಗೆ ಸಂತೋಷ ಕೊಡುವ ಕನಸಿನ ಬಗ್ಗೆ ಹೇಳು.''

``ಇಲ್ಲಿ ಕೇಳಿ. ಸತ್ತಿದ್ದ ನಾನು ಮತ್ತೆ ಬದುಕಿದೆ. ಏಕೆಂದರೆ ನನ್ನೊಳಗೆ ಒಂದು ಆತ್ಮ ಪ್ರವೇಶಿಸಿತ್ತು. ಅದು ಯಾರದೂಂತ ಗೊತ್ತಾ?''

``ಯಾರದು?''

``ಮಧು ಬಾಲಾದ್ದು.''

``ಮೊಗಲ್ ಎ ಆಜಂ ಚಿತ್ರದ ಮಧುಬಾಲಾದಾ?''

``ಹೌದು. `ಮೊಗಲ್ ಎ ಆಜಂ'ನ ಮಧುಬಾಲಾ ನನ್ನಲ್ಲಿ ಬಂದು, ನಳಿನಿ, ನಿನ್ನ ಜೀವನ ಬಹಳ ಶುಷ್ಕವಾಗಿದೆ. ಇನ್ನು ಮೇಲೆ ನಾನು ನಿನ್ನ ಜೀವನದ ಗಾಡಿ ಸಂಭಾಳಿಸುತ್ತೇನೆ. ಆಮೇಲೆ ನೋಡು ನಿನ್ನ ಜೀವನ ಎಷ್ಟು ಮೋಜಿನಿಂದ ಕೂಡಿರುತ್ತದೇಂತ,'' ಎಂದಳು.

``ಆಗಲೇ ನನಗೆ ಎಚ್ಚರಾಯಿತು. ಗಡಿಯಾರದಲ್ಲಿ 4 ಗಂಟೆ ತೋರಿಸುತ್ತಿತ್ತು. ಆ ಕನಸು ನಿಜವೆಂದು ನನಗೆ ಅನ್ನಿಸುತ್ತದೆ. ಏಕೆಂದರೆ ನಾನು ನಿಜವಾಗಿಯೂ ಅಂತರಂಗದಲ್ಲಿ ಬದಲಾದಂತೆ ಅನುಭವವಾಗುತ್ತಿದೆ,'' ನಾನು ಮಾದಕ ದೃಷ್ಟಿಯಿಂದ ಅವರನ್ನು ನೋಡಿದಾಗ ಅವರ ತುಟಿಗಳಲ್ಲಿ ಮುಗುಳ್ನಗೆ ಮೂಡಿತ್ತು.

``ನಾನು ಮಧುಬಾಲಾಳ ದೊಡ್ಡ ಫ್ಯಾನ್‌ ಕಣೇ. ಇನ್ನು ಮುಂದೆ ನೀನು ಆತ್ಮವನ್ನು ಅತ್ತಿತ್ತ ಹೋಗಲು ಬಿಡಬೇಡ,'' ಅವರ ಉಸಿರಾಟ ವೇಗವಾದಾಗ ನಾನು ಥಟ್ಟನೆ ಅವರ ಹಿಡಿತದಿಂದ ನನ್ನನ್ನು ಬಿಡಿಸಿಕೊಂಡು ಮಂಚದಿಂದ ಕೆಳಗೆ ದುಮುಕಿದೆ.

``ನನ್ನನ್ನು ಹೀಗೆ ಗೋಳಾಡಿಸಬೇಡ ಮದುಭಾಲಾ,'' ಅವರು ತಮ್ಮ ಕೈಗಳನ್ನು ಅಗಲಿಸಿ ನನ್ನನ್ನು ಆಹ್ವಾನಿಸಿದರು.

``ಮೊದಲು ಕೆಲಸ. ಆಮೇಲೆ ಮೋಜು,'' ನಾನು ಒಯ್ಯಾರದಿಂದ ಅವರತ್ತ ಒಂದು ಫ್ಲೈಯಿಂಗ್‌ ಕಿಸ್‌ ತೂರಿ ಅಡುಗೆಮನೆಗೆ ಓಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ