ನನ್ನ ಮದುವೆಯಾಗಿ ಇಂದಿಗೆ 10 ವರ್ಷಗಳು ತುಂಬಿದವು. ಆದರೂ ನನ್ನ ಗಂಡ ಆರಂಭದಲ್ಲಿ ದಿನ ಹಾಗೂ ಈಗ ತಿಂಗಳಲ್ಲಿ 15 ದಿನ, ಮನೇಲಿ ಕೂತು ಏನೇ ಕೆಲಸ ಮಾಡ್ತೀಯಾ ಅಂತ ಕೇಳ್ತಿರ್ತಾರೆ.

ಅವರು ಹಾಗೆ ಕೇಳಿದಾಗೆಲ್ಲಾ ನನ್ನ ಎದೆಯಲ್ಲಿ ಗರಗಸ ಆಡಿಸಿದಂತಾಗುತ್ತಿತ್ತು. ಒಂದು ವೇಳೆ ನನ್ನ ಕೆಲಸದ ಮೌಲ್ಯಮಾಪನ ಮಾಡಿದರೆ ತಿಂಗಳಿಗೆ 15-18 ಸಾವಿರ ರೂ. ಸಂಬಳದಷ್ಟು ಕೆಲಸ ಮಾಡುತ್ತೇನೆ. ಅದರ ಮೇಲೆ ಗಂಡನ ವ್ಯಂಗ್ಯದ ಬಾಣಗಳನ್ನು ಕೇಳಿ ಮನಸ್ಸು ನೋಯುತ್ತದೆ. ಆದರೂ ಭಾರತೀಯ ಮಹಿಳೆಯಾಗಿದ್ದರಿಂದ ಹೇಗೋ ಸಹಿಸಿಕೊಂಡು ಇದ್ದುಬಿಡುತ್ತೇನೆ.

ಬೆಳಗ್ಗೆ ಬೇಗ ಏಳುತ್ತೇನೆ. ಒಬ್ಬೊಬ್ಬರು ಒಂದೊಂದು ಬಗೆಯ ತಿಂಡಿಗಳನ್ನು ಇಷ್ಟಪಡುತ್ತಾರೆ. ಅವರೆಲ್ಲರ ಇಚ್ಛೆಗಳನ್ನು ಪೂರೈಸುವಷ್ಟರಲ್ಲಿ 9 ಗಂಟೆಯಾಗುತ್ತದೆ. ಮಕ್ಕಳಿಗೆ ಸ್ನಾನ ಮಾಡಿಸಿ, ಡ್ರೆಸ್‌ ಮಾಡಿ, ತಿಂಡಿ ತಿನ್ನಿಸಿ ಸ್ಕೂಲ್ ವ್ಯಾನ್‌ನಲ್ಲಿ ಬಿಟ್ಟುಬರ್ತೀನಿ. ನಂತರ ಗಂಡನಿಗೆ ತಿಂಡಿ, ಆಫೀಸಿಗೆ ಊಟದ ಕ್ಯಾರಿಯರ್‌ ಕೊಡಬೇಕು. ಗಂಡ ಆಫೀಸಿಗೆ ಹೋದ ನಂತರ ಮನೆಯ ಕಸ ಗುಡಿಸಿ ಒರೆಸುತ್ತೇನೆ. ಪಾತ್ರೆ ತೊಳೆದು ಬಟ್ಟೆ ಒಗೆಯುತ್ತೇನೆ. ಅತ್ತೆ ಮಾವನಿಗೆ ಆಗಾಗ್ಗೆ ಕಾಫಿ ಮಾಡಿಕೊಡುತ್ತೇನೆ. ಆಮೇಲೆ ಅತ್ತೆಯ ಮಂಡಿಗಳಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುತ್ತೇನೆ. ಸಂಜೆ ಮಕ್ಕಳು ಶಾಲೆಯಿಂದ ಬಂದ ಮೇಲೆ ಹಾಲು, ತಿಂಡಿ ಕೊಡುತ್ತೇನೆ. ಪಾಠ ಓದಿಸುತ್ತೇನೆ. ನಂತರ ರಾತ್ರಿ ಊಟ ಮಾಡಿಸಿ, ಇವರಿಗೆ ಊಟ ಬಡಿಸಿ ಹಾಸಿಗೆಯ ಮೇಲೆ ಗಂಡನ ಮರ್ಜಿಗೆ ಅನುಸಾರವಾಗಿ ನನ್ನನ್ನು ಒಪ್ಪಿಸಿಕೊಳ್ಳುತ್ತೇನೆ. ಇಷ್ಟಾದರೂ ಗಂಡ ಟೀಕೆ ಮಾಡ್ತಿರ್ತಾರೆ.

ಒಂದು ದಿನ ಅವರನ್ನು, ``ನೀವು ಆಫೀಸಿನಲ್ಲಿ ಕೆಲಸ ಮಾಡಿದ ಮೇಲೆ ಬೇರೇನು ಮಾಡ್ತೀರಿ? ನಾನಂತೂ ನಿಮಗೆ ಬಿಟ್ಟಿಯಾಗಿ ಸಿಕ್ಕಿದ್ದೀನಿ, ನಿಮಗೆ ಏನು ಬೇಕೋ ಮಾಡಿಸಿಕೊಳ್ತೀರಿ,'' ಎಂದು ಪ್ರಶ್ನಿಸಬೇಕೆಂದು ಆಸೆಯಾಯಿತು. ಆದರೆ ಮನೆಯ ಶಾಂತಿಗೆ ಯಾಕೆ ಭಂಗ ತರಬೇಕೂಂತ ಯೋಚಿಸಿ ಸುಮ್ಮನಾದೆ.

ಇತ್ತ ಮಕ್ಕಳೂ ದೊಡ್ಡವರಾಗುತ್ತಿದ್ದರು. ಒಂದು ದಿನ ದೊಡ್ಡ ಮಗನೂ ಕೂಡ ``ಅಮ್ಮಾ, ನೀನು ಮನೇಲಿ ಏನು ಕೆಲಸ ಮಾಡ್ತೀಯಾ?'' ಅಂತ ಕೇಳಿಬಿಟ್ಟ. ಈಗಲೇ ಹೀಗೆ. ಇನ್ನು ದೊಡ್ಡವನಾದ ಮೇಲೆ, ಅಮ್ಮ ನೀನಂತೂ ಮುದುಕಿ ಆದೆ. ನಿನ್ನಿಂದ ಯಾವ ಕೆಲಸ ಆಗಲ್ಲ ಅಂತ ನನ್ನನ್ನು ಮನೆಯಿಂದಾಚೆ ತಳ್ಳಬಹುದು. ಇಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಈ ನಿಂದನೆಗಳು, ವ್ಯಂಗ್ಯ ತಪ್ಪಿದ್ದಲ್ಲ. ನಾನೂ ಎಲ್ಲಾದ್ರೂ ಕೆಲಸಕ್ಕೆ ಸೇರಿದ್ರೆ ಚೆನ್ನಾಗಿತ್ತು. ಒಬ್ಬ ಕೆಲಸದವಳನ್ನು ಇಟ್ಟುಕೊಂಡು ಅವಳ ಕೈಲಿ ಕೆಲಸ ಮಾಡಿಸಬಹುದಿತ್ತು. ನಾನೂ ಸಂಬಳ ತಂದಿದ್ರೆ ನನಗೂ ಗೌರವ ಸಿಗುತ್ತಿತ್ತು. ಆದರೆ ಈಗ ನನಗೆ ವಯಸ್ಸು ಹೆಚ್ಚಾಗ್ತಿದೆ. ಭವಿಷ್ಯದ ಚಿಂತೆ ಕಾಡುತ್ತಿದೆ. ಇರಲಿ. ಇವರಿಗೆಲ್ಲಾ ಪಾಠ ಕಲಿಸೇ ಕಲಿಸ್ತೀನಿ. ನಾನು ಒಂದೇ ಸಮನೆ ಯೋಚಿಸುತ್ತಲೇ ಇದ್ದೆ, ಬಿ.ಪಿ. ಹೆಚ್ಚಿಸಿಕೊಳ್ಳುತ್ತಲೇ ಇದ್ದೆ. ರಾತ್ರಿಯೆಲ್ಲಾ ಎದ್ದಿರುತ್ತಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಕಡೆಗೂ ಒಂದು ದಿನ ಆ ಅವಕಾಶ ಬಂತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ