ಬೆಳಗಿನ ತಂಪು ಗಾಳಿ ಹಿತವಾಗಿ ಹರಡಿ, ಹೊಂಬಿಸಿಲು ಸುಖೋಷ್ಣವಾಗಿತ್ತು. ಮಾವಧ ರಾಯರು ಕಿಟಕಿಯಿಂದ ತೂರಿಬರುತ್ತಿದ್ದ ಈ ಆನಂದ ಅನುಭವಿಸುತ್ತಾ ಬೆಳಗಿನ ಕಾಫಿ ಹೀರುತ್ತಿದ್ದರು. ಆಗ ಅವರ ತಾಯಿ ವಿಶಾಲಾಕ್ಷಮ್ಮ ಕೆಮ್ಮುತ್ತಾ ಒಳಗಿನಿಂದ ಅಲ್ಲಿಗೆ ಬಂದರು. ಯಾವ ಚಿಂತೆಯೂ ಇಲ್ಲದೆ ಹಾಯಾಗಿ ಕಾಫಿ ಹೀರುತ್ತಿದ್ದ ಮಗನನ್ನು ಕಂಡು ಆಕೆ, ``ಏನು ಹೇಳೋ ಮಾಧು, ಈಗಾದರೂ ತುಸು ಗಾಂಭೀರ್ಯ ಕಲಿತಕೋ. ನಿನ್ನನ್ನು ನೋಡಿದರೆ ಇವತ್ತು ನೀನು ನಾಲ್ಕನೇ ಹೆಣ್ಣುಮಗುವಿನ ತಂದೆ ಆಗಿದ್ದಿ ಅನಿಸೋದೇ ಇಲ್ಲ.... ಇನ್ನು ಹುಡುಗಾಟಿಕೆಯ ನಗು ಬೀರುತ್ತಿದ್ದಿ....''

``ಇನ್ನೂ ಗಂಭೀರ ಆಗುವಂಥದ್ದು ಏನಿದೆಯಮ್ಮ? ನಾಲ್ಕನೇ ಸಲ ತಂದೆ ಆಗಿದ್ದೀನಿ, ನಿಜ. ಇದು ನಿಜಕ್ಕೂ ಸಂತೋಷದ ವಿಷಯವಲ್ಲವೇ?'' ಎಂದು ಅಮ್ಮನ ಕಡೆ ತಿರುಗುತ್ತಾ ಹೇಳಿದರು.

``ಹೂಂ.....ಹೂಂ...... ಆದರೆ ನಾಲ್ಕೂ ಹೆಣ್ಣುಮಕ್ಕಳೇ ಅನ್ನೋದು ನೆನಪಿರಲಿ! ಈ ಬಾರಿಯಾದರೂ ಮೊಮ್ಮಗನ ಮುಖ ನೋಡಬಹುದೇನೋ ಅಂತ ಆಸೆಯಿಂದ ಕಾದಿದ್ದೇ ಆಯ್ತು. ಕಂಡ ಕಂಡ ದೇವರುಗಳಿಗೆಲ್ಲ ಕೈ ಮುಗಿದಿದ್ದೇ ಬಂತು. ಸೊಸೆ ಕೈಲಿ ಬೇಕಾದಷ್ಟು ವ್ರತ, ನೇಮ, ತೀರ್ಥಯಾತ್ರೆ, ಪೂಜೆಗಳೆಲ್ಲ ಮಾಡಿಸಿದ್ದಾಯ್ತು. ಅದೇನು ಆ ದೇವರಿಗೆ ಕಣ್ಣಿಲ್ಲೇ ಏನೋ..... ನಮ್ಮ ವಂಶ ಮುಂದುವರಿಯುವುದಾದರೂ ಹೇಗೆ? ಪಿತೃಗಳಿಗೆ ಸದ್ಗತಿ ದೊರಕುವುದು ಹೇಗೆ....?''

ವಿಶಾಲಾಕ್ಷಮ್ಮ ಓತಪ್ರೋತವಾಗಿ ಮುಂದುವರಿಸುತ್ತಲೇ ಇದ್ದರು. ಅಷ್ಟರಲ್ಲಿ ರಾಯರಿಗೆ ಸಿಟ್ಟು ಬಂದು ಹೆಚ್ಚು ಕಡಿಮೆ ಕಿರುಚುವಂತೆ, ``ಸಾಕು.... ಸಾಕಮ್ಮ! ಅದೆಷ್ಟು ಕಹಿ ಮಾತುಗಳು ನಿನ್ನ ಮನದಲ್ಲಿ ತುಂಬಿಕೊಂಡಿದೆ..... ಯಾವಾಗ ನೋಡಿದರೂ ಅದೇ ರಾಗ ಅದೇ ಹಾಡು. ಸದಾ ಮೊಮ್ಮಗ, ವಂಶೋದ್ಧಾರಕ, ಕುಲದೀಪಕ ಅಂತ ಗಂಡು ಮಗುವಿನ ವರಾತೀ ಆಗಿಹೋಯ್ತು.

``ನಿನ್ನ ಈ ಮೂಢನಂಬಿಕೆಯ ಮಾತುಗಳಿಂದ ನಾನು ಪ್ರತಿ ಸಲ ಮಗಳು ಹುಟ್ಟಿದಾಗಲೂ ಆ ಸಂತೋಷವನ್ನು ಅನುಭವಿಸುವ ಹಾಗೇ ಇಲ್ಲ. ಇಡೀ ಮನೆಯ ಸಂತಸದ ವಾತಾವರಣ ನಿನ್ನ ಈ ಕಟು ಮಾತುಗಳಿಂದ ಮರುಭೂಮಿ ಆಗಿಹೋಗುತ್ತದೆ. ಇಂಥ ಮನನೋಯಿಸುವ ಮಾತುಗಳಿಂದ ಯಾಕಾದರೂ ಹೀಗೆ ಕುಟುಕುತ್ತಿಯೋ? ಮೊಮ್ಮಗ ಬೇಕಾಗಿತ್ತು ಸರಿ, ಆಗಲಿಲ್ಲ. ಏನು ಮಾಡುವುದು? ಮೊಮ್ಮಗಳನ್ನೇ ದೇವರು ಕೊಟ್ಟ ವರ ಅಂದುಕೊಳ್ಳಬಾರದೇ?''

ಆದರೆ ವಿಶಾಲಾಕ್ಷಮ್ಮನ ಮೇಲೆ ಈ ಮಾತುಗಳು ಯಾವ ಪ್ರಭಾವವನ್ನೂ ಬೀರುತ್ತಿರಲಿಲ್ಲ. ಅವರು ಇನ್ನಷ್ಟು ತಾರಕ ಸ್ವರದಲ್ಲಿ, ``ಏ.... ನಿನ್ನಂಥ ನಾಸ್ತಿಕನಿಗೆ ಈ ಮಾತುಗಳೆಲ್ಲ ಎಲ್ಲಿಂದ ಅರ್ಥವಾಗಬೇಕು? ಪುರಾಣ, ಹರಿಕಥೆ ಕೇಳಲು ನನ್ನ ಸಮಯಸ್ಕರು ಬರುತ್ತಾರಲ್ಲ, ಅವರೆಲ್ಲ ಎಷ್ಟು ಆಡಿಕೊಳ್ಳುತ್ತಾರೆ ಗೊತ್ತಾ? ಎಲ್ಲರಿಗೂ ಒಬ್ಬೊಬ್ಬ ಮೊಮ್ಮಗ, ಮರಿಮಗ ಇದ್ದೇ ಇದ್ದಾನೆ. ನನಗಿರೋನು ನೀನೊಬ್ಬನೇ ಮಗ, ನಿನ್ನೊಂದಿಗೆ ಈ ವಂಶ ಹೀಗೆ ನಿಂತುಹೋಗಬೇಕೇ....?''

``ಅಮ್ಮ..... ಸಾಕು ಮಾಡು ಅಂತ ಎಷ್ಟು ಸಲ ಹೇಳುವುದು? ಇವತ್ತು ನಿಜಕ್ಕೂ ಸಂತೋಷದ ದಿನ. ಕನಿಷ್ಠ ಇತ್ತೊಂದು ದಿನವಾದರೂ ನನ್ನ ತಲೆ ಕೆಡಿಸದಿರು. ಮತ್ತೆ ನಿನ್ನ ಹತ್ತಿರ ಬೇಡದ ಕಂತೆ ಪುರಾಣ ಮಾತನಾಡುತ್ತಾರಲ್ಲ ಆ ನಿನ್ನ ಫ್ರೆಂಡ್ಸು... ಧೈರ್ಯವಿದ್ದರೆ ನನ್ನೆದುರಿಗೆ ಬಂದು ಆ ಮಾತುಗಳನ್ನಾಡಲಿ. ಅವರಿಗೆ ತಕ್ಕ ಶಾಸ್ತಿ ಮಾಡಿ ಕಳುಹಿಸುತ್ತೀನಿ. ಈ ಹೆಣ್ಣುಮಕ್ಕಳ ಜವಾಬ್ದಾರಿ ನನ್ನದು, ಅದರಿಂದ ಅವರಿಗೇನು ತೊಂದರೆ?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ